Link copied!
Sign in / Sign up
20
Shares

ಪೋಷಣೆ: ಪೋಷಕರಾದ ಮೇಲೆ ದಂಪತಿಗಳ ಜೀವನ

ಜನರು ಮಗುವನ್ನು ಸಿದ್ದಪಡಿಸಲು ತಿಂಗಳುಗಳ ಕಾಲ ತಯಾರಿಯನ್ನು ಮಾಡಿಕೊಳ್ಳುತ್ತಾರೆ, ಆದರೆ ನೀವು ಏನೇ ತಯಾರಿ ಮಾಡಿಕೊಂಡಿದ್ದರು ಎಲ್ಲವೂ ಬದಲಾಗುತ್ತದೆ. ಒಂದು ಮಗುವನ್ನು ನೋಡಿಕೊಳ್ಳಲು ಬೇಕಾದ ಎಲ್ಲಾ ಅಂಶಗಳು ನನಗೆ ಚೆನ್ನಾಗಿ ತಿಳಿದಿದೆ ಎಂದು ಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಪುಸ್ತಕಗಳನ್ನು ಓದಿ, ಮನೆಯವರು, ನೆರೆಹೊರೆಯವರು, ಸಂಬಧಿಗಳು ಹೇಳಿರುವುದನ್ನೆಲ್ಲಾ ಆಲಿಸಿದ್ದರು, ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಜವಾಬ್ದಾರಿಯನ್ನು ನೀವು ನಿಭಾಯಿಸುತ್ತಿರ.

ಮಗುವನ್ನು ಹೊಂದಿರುವುದು ನಿಮ್ಮಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ, ಅದರಲ್ಲೂ ವಿಶೇಷವಾಗಿ, ನಿಮ್ಮ ಸಂಗಾತಿಯ ಜೊತೆ ಹಲವು ಬದಲಾವಣೆಯನ್ನು ಎದುರಿಸಬೇಕಾದಿತು. ಈಗ ನೀವಿಬ್ಬರು ಮಾತ್ರ ಇಲ್ಲ ನಿಮ್ಮ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ ಮತ್ತು ಈ ಬದಲಾವಣೆಯಲ್ಲಿ ಅವನು ಭಾಗಿಯಾಗುತ್ತಾನೆ. ಮಗುವನ್ನು ಹೊಂದಿದ ನಂತರ ದಂಪತಿಗಳು ಮೊದಲಿನಷ್ಟು ಪರಸ್ಪರ ಸಂತೋಷವಾಗಿರಿವುದಿಲ್ಲ ಎಂದು ಸಂಶೋದನೆ ಹೇಳುತ್ತದೆ. ಇದು ಆಶ್ಚರ್ಯ ಪಡುವ ವಿಷಯವೇನಲ್ಲ, ಏಕೆಂದರೆ ನೀವು ಆಯಾಸಗೊಂಡಿರುವಿರಿ, ಮಗುವಿನ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುವಿರಿ ಮತ್ತು ಹಣಕಾಸಿನ ಸಮಸ್ಯೆ ಇರಬಹುದು.

೧. ಮೊದಲು ನಾನು ನಿರತವಾಗಿದ್ದೆ, ಎಂದು ನೀವು ಭಾವಿಸಿದರೆ, ನಿಮ್ಮ ಆ ಎಲ್ಲಾ ಸಮಯವನ್ನು ನಿಮ್ಮ ಮುದ್ದು ಕಂದಮ್ಮ ಈಗ ತೆಗೆದುಕೊಳ್ಳುತ್ತಿದೆ. ನೀವು ಈಗ ನಿಮ್ಮ ಸಂಗಾತಿಗೆ ನೀಡುವುದು ಕಡಿಮೆ ಸಮಯ ಮಾತ್ರ.

ಪುರುಷರು ನಮ್ಮ ಗುಂಪಿಗೆ ಹೊಸ ಸದಸ್ಯನ ಆಗಮನವಾಗಿದೆ, ಇದು ತಾಯಿಯಂದಿರಿಗೆ ಹೆಚ್ಚು ಕೆಲಸ ಮತ್ತು ಅದನ್ನು ನಿರ್ವಹಿಸಲು ಹೆಚ್ಚು ಕಷ್ಟವಾಗುತ್ತದೆ, ಎಂದು ಭಾವಿಸುತ್ತಾರೆ. ಜೊತೆಗೆ ಇದ್ದು ಒಬ್ಬಂಟಿಯಾಗಿರುವುದು ತುಂಬಾ ಕಷ್ಟದ ಕೆಲಸ. ಸ್ವಲ್ಪ ಸಮಯ ಸಿಕ್ಕಿದರೆ, ನಿಮಗೆ ಮಲಗಿದರೆ ಸಾಕು ಎನಿಸುತ್ತದೆ. ಇದರಿಂದ ಪುರುಷರಿಗೆ ಅಸೂಯೆ ಅಥವಾ ನನ್ನನ್ನು ಕಡೆಗಣಿಸಿದ್ದಾರೆ ಎಂದು ಭಾವಿಸುತ್ತಾರೆ. ಅವರು ನನಗಿಂತ ಮಗುವಿನ ಜೊತೆ ಹೆಚ್ಚು ಕಾಲ ಕಳೆಯುತ್ತಾರೆಂದು ಅಸೂಯೆಗೊಳ್ಳುತ್ತಾರೆ. ಇದರಿಂದ ಅವರ ಮನಸ್ಸಿಗೆ ಬೇಸರವಾಗಬಹುದು.

೨. ನಿದ್ರೆ ಮತ್ತು ಲೈಂಗಿಕತೆಗೆ ವಿದಾಯ ಹೇಳಿ!, ಅದು ಕಷ್ಟ ಅಲ್ಲವೇ?

ಅನೇಕ ಪೋಷಕರು ಮಗುವನ್ನು ಹೊಂದಿದ ನಂತರ ತಮ್ಮ ಲೈಂಗಿಕ ಕ್ರಿಯೆಯಲ್ಲಿ ಅಂತರವನ್ನು ಪಡೆಯುತ್ತಾರೆ. ಅವರು ನಿರಂತರವಾಗಿ ಆಯಸಗೊಂಡಿರುತ್ತಾರೆ. ಪ್ರಸವ ನಂತರ ಮಹಿಳೆಯ ದೇಹದಲ್ಲಾದ ಬದಲಾವಣೆಯಿಂದ ಅವರು ಲೈಂಗಿಕ ಕ್ರಿಯೆ ನೋವುಂಟು ಮಾಡುತ್ತದೆ ಎಂಬ ಭಯವನ್ನು ವ್ಯಕ್ತಪಡಿಸುತ್ತಾರೆ. ಕೆಲವರು ಎರಡನೇ ಮಗು ಜನನವಾಗಬಹುದು ಎಂದು ಯೋಚಿಸುತ್ತಾರೆ. ಪುರುಷರು ಅದನ್ನು ತಿರಸ್ಕರಿಸಲು ಒಲವು ತೋರಿಸಿದರು ಅದರಿಂದ ಅಸಮಾಧಾನಗೊಳ್ಳಬಹುದು.

೩. ನಿಮ್ಮ ಪೋಷಕ ಶೈಲಿಯ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ವಾದಗಳನ್ನು ಮಾಡಲು ನೀವು ಪ್ರಾರಂಭಿಸಬಹುದು.

ನಿಮ್ಮ ಮಗು ಅಳಲು ಆರಂಬಿಸಿದಾಗ ನಿಮ್ಮ ಸಂಗಾತಿಯ ಕಠಿಣ ಕ್ರಮಗಳಿಂದ ಮಗುವನ್ನು ಎತ್ತಿಕೊಳ್ಳಬೇಕಾಗಬಹುದು, ಇದು ನಿಮ್ಮ ದಾಂಪತ್ಯ ಸಂಭಂದದಲ್ಲಿ ಬಿರುಕು ಮೂಡುವಂತೆ ಮಾಡಬಹುದು.

ನೀವಿಬ್ಬರೂ, ಇದು ಸರಿ, ಇದು ತಪ್ಪು, ಎಂದು ವಾದ ಮಾಡುವ ಬದಲು ಒಬ್ಬರನ್ನೊಬ್ಬರು ಅರಿತುಕೊಂಡು ಹೋಗುವುದು ಒಳಿತು. ವಿಷಯಗಳು ಸರಿ ಹೋಗದಿದ್ದರೆ, ಅದನ್ನು ಉತ್ತಮಗೊಳಿಸಲು ನೀವು ಏನು ಮಾಡಬಹುದು?

ನಿಮ್ಮ ಸಂಗಾತಿಯ ಜೊತೆ ಮಾತನಾಡಿ/ಸಮಾಲೋಚಿಸಿ. ನಿಮ್ಮ ನೋವುಗಳನ್ನು ಹೇಗೆ ಕಡಿಮೆಗೊಳಿಸಬಹುದು ಎಂಬುದರ ಬಗ್ಗೆ. ನಿಮ್ಮ ಬಗ್ಗೆಯೂ ನೀವು ಯೋಚಿಸಿ. ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳಿ. ಸಹಾಯ ಮಾಡಲು ಅವರಿಗೆ ಹೇಳಿ, ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಿ. ಒಬ್ಬರನ್ನೊಬ್ಬರು ಹೀಗೆ ಅರಿತುಕೊಂಡು ಹೋಗಿ ಕಾಲ ಕಳೆದಂತೆ ಎಲ್ಲವೂ ಮೊದಲಿನ ಸ್ಥಿತಿಗೆ ಬರುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon