Link copied!
Sign in / Sign up
3
Shares

ನಿಮ್ಮ ಮಗುವಿನ ರೋಗ-ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುವ ಆಹಾರಗಳು

ರೋಗಗಳು ಬಂದ ಮೇಲೆ ಒದ್ದಾಡುವ ಬದಲು, ರೋಗಗಳೇ ಬಾರದ ಹಾಗೆ ತಡೆಯುವುದು ಬುದ್ಧಿವಂತಿಕೆ. ಎಲ್ಲಾ ರೀತಿಯ ಖಾಯಿಲೆಗಳಿಂದ, ನಿಮ್ಮ ಮುದ್ದು ಕಂದಮ್ಮಗಳ್ಳನ್ನು ಸುರಕ್ಶಿತಗೊಳಿಸಬೇಕೇ? ಹಾಗಾದರೆ ಬನ್ನಿ! ನೀವು ಮಾಡಬೇಕಾಗಿರುವುದೇನೆಂದು, ನಾವು ನಿಮಗೆ ತಿಳಿಸುತ್ತೇವೆ.

ಯಾವ ಪೋಷಕರಿಗೆ, ತಮ್ಮ ಮಗು ಸದಾಕಾಲ ಆರೋಗ್ಯದಿಂದಿರಲು ಇಷ್ಟವಿರುವುದಿಲ್ಲವೆಂದು ನೀವೇ ಹೇಳಿ? ಲವಲವಿಕೆ ಹಾಗು ಚೈತನ್ಯದ ಚಿಲುಮೆಗಳ ಹಾಗೆ ಓಡಾಡುವ ನಿಮ್ಮ ಮನೆಯ ನೆರೆಹೊರೆಯ ಮಕ್ಕಳಂತೆ, ನಿಮ್ಮ ಮಗು ಕೂಡ ಹುಮ್ಮಸ್ಸಿನಿಂದ ಬೆಳೆಯಬೇಕಾದರೆ ನೀವು ಮಾಡಬೇಕಾಗಿರುವುದು ಇಷ್ಟೇ. ಪೌಷ್ಟಿಕ ಆಹಾರ ಹಾಗು ನಿಗದಿತ ಸಮಯಕ್ಕೆ ನಿದ್ರೆ ಮಾಡುವಂತೆ ಮಕ್ಕಳ್ಳನ್ನು ಪ್ರೇರೇಪಿಸಿ. ಹಾಗಾದರೆ ಯಾವ ಯಾವ ಆಹಾರಗಳ್ಳನ್ನು ಮಗುವಿಗೆ ನೀಡಬೇಕೆಂದು, ನೀವು ಈಗಾಗಲೇ ಯೋಚಿಸುತ್ತೀದ್ದಿರಲ್ಲವೇ? ಇನ್ನು ತಡಮಾಡುವುದು ಬೇಡ! ಮಕ್ಕಳ ತಜ್ಞರು ಹೇಳಿರುವ ಆಹಾರದ ಪಟ್ಟಿ ಯಾವುದೆಂದು ತಿಳಿಯೋಣ ಬನ್ನಿ.

೧. ಕಬ್ಬಿಣ

ಕಬ್ಬಿಣಾಂಶವು ಮಕ್ಕಳ್ಳಲ್ಲಿ ರೋಗ-ನಿರೋಧಕ ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ರಕ್ತದಲ್ಲಿನ ಹೀಮೋಗ್ಲೋಬಿನ್ ಕಣಗಳ್ಳನ್ನು ಹೆಚ್ಚಿಸುತ್ತದೆ. ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ, ಮಕ್ಕಳಲ್ಲಿ ರಕ್ತ ಹೀನತೆಯನ್ನು ಹೋಗಲಾಡಿಸಬಹುದು. ಜನಿಸಿದ ೬ ತಿಂಗಳುಗಳ ವರೆಗೆ, ಮಕ್ಕಳ್ಳಲ್ಲಿ ರಕ್ತ ಹೀನತೆ ಕಂಡುಬರುವುದಿಲ್ಲ. ಆದರೆ ಅಪೌಷ್ಟಿಕ ಮಕ್ಕಳ್ಳಲ್ಲಿ ರಕ್ತಹೀನತೆ ಸರ್ವೇಸಾಮಾನ್ಯ. ಇದನ್ನು ತಡೆಯಬೇಕಾದರೆ, ನಿಮ್ಮ ಮಗುವಿಗೆ ಕಬ್ಬಿಣಾಂಶ ಅಧಿಕವಿರುವ ಆಹಾರಗಳ್ಳನ್ನು ನೀಡಿ.

ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥಗಳಾದ ಒಣ ದ್ರಾಕ್ಷಿ, ಕೋಳಿಯ ಮಾಂಸ, ಮೀನು, ಮೊಟ್ಟೆ, ಸಿಹಿ ಗೆಣಸು, ಸೊಪ್ಪು ಇತ್ಯಾದಿಗಳ್ಳನ್ನು ನಿತ್ಯ ಆಹಾರದ್ದಲ್ಲಿ, ನಿಮ್ಮ ಮಕ್ಕಳು ಸೇವಿಸುವಂತೆ ನೋಡಿಕೊಳ್ಳಿ.

೨. ವಿಟಮಿನ್-A

ಕಣ್ಣಿನ ಸಮಸ್ಯೆಗಳಿಗೆ ವಿಟಮಿನ್ A ರಾಮಬಾಣವಿದ್ದಂತೆ. ಬೆಳೆಯುವ ಮಕ್ಕಳ್ಳಲ್ಲಿ, ಪೌಷ್ಟಿಕ ಆಹಾರದ ಕೊರತೆಯಾದರೆ, ಕಣ್ಣಿನ ದೃಷ್ಟಿ ಮಂದವಾಗಿ, ರಾತ್ರಿ ಕುರುಡರಾಗುವ ಸಾಧ್ಯತೆಗಳಿವೆ. ವಿಟಮಿನ್ Aಯುಕ್ತ ಆಹಾರಗಳ್ಳನ್ನು ನಿತ್ಯ ಸೇವಿಸುವುದರಿಂದ ಮಕ್ಕಳ್ಳಲ್ಲಿ ರೋಗಾಣುಗಳೊಂದಿಗೆ ಹೋರಾಡುವ ಶಕ್ತಿ ಇಮ್ಮಡಿಗೊಳ್ಳುತ್ತದೆ. ವಿಟಮಿನ್-A ಹೆಚ್ಚಿರುವ ಆಹಾರಗಳು: ಕ್ಯಾರಟ್, ಆಲಿವ್ ಎಣ್ಣೆ, ಸಿಹಿ ಗೆಣಸನ್ನು ನಿಮ್ಮ ಕಂದಮ್ಮಗಳಿಗೆ ಪ್ರತಿನಿತ್ಯ ತಿನ್ನಿಸಿ.

೩. ವಿಟಮಿನ್-C

ನಿಮ್ಮ ಮಗುವಿನ ದೇಹದೊಳಗಿರುವ ಜೀವಾಣುಗಳು, ಸದಾಕಾಲ ಚಟುವಟಿಕೆಯಿಂದ ಇರಬೇಕಾದರೆ, ನೀವು ನಿಮ್ಮ ಮಗುವಿಗೆ ಹೇರಳವಾಗಿ ವಿಟಮಿನ್ C ಯನ್ನು ನೀಡಬೇಕು. ವಿಟಮಿನ್ C ಯಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ ಶಕ್ತಿ(anti-oxidant)ಯಿದ್ದು ಜೀವಕೋಶಗಳ ಪುನರ್ಜೀವನಕ್ಕೆ ಸಹಕಾರಿಯಾಗಿದೆ. ವಿಟಮಿನ್ Cಯುಕ್ತ ಆಹಾರಗಳು: ಕಿತ್ತಳೆ ಹಣ್ಣು, ಕಿವಿ ಹಣ್ಣು, ನಿಂಬೆ ಹಣ್ಣು, ನೆಲಮುಳ್ಳಿ (Strawberry) ಹಣ್ಣನ್ನು ಸಲಾಡ್ ರೂಪದ್ದಲ್ಲಿ ನೀಡಿ.

೪.ವಿಟಮಿನ್ B6

ಮಗುವಿನ ದೇಹದೊಳಗೆ ಪ್ರತಿಕಾಯಗಳ್ಳನ್ನು(antibodies)ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಯಾವುದೇ ಸೂಕ್ಶ್ಮಣುಗಳು ಮಗುವಿನ ದೇಹದೊಳಗೆ ಸೇರಿದಾಗ, ಅದನ್ನು ಹೊಡೆದೋಡಿಸುವಲ್ಲಿ ಪ್ರತಿಕಾಯಗಳು ಕೈ ಜೋಡಿಸುತ್ತವೆ. ವಿಟಮಿನ್ B6 ಆಹಾರಗಳಾದ ಬಾಳೆಹಣ್ಣು, ಬ್ರೆಡ್, ಹಾಲು, ಬೆಣ್ಣೆ, ಮೊಟ್ಟೆಯನ್ನು ಮಗುವಿನ ಆಹಾರದಲ್ಲಿ ನಿತ್ಯ ಬಳಸಿ.

೫.ಸತು

ನಿಮ್ಮ ಮಗುವಿನ ದೇಹದ್ದಲ್ಲಿ ಹೊಸ ಜೀವಕೋಶಗಳ್ಳನ್ನು ಉತ್ಪಾದಿಸುವುದು ಹಾಗು ಕಿಣ್ವಗಳ್ಳನ್ನು ಸರಿದೂಗಿಸುವಲ್ಲಿ ಜಿಂಕ್ನ್ ಪ್ರಯೋಜನಕಾರಿಯಾಗಿದೆ.

ಜಿಂಕ್ಯುಕ್ತ ಆಹಾರಗಳು: ಹಾಲು, ಮೊಟ್ಟೆ, ಬೀನ್ಸ್, ಕುರಿಯ ಮಾಂಸ ಇತ್ಯಾದಿ ಆಹಾರಗಳ್ಳನ್ನು, ಪ್ರತಿನಿತ್ಯ ನಿಮ್ಮ ಮಗು ಸೇವಿಸುವಂತೆ ನೋಡಿಕೊಳ್ಳಿ.

ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon