Link copied!
Sign in / Sign up
38
Shares

ಪಿರಿಯಡ್ಸ್ ವೇಳೆ ಸೆಕ್ಸ್ ಹೇಗಿರುತ್ತದೆ?

ಪಿರಿಯಡ್ಸ್ ವೇಳೆ ಲೈಂಗಿಕ ಕ್ರಿಯೆ ನಡೆಸುವುದು ನಮ್ಮ ಮಿತಿಯಲ್ಲಿ ಇಲ್ಲ ಎಂದು ನೀವು ಅಂದುಕೊಂಡಿದ್ದರೆ, ಇನ್ನೊಮ್ಮೆ ಯೋಚಿಸಿ! ನಮ್ಮಲ್ಲಿ ಬಹಳಷ್ಟು ಜನರು ಇದನ್ನ ಪ್ರಯತ್ನಿಸುವುದೇ ಇಲ್ಲ. ಅದಕ್ಕೆ ಕಾರಣ ಏನೆಂದರೆ ನಮ್ಮಲ್ಲಿನ ಮುಂಚಿನಿಂದಲೂ ಅದು ಕೊಳಕು ಎನ್ನುವ ತಪ್ಪು ಗ್ರಹಿಕೆ.

ವೈದ್ಯಕೀಯ ದೃಷ್ಟಿಕೋನದಿಂದ ಪಿರಿಯಡ್ಸ್ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಂಪೂರ್ಣವಾಗಿ ಸಹಜ. ಅಷ್ಟೇ ಅಲ್ಲದೆ ಇದರಿಂದ ಮತ್ತಷ್ಟು ಉಪಯೋಗಗಳು ಕೂಡ ಇವೆ. ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನಾವು ಬರೆದಿದ್ದೇವೆ ತಿಳಿದುಕೊಳ್ಳಿ :

೧. ಋತುಸ್ರಾವದ ವೇಳೆಯಲ್ಲಿನ ಸಂಭೋಗ ಹಾನಿಕಾರಕ ಅಲ್ಲ

ಬಹಳ ಜನರಲ್ಲಿನ ತಪ್ಪು ತಿಳಿವಳಿಕೆ ಏನೆಂದರೆ ಋತುಸ್ರಾವದ ರಕ್ತವು ಅಶುದ್ಧವಾಗಿದ್ದು ಇದು ಗಂಡಸರ ಶಿಶ್ನಕ್ಕೆ ಹಾನಿಯುಂಟು ಮಾಡುತ್ತದೆ ಎಂದು. ಇದು ನಿಜಾವಗಿಯು ತಲೆ ಬುಡವಿಲ್ಲದ ಮಾತು! ಋತುಸ್ರಾವದ ರಕ್ತವು ಆರೋಗ್ಯಕರ ರಕ್ತ ಹಾಗು ಗರ್ಭಕೋಶವನ್ನು ಪ್ರತಿ ತಿಂಗಳು ಗರ್ಭಧಾರಣೆಗೆ ತಯಾರು ಮಾಡುವ ಅಂಗಾಂಶ(tissues)ಗಳ ಮಿಶ್ರಣ ಆಗಿರುತ್ತದೆ. ಇದರೊಂದಿಗೆ ಶಿಶ್ನ ಸಂಪರ್ಕ ಹೊಂದಿದರೆ ಅದಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಅಷ್ಟೇ ಅಲ್ಲದೆ, ಋತುಸ್ರಾವದ ರಕ್ತವು ಲಂಗಿಕ ಕ್ರಿಯೆಗೆ ಕೀಲೆಣ್ಣೆ ಆಗಿ ಕೆಲಸ ಮಾಡುತ್ತದೆ.

ಇದರೊಂದಿಗೆ ಇರುವ ಮತ್ತೊಂದು ಸಾಮಾನ್ಯ ತಪ್ಪು ತಿಳುವಳಿಕೆ ಎಂದರೆ ಅದು ಋತುಸ್ರಾವದ ವೇಳೆಯಲ್ಲಿನ ಸಂಭೋಗವು ಗರ್ಭಕೋಶಕ್ಕೆ ಪೆಟ್ಟು ಮಾಡುವುದು ಎಂದು. ಗರ್ಭಕೋಶದಲ್ಲಿ ಋತುಸ್ರಾವದ ವೇಳೆ ರಕ್ತ ಹೊರಹಾಕಲು ಇರುವ ಒಂದು ಸಣ್ಣ ಕಿಂಡಿಯಲ್ಲಿ ಶಿಶ್ನವು ತೋರಲು ಸಾಧ್ಯವೇ ಇಲ್ಲ. ಹೀಗಾಗಿ ಗರ್ಭಕೋಶಕ್ಕೆ ಶಿಶ್ನದಿಂದ ಯಾವುದೇ ಹಾನಿಯಾಗುವುದಿಲ್ಲ.

೨. ಋತುಸ್ರಾವವು ನಿಮ್ಮ ಲೈಂಗಿಕ ಆಸಕ್ತಿ ವೃದ್ಧಿಸುತ್ತದೆ

ಬಹುತೇಕ ಹೆಂಗಸರು ಋತುಸ್ರಾವದ ವೇಳೆ ಹೆಚ್ಚಿನ ಲೈಂಗಿಕ ಪ್ರಚೋದನೆ ಅನುಭವಿಸುತ್ತಾರೆ. ಇದು ಏಕೆ ಆಗುತ್ತದೆ ಎಂಬುದಕ್ಕೆ ಅನೇಕ ಗೊಂದಲಮಯ ಹಾಗು ಭಿನ್ನವಾದ ಅಭಿಪ್ರಾಯಗಳು ಕೇಳಿಬಂದಿವೆ. ಅದರಲ್ಲಿ ಒಂದು - ಮಹಿಳೆಯರಲ್ಲಿ ಮಾಸಿಕ ಋತುಸ್ರಾವ ಶುರು ಆದ ಸಮಯದಲ್ಲಿ ಅವರಲ್ಲಿನ ಮದಜನಕ(estrogen) ಗತಿಯು ಎಂದಿಗಿಂತ ಕಮ್ಮಿ ಆಗಿರುತ್ತದೆ. ಆಕೆಯ ಮದಜನಕದ ಗತಿಯಲ್ಲಿ ಏರಿಕೆ ಆಗುತ್ತಾ ಹೋದ ಹಾಗೆ, ಜೊತೆಯಲ್ಲಿಯೇ ಪ್ರೊಜೆಸ್ಟರಾನ್ ಗತಿಯಲ್ಲೂ ಏರಿಕೆ ಆಗುತ್ತಾ ಹೋಗುತ್ತದೆ. ಇದು ಅವಳನ್ನು ಬಹಳ ಸುಲಭವಾಗಿ ಪ್ರಚೋದನೆ ಹೊಂದುವಂತೆ ಮಾಡುತ್ತದೆ.

ಇನ್ನೊಂದು ಕಾರಣ ಏನಾಗಿರಬಹುದೆಂದರೆ ಅದು ಗುಪ್ತಾಂಗಗಳಲ್ಲಿನ ಹೆಚ್ಚಿದ ರಕ್ತ ಸಂಚಾರ ಹಾಗು ನಯವಾಗುವಿಕೆ.

೩. ನೀವು ಗರ್ಭಿಣಿ ಕೂಡ ಆಗಬಹುದು

ಋತುಸ್ರಾವದ ವೇಳೆ ಗರ್ಭಿಣಿ ಆಗುವ ಸಾಧ್ಯತೆಗಳು ಅತ್ಯಂತ ಕಡಿಮೆಯಾಗಿದ್ದರೂ, ಸಾಧ್ಯತೆ ಅಂತೂ ಇದ್ದೇ ಇದೆ. ನಿಮಗೆ ಗರ್ಭಧಾರಣೆ ಬೇಡ ಎಂದರೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಇದು ಅತ್ಯುತ್ತಮ ಸಮಯ ಆಗಿದ್ದರೂ, ಗಂಡಸಿನ ವೀರ್ಯವು ನಿಮ್ಮ ದೇಹದಲ್ಲಿ ಕೆಲವು ದಿನಗಳ ಕಾಲದವರೆಗೂ ಜೀವಂತವಾಗಿ ಇರುವುದರಿಂದ ನಿಮ್ಮ ಋತುಸ್ರಾವ ಮುಗಿದು ಬೇಗನೆ ಅಂಡೋತ್ಪತ್ತಿ ಶುರು ಆದರೆ, ಗರ್ಭ ಧರಿಸುವ ಸಾಧ್ಯತೆಗಳು ಇರುತ್ತದೆ. ಗರ್ಭಧಾರಣೆ ನಿವಾರಿಸಲು ಜನನ ನಿಯಂತ್ರಕಗಳನ್ನ ಬಳಸಿ.

೪. ಋತುಸ್ರಾವದ ಸಂಭೋಗವು ಉಳುಕುಗಳನ್ನು ಬಿಡಿಸುತ್ತದೆ

ಋತುಸ್ರಾವದ ವೇಳೆಯಲ್ಲಿನ ಲೈಂಗಿಕ ಪರಾಕಾಷ್ಟೆಯು ರಕ್ತದಲ್ಲಿ ಎನ್ದೊಮೊರ್ಫಿನ್ ಬಿಡುಗಡೆ ಮಾದವ ಮೂಲಕ ನಿಮಗೆ ಉಳುಕಿನ ನೋವಿನಿಂದ ಶಮನ ನೀಡುತ್ತದೆ. ಅಲ್ಲದೆ ಕೆಲವು ತಜ್ಞರ ಪ್ರಕಾರ ಮಾಸಿಕ ಋತುಸ್ರಾವದಲ್ಲಿ ಉಳುಕು ಉಂಟುಮಾಡುವ ರಾಸಾಯನಿಕಗಳನ್ನು ಲೈಂಗಿಕ ಕ್ರಿಯೆಯು ಉಪಯೋಗಿಸುವುದರಿಂದ ಮತ್ತಷ್ಟು ಆರಾಮ ನೀಡುತ್ತದೆ.

ಅಲ್ಲದೆ ಋತುಸ್ರಾವದ ವೇಳೆಯಲ್ಲಿನ ಸಂಭೋಗವು ನಿಮ್ಮ ಋತುಸ್ರಾವದ ಅವಧಿಯನ್ನು ಕೂಡ ಕಮ್ಮಿ ಮಾಡುವುದು. ಏಕೆಂದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ನಿಮ್ಮ ಗರ್ಭಕೊಶವು ಅನುಭವಿಸುವ ಹೆಚ್ಚುವರಿ ಸಂಕೋಚನಗಳು(contractions) ರಕ್ತದ ಹೊರಹರಿವನ್ನು ಹೆಚ್ಚಿಸಿ ರಕ್ತವನ್ನು ಬೇಗನೆ ಹೊರಹಾಕುತ್ತದೆ. ಹೀಗೆ ನಿಮ್ಮ ಋತುಸ್ರಾವದ ಅವಧಿಯು ಕಮ್ಮಿ ಆಗುತ್ತದೆ.

೫. ಬಹಳಷ್ಟು ಬಾರಿ ಗಂಡಸರಿಗಿಂತ, ಹೆಂಗಸರೇ ಹೆಚ್ಚು ಹಿಂಜರಿಯುವುದು

ಇತ್ತೀಚಿಗಷ್ಟೇ menshealth.com ನಡೆಸಿದ ಸಮೀಕ್ಷೆ ಪ್ರಕಾರ ಗಂಡಸರಿಗಿಂತ ಹೆಚ್ಚು ಹೆಂಗಸರು ಮಾಸಿಕ ಋತುಸ್ರಾವದ ವೇಳೆ ಎಲ್ಲಾ ರೀತಿಯ ಲೈಂಗಿಕ ಕ್ರಿಯೆಗಳನ್ನು ಬಂದ್ ಮಾಡಲು ಮುಂದಾಗುವರು ಎಂದು ತಿಳಿದಿದೆ. ಸಮೀಕ್ಷೆ ಅಲ್ಲಿ ಪಾಲ್ಗೊಂಡ ಶೇಕಡಾ 75ರಷ್ಟು ಗಂಡಸರು ಇದಕ್ಕೆ ತಮ್ಮ ಅಭ್ಯಂತರ ಏನು ಇಲ್ಲ ಎಂದು ಹೇಳಿದ್ದಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon