Link copied!
Sign in / Sign up
45
Shares

ನಿಮ್ಮ ಫಲವತ್ತಾದ ದಿನ ಹೀಗೆ ತಿಳಿದರೆ 100% ಗರ್ಭ ಧರಿಸುವಿರಿ

ಅಲ್ಪಾವಧಿಯಲ್ಲೇ ಗರ್ಭಿಣಿ ಆಗಬೇಕೆಂದರೆ ನಿಮ್ಮ ಋತುಚಕ್ರದ ಸರಿಯಾದ ಸಮಯದಲ್ಲಿ ವೀರ್ಯವು ಅಂಡಾಣು ಸೇರುವಂತೆ ಮಾಡಬೇಕು. ಈ ಸರಿಯಾದ ಸಮಯ ಯಾವುದೆಂದು ಕಂಡು ಹಿಡಿಯಲಿಕ್ಕೆ ಹಲವಾರು ವಿಧಾನಗಳಿವೆ.

ನೀವು ಗರ್ಭಿಣಿ ಆಗಲು ಪ್ರಯತ್ನಿಸುತ್ತಿರುವಾಗ, ಸಮಯವೇ ಎಲ್ಲದಕ್ಕಿಂತ ಮುಖ್ಯ. ಎಲ್ಲಾ ಸರಿ ಇರುವ ವೀರ್ಯ ಹಾಗು ಅಂಡಾಣು ಇದ್ದರೂ, ಸಮಯ ಸರಿ ಇಲ್ಲದಿದ್ದರೆ ಅವುಗಳು ಕೂಡುವುದಿಲ್ಲ. ನೀವು ಅಂದುಕೊಂಡಂತೆ ಆಗಬೇಕು ಎಂದರೆ ನೀವು ನಿಮ್ಮ ಅಂಡೋತ್ಪತ್ತಿಯ ದಿನದಂದು(ಈ ಸಮಯದಲ್ಲಿ ಅಂಡಾಶಯವು ಫಲವತ್ತಾದ ಅಂಡಾಣು ವನ್ನ ಬಿಡುಗಡೆ ಮಾಡುತ್ತದೆ), ಅಥವಾ ಅದಕ್ಕೂ ಒಂದೆರೆಡು ದಿನಗಳ ಮುಂಚೆ(ಏಕೆಂದರೆ ವೀರ್ಯವು ಹೆಣ್ಣಿನ ದೇಹದಲ್ಲಿ ಕೆಲವು ದಿನಗಳವರೆಗೆ ಬದುಕಬಹುದು) ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ನೀವು ದಿನಾಂಕಗಳನ್ನ ಮರೆತರೆ, ನೀವು ನಿಮ್ಮ ಪ್ರಯತ್ನವನ್ನ ಮುಂದಿನ ತಿಂಗಳವರೆಗೆ ಕಾಯ್ದಿರಿಸಬೇಕು.

ಸಂಭೋಗಕ್ಕೆ ಸರಿಯಾದ ಸಮಯ ಯಾವುದೆಂದು ತಿಳಿಯಲು ಕೆಲವು ವಿಧಾನಗಳು ಇವೆ. ಅವು ಯಾವುದೆಂದು ಕೆಳಗೆ ಓದಿ ತಿಳಿಯಿರಿ :

೧. ಋತುಚಕ್ರದ ನಕಾಸೆ

ಫಲವಂತಿಕೆ ಬಗ್ಗೆ ಇರುವ ಒಂದು ದೊಡ್ಡ ತಪ್ಪು ಗ್ರಹಿಕೆ ಅಂದರೆ, ಪ್ರತಿ ಹೆಣ್ಣು ತನ್ನ ಋತುಚಕ್ರದ 14ನೇ ದಿನದಂದು ಅತ್ಯಂತ ಫಲವತ್ತಾಗಿ ಇರುತ್ತಾಳೆ ಎಂದು. ಆದರೆ ಇದು ಕೇವಲ ಪ್ರತಿ ತಿಂಗಳು ನಿಯತವಾಗಿ, ಅಚ್ಚುಕಟ್ಟಾಗಿ 28 ದಿನಗಳ ಋತುಚಕ್ರ ಇರುವ ಹೆಣ್ಣುಮಕ್ಕಳಿಗೆ ಮಾತ್ರ. ವಾಸ್ತವದಲ್ಲಿ ಹೆಣ್ಣು ಅತ್ಯಂತ ಫಲವತ್ತಾಗಿ ಇರುವುದು ಋತುಚಕ್ರ ಆದ 14 ದಿನಗಳ ನಂತರ ಅಲ್ಲ, ಬದಲಿಗೆ ಋತುಸ್ರಾವ ಶುರುವಾಗುವ 14 ದಿನಗಳ ಮುಂಚೆ. ಹಾಗಾಗಿ ನಿಮ್ಮದು ನಿಯತವಾದ ಋತುಚಕ್ರ ಆಗಿದ್ದರೆ, ನಿಮ್ಮ ಮುಂದಿನ ಪಿರಿಯಡ್ಸ್ ದಿನದಿಂದ ಎರಡು ವಾರಗಳನ್ನ ಕಳೆಯಿರಿ, ನಿಮಗೆ ಸಿಗುವ ಉತ್ತರವೇ ನೀವು ಫಲವತ್ತಾಗಿ ಇರುವ ದಿನ. ಉದಾಹರಣೆಗೆ 30 ದಿನಗಳ ನಿಯತವಾದ ಋತುಚಕ್ರ ಇರುವವರಿಗೆ ಚಕ್ರದ 16ನೇ ದಿನ ಹಾಗು 28ದಿನಗಳ ನಿಯತವಾದ ಋತುಚಕ್ರ ಇರುವವರಿಗೆ ಚಕ್ರದ 12ನೆ ದಿನ ತುಂಬಾ ಫಲವತ್ತಾಗಿರುತ್ತದೆ.

೨. ತಾಪಮಾನದ ಲೆಕ್ಕ ಇಡಿ

ನಿಮ್ಮ ತಳ ದೇಹದ ತಾಪಮಾನ(Basal Body Temperature/BBT) - ನೀವು ಬೆಳಗ್ಗೆ ಮಂಚದಿಂದ ಎದ್ದೊಡನೆ ಇರುವ ನಿಮ್ಮ ದೇಹದ ತಾಪಮಾನದ ಲೆಕ್ಕ ಇಡುವುದು ಕೂಡ ನಿಮ್ಮ ಫಲವತ್ತಾದ ದಿನವನ್ನ ಕಂಡು ಹಿಡಿಯಲು ಸಹಾಯ ಮಾಡುತ್ತದೆ. ಅಂಡೋತ್ಪತ್ತಿ ಆಗದ ದಿನಗಳಲ್ಲಿ ಹೆಣ್ಣಿನ ದೇಹದ ಸಾಮಾನ್ಯ ತಾಪಮಾನ 35.5 ಡಿಗ್ರಿ ಸೆಲ್ಷಿಯಸ್ ಇಂದ 37.2 ಡಿಗ್ರಿ ಸೆಲ್ಷಿಯಸ್ ಇರುತ್ತದೆ. ಆದರೆ ನೀವು ಅಂಡೋತ್ಪತ್ತಿ ಮಾಡುವ ದಿನದಲ್ಲಿ ನಿಮ್ಮ ತಾಪಮಾನ ಅರ್ಧ ಡಿಗ್ರಿ ಅಷ್ಟು ಹೆಚ್ಚುತ್ತಿರುತ್ತದೆ ಹಾಗು ನಿಮ್ಮ ಋತುಸ್ರಾವ ಆಗುವವರೆಗೂ ಹೆಚ್ಚಾಗಿಯೇ ಇರುತ್ತದೆ. ನೀವು ಕೆಲವು ರುತುಚಕ್ರಗಳ ವರೆಗೆ ನಿಮ್ಮ ತಳ ದೇಹದ ತಾಪಮಾನ ಲೆಕ್ಕ ಇಡುತ್ತಾ ಬಂದರೆ, ನೀವು ಯಾವ ದಿನ ತುಂಬಾ ಫಲವತ್ತಾಗಿರುತ್ತೀರಿ ಎಂದು ನಿಮಗೆ ತಿಳಿಯುತ್ತದೆ. ಆದರೆ ದುರದೃಷ್ಟವಶಾತ್, ನಿಮ್ಮ ಫಲವತ್ತಾದ ದಿನ ತಿಳಿದುಕೊಳ್ಳುವುದಕ್ಕೆ ಅತ್ಯುತ್ತಮ ದಾರಿ ಎಂದರೆ ಇದಲ್ಲ. ಏಕೆಂದರೆ ನಿಮ್ಮ ತಳ ದೇಹದ ತಾಪಮಾನ ಗೋಚರಿಸುವಷ್ಟು ಹೆಚ್ಚಾಗುವಷ್ಟರಲ್ಲಿ ಗರ್ಭತಾಳುವುದಕ್ಕೆ ಉಳಿಯುವ ಸಮಯವೇ ಕಮ್ಮಿ.

೩. ಗರ್ಭಕಂಠದ ಲೋಳೆ (cervical mucus) ಪರಿಶೀಲಿಸಿ

ನೀವು ನಿಮ್ಮ ಋತುಚಕ್ರದ ಬಗ್ಗೆ ತಿಳಿಯಲು ಮತ್ತೊಂದು ದೈಹಿಕ ದ್ರವ್ಯ ಉಂಟು ಹಾಗು ಅದನ್ನ ಪರಿಶೀಲಿಸಲು ನಿಮಗೆ ಯಾವುದೇ ವಿಶೇಷ ಸಾಧನಗಳು ಬೇಕಾಗಿಲ್ಲ. ಅದುವೇ ನಿಮ್ಮ ದೇಹ ಹೊರಸೂಸುವ ಗರ್ಭಕಂಠದ ಲೋಳೆ. ನಿಮಗೆ ಇದನ್ನ ಮಾಡಲು ಸ್ವಲ್ಪ ಇರಿಸುಮುರಿಸು ಉಂಟಾಗಬಹುದು, ಆದರೆ ಇದು ಯಾವುದೇ ಖರ್ಚಿಲ್ಲದೆ ನಿಖರವಾದ ಮಾಹಿತಿಯನ್ನ ನೀಡುತ್ತದೆ. ನೀವು ಇದನ್ನ ನಿಮ್ಮ ಒಳಉಡುಪು ಅಥವಾ ಒಂದು ಪೇಪರ್ ಮೇಲೆ ಪರೀಕ್ಷೆ ಮಾಡಬಹುದು. ನಿಮ್ಮ ಪಿರಿಯಡ್ಸ್ ಆದ ಕೆಲವು ದಿನಗಳವರೆಗೆ ನಿಮ್ಮ ಲೋಳೆಯು ಒಣ ಒಣ ಹಾಗು ಅಂಟಂಟು ಇರುತ್ತದೆ, ನಂತರ ಮುಂದಿನ ದಿನಗಳಲ್ಲಿ ಅದು ಹೆಚ್ಚು ಹಸಿ ಹಸಿ ಆಗುತ್ತಾ ಹೋಗುತ್ತದೆ. ಅದು ಯಾವಾಗ ಜಾರುವಂತೆ ಹಾಗು ಎಳೆ ಎಳೆ ಅಂತೆ ಆಗುತ್ತದೆಯೋ (ಹಸಿ ಮೊಟ್ಟೆಯ ಬಿಳಿಯ ಭಾಗದ ಥರ), ಆ ಸಮಯದಲ್ಲಿ ನೀವು ಅತ್ಯಂತ ಫಲವತ್ತಾಗಿ ಇರುತ್ತೀರ.

ಈ ಮೇಲಿನ ಎಲ್ಲಾ ವಿಧಾನಗಳು ನೀವು ಯಾವಾಗ ತುಂಬಾ ಫಲವತ್ತಾಗಿ ಇರುತ್ತೀರ ಎಂದು ತಿಳಿಸುತ್ತದೆ. ಅದನ್ನು ತಿಳಿದ ಮೇಲೆ ಏನು ಮಾಡಬೇಕೆಂದು ನಿಮಗೇ ಗೊತ್ತಿದೆ!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon