ನಿಮಗೆ ನೀವು ಗರ್ಭಿಣಿ ಆಗಿರುವ ವಿಷಯ ತಿಳಿಯುತ್ತಿದ್ದಂತೆ, ನಿಮ್ಮ ಖುಷಿಗೆ ಸರಿಸಮ ಯಾವುದು ಇರುವುದಿಲ್ಲ. ಪ್ರತಿ ಹೆಣ್ಣಿನ ಜೀವನದ ಅತ್ಯಂತ ಸ್ಮರಣೀಯ ಕ್ಷಣ ಅದು. ನಿಮಗೆ ಆ ವಿಷಯ ತಿಳಿಯುತ್ತಿದ್ದಂತೆ ಇನ್ನು ಮುಂದೆ ಏನು ಮಾಡಬೇಕು?, ಹೇಗಿರಬೇಕು? ಎಂಬುದರ ಬಗ್ಗೆ ಯೋಚಿಸುವಿರಿ ಮತ್ತು ಸರಿಯಾದ ಸಮಯಕ್ಕೆ ವೈದ್ಯರನ್ನು ಭೇಟಿ ಮಾಡಬೇಕು ನಿರಂತರ ತಪಾಸಣೆಗೆ ಹೋಗಬೇಕು ಎಂದೆಲ್ಲಾ ಯೋಜನೆ ಮಾಡಿಕೊಳ್ಳುವಿರಿ. ಆದರೆ ನೀವು ತಪಾಸಣೆಗೆ ಭೇಟಿ ನೀಡಿದಾಗ ವೈದ್ಯರು ಏನು ಮಾಡುತ್ತಾರೆ?, ನಿಮ್ಮಲಿ ಏನನ್ನೆಲ್ಲಾ ಪರೀಕ್ಷಿಸುತ್ತಾರೆ, ಅದಕ್ಕೆ ಕಾರಣ ತಿಳಿದಿದಿಯೇ? ನೀವು ತಿಳಿಯಲೆಂದೇ ನಾವು ನಿಮಗಾಗಿ ಈ ಲೇಖನ ಬರೆದಿದ್ದೇವೆ.
ನೀವು ವೈದ್ಯರನ್ನು ಭೇಟಿ ಮಾಡಿದ ಕ್ಷಣ, ಅವರು ನಿಮ್ಮನ್ನು ಕೇಳುವ ಮೊದಲ ಪ್ರಶ್ನೆ ನಿಮಗೆ ಈ ಹಿಂದೆ ಯಾವುದಾದರು ಕಾಯಿಲೆ ಅಥವಾ ಅನುವಂಶೀಯ ರೋಗ ಇದೆಯೇ? ಎಂದು ಏಕೆಂದರೆ ಅದು ನಿಮ್ಮ ಮಗುವಿಗೂ ತಗುಲಬಹುದು, ನಿಮ್ಮ ಮಗುವಿಗೆ ಕಾಯಿಲೆ ಬರುವುದನ್ನು ತಪ್ಪಿಸಲು ಅವರು ನಿಮ್ಮ ಬಳಿ ಇದನ್ನು ಮೊದಲು ಕೇಳುವರು. ನಂತರ ನಿಮಗೆ ಈಗ ಅನಿಸುತ್ತಿದೆ. ನೀವು ಈಗ ಸ್ವಲ್ಪ ಹೆಚ್ಚು ತೂಕ ಮತ್ತು ರಕ್ತದೊತ್ತಡವನ್ನು ಹೊಂದಿರುವಿರಿ.
ನಿಮ್ಮ ಮೊದಲ ಭೇಟಿಯಲ್ಲಿ, ನಿಮ್ಮ ಗರ್ಭದ ಗಾತ್ರ ಮತ್ತು ಆಕಾರವನ್ನು ತಿಳಿಯಲು ಶ್ರೋಣಿಯ(ಪೆಲ್ವಿಕ್) ಪರೀಕ್ಷೆ ಮಾಡುತ್ತಾರೆ. ಮತ್ತು ನೀವು ಗರ್ಭಕಂಠದ ಕ್ಯಾನ್ಸರ್ ಗೆ ಒಳಗಾಗಿರುವಿರೆ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆಯನ್ನು ನಡೆಸುತ್ತಾರೆ..
ರಕ್ತ ಮತ್ತು ಮೂತ್ರದ ಮಾದರಿಯನ್ನು ಮೊದಲ ಮತ್ತು ನಂತರದ ಬೇಟಿಗಳಲ್ಲಿ ತೆಗೆದುಕೊಂಡು, ಬ್ಯಾಕ್ಟಿರಿಯಾ, ಸೋಂಕು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷೆ ಮಾಡುತ್ತಾರೆ. ಜೊತೆಗೆ ಪ್ರೊಟೀನ್ ನ ಪ್ರಮಾಣವನ್ನು ಪರೀಕ್ಷಿಸುತ್ತಾರೆ(ಇವುಗಳನ್ನು ಮೂತ್ರದ ಪರೀಕ್ಷೆಯಲ್ಲಿ ನೋಡುತ್ತಾರೆ). ರಕ್ತ ಪರೀಕ್ಷೆಯಲ್ಲಿ ಕಬ್ಬಿಣ ಅಂಶದಲ್ಲಿ ಕೊರತೆ, ರಕ್ತ ಕೋಶದ ಸಂಖ್ಯೆ, ಸೋಂಕು ಇರುವ ಕಾಯಿಲೆ ಮತ್ತು ರಕ್ತದ ಬಗೆಯನ್ನು ಪರೀಕ್ಷಿಸುತ್ತಾರೆ.
ನಿಮ್ಮ ಮಗುವಿನ ಜನನದ ದಿನ ಅಥವಾ ಮಗುವಿನ ಬೆಳವಣಿಗೆ ಬಗ್ಗೆ ನಿಖರ ಮಾಹಿತಿ ತಿಳಿಯಲು ಕೆಲವೊಮ್ಮೆ ಅಲ್ಟ್ರಾಸೌಂಡ್ ಸ್ಕ್ಯಾನ್ ಅನ್ನು ಮಾಡುತ್ತಾರೆ. ಇದರಿಂದ ನಿಮ್ಮ ಉದರದೊಳಗೆ ಮಗು ಇರುವ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇದರಿಂದ ನಿಮ್ಮ ಮಗುವಿನ ಚಿತ್ರವನ್ನು ಪರದೆಯ ಮೇಲೆ ನೋಡಬಹುದು.
ನಿಮಗೆ ಅಥವಾ ನಿಮ್ಮ ಮಗುವಿಗೆ ಯಾವುದಾದರು ತೊಂದರೆ ಇದೆ ಎಂದು ಅನಿಸಿದರೆ ವೈದ್ಯರು ಅದಕ್ಕೆ ಸೂಕ್ತವಾದ ಬೇರೆ ಕೆಲವು ತಪಾಸಣೆಯನ್ನು ಮಾಡುತ್ತಾರೆ.
ನಿಮ್ಮ ಮೊದಲ ಭೇಟಿಯ ನಂತರ ಪ್ರತಿ ೪ ವಾರಗಳಿಗೊಮ್ಮೆ ನೀವು ವೈದ್ಯರನ್ನು ಭೇಟಿ ಮಾಡಬೇಕು. ಅಥವಾ ೪ವಾರಗಳಿಗೊಮ್ಮೆ ಭೇಟಿ ಮಾಡಿ ಎಂದು ಅವರೇ ಸೂಚಿಸುತ್ತಾರೆ. ೭ ತಿಂಗಳು ಕಳೆದ ನಂತರ ಪ್ರತಿ ೨ ವಾರಗಳಿಗೊಮ್ಮೆ ಭೇಟಿ ಮಾಡುವುದು ಒಳ್ಳೆಯದು. ವೈದ್ಯರು ಇದನ್ನು ಸಲಹಿಸುತ್ತಾರೆ. ಪ್ರತಿ ತಪಾಸಣೆಯಲ್ಲೂ ನಿಮ್ಮ ರಕ್ತದೊತ್ತಡ ಮತ್ತು ತೂಕವನ್ನು ಪರೀಕ್ಷಿಸುತ್ತಾರೆ. ಮತ್ತು ನಿಮ್ಮ ಸಮಸ್ಯೆಗಳನ್ನು ಅಥವಾ ನಿಮಗೆ ಆಗುತ್ತಿರುವ ಅನುಭವವನ್ನು ಅವರು ಕೇಳುತ್ತಾರೆ, ಆಗ ಅದು ಏನೇ ಹಾಗಿದ್ದರೂ, ಮುಜುಗರ ಪಡದೆ ವೈದ್ಯರ ಬಳಿ ಹಂಚಿಕೊಳ್ಳುವುದು ತೊಂದರೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಸಹಾಯವಾಗುತ್ತದೆ.
ನಿಮ್ಮ ಜೊತೆ ವೈದ್ಯರು ಸಂಪೂರ್ಣ ಸಮಾಲೋಚಿಸಿದ ಮೇಲೆ, ೨೦ವಾರಗಳ ನಂತರ ನಿಮ್ಮ ಮಗುವಿನ ಹೃದಯ ಬಡಿತವನ್ನು ಕೇಳುತ್ತಾರೆ, ಮತ್ತು ಮಗುವಿನ ಉದ್ದವನ್ನು ನೋಡುತ್ತಾರೆ.