Link copied!
Sign in / Sign up
38
Shares

ಮಕ್ಕಳ್ಳನ್ನು ಪ್ರಿ-ಸ್ಕೂಲ್ ಗೆ ಕಳುಹಿಸುವ ಮೊದಲು, ನೀವು ಹೇಳಿಕೊಡಬೇಕಾದ ವಿಷಯಗಳು

ಮಕ್ಕಳು ಮನೆಯಲ್ಲಿ ಇದ್ದರೆ, ತಾಯಿಗೆ ಪ್ರತಿದಿನವೂ ಹಬ್ಬ. ಆದರೆ ಎಷ್ಟು ದಿನಗಳ ಕಾಲ ಮಕ್ಕಳು ತಾಯಿಯ ಬಳಿಯೇ ಇರಲು ಸಾದ್ಯ ಹೇಳಿ. ೩ ವರ್ಷ ತುಂಬುತ್ತಿದಂತೆಯೇ ಮಕ್ಕಳ್ಳನ್ನು ಅಂಗನವಾಡಿ ಅಥವ ಪ್ರಿ-ಸ್ಕೂಲ್ ಗೆ ಸೇರಿಸಲು ಪೋಷಕರು ಸಿದ್ದರಾಗುತ್ತಾರೆ. ಶಾಲೆಯನ್ನು ಹುಡುಕುವುದು, ಮಕ್ಕಳಿಗೆ ಬೇಕಾದ ಸಮವಸ್ತ್ರ, ಸ್ಕೂಲ್ ಬ್ಯಾಗ್, ಊಟದ ಬ್ಯಾಗ್ ಎಲ್ಲವನ್ನು ಹೊಂದಿಸುವುದರಲ್ಲಿ ಮಗ್ನರಾಗಿರುತ್ತಾರೆ. ಇದರ ಮಧ್ಯೆ ಮಗುವಿಗೆ ಕೆಲವೊಂದು ಒಳ್ಳೆಯ ನಡತೆಗಳನ್ನು ಸಹ ನೀವು ಹೇಳಿಕೊಡುವುದು ಅಗತ್ಯ. ಬೇರೆ ಬೇರೆ ಮಕ್ಕಳೊಂದಿಗೆ ಮೊದಲ ಬಾರಿ ಬೆರೆಯಲು ನಿಮ್ಮ ಮಗುವಿಗೆ ಕಷ್ಟವಾದರೂ, ಕಾಲ ಕಳೆದಂತೆ ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟ ಪಡುತ್ತಾರೆ. ಹಾಗದರೆ ಬನ್ನಿ, ನಿಮ್ಮ ಮಗುವಿಗೆ ಹೇಳಿಕೊಡಬಹುದಾದ ಒಳ್ಳೆಯ ಅಭ್ಯಾಸಗಳು ಯಾವುದೆಂದು ತಿಳಿಯೋಣ.

೧. ನಿಗದಿತ ವೇಳಾಪಟ್ಟಿಯನ್ನು ರಚಿಸಿ

ಹೌದು, ನಿಮ್ಮ ಮಗು ಈಗ ಶಾಲೆಗೆ ಹೋಗಲು ತಯಾರುಗುತ್ತಿದೆ. ಪ್ರತಿನಿತ್ಯ ಬೇಗ ಏಳುವ ಅಭ್ಯಾಸವನ್ನು ನೀವು ಮೊದಲೇ ರೂಢಿಸಬೇಕು, ಇಲ್ಲವಾದಲ್ಲಿ ಶಾಲೆ ಪ್ರಾರಂಭವಾದ ದಿನಗಳಲ್ಲಿ ನೀವು ಕಷ್ಟ ಅನುಭವಿಸಬೇಕಾಗುತ್ತದೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ರಾತ್ರಿ ಬೇಗನೆ ಮಲಗುವುದು ಮೊದಲಾದ ಅಭ್ಯಾಸಗಳನ್ನು ತಪ್ಪದೆ ಪಾಲಿಸುವಂತೆ ನೋಡಿಕೊಳ್ಳಿ.

೨. ಮಾತನಾಡುವ ಚಾತುರ್ಯವನ್ನು ರೂಢಿಸಿ

ನಿಮ್ಮ ಮಗು ನಿಮ್ಮನ್ನು ಬಿಟ್ಟರೆ ಬೇರೆ ಮಕ್ಕಳೊಂದಿಗೆ ಬೇರೆಯದೇ ಇದ್ದರೆ, ಮೊದಲು ಅವರನ್ನು ಎಲ್ಲ ಮಕ್ಕಳೊಂದಿಗೆ ಆಟವಾಡಲು ಕರೆದುಕೊಂಡು ಹೋಗಿ. ಹೀಗೆ ಮಾಡುವುದರಿಂದ, ಇತರೆ ಮಕ್ಕಳೊಂದಿಗೆ ಬೆರೆತು ಆಟ ಆಡುವುದನ್ನು ಕಲಿಯುತ್ತಾರೆ. ಮಕ್ಕಳೊಂದಿಗೆ ಹೇಗೆ ಮಾತನಾಡಬೇಕು, ಶಾಲೆಯಲ್ಲಿ ಶಿಕ್ಷಕಿಯರೊಂದಿಗೆ ಹೇಗೆ ವರ್ತಿಸಬೇಕು ಎಂದು ನೀವು ನಿಮ್ಮ ಮಗುವಿಗೆ ಮೊದಲೇ ಹೇಳಿಕೊಡಬೇಕು.

೩. ಸ್ವತಂತ್ರವಾಗಿ ಕೆಲಸ ಮಾಡುವುದನ್ನು ರೂಢಿಸಿ

ಊಟ ಮಾಡಿಸುವುದು,ಕೇಳಿದನ್ನು ಕಯ್ಯಿಗೆ ತಂದು ಕೊಡುವುದನ್ನು ಮೊದಲು ನಿಲ್ಲಿಸಿ. ಹಸಿವಾದಾಗ ಮಗುವಿಗೆ ತಾನೇ ಊಟ ಮಾಡುವಂತೆ ಅಭ್ಯಾಸ ಮಾಡಿಸಿ. ತಮ್ಮ ತಮ್ಮ ಆಟದ ವಸ್ತುವನ್ನು ತಾವೇ ಜೋಡಿಸುವಂತೆ ಹೇಳಿಕೊಡಿ. ಹೀಗೆ ಮಾಡುವುದರಿಂದ ಶಾಲೆಯಲ್ಲಿ ಬೇರೆ ಮಕ್ಕಳೊಂದಿಗೆ ಬೆರೆತು ಆಟವಾಡುವಾಗ ಸ್ವಲ್ಪ ಏರು-ಪೇರಾದರು ಅದನ್ನು ನಿರ್ಲಕ್ಷಿಸಿ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ.

೪. ವಸ್ತುಗಳ್ಳನ್ನು ಗುರುತಿಸುವಂತೆ ಮಾಡಿ

ಅಂದರೆ ಮಗುವಿಗೆ ಪ್ರತಿನಿತ್ಯ ಹೊಸ ಶಬ್ಧಗಳನ್ನು ಬರೆಯುವುದನ್ನು, ಓದುವುದನ್ನು ಹೇಳಿಕೊಡಿ. ಅವರಿಗೆ ವಸ್ತುಗಳನ್ನು ತೋರಿಸುವುದರ ಮೂಲಕ ಹೇಳಿಕೊಡುವುದರಿಂದ ಮತ್ತಷ್ಟು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ ಹಾಗು ಶಾಲೆಯಲ್ಲಿ ಪಾಠ ಮಾಡುವಾಗ ಇನ್ನೂ ಚೆನ್ನಾಗಿ ಅರ್ಥವಾಗಿ ಮಕ್ಕಳು ಬೇಗನೆ ಗ್ರಹಿಸುತ್ತಾರೆ. "ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು" ಎಂಬ ಮಾತು ಸಾವಿರಾರು ವರುಷಗಳು ಕಳೆದರೂ ನಶಿಸಿ ಹೋಗುವುದಿಲ್ಲ ಎನ್ನುವುದು ಮಾತ್ರ ಸಾತ್ಯ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon