Link copied!
Sign in / Sign up
8
Shares

PCOS ಎಂದರೇನು? ಗರ್ಭಧಾರಣೆ ಮೇಲೆ ಅದರ ಪರಿಣಾಮ ಏನು?

PCOS(ಪಿ.ಸಿ.ಒ.ಎಸ್) ಅಂದರೆ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ಎಂದು ಹಾಗು ಜಗತ್ತಿನಲ್ಲಿ 5% ಹೆಂಗಸರು ಇದರಿಂದ ಬಳಲುತ್ತಾರೆ. PCOS ಹೊಂದಿರುವ ಮಹಿಳೆಯರಿಗೆ ಇರುವ ಅತ್ಯಂತ ದೊಡ್ಡ ತೊಂದರೆ ಎಂದರೆ ಅದು ಗರ್ಭ ಧರಿಸುವುದು. ಏಕೆಂದರೆ PCOS ಎಂದರೆ ನೀವು ನಿಯಮಿತವಾಗಿ ಅಂಡೋತ್ಪತ್ತಿ ಮಾಡುವ ಸಾಮರ್ಥ್ಯಕ್ಕೆ ತೊಡಕು ಉಂಟು ಮಾಡುವುದೆಂದು.

PCOS ಇರುವ ಹೆಣ್ಣು ಗರ್ಭ ಧರಿಸಿದರೆ, ಎರಡು ಮುಖ್ಯವಾದ ಅಪಾಯಗಳು ಎದುರಾಗುತ್ತವೆ.

ಮೊದಲನೆಯದು, ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತ ಆಗುವುದು. ತಿಳಿದಿರದ ಕಾರಣಗಳಿಗೆ, PCOS ಹೊಂದಿರುವ ಗರ್ಭಿಣಿಯರಲ್ಲಿ ಹೆಚ್ಚು ಗರ್ಭಪಾತಗಳು ಕಾಣಿಸಿಕೊಂಡಿವೆ. ನೀವು ಗರ್ಭ ತಾಳುವ ಸಮಯದಲ್ಲಿ ಮೆಟ್ ಫಾರ್ಮಿನ್ ಸೇವಿಸುತ್ತಿದ್ದರೆ, ನೀವು ಗರ್ಭಧಾರಣೆಯ ಪೂರ್ಣ ಅವಧಿಯವರೆಗೂ ಅದನ್ನ ಸೇವಿಸುತ್ತಲೇ ಇರಲು ನಾವು ಸೂಚಿಸುತ್ತೇವೆ. ಇದು ನಿಮಗೆ ಗರ್ಭಪಾತ ಆಗುವ ಸಾಧ್ಯತೆಗಳನ್ನ ಕಮ್ಮಿ ಮಾಡುತ್ತದೆ.

ಎರಡನೆಯ ತೊಂದರೆ ಎಂದರೆ ಅದು ಗರ್ಭಧಾರಣೆಯ ಡಯಾಬಿಟಿಸ್ ಅನ್ನು ಬೆಳೆಸಿಕೊಳ್ಳುವುದು. ಈ ಡಯಾಬಿಟಿಸ್ ಜಗತ್ತಿನ ಎಲ್ಲಾ ಗರ್ಭಧಾರಣೆಗಳ 4% ಗರ್ಭಧಾರಣೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ PCOS ಇರುವವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನೀವು ಹೆಚ್ಚು ತೂಕ ಹೊಂದಿದ್ದರೆ ಅಥವಾ 35 ವರ್ಷಗಳನ್ನ ದಾಟಿದ್ದರೆ, ನೀವು ನಿಮ್ಮ ಗರ್ಭಧಾರಣೆಯ ಮೊದಲ ಹಂತಗಳಲ್ಲೇ ಈ ಗರ್ಭಧಾರಣೆಯ ಡಯಾಬಿಟಿಸ್ ಇದೆಯೇ ಎಂದು ತಪಾಸಣೆ ಮಾಡಿಸಬೇಕು.

ಇವೆಲ್ಲಾ ತೊಂದರೆಗಳು ಉಂಟಾದರೂ, PCOS ಹೊಂದಿರುವ ಬಹುತೇಕ ಹೆಂಗಸರು ಗರ್ಭ ತಾಳುತ್ತಾರೆ ಹಾಗು ಆರೋಗ್ಯಕರವಾದ ಮಗುವನ್ನ ಸಹಾ ಪಡೆಯುತ್ತಾರೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon