Link copied!
Sign in / Sign up
1
Shares

ಪ್ರಸವದ ನಂತರ ನಿಮ್ಮ ದೇಹದ ಬಗ್ಗೆ ಈ ೭ ಪುರಾಣಗಳನ್ನು ನಂಬದಿರಿ

ಎಲ್ಲಾ ತಾಯಿಯಂದಿರು ಹೆರಿಗೆಯ ನಂತರ ತಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಇದು ನೀವು ಹೊಂದಿದ್ದ ತೂಕದಿಂದ ಆಗಿರಬಹುದು ಅಥವಾ ನಿಮ್ಮ ಜೊತೆಗೆ ಸೇರಿದ ಗರ್ಭದಾರಣೆಯ ಮನಸ್ಥಿತಿಯಿಂದ ಆಗಿರಬಹುದು. ಆದರೆ ಈ ೭ ಕಟ್ಟುಕಥೆಗಳನ್ನು ನಿಮ್ಮ ಪ್ರಸವದ ನಂತರದ ದೇಹ ಸ್ಥಿತಿ ಬಗ್ಗೆ ನಂಬದಿರಿ.

೧.ಮಗುವಿನ ತೂಕವನ್ನು ಕಳೆದುಕೊಳ್ಳುವುದು

ತಾಯಿಯಾದ ಬಳಿಕ ಮಗುವಿನ ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಮೊದಲ ಗುರಿ ಆಗಿರಬಾರದು, ನಿಮ್ಮ ದೇಹದ ತೂಕದಿಂದ ತೊಂದರೆಯಾದರೆ ಮಾತ್ರ ನಿಮ್ಮ ದೇಹದ ತೂಕವನ್ನು ಬೇಗನೆ ಕಡಿಮೆಮಾಡಲು ಪ್ರಯತ್ನಿಸಬಹುದು. ದೇಹವು ತೆಳ್ಳಗೆ ಸುಂದರವಾಗಿ ಇರಬೇಕು, ತೆಳ್ಳಗಗಾಲು ನಡೆದಾಡಬೇಕು ಎಂಬುದು ಸಮಾಜ ಸೃಷ್ಟಿಸಿರುವುದು ಅಷ್ಟೇ, ಆದರೆ ತಾಯಿ ಮಗು ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ. ಹೆಚ್ಚಿನ ಬೇಡವಾದ ಕೊಬ್ಬು/ಬೊಜ್ಜು ಕಾಲಕ್ರಮೇಣ ಕರಗಿ ನಿಮ್ಮ ಮೊದಲಿನ ಸ್ಥಿತಿಗೆ ಮರಳುವಿರಿ, ಆದರೆ ನಿಮ್ಮ ಗಾತ್ರವನ್ನು ಶೂನ್ಯ ಮಾಡಿಕೊಳ್ಳುವುದು ಅತ್ಯಗತ್ಯವಲ್ಲ.

೨.ತೂಕ ಕಳೆದುಕೊಳ್ಳುವುದು ನಿಮ್ಮನ್ನು ಸಾಮಾನ್ಯ ಸ್ಥಿತಿಗೆ ಮರಳಿಸುತ್ತದೆ

ಗರ್ಭದಾರಣೆ ನಿಮ್ಮ ದೇಹವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಮಗುವಿನ ತೂಕವನ್ನು ಕಳೆದುಕೊಳ್ಳುವುದು ಕೊಬ್ಬನ್ನು ತಗ್ಗಿಸಬಹುದು, ಆದರೆ ಇದು  ಗರ್ಭಧಾರಣೆಗೆ ಮೊದಲು ಇದ್ದ  ನಿಮ್ಮ ದೇಹದ ಸ್ಥಿತಿಗೆ ಹಿಂತಿರುಗಿಸುವುದಿಲ್ಲ. ಪ್ರಸವದ ನಂತರ ನಿಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ, ಅದು ನಿಮ್ಮ ಸ್ತನ ಗಾತ್ರದಲ್ಲಿ ಏರಿಕೆ, ನಡು ದಪ್ಪದಾಗಬಹುದು ಅಥವಾ ಪ್ರಸವದ ಸಮಯದಲ್ಲಾದ ಕೆಲವು ಗುರುತುಗಳು ಆಗಿರಬಹುದು, ಆದರೆ ಅದು ನಿಮ್ಮ ತೂಕ ಕಳೆದುಕೊಳ್ಳುವುದರಿಂದ ಸರಿಹೋಗುವುದಿಲ್ಲ.

೩. ನೀವು ಕಡಿಮೆ ಅಪೇಕ್ಷಣೀಯತೆಯನ್ನು ಕಾಣುತ್ತೀರಿ

ಗರ್ಭಾವಸ್ಥೆಯಿಂದ ಉಂಟಾಗುವ ದೈಹಿಕ ಬದಲಾವಣೆಗಳು ನಮ್ಮನ್ನು ಹೆಚ್ಚು ಅಪೇಕ್ಷಣೀಯವಾಗಿಸುತ್ತದೆಯೆಂದು, ಹೆಚ್ಚಿನ ಮಹಿಳೆಯರು ಭಾವಿಸುತ್ತಾರೆ. ಅದು ನಿಮ್ಮನ್ನು ಅಸುರಕ್ಷಿತವಾದಂತೆ ಮಾಡುವುದು ಸಾಮಾನ್ಯ ಆದರೆ ಅದರ ಬಗ್ಗೆ ಚಿಂತಿಸಬೇಡಿ, ನಿಮ್ಮ ಪತಿಗೆ ನೀವು ಮಗುವಿಗೆ ಒಳ್ಳೆ ತಾಯಿಯಾಗಿರುವುದು ಮಾತ್ರ ತುಂಬಾ ಖುಷಿಯನ್ನು ನೀಡುತ್ತದೆ.

೪.ನೀವು ಮರೆಮಾಡಬೇಕು

ನಿಮ್ಮ ದೇಹದ ಬದಲಾವಣೆಗಳನ್ನು ಅನುಭವಿಸಲು ಸಂದೇಹ ಪಡಬಾರದು. ಪ್ರಸವದ ನಂತರ ಅಥವಾ ತದನಂತರದ ದಿನಗಳಲ್ಲಿ

ನಡೆಯುವ ನೈಸರ್ಗಿಕ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಆನಂದದಿಂದ ಅನುಭವಿಸಿ. ಶುಶ್ರೂಷೆ ಮಾಡುವಾಗ ನಿಮ್ಮ ಸ್ತನಗಳನ್ನು ವಿಸ್ತರಿಸಿದಾಗ ಅಥವಾ ನೀವು ಹಿಗ್ಗಿಸಲಾದ ಗುರುತುಗಳೊಂದಿಗೆ ಮುಚ್ಚಿದಾಗ. ಎಲ್ಲವನ್ನೂ ಆನಂದಿಸಿ ಮತ್ತು ವ್ಯಕ್ತಪಡಿಸಿ.

೫.ನಿಮ್ಮ ಸ್ಮರಣೆ ಮರುಹೊಂದುತ್ತದೆ

ಗರ್ಭಾವಸ್ಥೆಯಲ್ಲಿ, ಬಹುತೇಕ ಮಹಿಳೆಯರನ್ನು ಗರ್ಭಿಣಿ ಮೆದುಳು ಎಂದು ಕರೆಯುತ್ತಾರೆ, ಅವರು ಕೆಲವು ವಿಷಯಗಳನ್ನು ಮರೆತುಬಿಡುತ್ತಾರೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯ ನಂತರ ತಮ್ಮ ಸಾಮಾನ್ಯ ಸ್ಮರಣೆಯನ್ನು ಮರಿಗಳಿಸುತ್ತಾರೆ. ಮೆದುಳಿಗೆ ಒಂದೇ ಸಮಯದಲ್ಲಿ ಮತ್ತು ನಿದ್ರೆಯ ಅಭಾವದಿಂದ ಕೇವಲ ೪ ವಸ್ತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗಬಹುದು ಎಂದು ಹೆಚ್ಚಿನ ಮಹಿಳೆಯರು ತಿಳಿದಿಲ್ಲ. ಸಾಮಾನ್ಯ ಸ್ಥಿತಿಗೆ ಮರಳಲು ಹಲವು ವಾರಗಳ ಬೇಕಾಗಬಹುದು.

೬.೬ ವಾರಗಳ ನಂತರ ಲೈಂಗಿಕ ಕ್ರಿಯೆ

ಲೈಂಗಿಕ ಕ್ರಿಯೆಗೆ ೬ ವಾರಗಳ ಕಾಯುವಿಕೆ ಬೇಕು ಎಂದರು, ಹೆಚ್ಚಿನ ಮಹಿಳೆಯರು ಕೆಲವು ತಿಂಗಳಿನಿಂದ ವರ್ಷಗಳವರೆಗೆ ಅಸ್ವಸ್ಥತೆ ಅಥವಾ ನೋವನ್ನು ಅನುಭವಿಸುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಮತ್ತು ಹೆಚ್ಚಿನ ಸಮಸ್ಯೆಗಳನ್ನು ಇದರಿಂದ ಮಹಿಳೆಯರು ಎದುರಿಸಬೇಕಾಗುತ್ತದೆ. ೬ ವಾರಗಳು ವೈದ್ಯಕೀಯವಾಗಿ ಪ್ರಾರಂಭಿಸಲು ಸಮಯವಾಗಬಹುದು, ಆದರೆ ನಿಮ್ಮ ಆರೋಗ್ಯ ದೃಷ್ಟಿಯಿಂದ ನಿಮಗೆ ಬೇಕಾದ ಸಮಯವನ್ನು ನೀವು ತಗೆದುಕೊಳ್ಳಿ.

೭.ನೀವು ಸಂಪೂರ್ಣ ಚೇತರಿಸಿಕೊಂಡ ಮೇಲೆ ವಾಹನ ಚಲಾಯಿಸಲು ಮುಂದಾಗಿ

ನಿಮಗೆ ನಾನು ಸರಿ ಹೋಗಿದ್ದೇನೆ, ಈಗ ನನಗೆ ಆರಾಮದಾಯಕವಾಗಿದೆ, ಮತ್ತು ಇದು ಸುಲಭ ಎಂದು ಭಾವಿಸಿದರು, ನೀವು ಹೊರಡುವ ಮೊದಲು ಪರೀಕ್ಷಿಸಿಕೊಳ್ಳಿ. ಪ್ರಸವದ ನಂತರ ನಿಮ್ಮ ಪ್ರತಿವರ್ತನವನ್ನು ಪರಿಶೀಲಿಸುವುದು ಉತ್ತಮ. ಖುರ್ಚಿಯ ಮೇಲೆ ಕುಳಿತುಕೊಳ್ಳಿ ಮತ್ತು ಕಾರಿನಲ್ಲಿ ಇರುವಂತೆ ಭಾವಿಸಿ, ದೇಹವನ್ನು ಸರಿಸಲು ಪ್ರಯತ್ನಿಸಿ. ನಿಮ್ಮ ತಲೆಯನ್ನು ಮತ್ತು ದೇಹವನ್ನು ಬಲದಿಂದ ಎಡಕ್ಕೆ ತಿರುಗಿಸಿ ಯಾವುದೇ ನೋವು ಆಗುವುದನ್ನು ಪರಿಶೀಲಿಸಿ. ಯಾವುದೇ ತರಹದ ನೋವು ಕಾಣಿಸಿಕೊಳ್ಳಲಿಲ್ಲದಾದರೆ, ನಿಲುಗಡೆ ಪ್ರದೇಶದಲ್ಲಿ ಚಾಲನೆ ಮಾಡಿ, ಆಸನ ಪಟ್ಟಿಯನ್ನು ಹಾಕಿಕೊಂಡು ನೋವು ಅಥವಾ ಅಹಿತವಾಗುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon