Link copied!
Sign in / Sign up
0
Shares

ಪಿರಿಯಡ್ಸ್ ವೇಳೆ ಸೆಕ್ಸ್ ಅಲ್ಲಿ ತೊಡಗಿದರೆ ಗರ್ಭಿಣಿ ಆಗಬಹುದೇ?

ಈ ಪ್ರಶ್ನೆಯನ್ನ ನಮ್ಮಲ್ಲಿ ಬಹಳಷ್ಟು ಜನ ತಮಲ್ಲಿಯೇ ಕೇಳಿಕೊಂಡಿರುತ್ತೀವಿ ಹಾಗು ಇದಕ್ಕೆ ಒಂದು ನಿಖರವಾದ ಉತ್ತರವೂ ಇರಬೇಕು ಎಂದುಕೊಂಡಿರುತ್ತೀವಿ. ಇದಕ್ಕೆ ಸರಿಯಾದ ಒಂದೇ ಮಾತಿನ ಉತ್ತರ ಎಂದರೆ “ಹೌದು”. ಆದರೆ ಸಾಧ್ಯತೆಗಳು ತುಂಬಾನೇ ಕಡಿಮೆ, ಹೀಗಾಗಿ ಈಗ ನಾವು ಹೇಳುವುದನ್ನ ಓದಿ.

ಮೊದಲಿಗೆ, ಋತುಚಕ್ರವು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನ ನೀವು ಅರ್ಥೈಸಿಕೊಳ್ಳಬೇಕು. ಮುಟ್ಟಾಗುವಿಕೆ ಎಂದರೆ ಅದು ಗರ್ಭಕೋಶದ ಒಳ ಲೈನಿಂಗ್ ಆದ ಎಂಡೊಮೆಟ್ರಿಯಂ ಅನ್ನು ಹೊರಹಾಕುವುದು ಎಂದು. ನಿಮ್ಮ ಪಿರಿಯಡ್ಸ್ ಮೊದಲ ದಿನದಂದು, ನಿಮ್ಮ ಹಾರ್ಮೋನ್ ಗಳ ಗತಿಯಲ್ಲಿ ಇಳಿಕೆಯಾಗಿ, ಋತುಸ್ರಾವದ ರಕ್ತವು ಗರ್ಭಕಂಠದ ಮೂಲಕ ಗರ್ಭಕೋಶದಿಂದ ಹೊರ ಹರಿದು ಈ ಲೈನಿಂಗ್ ಅನ್ನು ಹೊರ ಹಾಕುತ್ತದೆ. ನಿಯಮಿತ ಋತುಚಕ್ರದ 14ನೆ ದಿನದಂದು ನಿಮ್ಮಲ್ಲಿ ಅಂಡೋತ್ಪತ್ತಿ ಆಗುತ್ತದೆ.

ಹಾಗಿದ್ರೆ ಪಿರಿಯಡ್ಸ್ ವೇಳೆ ಗರ್ಭ ತಾಳಬಹುದೇ?

ಪಿರಿಯಡ್ಸ್ ವೇಳೆ ನೀವು ಗರ್ಭ ತಾಳುವ ಸಾಧ್ಯತೆಗಳು ತುಂಬಾನೇ ಕಡಿಮೆ ಇದ್ದರು, ಗರ್ಭಿಣಿ ಆಗಬಹುದು ಹಾಗು ಬಹಳಷ್ಟು ಹೆಂಗಸರು ಆಗಿದ್ದಾರೆ ಕೂಡ. ನಿಮಗೆ ಪಿರಿಯಡ್ಸ್ ಆಗುವಾಗ, ನೀವು ಫಲವತ್ತಾದ ದಿನ ಅಂದರೆ ಅಂಡೋತ್ಪತ್ತಿ ಮಾಡುವ ದಿನ ಇನ್ನೂ ದೂರ ಇರುತ್ತದೆ. ಆದರೂ ಕೆಲವೊಂದು ಪ್ರಕರಣಗಳ ಇದಕ್ಕೆ ಹೊರತಾಗಿರುತ್ತವೆ. ಅಮೆರಿಕನ್ ಪ್ರೆಗ್ನನ್ಸಿ ಅಸೋಸಿಯೇಷನ್ ಹೇಳುವ ಪ್ರಕಾರ, ನಿಮ್ಮ ರುತುಚಕ್ರವು 28 ದಿನಗಳಿಗಿಂತ ಚಿಕ್ಕದಾಗಿದ್ದರೆ, ಅಥವಾ ನಿಯಮಿತವಾಗಿ ಇರದಿದ್ದರೆ, ನೀವು ಪಿರಿಯಡ್ಸ್ ವೇಳೆಯೂ ಗರ್ಭಿಣಿ ಆಗಬಹುದು.

ಏಕೆಂದರೆ ಈ ಪ್ರಕರಣದಲ್ಲಿ ಪಿರಿಯಡ್ಸ್ ಮತ್ತು ಅಂಡೋತ್ಪತ್ತಿ ಮಾಡುವ ದಿನಗಳು ಹತ್ತಿರದಲ್ಲಿ ಇವೆ. ವೀರ್ಯವು ನಿಮ್ಮ ದೇಹದಲ್ಲಿ 4-5 ದಿನಗಳವರೆಗೆ ಬದುಕಬಲ್ಲದು. ಹೀಗಾಗಿ ನೀವು ನಿಮ್ಮ ಪಿರಿಯಡ್ಸ್ ನ ಕೊನೆ ದಿನದಂದು ಸಂಭೋಗ ನಡೆಸಿದರೆ, ನಿಮ್ಮ ಋತುಚಕ್ರವು ಚಿಕ್ಕದಿರುವ ಕಾರಣ ನಿಮ್ಮ ಅಂಡೋತ್ಪತ್ತಿ ದಿನ ಬೇಗ ಬರುವುದು, ಆಗ ವೀರ್ಯವು ಅಂಡಾಣು ಜೊತೆ ಫಲೀಕರಣ ಹೊಂದಿ ನೀವು ಗರ್ಭಿಣಿ ಆಗಬಹುದು. APA ಅಸೋಸಿಯೇಷನ್ ಹೇಳುವ ಪ್ರಕಾರ “ಪಿರಿಯಡ್ಸ್ ವೇಳೆ ನೀವು ಗರ್ಭಿಣಿ ಆಗುವ ಸಾಧ್ಯತೆ ತುಂಬಾನೇ ಕಡಿಮೆ, ಆದರೆ ಸಾಧ್ಯತೆ ಅಂತೂ ಇದ್ದೇ ಇದೆ”.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon