Link copied!
Sign in / Sign up
9
Shares

ಎಲ್ಲರು (ಮುಖ್ಯವಾಗಿ ಗಂಡಸರು) ತಿಳಿಯಬೇಕಾದ ಪಿರಿಯಡ್ಸ್ ಸೆಕ್ಸ್ ಬಗೆಗಿನ ಪ್ರಶ್ನೆಗಳ ಉತ್ತರಗಳು!

ನಿಮ್ಮ ಸಂಗಾತಿಯು ಈಗ ಋತುಸ್ರಾವ ಅನುಭವಿಸುತ್ತಿರಬಹುದು. ಹೀಗಾಗಿ ನೀವು ಈ ವಾರ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದರಿಂದ ಹಿಂಜರಿಯಬಹುದು. ಆದರೆ, ನೀವು ಪಿರಿಯಡ್ಸ್ ವೇಳೆಯೂ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಬಹುದಾದರೆ ಈ ಹಿಂಜರಿಕೆ ಏಕೆ? ಹೌದು, ಪಿರಿಯಡ್ಸ್ ಸೆಕ್ಸ್ ನಿಮ್ಮಿಬ್ಬರಿಗೂ ಅದ್ಭುತ ಅನುಭವವನು ನೀಡುತ್ತದೆ. ಕೆಲವು ಗಂಡಸರು ಇದರಿಂದ ದೂರ ಸರಿದರೆ, ಇನ್ನೂ ಕೆಲವರಿಗೆ ಇದೆಂದರೆ ಇಷ್ಟ. ಈಗ ಹೇಳುವುದು ಕೇಳಿಸಿಕೊಳ್ಳಿ, ಎಲ್ಲಾ ಜೀವಿಗಳಿಗೂ ಸೆಕ್ಸ್ ಅಗತ್ಯ, ನಿಮಗೂ ಸೆಕ್ಸ್ ಎಂದರೆ ಇಷ್ಟ, ಪಿರಿಯಡ್ಸ್ ಸೆಕ್ಸ್ ಕೂಡ ಒಂದು ಬಗೆಯ ಸೆಕ್ಸ್ ಅಷ್ಟೇ. ಇದರಲ್ಲಿ ಅಷ್ಟೊಂದು ವಿಷಯ ಏನಿಲ್ಲ. ಇದರ ಬಗ್ಗೆ  ನೀವು ಕೇಳಲು ಮುಜುಗರ ಪಡುವ ಪ್ರಶ್ನೆಗಳನ್ನು ನಾವು ವೈದ್ಯರ ಬಳಿ ಕೇಳಿ ಉತ್ತರಗಳನ್ನ ನಿಮಗಾಗಿ ತಂದಿದ್ದೇವೆ. ಓದಿ :

೧. ಪಿರಿಯಡ್ಸ್ ಸೆಕ್ಸ್ ಗಲೀಜಾಗರುತ್ತದ?

ನೀವು ನಿಮ್ಮ ಅತ್ಯುತ್ತಮ ಲೈಂಗಿಕ ಅನುಭವಗಳ, ಅತ್ಯಂತ ಸುಖಕರ ಲೈಂಗಿಕ ಅನುಭವಗಳ ಪಟ್ಟಿ ಮಾಡಿ, ಅದರಲ್ಲಿ ಬಹಳ “ಸಭ್ಯವಾದ” ಅನುಭವಗಳು ಯಾವುದಾರೂ ಇವೆಯೇ? ಇಲ್ಲ. ಅಲ್ಲಿ ಬಹುತೇಕ ಇರುವುದೆಲ್ಲ “ಬೆವರು ಕೂಡಿದ”, “ಬಿಸಿ”ಯಾದ ಮತ್ತು “ಕೊಳಕು ಮಾತುಗಳ” ಕೂಡಿರುವುದೇ ಆಗಿರುತ್ತೆ. ಏಕೆಂದರೆ ಅದಕ್ಕೆ ಕಾರಣ ಬಹುತೇಕ ಒಳ್ಳೆಯ ಲೈಂಗಿಕ ಅನುಭವಗಳೆಲ್ಲಾ ಸ್ವಲ್ಪ ಗಡಿಬಿಡಿ, ಗೊಂದಲ ಮತ್ತು ಶುಚಿಯಿಲ್ಲದೆ ಆಗುವಂತವು.

ಇಲ್ಲಿ ನೆನಪಿಡಬೇಕಾದ ಇನ್ನೊಂದು ವಿಷಯ ಎಂದರೆ ಅದು ಇಲ್ಲಿ ಹೆಣ್ಣು ಹೆಚ್ಚು ವಿಸರ್ಜಿಸುವುದರಿಂದ ಸೆಕ್ಸ್ ಇನ್ನಷ್ಟು ಹಿತಕರವಾಗಿರುತ್ತದೆ. ಏಕೆಂದರೆ ನೈಸರ್ಗಿಕವಾಗಿಯೇ ನಿಮಗೆ ಬೇಕಿರುವುದಕ್ಕಿಂತ ಹೆಚ್ಚು ಲೂಬ್ರಿಕೇಷನ್ ಸಿಗುತ್ತದೆ.


೨. ಪಿರಿಯಡ್ಸ್ ವೇಳೆ ಸೆಕ್ಸ್ ಇಂದ ಗರ್ಭಿಣಿ ಆಗುತ್ತಾರೆಯೇ?

ಈ ಪ್ರಶ್ನೆಗೆ ಉತ್ತರ ಸ್ವಲ್ಪ ಗೊಂದಲಮಯವಾಗಿದ್ದರು, ಇದಕ್ಕೆ ಚಿಕ್ಕ ಉತ್ತರ ಎಂದರೆ “ಹೌದು”. ಸಹಜವಾಗಿ ಋತುಸ್ರಾವ ಆಗುತ್ತಿದೆ ಎಂದರೆ ಅಂಡೋತ್ಪತ್ತಿ ಮುಗಿದಿದೆ ಎಂದರ್ಥ, ಹೀಗಾಗಿ ಪಿರಿಯಡ್ಸ್ ವೇಳೆ ಅವರು ಗರ್ಭಿಣಿ ಆಗಲು ಸಾಧ್ಯವಿಲ್ಲ. ಆದರೆ, ಒಂದು ವೇಳೆ ನಿಮ್ಮ ಸಂಗಾತಿಯ ಋತುಚಕ್ರವು ಅಲ್ಪಾವಧಿಯದ್ದು ಆಗಿದ್ದು, ಪಿರಿಯಡ್ಸ್ ಸಮೀಪದಲ್ಲೇ ಅಂಡೋತ್ಪತ್ತಿ ಮಾಡುವವರಾಗಿದ್ದು, ಪಿರಿಯಡ್ಸ್ ಅಂತ್ಯದಲ್ಲಿ ನೀವು ಸೆಕ್ಸ್ ಅಲ್ಲಿ ತೊಡಗಿಸಿಕೊಂಡರೆ, ಆಕೆ ಗರ್ಭಿಣಿ ಆಗುವ ಸಾಧ್ಯತೆಗಳು ಇದ್ದರೂ ಅದು ಬಹಳ ಕಡಿಮೆ.

 

೩. ಪಿರಿಯಡ್ಸ್ ಸಮಯದಲ್ಲಿ ಆಕೆ ಹೆಚ್ಚು ಲೈಂಗಿಕ ಆಸಕ್ತಿ ಹೊಂದಿರುತ್ತಾಳೆಯೇ?

ಈ ಬಗ್ಗೆ ಅಷ್ಟೊಂದು ಪುರಾವೆಗಳು ಇಲ್ಲದಿದ್ದರೂ, ಬಹಳಷ್ಟು ಹೆಂಗಸರು ಪಿರಿಯಡ್ಸ್ ವೇಳೆ ಹೆಚ್ಚಿನ ಲೈಂಗಿಕ ಆಸಕ್ತಿ ಅನುಭವಿಸುವುದಾಗಿ ಹೇಳಿಕೊಳ್ಳುತ್ತಾರೆ. ಇದಕ್ಕೆ ಇರಬಹುದಾದ ಒಂದು ಕಾರಣ ಎಂದರೆ ಅದು ಪಿರಿಯಡ್ಸ್ ವೇಳೆ ಆಗುವ ಹಾರ್ಮೋನ್ ಬದಲಾವಣೆ. ಈ ಸಮಯದಲ್ಲಿ, ಲೈಂಗಿಕ ಆಸಕ್ತಿ ಕಡಿಮೆ ಮಾಡುವ ಹಾರ್ಮೋನ್ ಆದ ಪ್ರೊಜೆಸ್ಟರಾನ್ ದೇಹದಲ್ಲಿ ಕಡಿಮೆ ಆಗುತ್ತದೆ. ಹೀಗಾಗಿ ಲೈಂಗಿಕ ಆಸಕ್ತಿ ಜಾಸ್ತಿ ಆಗಬಹುದು. ಆದರೆ ವೈದ್ಯರು ಹೇಳುವ ಪ್ರಕಾರ ಹೆಣ್ಣು ಅತ್ಯಂತ ಹೆಚ್ಚು ಲೈಂಗಿಕ ಆಸಕ್ತಿ ಹೊಂದುವುದು ಆಕೆ ಅಂಡೋತ್ಪತ್ತಿ ಮಾಡುವ ಸಮಯದಲ್ಲಿ. ಹೆಣ್ಣು ಗರ್ಭಧರಿಸಲು ಇಚ್ಛೆ ಪಡುವಂತೆ ಆ ಸಮಯದಲ್ಲಿ ಹಾರ್ಮೋನುಗಳು ಬದಲಾಗುತ್ತವೆ ಎಂದೆನ್ನುತ್ತಾರೆ.


೪. ಇದರಿಂದ ನಮ್ಮ ಹೊದಿಕೆ ಗಲೀಜಾಗುತ್ತದೆಯೇ?

ಒಂದು ವೇಳೆ ಆಕೆಯು ಹೆಚ್ಚಿನ ದ್ರವ್ಯ ವಿಸರ್ಜಿಸುತ್ತಿದ್ದು ನೀವು ಬಿಳಿಯ ಬಟ್ಟೆಯನ್ನು ಮಂಚದ ಮೇಲೆ ಹಾಸಿದ್ದರೆ, ಕಲೆ ಆಗೇ ಆಗುತ್ತದೆ. ಹೀಗಾಗಿ ನೀವು ಬೆಡ್ ಮೇಲೆ ಗಾಢ ಬಣ್ಣದ ಟವೆಲ್ ಬಳಸಬಹುದು.


೫. ಪಿರಿಯಡ್ಸ್ ಸೆಕ್ಸ್ ಸುರಕ್ಷಿತವೇ?

ಅದು ಯಾವ ಥರದ್ದೇ ಸೆಕ್ಸ್ ಆಗಿರಲಿ, ಪಿರಿಯಡ್ಸ್ ಸೆಕ್ಸ್ ಆಗಿರಲಿ ಅಥವಾ ಸಾಧಾರಣ ಸೆಕ್ಸ್ ಆಗಿರಲಿ, ಕಾಂಡೊಮ್ ಧರಿಸಿರಿ ಅಥವಾ ಕಾಂಡೊಮ್ ಧರಿಸದೇ ಇರಿ, ಯಾವ ಸೆಕ್ಸ್ ಕೂಡ 100% ಸುರಕ್ಷಿತ ಅಲ್ಲ. ಪಿರಿಯಡ್ಸ್ ಸೆಕ್ಸ್ ಸಾಧಾರಣ ಸೆಕ್ಸ್ ಅಷ್ಟೇ ಸುರಕ್ಷಿತ, ಅಷ್ಟೇ ಅಸುರಕ್ಷಿತ. ಆದರೆ ನಾವು ತಿಳಿದಿರಬೇಕಾದ ಒಂದು ವಿಷಯ ಎಂದರೆ ಈ ಸಮಯದಲ್ಲಿ ಯೋನಿಯಿಂದ ಹೆಚ್ಚಿನ ದ್ರವ್ಯ ವಿಸರ್ಜನೆ ಆಗುವ ಕಾರಣ, ಯೀಸ್ಟ್ ಸೋಂಕು ಅಥವಾ ಬ್ಯಾಕ್ಟೀರಿಯಾ ಸೋಂಕು ಆಗುವ ಸಾಧ್ಯತೆಗಳು ಇರುತ್ತವೆ. ಆದರೆ ಕ್ರಿಯೆಯ ಮುನ್ನ ಮತ್ತು ಅದರ ನಂತರ ಯೋನಿಯನ್ನು ಶುಚಿಯಾಗಿಟ್ಟರೆ ಈ ತೊಂದರೆ ಇಂದ ಪಾರಾಗಬಹುದು. ಇಷ್ಟು ಬಿಟ್ಟರೆ ಗೊನೊರ್ಹೆಯಾ ಅಥವಾ ಕ್ಲಮೇಡಿಯ ಅಂತಹ ಲೈಂಗಿಕವಾಗಿ ಹರಡುವ ಸೋಂಕುಗಳು ಆಗುವ ಸಾಧ್ಯತೆಗಳು ಹೆಚ್ಚು ಎನ್ನುವುದೆಲ್ಲಾ ಸುಳ್ಳು. ಹೀಗಾಗಿ ಈ ವಿಷಯವು ನಿಮಗೆ ಹಿಂಜರಿಕೆ ಉಂಟು ಮಾಡುವುದು ಬೇಡ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon