Link copied!
Sign in / Sign up
14
Shares

ಪ್ರಸವನಂತರದ ಸೆಕ್ಸ್ ಬಗ್ಗೆ ನಿಮ್ಮನ್ನು ನಿಬ್ಬೆರಗು ಮಾಡುವಂತ ೧೦ ಸಂಗತಿಗಳು

ಪ್ರಸವನಂತರದ ಲೈಂಗಿಕ ಕ್ರಿಯೆ ಮೊದಲಿನಂತೆ ಇರುವುದಿಲ್ಲ. ಒಂದು ತಾಯಿಯಾಗಿ, ನಿಮ್ಮ ದೇಹವು ಹಲವಾರು ಬದಲಾವಣೆಗಳನ್ನು ಕಂಡಿರುತ್ತದೆ. ಬಹುತೇಕ ಗಂಡಸರು ತಮ್ಮ ಸಂಗಾತಿಯ ದೇಹದಲ್ಲಿನ ಈ ಬದಲಾವಣೆಗಳನ್ನು ಇಷ್ಟ ಪಡುವರು, ಹಾಗಾಗಿ ಇದರಲ್ಲಿ ನೀವು ನಾಚಿಕೆ ಪಟ್ಟುಕೊಳ್ಳುವುದೇನಿಲ್ಲ. ನೀವು ನಿಮ್ಮ ಲೈಂಗಿಕ ಕ್ರಿಯೆಯನ್ನು ಮುಂಚೆಯೇ ಯೋಜಿಸಿದ್ದರೆ, ಕೆಲಸವೂ ನಿಮ್ಮಿಬ್ಬರಿಗೂ ಸುಲಭವಾಗುತ್ತದೆ.

೧. ಗರ್ಭಿಣಿಯ ದೇಹದಲ್ಲಿ ಹಾರ್ಮೋನ್ ಗಳ ಗತಿಯಲ್ಲಿ ಬಹಳಷ್ಟು ಏರುಪೇರಾಗುತ್ತವೆ. ಇದರಲ್ಲಿ ಒಂದು ಮುಖ್ಯ ಬದಲಾವಣೆ ಎಂದರೆ ಅದು ನಿಮ್ಮ ಶ್ರೋಣಿಯ ರಿಮ್ (Pelvic rim) ಅಲ್ಲಿ ಆಗುವ ಬದಲಾವಣೆ. ಸ್ವಾಭಾವಿಕ ಹೆರಿಗೆಯಾಗಲಿ ಅಥವಾ ಸಿಸೇರಿಯನ್ ಆಗಿರಲಿ, ಪ್ರಸವನಂತರದಲ್ಲಿ ನಿಮ್ಮ ದೇಹದ ಸಂಪೂರ್ಣ ಹಿಡಿತವನ್ನು ಹಿಡಿಯುವ ಹಾರ್ಮೋನ್ ಗಳು ಮಾಡುವ ಅತಿಮುಖ್ಯವಾದ ಬದಲಾವಣೆಯು ಶ್ರೋಣಿಯ ರಿಮ್ ನಲ್ಲಿ. ಇವುಗಳು ಆ ರಿಮ್ ಅನ್ನು ಹಗಲ ಮಾಡುತ್ತವೆ. ಇದರ ಕಾರಣದಿಂದ ಪ್ರಸವನಂತರದಲ್ಲಿ ಸಂಭೋಗ ಅಷ್ಟೊಂದು ತೃಪ್ತಿಕರವಾಗಿರುವುದಿಲ್ಲ.

೨. ಬಹಳಷ್ಟು ಹುಡುಗಿಯರು ಸಂಭೋಗದ ವೇಳೆ ಅತಿಯಾದ ನೋವು ಅನುಭವಿಸುತ್ತಾರೆ. ಪ್ರಸವನಂತರದಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ಗಂಭೀರವಾಗಿದ್ದು ಎನಿಸಿದೊಡನೆ ಅಥವ ನಿಮಗೆ ಅಸ್ವಸ್ತತೆ ಮುಂದುವರಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

೩. ಪ್ರಸವನಂತರದಲ್ಲಿನ ಖಿನ್ನತೆ ನಿಮ್ಮ ಲೈಂಗಿಕ ಆಸಕ್ತಿಯನ್ನು ಕುಗ್ಗಿಸಬಹುದು. ಈ ಪರಿಸ್ಥಿತಿಯು ಹೊಸದಾಗಿ ತಾಯಿ ಆಗಿರುವವರಲ್ಲಿ ಸಾಮಾನ್ಯ. ಅವರು ತಮ್ಮ ಮಗುವಿನೊಡನೆ, ಸಂಗಾತಿಯೊಡನೆ ಬಂಧ ಬೆಳೆಸಿಕೊಳ್ಳಲು ತುಂಬಾ ಕಷ್ಟ ಪಡುತ್ತಾರೆ. ಇಂತಹ ಸಮಯದಲ್ಲಿ ಪತಿಯಾಗಿ ತಮ್ಮ ಸಂಗಾತಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಒತ್ತಾಯ ಮಾಡದೆ, ಅವಳಿಗೆ ಮಾನಸಿಕ ಬೆಂಬಲ ನೀಡಬೇಕು.

೪. ನೀವು ಎದೆಹಾಲು ನೀಡುತ್ತಿದ್ದರು ತೊಂದರೆ ಇಲ್ಲ, ಗರ್ಭನಿರೋಧಕ ಔಷಧಗಳನ್ನು ಸೇವಿಸಿ. ಏಕೆಂದರೆ ನೀವು ಮತ್ತೊಮ್ಮೆ ಗರ್ಭ ಹೊಂದುವ ಸಾಧ್ಯತೆಗಳು ಇರುತ್ತದೆ. ಎದೆಹಾಲು ಕುಡಿಸುವುದು ನೀವು ಗರ್ಭ ಧರಿಸುವುದನ್ನು ನಿಲ್ಲಿಸುವುದಿಲ್ಲ.

೫. ಪ್ರಸವನನತರ ನಿಮ್ಮ ಆದ್ಯತೆಗಳು ಬದಲಾಗುತ್ತವೆ ಹಾಗು ಸೆಕ್ಸ್ ನಿಮ್ಮ ಕೊನೆಯ ಆದ್ಯತೆ ಆಗಿರುತ್ತದೆ. ಬಹುತೇಕ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಸೆಕ್ಸ್ ಪುನಃ ನಿಮ್ಮ ಮುಖ್ಯ ಆದ್ಯತೆಗಳಲ್ಲಿ ಒಂದಾಗುತ್ತದೆ, ಆದರೆ ಅದಕ್ಕೆ ನೀವು ಮತ್ತು ನಿಮ್ಮ ಸಂಗಾತಿ ಸ್ವಲ್ಪ ಸಮಯ ನೀಡಬೇಕು ಅಷ್ಟೇ.

೬. ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ, ನೀವು ನಿಮ್ಮನ್ನು ಹಾಲಿನ ಮಡುವಿನಲ್ಲಿ ಒಮ್ಮೊಮ್ಮೆ ಕಾಣಬಹುದು. ಎದೆಹಾಲು ನೀಡುತ್ತಿರುವ ತಾಯಂದಿರು ಲೈಂಗಿಕ ಕ್ರಿಯೆಯ ವೇಳೆ ತಮ್ಮಲ್ಲಿರುವ ಹೆಚ್ಚುವರಿ ಹಾಲನ್ನು ಹೊರಸೂಸುವುದು ಸಾಮಾನ್ಯ. ಇದರಲ್ಲಿ ನಾಚಿಕೆ ಪಡುವಂತದ್ದು ಏನು ಇಲ್ಲ. ಬಹಳಷ್ಟು ಹೆಣ್ಣು ಮಕ್ಕಳು ಇದನ್ನು ಅನುಭವಿಸುವರು ಆದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಏನು ಇಲ್ಲ. ಏಕೆಂದರೆ ನಿಮ್ಮ ಪತಿಯು ನೀವು ಅಂದುಕೊಂಡಷ್ಟು ಕೆಟ್ಟದಾಗಿ ಏನು ಭಾವಿಸುವುದಿಲ್ಲ.

೭. ನೀವು ಒಮ್ಮೆ ಚೇತರಿಸಿಕೊಂಡ ನಂತರ, ಸೆಕ್ಸ್ ಮುಂಚೆಗಿಂತಲೂ ಹೆಚ್ಚು ಚೆನ್ನಾಗಿ ಅನಿಸುತ್ತದೆ. ನಿಮ್ಮ ದೇಹದಲ್ಲಿ ಅನೇಕ ಬದಲಾವಣೆ ಆದ ಕಾರಣ, ನಿಮ್ಮ ಗುಪ್ತಾಂಗಗಳಲ್ಲೂ ಬದಲಾವಣೆಗಳು ಆಗಿರುತ್ತವೆ, ಈ ಬದಲಾವಣೆಗಳಿಂದ ನಿಮ್ಮ ಸಂಭೋಗ ಇನ್ನಷ್ಟು ತೃಪ್ತಿಕರ ಆಗುವ ಸಾಧ್ಯತೆಗಳು ಹೆಚ್ಚು. ಜನ್ಮ ನೀಡುವುದರಿಂದ ನೀವು ನವೀನ ಸಂವೇದನೆಗಳನ್ನು ಕಂಡುಕೊಳ್ಳುತ್ತೀರಿ, ಇದರಿಂದ ನಿಮ್ಮ ಅನುಭವ ಇನ್ನಷ್ಟು ಹಿತಕರ ಆಗುತ್ತದೆ.

೮. ನೀವು ಒಮ್ಮೆ ತಾಯಿಯಾದ ನಂತರ ನಿಮ್ಮ ದಿನಚರಿ ಎಷ್ಟೊಂದು ಆಯಾಸಕಾರಿಯಾಗಿದೆ ಎಂಬುದು ನಿಮಗೆ ಅರಿವಾಗುತ್ತದೆ. ದಿನದ ಕೊನೆಯಲ್ಲಿ ನೀವು ಸುಸ್ತಾಗಿ ಮಲಗಲು ಹೋದರೆ ನಿಮಗೆ ಸೆಕ್ಸ್ ನ ಬಗ್ಗೆ ನೆನಪು ಕೂಡ ಇರುವುದಿಲ್ಲ. ಆದರೆ ಮಧ್ಯಾನದ ಹೊತ್ತಲ್ಲಿನ್ನ ಅಲ್ಪಾವಧಿಯ ಸಂಭೋಗದ ರುಚಿ ನೀವು ಬೆಳೆಸಿಕೊಂಡ ಮೇಲೆ, ನಿಮ್ಮ ಹಾರ್ಮೋನ್ ಗಳು ಮತ್ತೆ ಚಿಗುರಿಕೊಳ್ಳುತ್ತವೆ!

೯. ನಿಮ್ಮ ಹಾರ್ಮೋನ್ ಗಳು ಆಗಲೇ ಹೇಳಿದಂತೆ ಉದ್ಧಟತನ ಪ್ರದರ್ಶಿಸುವ ಕಾರಣ, ನಿಮ್ಮ ಯೋನಿಯಲ್ಲಿ ಉತ್ಪತ್ತಿಯಾಗಬೇಕಿದ್ದ ಕೀಲೆಣ್ಣೆ ಅಂದರೆ ಲ್ಯುಬ್ರಿಕೆಂಟ್ ತಯಾರಾಗುವುದಿಲ್ಲ. ಈ ಕಾರಣದಿಂದ ಲೈಂಗಿಕ ಕ್ರಿಯೆಯು ತುಂಬಾ ಒರಟಾಗಬಹುದು. ಒಳ್ಳೆಯ ಅನುಭವಕ್ಕಾಗಿ ನೀರಿನ ಅಂಶವುಳ್ಳ ಲ್ಯುಬ್ರಿಕೆಂಟ್ ಬಳಸಿ.

೧೦. ನೀವು ನಿಮ್ಮ ಯೋನಿಯಿಂದ ಮಗುವನ್ನು ಹಡಿಯದೆ ಇದ್ದರೂ, ಲೈಂಗಿಕ ಕ್ರಿಯೆ ನಿಮಗೆ ನೋವು ಉಂಟು ಮಾಡಬಹುದು. ಸಿಸೇರಿಯನ್ ಆದ ತಾಯಂದಿರು ಕೂಡ ನೋವು ಅನುಭವಿಸುವರು. ಇವುಗಳಿಗೆ ಕಾರಣ ಹಲವು ಆಗಿರಬಹುದು. ಮುಖ್ಯವಾಗಿ, ನಿಮ್ಮ ಹಾರ್ಮೋನ್ ಗತಿಗಳಲ್ಲಿನ ಏರುಪೇರು ಹಾಗು ಎದೆಹಾಲು ಕುಡಿಸುವುದು. ನೋವು ಬಹಳ ದಿನಗಳಿಂದ ಮಾಯವಾಗದೆ ಇದ್ದರೆ, ವೈದ್ಯರನ್ನು ಭೇಟಿ ಮಾಡಿ.   

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon