Link copied!
Sign in / Sign up
2
Shares

ಪೋಷಕರೇ ಎಚ್ಚರ : ಕಾರಿನಲ್ಲಿ ಮಗುವನ್ನು ಬಿಟ್ಟು ಹೋದರು, ಕಾರ್ ಅಲ್ಲೇ ಮಗು ಸತ್ತು ಹೋಯಿತು!

ಅಮೆರಿಕಾದ ಸ್ಯಾಕ್ರಮೆಂಟೊ ಅಲ್ಲಿ ಕ್ಯಾಲಿಫೋರ್ನಿಯಾ ಪ್ರದೇಶದ ಅಧಿಕಾರಿಗಳು ಪುಟ್ಟ ಮಗುವೊಂದು ಹೇಗೆ ಅಂತ ಬಿರುಬಿಸಿಲಿನ ದಿನದಂದು ತನ್ನ ಮನೆಯ ಕಾರ್ ಒಳಗೆ ಸಿಲುಕಿಕೊಂಡಿತು ಎಂಬುವ ವಿಷಯವನ್ನ ತನಿಖೆ ಮಾಡುತ್ತಿದ್ದಾರೆ.

ಮಗುವು ಸಾವನ್ನಪ್ಪಿದೆ!

ಸ್ಯಾಕ್ರಮೆಂಟೊ ಪೊಲೀಸ್ ಡಿಪಾರ್ಟ್ಮೆಂಟಿನ ಅವರು ಹೇಳುವ ಪ್ರಕಾರ ಮಗುವು ಶನಿವಾರದಂದು ಎಲ್ಲಾ ಕಿಟಕಿಗಳೂ ಮುಚ್ಚಿದ ಕಾರಿನೊಳಗೆ ಜ್ಞಾನ ತಪ್ಪಿದೆ. ಈ ಕಾರು ಮಗುವಿನ ಮನೆಯ ಮುಂದಿರುವ ಬೀದಿಯಲ್ಲೇ ನಿಂತಿತ್ತು. “ಅಲ್ಲಿದ್ದ ಇತರೆ ಜನರು ಕೆಲವೊಂದು ಜೀವ ಉಳಿಸುವ ಕ್ರಮಗಳನ್ನ ಕೈಗೊಂಡರು, ಮಗುವನ್ನು ತಂಪಾಗಿಸಿ ಅದು ಸಹಜ ಸ್ಥಿತಿಗೆ ಮರಳುವಂತೆ CPR ಮತ್ತು ಇನ್ನಿತರೇ ವಿಧಾನಗಳನ್ನ ಬಳಸಿದರು” ಎಂದು ಓರ್ವ ಅಧಿಕಾರಿ ತಿಳಿಸಿದರು.

ಅದೇ ಬೀದಿಯಲ್ಲಿ ಇರುವ ಹೆಂಗಸೊಬ್ಬಳು ಈ 2-ವರ್ಷದ ಮಗುವು ಯಾರ ನಿಯಂತ್ರಣದಲ್ಲಿ ಇಲ್ಲದೆ ತನ್ನ ಮನೆಯ ಹೊರಗಡೆ ಕಾಣಿಸಿಕೊಳ್ಳುತ್ತಿತ್ತು ಎಂದಿದ್ದಾಳೆ. “ಆ ಮಗುವು ಯಾವಾಗಲೂ ತನ್ನ ಪಾಡಿಗೆ ತಾನು ರಸ್ತೆ ಮೇಲೆ ಆಟಾಡಿಕೊಂಡು ಓಡಿ ಬರುತಿತ್ತು, ರಸ್ತೆಯ ಮೇಲೆ ಗಾಡಿಗಳೂ ಓಡಾಡುತ್ತಿದ್ದವು. ನನಗಂತೂ ಅದನ್ನು ನೋಡಿದಾಗ ಹೃದಯ ಬಾಯಿಗೆ ಬರುತಿತ್ತು. ಅತ್ತಿತ್ತ ನೋಡಿದರೆ ಆ ಮಗುವಿನ ಅಪ್ಪ-ಅಮ್ಮ ಯಾರೂ ಕಾಣುತ್ತಿರಲಿಲ್ಲ. ಕೊನೆಗೆ ನಾನೇ ಕೂಗಾಡುತ್ತಾ ಆ ಮಗುವಿನ ಬಳಿ ಹೋಗಬೇಕು ಎಂದು ಮನೆಗೆ ಹೊರಬಂದೊಡನೆ ಯಾರೋ ಬಂದು ಆ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದರು” ಎಂದು ಅದೇ ಬೀದಿಯಲ್ಲಿ ವಾಸಿಸುವ ಇನ್ನೋರ್ವ ವ್ಯಕ್ತಿ ರಿಚರ್ಡ್ ಜೋ ಹೇಳಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧವಾಗಿ ಯಾವುದೇ ಅರೆಸ್ಟ್ ಇಲ್ಲಿಯವರೆಗೂ ಮಾಡಿಲ್ಲ. ಆದರೆ, ಪೊಲೀಸ್ ಪ್ರಕಾರ ಈ ಪ್ರಕರಣವು ಎಲ್ಲಾ ಪೋಷಕರಿಗೂ ಎಚ್ಚರಿಕೆಯ ಗಂಟೆ ಆಗಬೇಕು. “ಕಿಡ್ಸ್ ಅಂಡ್ ಕಾರ್ಸ್” ಎನ್ನುವ ಸಂಸ್ಥೆಯೊಂದು ಅಧ್ಯಯನ ನಡೆಸಿ, ಕಾರಿನೊಳಗೆ ಬಿಸಿಲಿನ ಬೇಗೆಗೆ ತತ್ತರಿಸಿ ಸತ್ತ ಮಕ್ಕಳಲ್ಲಿ 88% ಅಷ್ಟು ಮಕ್ಕಳ ವಯಸ್ಸು 3 ಅಥವಾ ಅದಕ್ಕಿಂತ ಕಡಿಮೆ ಆಗಿದೆ ಎಂದು ತಿಳಿಸಿದೆ.

ಪೋಷಕರೇ, ನೀವೆಂದಾದರೂ ಮಗುವಿನೊಂದಿಗೆ ಕಾರಿನಲ್ಲಿ ಎಲ್ಲಾದರೂ ಹೋದಾಗ, ಇಲ್ಲೇ ಒಂದೆರೆಡು ನಿಮಿಷ ಕೆಲಸ ಎಂದು ಮಗುವನ್ನು ಕಾರ್ ಅಲ್ಲೇ ಇಟ್ಟು, ಕಾರಿನ ಕಿಟಕಿಗಳನ್ನೆಲ್ಲಾ ಮುಚ್ಚಿಕೊಂಡು ಹೋದರೆ, ಇಂತಹ ಸಂದರ್ಭವನ್ನ ಎದುರಿಸಬೇಕಾದೀತು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon