Link copied!
Sign in / Sign up
24
Shares

ತಮ್ಮ ಪತ್ನಿಯರ ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ೭ ಪತಿಯಂದಿರು ಬಿಚ್ಚಿಟ್ಟ ಅಭಿಪ್ರಾಯಗಳು

ಪ್ರತಿಯೊಬ್ಬರೂ ಸ್ಟ್ರೆಚ್ ಮಾರ್ಕ್ಸ್ ಗಳಿಗೆ ಗುರಿಯಾಗಿರುತ್ತಾರೆ. ಇವುಗಳು ಎಲ್ಲರಲ್ಲೂ ಕಾಣಿಸಿಕೊಳ್ಳಬಹುದು ಹಾಗು ಇದು ತುಂಬಾ ಸಹಜವಾಗಿದ್ದು. ಹೀಗಿದ್ದರೂ, ಈ ಹಿಗ್ಗಿದ ಗುರುತುಗಳು ಬಹಳಷ್ಟು ಹೆಂಗಸರಲ್ಲಿ ತಳಮಳ ಉಂಟು ಮಾಡುತ್ತದೆ. ಈ ತಳಮಳಕ್ಕೆ ಕಾರಣ ಏನೆಂದರೆ, ತಮ್ಮ ಮೇಲಿರುವ ಗುರುತುಗಳು ತಮ್ಮನ್ನು ತಮ್ಮ ಪತಿಯ ಕಣ್ಣಲ್ಲಿ ಆಕರ್ಷಕವಾಗಿ ಕಾಣದಂತೆ ಎಲ್ಲಿ ಮಾಡಿಬಿದುತ್ತದೆಯೋ ಎಂದು ಹಾಗು ತಮ್ಮಿಂದ ಅವರು ದೂರ ಸರಿದು ಬಿಡುವರೋ ಎಂಬ ಭಯ.

ಈ ಗುರುತಗಳ ಬಗ್ಗೆ ಹೆಂಗಸರ ಅಭಿಪ್ರಾಯ ಏನೆಂದು ನಾವು ತಿಳಿದೆವು. ಆದರೆ, ಪ್ರಮುಖ ಪ್ರಶ್ನೆ ಎಂದರೆ, ಇದರ ಬಗ್ಗೆ ಗಂಡಸರ ಅಭಿಪ್ರಾಯ ಏನು ಎನ್ನುವುದು!

ಹೀಗಾಗಿ ನಾವು ಕೆಲವೊಂದು ಗಂಡಸರಿಗೆ ತಮ್ಮ ಪತ್ನಿಯರ ಹಿಗ್ಗಿದ ಗುರುತಗಳ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಕೇಳಿದೆವು. ಅವರುಗಳು ಕೊಟ್ಟಂತ ಉತ್ತರಗಳು ಎಲ್ಲರನ್ನು ಬೆರಗುಗೊಳಿಸುವಂತಹವು.

೧. “ಎಲ್ಲದಕ್ಕಿಂತಲೂ ಮುಖ್ಯ ಮನಸ್ಸು”

ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಮನಸ್ಸು ಚೆನ್ನಾಗಿದ್ದಷ್ಟು, ಸ್ಟ್ರೆಚ್ ಮಾರ್ಕ್ಸ್ ಗಳು ಅಗೊಚರವಾಗುತ್ತ ಹೋಗುತ್ತವೆ!

೨. “ಅವು ಅವಳನ್ನು ನೈಜ್ಯವಾಗಿ ಮಾಡುತ್ತವೆ”

ನನ್ನ ಹೆಂಡತಿಯ ಹಿಂಬದಿಯಲ್ಲಿ ಸ್ಟ್ರೆಚ್ ಮಾರ್ಕ್ಸ್ ಗಳು ಇವೆ. ಬೇರೆ ಗಂಡಸರಿಗೆ ಈ ಗುರುತುಗಳು ದೂರತಳ್ಳುವಂತೆ ಇರಬಹುದು ಆದರೆ ನನಗೆ ಅವುಗಳ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ನನ್ನ ಹೆಂಡತಿ 100% ಪರಿಪೂರ್ಣ ಅಲ್ಲ, ಆಕೆಯಲ್ಲೂ ಅಪೂರ್ಣತೆ ಇದೆ. ಆ ಅಪೂರ್ಣತೆಗಳೇ ಅವಳನ್ನು ಹೆಚ್ಚು ಪ್ರೀತಿಸುವಂತೆ ಮಾಡುತ್ತವೆ, ಅವಳ ಅಪೂರ್ಣತೆಗಳೇ ಅವಳನ್ನ ನೈಜ್ಯವಾಗಿ ಮಾಡುತ್ತವೆ”.

೩. “ಅವಳು ಈಗ ಹುಲಿ”

ನನ್ನ ಹೆಂಡತಿ ನನ್ನ ಮಗಳ ಜನನದ ನಂತರ ಆದ ಹಿಗ್ಗಿದ ಗುರುತುಗಳ ಬಗ್ಗೆ ಬೇಸರ ಮಾಡಿಕೊಂಡಿದ್ದಾಳೆ. ಆದರೆ ನನಿಗೆ ಅವು ತುಂಬಾ ಇಷ್ಟ ! ನನ್ನ ಪ್ರಕಾರ ಅವಗಳು ಹುಲಿಯ ಮೇಲಿನ ಪಟ್ಟಿಗಳ ಥರ, ಇದನ್ನು ಅವಳು ದಕ್ಕಿಸಿಕೊಂದಿದ್ದಾಳೆ.

೪. “ಅವಳು ಈಗಲೂ ಸುಂದರಿಯೇ”

ನಮಗೆ ಎರೆಡು ಮಕ್ಕಳು. ಆಕೆಯ ಹೊಟ್ಟೆಯ ಎಲ್ಲಾ ಭಾಗಗಳಲ್ಲೂ ಸ್ಟ್ರೆಚ್ ಮಾರ್ಕ್ ಗಳು ಆಗಿವೆ. ನಾನು ಅವಳು ಈಗಲೂ ಎಷ್ಟು ಸುಂದರವಾಗಿದ್ದಾಳೆ ಹಾಗು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುತ್ತಲೇ ಇರುತ್ತೇನೆ. ಸತ್ಯ ಏನೆಂದರೆ, ಅವಳು ಈಗಲೂ ಮುಂಚೆಯಷ್ಟೇ ಸುಂದರವಾಗಿದ್ದಾಳೆ ಹಾಗು ನನಗೆ ಆ ಗುರುತಗಳ ಬಗ್ಗೆ ಕಿಂಚಿತ್ತು ಗಮನವಿಲ್ಲ.

೫. “ನನ್ನ ಕಣ್ಣಲ್ಲಿ ಅವಳು ಯಾವತ್ತಿಗೂ ಅಪ್ಸರಿಯೇ”

ನನ್ನ ಹೆಂಡತಿಯು ಮಗುವಾದ ನಂತರ ತೂಕ ಹೆಚ್ಚಿಸಿಕೊಂಡಿದ್ದಾಳೆ ಹಾಗು ಅವಳಿಗೆ ಸ್ಟ್ರೆಚ್ ಮಾರ್ಕ್ ಗಳು ಕೂಡ ಆಗಿವೆ. ಆದರೆ ನನ್ನ ಕಣ್ಣಲ್ಲಿ ಅವಳು ಈಗಲೂ ಎಷ್ಟು ಸುಂದರವಾಗಿ ಇದ್ದಾಳೆ ಎಂದು ಅವಳಿಗೂ ಗೊತ್ತಾಗಬೇಕು ಎಂಬುದೇ ನನ್ನ ಆಸೆ. ಆ ದೇಹವು ನನ್ನ ಮಕ್ಕಳ ಭಾರ ಹೊತ್ತಿದೆ. ನನ್ನ ಪಾಲಿಗೆ ಆಕೆಯು ಹಿಂದೆಂದಿಗಿಂತಲೂ ಸುಂದರ!

೬. “ಅವುಗಳೇ ಅವಳ ಅತ್ಯದ್ಭುತ ಅಂಶ”

ನನ್ನ ಹೆಂಡತಿಯ ಸ್ಟ್ರೆಚ್ ಮಾರ್ಕ್ ಗಳಿಗೆ ಕಾರಣ ನನ್ನ ಮುದ್ದಾದ ಮಕ್ಕಳು. ನನ್ನ ಪ್ರಕಾರ ನನ್ನ ಪತ್ನಿಯಲ್ಲಿನ ಅತ್ಯದ್ಭುತ ಅಂಶವೇ ಅವುಗಳು.

೭. “ನಾನು ಪ್ರೀತಿಸಿದ್ದು ಅವಳನ್ನ, ಅವಳ ದೇಹವನ್ನಲ್ಲ”

ನನ್ನ ಹೆಂಡತಿಗೆ ಸ್ಟ್ರೆಚ್ ಮಾರ್ಕ್ ಗಳು ಇವೆ ಆದರೆ ನನಗೆ ಅದರ ಬಗ್ಗೆ ತಲೆ ಕೆಡಿಸಿಕೊಂಡಿಯೇ ಇಲ್ಲ. ಅವಳು ಅವುಗಳನ್ನು ಹೋಗಲಾಡಿಸಲು ತುಂಬಾನೇ ಕಷ್ಟ ಪಡುತ್ತಿದ್ದಾಳೆ ಆದರೆ ವಾಸ್ತವದಲ್ಲಿ ನಾನು ಅವಳ ದೇಹ ನೋಡಿ ಅವಳನ್ನ ಪ್ರೀತಿಸಿದ್ದಲ್ಲ, ಅವಳ ಮನಸ್ಸನ್ನು ನೋಡಿ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon