Link copied!
Sign in / Sign up
158
Shares

ಗರ್ಭಿಣಿ ಪತ್ನಿಗೆ ಪತಿ ಬರೆದ ಪತ್ರ ನಿಮ್ಮ ಹೃದಯ ಬೆಚ್ಚಾಗಗಿಸುತ್ತದೆ

ನನ್ನ ನಿಕಿತಾ,

ನೀನು ತುಂಬಾ ಸುಂದರವಾಗಿದ್ದೀಯ.

ಇದನ್ನ ನಾನು ನಿನಗೆ ಪ್ರತಿದಿನ ಹೇಳ್ತೀನಿ ಅಂದುಕೊಳ್ತೀನಿ. ಅಕಸ್ಮಾತ್ ಇತ್ತೀಚಿಗೆ ನೀನು ಇದನ್ನು ಕೇಳಿಸಿಕೊಂಡಿರಲಿಲ್ಲ ಎಂದರೆ, ದಯವಿಟ್ಟು ಇದನ್ನ ತಿಳಿದುಕೊ. ದಯವಿಟ್ಟು ಇದನ್ನು ಮನವರಿಕೆ ಮಾಡಿಕೊ. ನೀನು ತುಂಬಾನೇ ಸುಂದರವಾಗಿದ್ದೀಯ.

ಈ ಗರ್ಭಧಾರಣೆಯ ಪಯಣ ನಮ್ಮಿಬ್ಬರಿಗೂ, ಅಂದರೆ ಹೆಣ್ಣಿಗು ಹಾಗು ಗಂಡಿಗು ಇಬ್ಬರಿಗೂ ಒಂದು ಅದ್ಭುತವಾದದ್ದು. ಇದು ಮನೋಹರವಾದದ್ದು. ಇದು ನಂಬಲು ಸಾಧ್ಯವಾಗದಂತದು, ಇದನ್ನು ಅರಿಯಲು ಇದನ್ನ ಅನುಭವಿಸಿದರೆ ಮಾತ್ರ ಸಾಧ್ಯ.  

ಈ ಸಮಯ ನಿನಗೆ ಎಷ್ಟೊಂದು ಕಷ್ಟವೆಂದು ನನಗೆ ಗೊತ್ತು. ನಿನ್ನ ದೇಹವು ಈ ೯ ತಿಂಗಳಲ್ಲಿ ಎಷ್ಟೊಂದನ್ನು ಸಹಿಸಬೇಕು. ಅದರೊಳಗೆ ಇನ್ನೊಂದು ಮನುಷ್ಯನೇ ಬೆಳೆಯುತ್ತಿದ್ದಾನೆ ಎಂದರೆ ಲೆಕ್ಕ ಹಾಕು !! ಭಾವನಾತ್ಮಕವಾಗಿ, ದೈಹಿಕವಾಗಿ ಇದು ನಿನಗೆ ಒಂದು ತೀವ್ರವಾದ ಸಮಯ.

ನಮ್ಮಿಬ್ಬರ ಜಗತ್ತೇ ಇನ್ನುಮುಂದೆ ಬದಲಾಗುತ್ತೆ ! ನಮ್ಮ ಜೀವನದಲ್ಲಿ ಈಗ ಖುಷಿ, ಉತ್ಸಾಹ, ಭವಿಷ್ಯದ ಬಗೆಗಿನ ಕಾತುರ, ಗೊಂದಲಗಳು ಇವೆ, ಭಯ ಇದೆ, “ಅಯ್ಯೋ ದೇವ್ರೇ ಇದನ್ನೆಲ್ಲಾ ನಮ್ ಕೈಲಿ ಮಾಡಕ್ಕಾಗುತ್ತ?” ಥರದ ಅನೇಕ ಪ್ರಶ್ನೆಗಳಿವೆ.

ಖುಷಿಯ ವಿಷಯ ಏನೆಂದರೆ, ನಮಗಿಂತ ಮುಂಚೆ ನೂರಾರು ಕೋಟಿ ಜನ ಇದನ್ನ ಮಾಡಿದ್ದಾರೆ, ಹಾಗಾಗಿ ನಾವು ಕೂಡ ಇದನ್ನ ಖಂಡಿತವಾಗಿ ಮಾಡಬಹುದು.

ಎಲ್ಲವೂ ಸರಿ ಹೋಗುತ್ತದೆ! ನಿಜ ಹೇಳಬೇಕೆಂದರೆ, ಇದು ನಮ್ಮ ಜೀವನದ ಅತ್ಯಂತ ರೋಚಕ ಪಯಣವಾಗಿರುತ್ತದೆ! ಸಾರಿ, ಸಾರಿ, ನಮ್ಮ ಜೀವನವೇ ಒಂದು ಅದ್ಭುತ ಪಯಣವಾಗಿರುತ್ತದೆ.

ಅಯ್ಯೋ ನಾನು ಏನೇನೋ ಮಾತಾಡ್ತಿದ್ದೀನಿ. ವಾಪಸ್ ವಿಷಯಕ್ಕೆ ಬರೋಣ. ವಿಷಯ ಏನಪಾ ಅಂದರೆ ನೀನು ತುಂಬಾ ಸುಂದರವಾಗಿದ್ದೀಯ, ತುಂಬಾ ತುಂಬಾ ಸುಂದರವಾಗಿದ್ದೀಯ. ಇನ್ನೂ ಹೇಳಬೇಕೆಂದರೆ, ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಸುಂದರವಾದ ವ್ಯಕ್ತಿ ನೀನು.

ಸುಂದರವಾದ ವ್ಯಕ್ತಿ ಎಂದೊಡನೆ ನಾನು ಕೇವಲ ದೈಹಿಕವಾಗಿ ಹೇಳುತ್ತಿದ್ದೇನೆ ಎಂದು ಮಾತ್ರ ಅಂದುಕೊಳ್ಳ ಬೇಡ. ಗೊತ್ತಾಯ್ತ?

ನೀನು ಇರುವ ರೀತಿ, ನೀನು ನಮ್ಮ ಮಗುವಿನೊಂದಿಗೆ ಈ ೯ ತಿಂಗಳುಗಳು ವಿಕಸನ ಹೊಂದಿದ ರೀತಿ, ನೀನು ನಿನ್ನೊಳಗಿರುವ ಆ ಪುಟ್ಟ ಜೀವವನ್ನು ಪ್ರೀತಿ, ಕಾಳಜಿ ಮಾಡುವ ರೀತಿ ಎಲ್ಲವೂ ಸುಂದರ.

ಐ ಲವ್ ಯು ಹೊಟ್ಟೆ ಗುಮ್ಮ !

ಇಂತಿ,

ನಿನ್ನ ಇನ್ನೊಂದು ದೊಡ್ಡ ಮಗು

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon