Link copied!
Sign in / Sign up
5
Shares

ಪಾಸಿಟಿವ್ ಪ್ರೆಗ್ನನ್ಸಿ ಟೆಸ್ಟ್ ನೋಡುವುದಕ್ಕೆ ಹೇಗಿರುತ್ತದೆ ಗೊತ್ತ?

ನೀವು ಗರ್ಭಧಾರಣೆ ಪರೀಕ್ಷೆಗೆಂದು ಬೇಕಾಗಿರುವ ಸಾಧನವನ್ನ ಖರೀದಿ ಮಾಡಿದ್ದೀರ, ನಿಮ್ಮ ಮೂತ್ರದ ಸ್ಯಾಂಪಲ್ ಅನ್ನೂ ಅದಕ್ಕೆ ಒದಗಿಸಿದ್ದೀರ, ಕೊನೆಗೆ ರಹಸ್ಯ ಬಯಲಾಗುವ ಸಮಯ…..ಆದರೆ, ಆ ಸಾಧನವು ನಿಜವಾಗಿಯೂ ಪಾಸಿಟಿವ್ ಅಂತಾನೇ ತೋರಿಸುತ್ತಿರುವುದಾ? ಈ ಸಾಧನಗಳು ನೀಡುವ ಫಲಿತಾಂಶವು ಓದಲು ಸ್ವಲ್ಪ ಗೊಂದಲಮಯ ಆಗಿರುತ್ತದೆ. ಅದರಲ್ಲೂ ಗೆರೆ ಸರಿಯಾಗಿ ಎದ್ದು ಕಾಣದೆ ಇದ್ದರೆ ಅಥವಾ ಅರ್ಧವೆ ಮೂಡಿದ್ದರೆ ಅಂತೂ ಮುಗಿದೇ ಹೋಯಿತು, ಇನ್ನಷ್ಟು ಗಾಬರಿ, ಗೊಂದಲ ಉಂಟಾಗುತ್ತದೆ. ಇಲ್ಲಿರುವ ಚಿತ್ರಗಳಲ್ಲಿ ನೀವು ನಿಜವಾದ ತಾಯಂದಿರೆ ಈ ಸಾಧನವನ್ನ ಬಳಸಿ ಫಲಿತಾಂಶವನ್ನ ತೋರಿಸುತ್ತಿರುವುದನ್ನು ಕಾಣಬಹುದು. ನಿಜವಾದ ತಾಯಂದಿರ ಪಾಸಿಟಿವ್ ಪ್ರೆಗ್ನನ್ಸಿ ಟೆಸ್ಟ್ ಹೇಗೆ ಕಾಣುವುದು ಎಂದು ನೀವು ಈ ಚಿತ್ರಗಳಲ್ಲಿ ನೋಡಬಹುದು.

 

ಇವರು ಪರೀಕ್ಷೆ ನಡೆಸಿದ್ದು ತಮ್ಮ ಅಂಡೋತ್ಪತ್ತಿಯ ದಿನದಿಂದ (ಸಂಭೋಗವು ಆ ದಿನವೇ ಆಗಿದ್ದರಿಂದ) 24 ದಿನಗಳ ನಂತರ. ಇವರು ಫಸ್ಟ್ ರೆಸ್ಪಾನ್ಸ್ ಕಂಪನಿಯ ಅರ್ಲಿ ರೆಸ್ಪಾನ್ಸ್ ಸಾಧನ ಬಳಸಲು ಕಾರಣ, ಅವರು ಈ ಸಾಧನವು ಅತ್ಯಂತ ನಿಖರವಾಗಿ ಫಲಿತಾಂಶ ತಿಳಿಸುತ್ತದೆ ಎಂದು ಅಂತರ್ಜಾಲದಲ್ಲಿ ಓದಿದ್ದು.

 

ಇವರು ಪರೀಕ್ಷೆ ನಡೆಸಿದ್ದು ತಮ್ಮ ಅಂಡೋತ್ಪತ್ತಿಯ ದಿನದಿಂದ 3 ವಾರಗಳ ನಂತರ. ಅವರು ತಮ್ಮ ಮೊದಲ ಗರ್ಭಧಾರಣೆ ಸಮಯದಲ್ಲೂ EPT ಪ್ರೆಗ್ನನ್ಸಿ ಟೆಸ್ಟ್ ಸಾಧನ ಬಳಸಿದ ಕಾರಣ, ಎರಡನೆಯ ಗರ್ಭಧಾರಣೆಗು ಅದನ್ನೇ ಬಳಸಿದರಂತೆ. ಈ ಸಾಧನದಲ್ಲಿ ನಿಮಗೆ ಗೆರೆಯು ಸರಿಯಾಗಿ ಕಾಣುವುದು ಇಲ್ಲ, ಆದರೆ ಒಂದು ಸಣ್ಣ ಗೆರೆಯೂ ಇದ್ದಾರೆ ಸಾಕು ಪರೀಕ್ಷೆ ಪಾಸಿಟಿವ್ ಎಂದು.

 

ಇವರು ತಮ್ಮ ಅಂಡೋತ್ಪತ್ತಿ ಆದ 8 ದಿನಗಳ ನಂತರ ಪರೀಕ್ಷೆ ನಡೆಸಿದ್ದಾರೆ. ಇವರು ಕ್ಲಿಯರ್ ಬ್ಲೂ-ಪ್ಲಸ್ ಪ್ರೆಗ್ನನ್ಸಿ ಟೆಸ್ಟ್ ಸಾಧನ ಖರೀದಿ ಮಾಡಿದಕ್ಕೆ ಹೇಳಿದ್ದು ಹೀಗೆ - “ನನಗೆ ಪರೀಕ್ಷೆ ಫಲಿತಾಂಶ ಎಲ್ಲಿ ತಪ್ಪಾಗಿ ತೋರಿಸಿಬಿಡುವುದೋ ಎಂಬ ಭಯದಿಂದ ನಾನು ಎಷ್ಟು ಸರಳವೋ ಅಷ್ಟು ಸರಳವಾದ ಸಾಧನ ಖರೀದಿಸಬೇಕು ಎಂದುಕೊಂಡು ಇದನ್ನ ಖರೀದಿಸಿದೆ”.

 

ಪರೀಕ್ಷೆ ನಡೆಸಿದ್ದು ಅಂಡೋತ್ಪತ್ತಿಯ ದಿನದ 10 ದಿನಗಳ ನಂತರ. ಇವುಗಳು ಸಾಮನ್ಯ ಪ್ರೆಗ್ನನ್ಸಿ ಟೆಸ್ಟ್ ಕಿಟ್ ಅಂತೆ ಇರದೇ  ಕೇವಲ ಒಂದೇ ಒಂದು ಪಟ್ಟಿ ಇರುತ್ತದೆ. ಇದನ್ನ ಕಳಿಸಿದ ತಾಯಿಯು ಹೇಳುವ ಪ್ರಕಾರ ಇದರ ಬಗ್ಗೆ ಅವರಿಗೆ ಅವರ ಸ್ನೇಹಿತೆಯಿಂದ ಗೊತ್ತಾಗಿದ್ದು. ಇದನ್ನ ಅವರು amazon.com ಅಲ್ಲಿ ಖರೀದಿ ಮಾಡಿದ್ದು, ಒಂದೇ ಪ್ಯಾಕಿನಲ್ಲಿ 25 ಪಟ್ಟಿಗಳು ದೊರೆತವಂತೆ.

 

ಪರೀಕ್ಷೆ ನಡೆಸೀದು ಅಂಡೋತ್ಪತ್ತಿಯ 12 ದಿನಗಳ ನಂತರ. ಇವರು ಈ ಸಾಧನವನ್ನೇ ಆಯ್ದುಕೊಳ್ಳಲು ಕಾರಣ, ಇದು ತಾಯಂದಿರಿಂದ ಒಳ್ಳೆಯ ವಿಮರ್ಶೆಗಳನ್ನ ಪಡೆದಿರುವುದು ಮತ್ತು ಅಗ್ಗವಾಗಿ ದೊರೆಯುವುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon