Link copied!
Sign in / Sign up
23
Shares

ನಿಮ್ಮ ನಗು,ಸೀನು ಇವೆಲ್ಲವೂ ಹೊಟ್ಟೆಯೊಳಗಿನ ಮಗುವಿಗೆ ಏನು ಮಾಡುತ್ತವೆ ತಿಳಿದಿದೆಯಾ?!

ಗರ್ಭಧಾರಣೆ ಎನ್ನುವುದು ಒಂದು ವಿಶೇಷವಾದ ಸಮಯ. ಅಮ್ಮ ಮಾಡುವ ಪ್ರತಿಯೊಂದು ವಿಷಯವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿಯೇ ಅಮ್ಮಂದಿರು ಈ ಸಮಯದಲ್ಲಿ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಈಗಾಗಲೇ ನಿಮಗೆ ನೀವು ಸೇವಿಸುವ ಆಹಾರ, ಪಾನೀಯಗಳು ಮತ್ತು ವ್ಯಾಯಾಮ ನಿಮ್ಮ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಗೊತ್ತಿದೆ, ಆದರೆ ನಗುವಿನಂತಹ ಸಾಮನ್ಯ ಚಟುವಟಿಕೆಯು - ನೀವು ಇದನ್ನು ದಿನಕ್ಕೆ ಕಡಿಮೆ ಎಂದರೂ ಒಂದೆರೆಡು ಬಾರಿ ಆದರೂ ಮಾಡುತ್ತೀರಲ್ಲವಾ? ಅದು ನಿಮ್ಮ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಿದೆಯೇ?

ಗರ್ಭಧಾರಣೆ ವೇಳೆ ನಗುವುದು ತುಂಬಾನೇ ಒಳ್ಳೆಯದು, ಏಕೆಂದರೆ ಖುಷಿಯಾಗಿರುವ ಅಮ್ಮನು ಆರೋಗ್ಯಕರ ಅಮ್ಮನು ಆಗಿರುತ್ತಾಳೆ. ಆದರೆ ಕುತೂಹಲಕಾರಿ ವಿಷಯ ಏನು ಎಂದರೆ, ನೀವು ನಕ್ಕಾಗ ನಿಮ್ಮ ಹೊಟ್ಟೆಯೊಳಗಿರುವ ಆ ಪುಟ್ಟ ಕಂದನಿಗೆ ಹೇಗೆನಿಸುತ್ತದೆ ಎಂಬುದು!

ಏನೆಲ್ಲಾ ಆಗುತ್ತದೆ ಎಂಬುದು ಇಲ್ಲಿದೆ ನೋಡಿ!

೧. ನಿಮ್ಮ ಮೂಡ್ ನಿಮ್ಮ ಮಗುವಿಗೆ ವರ್ಗಾವಣೆ ಆಗುತ್ತದೆ

ನಿಮಗೆ ಖುಷಿ ಆದಾಗ, ನೀವು ನಕ್ಕಾಗ, ನಿಮ್ಮ ದೇಹದಲ್ಲಿ ಸಂತೋಷಕ್ಕೆ ಸಂಬಂಧಿಸಿದ ಹಾರ್ಮೋನುಗಳು ಬಿಡುಗಡೆ ಹೊಂದುತ್ತವೆ. ಈ ಹಾರ್ಮೋನುಗಳು ನಿಮ್ಮ ದೇಹದಿಂದ ಜರಾಯು ಮೂಲಕ ನಿಮ್ಮ ಮಗುವಿಗೆ ಸೇರುತ್ತದೆ. ಈ ಕಾರಣಕ್ಕಾಗಿಯೇ ಎಲ್ಲಾರೂ ಅಮ್ಮಂದಿರಿಗೆ ಗರ್ಭಧಾರಣೆ ವೇಳೆ ಹೆಚ್ಚು ಒತ್ತಡ ತಮ್ಮ ಮೇಲೆ ತಾವು ಹೇರಿಕೊಳ್ಳದೆ ಇರಲು ಸೂಚಿಸುವುದು. ಅಮ್ಮಂದಿರು ಗರ್ಭಧಾರಣೆ ವೇಳೆ ಬಹುಕಾಲ ಒತ್ತಡವನ್ನು ಅನುಭವಿಸಿದರೆ, ಅದು ಮಗುವಿಗೆ ವರ್ಗಾವಣೆ ಹೊಂದಬಹುದು. ಗರ್ಭಧಾರಣೆ ಎನ್ನುವುದು ಭಾವನೆಗಳ ಏರುಪೇರಿನಿಂದಲೇ ಕೂಡಿ ಹೋಗಿರುವುದರಿಂದ, ನಿಮ್ಮ ಭಾವನೆಗಳನ್ನು ನೀವು ನಿಯಂತ್ರಣದಲ್ಲಿ ಇಟುಕೊಳ್ಳುವುದು ಕಷ್ಟಸಾಧ್ಯ. ಆದರೆ ಆಗಾಗ ವಿಶ್ರಾಂತಿ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ - ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ, ಅಥವಾ ಸ್ವಲ್ಪ ಸಮಯ ದೀರ್ಘ ಉಸಿರು ಸೇವನೆ ಮಾಡಿ. ನೀವು ಇಷ್ಟಪಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಥವಾ ನಿಮಗೆ ಇಷ್ಟವಾಗುತ್ ಜನರನ್ನು ಭೇಟಿ ಮಾಡಿ. ನಿಮ್ಮ ಒತ್ತಡವನ್ನು, ಬೇಸರವನ್ನು ಹೊರಹಾಕಲು ಅಥವಾ ಕಡಿಮೆ ಮಾಡಿಕೊಳ್ಳಲು ಕೆಲವೊಂದು ದಾರಿಗಳನ್ನು ಹುಡುಕಿಕೊಳ್ಳುವುದು ಗರ್ಭಧಾರಣೆಯಲ್ಲಿ ತುಂಬಾನೇ ಮುಖ್ಯ.

ಸಲಹೆ : ಆಳವಾದ ನಗುವನ್ನು ಪ್ರಯತ್ನಿಸಿ, ಅಂದರೆ ನಿಮ್ಮ ಹೊಟ್ಟೆಯಿಂದ ನಗುವುದನ್ನು ಪ್ರಯತ್ನಿಸಿ. ಇದು ನಿಮಗೆ ಹೆಚ್ಚು ಸಂತೋಷ ಕೊಡುತ್ತದೆ ಏಕೆಂದರೆ ನೀವು ಹೀಗೆ ಮಾಡುವಾಗ ಹೆಚ್ಚು ಆಮ್ಲಜನಕವನ್ನು ಸೇವಿಸುತ್ತೀರಾ ಮತ್ತು ಇದು ನಿಮ್ಮ ದೇಹದಲ್ಲಿ ಖುಷಿಯ ಹಾರ್ಮೋನ್ ಆದ ಎಂದೋರ್ಫಿನ್ ಹೆಚ್ಚೆಚ್ಚು ಬಿಡುಗಡೆ ಆಗುತ್ತದೆ.

 

೨. ಮಗು ಜಿಗಿಯುತ್ತದೆ

ನೀವು ನಕ್ಕಾಗ, ನಿಮ್ಮ ಮಗುವು ದೈಹಿಕವಾಗಿ ಮೇಲೆ ಮತ್ತು ಕೆಳಗೆ ಚಲಿಸುತ್ತದೆ. ಇದು ಚಿಕ್ಕ ಚಲನೆ ಆಗಿದ್ದರೂ, ನಿಮ್ಮ ಮಗುವಿಗೆ ಜಿಗಿದಾಡಲು ಏಕೆ ಇಷ್ಟ ಎಂಬುದಕ್ಕೆ ನಿಮಗೆ ಕಾರಣ ಗೊತ್ತಾಯಿತೇ?! ಆದರೆ ಚಿಂತಿಸಬೇಡಿ, ನಿಮ್ಮ ಮಗುವು ಮೇಲೆ ಮತ್ತು ಕೆಳಗೆ ಚಲಿಸಿದರೂ, ಜಿಗಿದರೂ, ಮಗುವನ್ನು ರಕ್ಷಿಸಲು ಅದರ ಸುತ್ತ ಆಮ್ನಿಯೋಟಿಕ್ ದ್ರವ್ಯ ಹೊಂದಿರುವ ಆಮ್ನಿಯೋಟಿಕ್ ಚೀಲ ಇರುತ್ತದೆ.

 

೩. ಮಗುವು ನಿಮ್ಮ ನಗುವನ್ನು ನೆನಪಲ್ಲಿ ಇಟ್ಟುಕೊಳ್ಳುತ್ತದೆ

ಗರ್ಭಧಾರಣೆ ಅಥವಾ ಪ್ರೆಗ್ನನ್ಸಿ ಎನ್ನುವುದು ತಾಯಿ ಮತ್ತು ಮಗುವಿನ ನಡುವೆ ಬಾಂಧವ್ಯ ಬೆಳೆಯುವ ಸಮಯವಲ್ಲವೇ? ನೀವು ಹೇಗೆ ಹೊಟ್ಟೆಯೊಳಗಿನ ನಿಮ್ಮ ಮಗುವಿನೊಂದಿಗೆ ಮಾತಾಡುತ್ತಿರೋ, ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರೋ, ಅದೇ ರೀತಿಯಲ್ಲಿ ನಿಮ್ಮ ಮಗುವು ಕೂಡ ತನ್ನ ಅಮ್ಮನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಿರುತ್ತದೆ. ಪ್ರೆಗ್ನನ್ಸಿ ವೇಳೆ ಮಗುವು ನಿಮ್ಮನ್ನು ಕೇಳಿಸಿಕೊಳ್ಳುತ್ತಿರುತ್ತದೆ  - ಈ ಕಾರಣಕ್ಕಾಗಿಯೇ ಮಕ್ಕಳು ತಾವು ಭೂಮಿಗೆ ಕಾಲಿಟ್ಟ ಮರುಕ್ಷಣವೇ ಅಮ್ಮನ ಧ್ವನಿಯನ್ನು ಗುರುತಿಸುವುದು. ಈ ರೀತಿಯಲ್ಲೇ, ನೀವು ನಗುವುದನ್ನು ಕೂಡ ನಿಮ್ಮ ಮಗು ಕೇಳಿಸಿಕೊಳ್ಳುತ್ತದೆ ಮತ್ತು ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ನಿಮ್ಮ ಧ್ವನಿಯು ಹೊಟ್ಟೆಯೊಳಗಿನ ನಿಮ್ಮ ಮಗುವಿಗೆ ಖುಷಿ ನೀಡುತ್ತದೆ. ಅದೇ ರೀತಿ ನಿಮ್ಮ ನಗುವು ಕೂಡ!

ಗರ್ಭಧಾರಣೆ ವೇಳೆ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಖುಷಿಯಾಗಿರಲು ಪ್ರಯತ್ನಿಸುವುದು ತುಂಬಾನೇ ಮುಖ್ಯ. ಹೀಗೆ ಮಾಡಿದರೆ ಮಾತ್ರ ನೀವು ನಿಮ್ಮನ್ನು ಆರೋಗ್ಯವಾಗಿ ಕಾಪಾಡಿಕೊಂಡು ನಿಮ್ಮ ಮಗುವನ್ನು ಕೂಡ ಖುಷಿಯಾಗಿ ಇರಿಸಬಹುದು. ನೀವು ಅನುಭವಿಸುವ ಒತ್ತಡವನ್ನು ನಿಭಾಯಿಸಲು ಪ್ರಯತ್ನಿಸಿ. ನಕಾರಾತ್ಮಕ ಭಾವನೆಗಳು ಹುಟ್ಟಿಕೊಂಡರು ಕೂಡ, ನೀವು ಅವುಗಳ ಕಡೆ ಗಮನ ಕೊಡದೆ ಬೇರೆ ವಿಷಯದಲ್ಲಿ ತೊಡಗಿಕೊಳ್ಳುವುದು ತುಂಬಾನೇ ಮುಖ್ಯ ಅಥವಾ ನೆಮ್ಮದಿ ಕಾಪಾಡಿಕೊಳ್ಳಲು ಇನ್ನೊಬ್ಬರ ಸಹಾಯ ಬೇಕಿದ್ದರೆ ಕೇಳಿ ಪಡೆದುಕೊಳ್ಳುವುದು ತುಂಬಾನೇ ಅಗತ್ಯ.

ಖುಷಿಯ ಜೀವನದ ಹಾದಿಯನ್ನು ನೀವು ಒಂದೊಂದು ಹೆಜ್ಜೆಯಿಡುತ್ತಾ ಸಾಗಬೇಕು. ಸಣ್ಣ ಹೆಜ್ಜೆಯೊಂದಿಗೆ ಶುರು ಮಾಡಿ - ಮುಖದ ಮೇಲೆ ನಗುವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ, ಆಳವಾಗಿ ನಗುವುದು ಅಥವಾ ಹಾಸ್ಯ ಚಿತ್ರಗಳು, ಸನ್ನಿವೇಶಗಳನ್ನ ನೋಡುವುದು ಅಭ್ಯಾಸ ಮಾಡಿಕೊಳ್ಳಿ. ಇವುಗಳು ತಾತ್ಕಾಲಿಕ ಆಗಿದ್ದರೂ, ಖುಷಿಯ ಮತ್ತು ನೆಮ್ಮದಿಯ ಬದುಕಿಗೆ ಇವುಗಳು ಒಳ್ಳೆಯ ಆರಂಭ. ಪ್ರೆಗ್ನನ್ಸಿ ಸಮಯದಲ್ಲಿ ದೆವ್ವದ ಚಲನಚಿತ್ರಗಳಿಂದ ದೂರವಿರಿ - ಇವುಗಳು ನಿಮ್ಮಲ್ಲಿ ಒತ್ತಡ ಉಂಟು ಮಾಡಿ, ನಿಮ್ಮ ಮಗುವಿನ ಮೇಲೆಯೂ ಪರಿಣಾಮ ಬೀರಬಹುದು.

ಅಮ್ಮಂದಿರಿಗೆ ಇರುವಂತಹ ಇನ್ನೊಂದು ಪ್ರಶ್ನೆ ಎಂದರೆ ಅದು ತಾವು ಸೀನಿದಾಗ ಹೊಟ್ಟೆಯೊಳಗಿನ ಮಗುವಿಗೆ ಏನಾಗುತ್ತದೆ ಎಂಬುದು. ಮೊದಲೇ ಹೇಳಿದಂತೆ ಭೂಮಿಯೇ ಕಂಪಿಸುವಂತಹ ಕಂಪನ ಉಂಟು ಮಾಡುವ ಹಾಗೆ ನೀವು ಸೀನಿದರೂ ಆದರೂ ನಿಮ್ಮ ಹೊಟ್ಟೆಯೊಳಗಿನ ಮಗುವಿನ ಅನುಭವಕ್ಕೆ ಯಾವುದು ಅಷ್ಟೂ ತೀವ್ರವಾಗಿ ಬರುವುದಿಲ್ಲ. ಸೀನುವುದು ನಿಮ್ಮ ಹೊಟ್ಟೆಯೊಳಗೆ ಥಟ್ ಅಂತ ಒತ್ತಡವನ್ನು ಸೃಷ್ಟಿಸಿದರು ಅದು ಕೇವಲ ಕೆಲವು ಕ್ಷಣಗಳಷ್ಟೇ ಇರುವಂತಹ ತಾತ್ಕಾಲಿಕ ಒತ್ತಡ. ಆದರೆ ಈ ತಾತ್ಕಾಲಿಕ ಒತ್ತಡವು ನಿಮ್ಮ ಗರ್ಭಕೋಶಕ್ಕೆ ಯಾವುದೇ ರೀತಿಯ ಸವಾಲನ್ನು ಹಾಕುವುದಿಲ್ಲ. ಮೊದಲೇ ಹೇಳಿದಂತೆ ಮಗುವಿನ ಸುತ್ತಲಿನ ಆಮ್ನಿಯೋಟಿಕ್ ದ್ರವ್ಯವು ಮಗುವನ್ನು ಕಾಪಾಡುತ್ತದೆ.

ಪ್ರೆಗ್ನನ್ಸಿ ಅಲ್ಲಿ ಸೀನಿದಾಗ ನಿಮ್ಮ ಮಗುವಿಗೆ ಏನೂ ತೊಂದರೆ ಆಗದೆ ಇದ್ದರೂ, ನಿಮಗೆ ಮೂತ್ರವಿಸರ್ಜನೆ ಮಾಡಲು ಅನಿಸುವಂತೆ ಮಾಡಬಹುದು. ಹೀಗೆ ಮೂತ್ರವಿಸರ್ಜನೆ ಮಾಡಲು ಅನಿಸುವಂತೆ ಮಾಡಿದರೂ, ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೆ ಸೀನಿದಾಗ ಅಥವಾ ಕೆಮ್ಮಿದಾಗ ನೀವು ವಿಸರ್ಜನೆಯನ್ನು ಹೊಂದುವುದು ಪ್ರೆಗ್ನನ್ಸಿ ಅಲ್ಲಿ ಸಹಜ.

ನಿಮ್ಮ ಭಯಗಳನ್ನ, ಆತಂಕಗಳನ್ನೆಲ್ಲಾ ತಜ್ಞರು ಈಗ ನಿವಾರಿಸಿದ್ದು, ಈಗ ಇನ್ನಷ್ಟು ಕುತೂಹಲಕಾರಿ ವಿಷಯದ ಬಗ್ಗೆ ಮಾತಾಡುವ. ನಿಮ್ಮ ಗರ್ಭದೊಳಗೆ ಮಗುವು ಏನು ನೋಡುತ್ತದೆ, ಕೇಳುತ್ತದೆ ಮತ್ತು ಅನುಭವಿಸುತ್ತದೆ ಎಂಬುದು.

ಸುಮಾರು 20 ವಾರಗಳು ಕಳೆದ ನಂತರ, ಹೊಟ್ಟೆಯೊಳಗಿನ ಮಗುವಿನ ಶ್ರವಣ ಶಕ್ತಿ ಅಂದರೆ ಶಬ್ದ ಕೇಳಿಸಿಕೊಳ್ಳುವ ಸಾಮರ್ಥ್ಯ ಚಿಗುರೊಡೆಯುತ್ತದೆ. ಹೊಟ್ಟೆಯೊಳಗೆ ಮಗುವಿಗೆ ಹರಿಯುತ್ತಿರುವ ನಿಮ್ಮ ರಕ್ತ, ಬಡಿದುಕೊಳ್ಳುತ್ತಿರುವ ನಿಮ್ಮ ಹೃದಯ, ಒಮ್ಮೊಮ್ಮೆ ನಿಮ್ಮ ಜೀರ್ಣಾಂಗಗಳು - ಇವೆಲ್ಲವುಗಳು ಸದ್ದುಗಳು ಒಂದು ರೀತಿಯ 24-ಗಂಟೆಗಳ ಕಾಲ ಸಂಗೀತ ಕಚೇರಿ ಆಗಿರುತ್ತವೆ. ಈ ಸದ್ದುಗಳ ಹೊರತಾಗಿ, ಮಕ್ಕಳು ಹೊರಗಿನ ಸದ್ದುಗಳನ್ನು ಕೂಡ ಆಲಿಸುತ್ತವೆ, ಉದಾಹರಣೆಗೆ ಟಿವಿ ಅಲ್ಲಿ ಬರುತ್ತಿರುವ ಹಾಡು ಆಗಿರಬಹುದು ಅಥವಾ ಕಾರ್ ಒಳಗೆ ನೀವು ಕೂತುಕೊಂಡು ಇನ್ನೊಬ್ಬರೊಡನೆ ಆಡುತ್ತಿರುವ ಮಾತುಗಳು ಆಗಿರಬಹುದು.

ಪ್ರೆಗ್ನನ್ಸಿಯ ನಡುವಿನಿಂದ ಮಕ್ಕಳು ಬೆಳಕು ಮತ್ತು ಒತ್ತಡಕ್ಕೆ ಸ್ಪಂದಿಸಲು ಶುರು ಮಾಡುತ್ತವೆ. ಆಗಲೇ ನಿಮ್ಮ ಮಗುವಿಗೆ ನಿಮ್ಮ ನಗುವನ್ನು ಕೇಳಿಸಿಕೊಳ್ಳಲು ಸಾಧ್ಯ ಆಗುವುದು.

---------------------------------------------------------------------------------------------------------------------------------------------------------------------------------------------------------------------

ಅಮ್ಮಂದಿರೆ! ನಿಮಗೆಲ್ಲಾ ಒಂದು ಸಿಹಿ ಸುದ್ದಿ ಇದೆ!

ನಾವು, ಅಂದರೆ ಟೈನಿಸ್ಟೆಪ್ ಸಂಪೂರ್ಣ ನೈಸರ್ಗಿಕ ಫ್ಲೋರ್ ಕ್ಲೀನರ್ ಅನ್ನು ಲಾಂಚ್ ಮಾಡಿದ್ದು, ಇದು ನಿಮಗೆ, ನಿಮ್ಮ ಮಗುವಿಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕ್ಷಣವೇ ಕೀಟಾಣುಗಳಿಗೆ ಮತ್ತು ರಾಸಾಯನಿಕಗಳಿಗೆ ವಿದಾಯ ಹೇಳಿಬಿಡಿ!

ಒಮ್ಮೆ ನಮ್ಮ ಈ ಉತ್ಪನ್ನವನ್ನು ಪ್ರಯತ್ನಿಸಿ ಮತ್ತು ನಿಮಗೆ ಇಷ್ಟವಾಯಿತೇ ಎಂದು ತಿಳಿಸಿ. ಇದನ್ನು ಈಗಲೇ ಆರ್ಡರ್  ಮಾಡಲು ಇಲ್ಲಿ ಕ್ಲಿಕ್ ಮಾಡಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon