Link copied!
Sign in / Sign up
2
Shares

ನೀವು ಪ್ರಯತ್ನಿಸಬೇಕಾದ ಹಾಲೂಡಿಸುವ ಅತ್ಯುತ್ತಮ ಭಂಗಿಗಳು

ತಾಯಿ ಮತ್ತು ಮಗುವಿನ ಜೀವನದಲ್ಲಿ ಸ್ತನ್ಯಪಾನವು ಒಂದು ಪ್ರಮುಖ ಭಾಗವಾಗಿದೆ. ಆದರೂ, ಹೊಸ ತಾಯಂದಿರಿಗೆ ಹಾಲುಣಿಸುವಿಕೆಯು ಕಷ್ಟಕರವಾಗಬಹುದು,ಜೊತೆಗೆ ಇದು ನಿಮ್ಮ ಚಿಕ್ಕ ಮಗುವಿಗೆ ಹೊಸ ವಿಷಯವಾಗಿದೆ. ಆದರೆ, ಇದು ಮಗುವಿಗೆ ಮತ್ತು ತಾಯಿಯರಿಗಾಗಿ ನೀಡುವ ಮಹತ್ವವನ್ನು ಮನಗಾಣಿಸಿದರೆ ನೀವು ನಿಮ್ಮ ಎಲ್ಲಾ ಪ್ರಯತ್ನವನ್ನು ಮಾಡುವುದು ಅಗತ್ಯವಾಗಿರುತ್ತದೆ.ಕನಿಷ್ಠ ೬ ತಿಂಗಳವರೆಗೆ ಮಗುವಿಗೆ ಸ್ತನ್ಯಪಾನ ಮಾತ್ರ ಮಾಡಿಸಬೇಕೆಂದು ಪ್ರಪಂಚದಾದ್ಯಂತದ ವೈದ್ಯರು ಶಿಫಾರಸು ಮಾಡಿದ್ದಾರೆ. ಪ್ರಾರಂಭಿಕವಾಗಿ ಸ್ತನ್ಯ ಪಾನದಲ್ಲಿರುವ ಪೋಷಕಾಂಶಗಳು ಮಗುವಿಗೆ ಶಕ್ತಿಯನ್ನು ನೀಡುತ್ತವೆ ಮತ್ತು ಅವರ ರೋಗನಿರೋಧಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗುತ್ತದೆ. ನಿಮ್ಮ ಚಿಕ್ಕ ಮಗಿವಿಗೆ ಸ್ತನ್ಯಪಾನ ಮಾಡಿಸುವುದು ಕಷ್ಟವಾಗಬಹುದು ಎಂದು ನಮಗೆ ತಿಳಿದಿದೆ. ಹೀಗಾಗಿ, ನೀವು ಬಳಸಬಹುದಾದ ಅತ್ಯುತ್ತಮ ಹಾಲುಣಿಸುವ ಭಂಗಿಗಳ ಪಟ್ಟಿಯನ್ನು ನಾವು ಮಾಡಿದ್ದೇವೆ.

೧.ತೊಟ್ಟಿಲ ಹಿಡಿತ

ತಾಯಿಗೆ ಕಲಿಸಲಾಗುವ ಮೂಲಭೂತ ಹಿಡಿತಗಳಲ್ಲಿ ಇದು ಒಂದಾಗಿದೆ.ಈ ಹಿಡಿತ ಪೂರ್ಣಾವಧಿ ಶಿಶುಗಳಿಗೆ ಚೆನ್ನಾಗಿ ಕೆಲಸ ಮಾಡುತ್ತದೆ. ಸ್ವಲ್ಪಮಟ್ಟಿಗೆ ಒಂದು ತಿಂಗಳ ವಯಸ್ಸಿನಲ್ಲಿ ಅವರಿಗೆ  ಬಲವಾದ ಕುತ್ತಿಗೆಯ ಸ್ನಾಯುಗಳ ಅಗತ್ಯವಿರುವಾಗ ನೀವು ಈ ಭಂಗಿಯನ್ನು ಬಳಸಬಹುದು. ಉತ್ತಮ ಆರಾಮದಾಯಕ ಕೈಗಳನ್ನು ಹೊಂದಿರುವ ಕುರ್ಚಿಯಲ್ಲಿ ಕುಳಿತುಕೊಂಡು ಇಲ್ಲವೇ  ಸಾಕಷ್ಟು ದಿಂಬುಗಳನ್ನು ಹೊಂದಿರುವ ಹಾಸಿಗೆಯ ಮೇಲೆ ನಿಮ್ಮ ಬೆನ್ನು ಮತ್ತು ನಿಮ್ಮ ಕೈಗಳನ್ನು ಬೆಂಬಲಿಸುವ ರೀತಿಯಲ್ಲಿ ಆರಾಮದಾಯಕವಾಗಿ ಕುಳಿತುಕೊಳ್ಳಿ. ನೀವು ಬಲಭಾಗದಲ್ಲಿ ಹಾಲುಣಿಸುತ್ತಿದ್ದಲ್ಲಿ ಮಗುವನ್ನು ಬಲಗೈಯಿಂದ ಹಿಡಿದುಕೊಳ್ಳಿ.ಅದೇ ತೋಳಿನ ಕೊಕ್ಕಿನಿಂದ ತಲೆಗೆ ಬೆಂಬಲ ನೀಡಿ ಮತ್ತು ಸ್ತನವನ್ನು ಬೆಂಬಲಿಸಲು ನಿಮ್ಮ ಎಡಗೈಯನ್ನು ಬಳಸಿ.

೨.ಅಡ್ಡ ತೊಟ್ಟಿಲಿನ ಹಿಡಿತ

ಈ ಹಿಡಿತವು ತೊಟ್ಟಿಲು ಹಿಡಿತವನ್ನು ಹೋಲುತ್ತದೆ ಮತ್ತು ತೋಳನ್ನು ಬಳಸಿದ ರೀತಿಯಲ್ಲಿ ಮಾತ್ರ ಭಿನ್ನವಾಗಿರುತ್ತದೆ. ಇದು ಮಗುವಿಗೆ ಹಿಡಿತ ಮಾಡಲು ಕಷ್ಟವಾದಾಗ ತಾಯಿಗೆ ಹಿಡಿದುಕೊಳ್ಳಲು ಹೆಚ್ಚು ಅನುಕೂಲಕರವಾಗಿರುತ್ತದೆ. ಆರಾಮವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಬೆನ್ನು ಮತ್ತು ಕೈಗಳನ್ನು ಬೆಂಬಲಿಸಿ ಇರಿಸಿಕೊಳ್ಳಿ.ಮಗುವನ್ನು ಅದರ ಬದಿಯಲ್ಲಿ ಮಲಗಿಸಿ ಮತ್ತು ಸರಿಯಾದ ಎತ್ತರಕ್ಕೆ ತರಲು ಒಂದು ದಿಂಬನ್ನು ಬಳಸಿ.ನೀವು ಬಲಬದಿಯ ಸ್ತನದಲ್ಲಿ ಹಾಲುಣಿಸುತ್ತಿದ್ದರೆ, ಮಗುವಿನ ತಲೆಯನ್ನು ಬೆಂಬಲಿಸಲು ನಿಮ್ಮ ಎಡಗೈಯನ್ನು ಬಳಸಿ ಮತ್ತು ನಿಮ್ಮ ಮಗುವಿನ ಬೆನ್ನನ್ನು ಇನ್ನೊಂದು ಕೈಯಿಂದ ಬೆಂಬಲಿಸಿ.

೩.ಬದಿಯಲ್ಲಿ ಮಲಗುವ ಹಿಡಿತ

ಅಮ್ಮಂದಿರು ಹಾಸಿಗೆಯ ಮೇಲೆ ಮಲಗಿದ್ದಾಗ ಮತ್ತು ಮಗುವಿಗೆ ಹಾಲೂಡಿಸುವ ಅಗತ್ಯವಿರುವಾಗ ಇದು ಅತ್ಯಂತ ಅನುಕೂಲಕರವಾದ ಭಂಗಿಯಾಗಿದೆ. ಈ ಭಂಗಿಯಲ್ಲಿ ಹಾಲೂಡಿಸುವಾಗ  ಕಡಿಮೆ ಆಯಾಸವಾಗುತ್ತದೆ ಎಂದು ಹಲವು ಅಮ್ಮಂದಿರು ವರದಿ ಮಾಡಿದ್ದಾರೆ. ನಿಮ್ಮ ಮಗುವು ನಿಮ್ಮನ್ನು ಎದುರಿಸುವಂತೆ ನೀವು ನಿಮ್ಮ ಬಲಭಾಗದಲ್ಲಿ ಮಲಗಿಕೊಳ್ಳಿ.ಮಗುವನ್ನು ನಿಮ್ಮ ಬದಿಯಲ್ಲಿ ಇರಿಸಿ ಮತ್ತು ನಿಮ್ಮ ಬಲ ತೋಳಿನಿಂದ   ಅವನ / ಅವಳ ದೇಹಕ್ಕೆ ಬೆಂಬಲ ನೀಡಿ ಮತ್ತು ನಿಮ್ಮ ಬಲಗೈಯಿಂದ ಅವನ/ಅವಳ ತಲೆಗೆ ಬೆಂಬಲ ನೀಡಿ.ನಿಮ್ಮ ತೋಳಿನ ಕೊಕ್ಕಿನಲ್ಲಿ  ಸಹ ತಲೆಗೆ ಬೆಂಬಲ ನೀಡಬಹುದು .ಮೊಲೆತೊಟ್ಟು ತಲುಪಲು ಮಗು ತನ್ನ ಬೆನ್ನಿನ ಮೇಲೆ ಇಲ್ಲವೇ ವಕ್ರವಾಗಿರಬಾರದು. ಅಲ್ಲದೆ, ಕುತ್ತಿಗೆ ನೋವನ್ನು ತಪ್ಪಿಸಲು ನಿಮ್ಮ ತಲೆಗೆ ದಿಂಬು  ಅಥವಾ ನಿಮ್ಮ ಕೈಯಿಂದ ಬೆಂಬಲ ನೀಡಿ.

೪.ನೇರವಾಗಿ ಹಿಡಿದುಕೊಳ್ಳಿ

ಮಗುವು ಸ್ವಲ್ಪ ದೊಡ್ಡದಾಗಿದ್ದಲ್ಲಿ ಮತ್ತು ಅವರಿಗೆ ಯಾವುದೇ ಉಸಿರಾಟದ ಸಮಸ್ಯೆ ಇದ್ದಲ್ಲಿ ಈ ಹಿಡಿತವನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ. ಸ್ತನದಿಂದ ಹಾಲು ಹರಿಯುವಿಕೆಯು ವೇಗವಾಗಿದ್ದಾಗ ಇದು ಅನುಕೂಲಕರವಾಗಿರುತ್ತದೆ. ಬೆನ್ನನ್ನು ಆರಾಮದಾಯಕವಾಗಿಸಿಕೊಂಡು ಮತ್ತು ಅಡ್ಡ-ಕಾಲಿನ ಮೇಲೆ ನೇರವಾಗಿ ಕುಳಿತುಕೊಳ್ಳಿ.ಮಗುವನ್ನು ನಿಮ್ಮನ್ನು ಎದುರಿಸುವಂತೆ ಸರಿಯಾದ ಸ್ಥಾನದಲ್ಲಿ ಇರಿಸಿ. ತೊಡೆ ಅಥವಾ ಮೊಣಕಾಲು ಬಳಸಿ ನೀವು ಬೆಂಬಲವನ್ನು ತೆಗೆದುಕೊಳ್ಳಬಹುದು.  ಒಂದು ಕೈಯಿಂದ ಮಗುವಿನ ತಲೆಯನ್ನು ಬೆಂಬಲಿಸಿ ಮತ್ತು ಇನ್ನೊಂದು ಕೈಯಿಂದ ನಿಮ್ಮ ಸ್ತನವನ್ನು ಹಿಡಿದುಕೊಳ್ಳಿ.ಮಗುವಿನ ಉದ್ದ, ನಿಮ್ಮ ಸ್ತನ ಗಾತ್ರ, ಮತ್ತು ನಿಮ್ಮ ಎತ್ತರವನ್ನು ಅವಲಂಬಿಸಿ ಪುನರ್ ಬದಲಾವಣೆಗಳನ್ನು ಮಾಡಿ.

೫.ವಿಶ್ರಮಿಸಿಕೊಳ್ಳುತ್ತಿರುವ ಹಿಡಿತ

ತಾಯಂದಿರು ವಿಶ್ರಾಂತಿ ಪಡೆಯಲು ಮತ್ತು ಶಿಶುಗಳಿಗೆ ತಮ್ಮ ಪ್ರತಿವರ್ತನವನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ವಾತಾವರಣಕ್ಕೆ ತಮ್ಮ ಮಾರ್ಗವನ್ನು ಕಂಡುಕೊಳ್ಳಲು ಈ ಭಂಗಿಯು ಅತ್ಯುತ್ತಮವಾಗಿರುತ್ತದೆ. ನಿಮ್ಮ ಮಗುವು ಪೂರ್ಣ ದೇಹ ಸಂಪರ್ಕದಲ್ಲಿ ಅಂಟಿಕೊಂಡಾಗ ಮತ್ತು ಹಾಲು ಕುಡಿಯಲು ಆರಂಭಿಸಿದಾಗ,  ನರ ಪ್ರಚೋದನೆಯ ಪರಿಣಾಮವಾಗಿ ಆಕ್ಸಿಟೋಸಿನ್ನ ಬಿಡುಗಡೆಗೆ ಕಾರಣವಾಗುತ್ತವೆ, ಇದು ಉತ್ತಮ ಹಾಲು ಉತ್ಪಾದನೆಗೆ ಕಾರಣವಾಗುತ್ತದೆ.ಅರ್ಧಮಲಗಿದ  ಆರಾಮದಾಯಕವಾದ  ಭಂಗಿಯನ್ನು ಆಶ್ರಯಿಸಿಕೊಂಡು ಒಂದು ದಿಂಬನ್ನು ಬಳಸಿ ಹಾಸಿಗೆ ಅಥವಾ ಮೆತ್ತೆಯ ಮೇಲೆ ಆವರಿಸಿಕೊಳ್ಳಿ.ನೈಸರ್ಗಿಕ ಪ್ರಸವವಾಗಿದ್ದಲ್ಲಿ ನಿಮ್ಮ ಮಗುವೀಣೆ ಮುಖವನ್ನು ನಿಮ್ಮ ಸ್ತನದ ಬಳಿ ಮತ್ತು ಕಾಲುಗಳನ್ನು ನಿಮ್ಮ ತೊಡೆಯ ಬಳಿಯಲ್ಲಿ ಇರಿಸಿ. ಸಿ-ಸೆಕ್ಷನ್ ಆದಲ್ಲಿ ಗಾಯವನ್ನು ಮುಟ್ಟದಂತೆ ತಪ್ಪಿಸಲು ಅವನು/ಅವಳನ್ನು ನಿಮ್ಮ ಎದೆಯ ಮೇಲೆ ಅಥವಾ ನಿಮ್ಮ ಭುಜದ ಮೇಲೆ ಇರಿಸಿ. ಈ ಸ್ಥಾನಕ್ಕೆ ಶಿಶುಗಳು ತಮ್ಮ ಹೊಟ್ಟೆಯ ಮೇಲೆ ಇರಬೇಕು.

ಹಕ್ಕುತ್ಯಾಗ : ಈ ವಿಷಯಗಳು ಸಂಪೂರ್ಣವಾಗಿ ಬೋಧಪ್ರದವಾಗಿದ್ದು ಶೈಕ್ಷಣಿಕವಾದ ಸ್ವಭಾವವನ್ನು ಹೊಂದಿದೆ ಮತ್ತು ವೈದ್ಯಕೀಯ ಸಲಹೆ ಎಂದು ಅರ್ಥೈಸಿಕೊಳ್ಳಬಾರದು .ಸೂಕ್ತವಾದ ಪ್ರಮಾಣೀಕೃತ ವೈದ್ಯಕೀಯ ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚನೆಯ ನಂತರ ವಿಷಯವನ್ನು ಬಳಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon