Link copied!
Sign in / Sign up
10
Shares

ನಿಮ್ಮ ಪತಿಯೊಂದಿಗೆ ನೀವು ಚರ್ಚಿಸಲೇಬೇಕಾದ ವಿಷಯಗಳು

ಮದುವೆ ಸೀಸನ್ ಶುರುವಾಗುತ್ತಿದ್ದಂತೆಯೇ ಮದುಮಕ್ಕಳಿಗೆ, ತಮ್ಮ ಮುಂದಿನ ಜೀವನದ ಬಗೆಗಿನ ಯೋಜನೆಯು ಕಾಡತೊಡಗುತ್ತದೆ. ಅದರಲ್ಲೂ ಹಿರಿಯರು ನಿರ್ಣಯಿಸಿದ ಮದುವೆಯಾದರೆ, ಎರಡು ವ್ಯತ್ಯಸ್ತ ವ್ಯಕ್ತಿಗಳ ಬಗ್ಗೆ, ಅವರ ವ್ಯಕ್ತಿತ್ವ ದೃಷ್ಟಿಕೋನಗಳ ಬಗ್ಗೆ ತಿಳಿದುಕೊಂಡರೆ ತಮ್ಮ ಮುಂದಿನ ಜೀವನದ ಬಗ್ಗೆ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಾಗಾದರೆ ಯಾವೆಲ್ಲ ವಿಷಯಗಳ ಬಗ್ಗೆ ಪರಸ್ಪರ ಚರ್ಚಿಸಬೇಕು ? ಇಲ್ಲಿದೆ ಪಟ್ಟಿ ಓದಿ ನೋಡಿ.

೧.ಮಕ್ಕಳು

ದಂಪತಿಗಳ ಮುಂದಿರುವ ಅತಿ ದೊಡ್ಡ ಸವಾಲೆಂದರೆ- ಮಕ್ಕಳು !! ಹೆಚ್ಚಾಗಿ ಎಲ್ಲ ದಂಪತಿಗಳು, ಈ ವಿಷಯದ ಬಗ್ಗೆ ಚರ್ಚಿಸಲು ಹಿಂಜರಿಯುವ ಕಾರಣ, ನಂತರ ಅದೇ ದೊಡ್ಡ ತಲೆನೋವಾಗಿ ಪರಿಣಮಿಸುವುದು. ನಿಮ್ಮ ಗೆಳೆಯರು “ಅವಳಿಗೆ ಇನ್ನೊಂದು ಮಗುವಾಗಿಲ್ಲವೆಂಬ ಬೇಸರದಲ್ಲಿದ್ದಾಳೆಂದು” ನಿಮಗೆ ತಿಳಿಸುವಾಗ, ಕೇವಲ ಒಂದೇ ಮಗು ಸಾಕೆಂಬ ನಿರ್ಣಯಕ್ಕೆ ನೀವು ಬಂದಿರಬಹುದು. ಅದು ನಮ್ಮಿಬ್ಬರ ಶೀತಲ ಸಮರಕ್ಕೆ ನಾಂದಿ ಹಾಡುವುದು. ಆದ ಕಾರಣ ಇಬ್ಬರೂ ಈ ವಿಷಯದ ಬಗ್ಗೆ ಚರ್ಚಿಸಿ ಉತ್ತಮ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು. ಹಾಗೆಯೇ ಯಾರು ಮತ್ತು ಹೇಗೆ ಮುಂಜಾಗರೂಕತೆಗಳನ್ನು ಪಾಲಿಸಬೇಕೆಂದೂ ಚರ್ಚಿಸಿರಿ.

೨.ಮನೆಯೇ ದೇಗುಲ

‘ಮನವೆಲ್ಲಿಯೋ, ಅಲ್ಲೇ ಮನೆ ಇರುವುದು’ ಎನ್ನುವ ಮಾತು ದಾಂಪತ್ಯದಲ್ಲಿ ಸ್ಥಳಕ್ಕೆ ಎಷ್ಟು ಪ್ರಾಧಾನ್ಯತೆ ಇದೆ ಎನ್ನುವುದನ್ನು ಸೂಚಿಸುತ್ತದೆ. ಮದುವೆಯ ಬಳಿಕ ಎಲ್ಲಿ ವಾಸಿಸಲ್ಪಡಬೇಕೆನ್ನುವುದರ ಬಗ್ಗೆ ವಿಷದವಾಗಿ ಚರ್ಚಿಸುವುದು ಹಾಗೂ ಹಣಕಾಸು ಮತ್ತು ಮದುವೆಯ ಬಳಿಕ ಅತ್ತೆಯೊಂದಿಗೆ ಹೊಂದಿಕೊಳ್ಳಲು ಬಯಸುವಿರೋ ಅಥವಾ ಬೇರೆ ಮನೆಯನ್ನು ಬಯಸುವಿರೋ ? ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯಾವ ಜಾಗೆಯಲ್ಲಿ ನೆಲೆಗೊಳ್ಳುವುದು ಉತ್ತಮ ? ಉತ್ತಮವಾದ ವೃತ್ತಿ ಜೀವನ ಬೇಕೇ ಅಥವಾ ಕುಟುಂಬದವರ ಪ್ರೀತಿ ಸಾಕೇ ? ಎಂಬಿತ್ಯಾದಿ ಎಲ್ಲಾ ಪ್ರಶ್ನೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಂಡು ಅದನ್ನು ಕಾರ್ಯ ಪ್ರವೃತ್ತಿಗೊಳಿಸಬೇಕು.

೩.ಪರಸ್ಪರ ಹಂಚಿಕೊಳ್ಳುವಿಕೆಯಲ್ಲಿ ಕಂಡುಕೊಳ್ಳುವ ಪ್ರೀತಿ

ಸಾಮಾಜಿಕ ಜಾಲತಾಣಗಳಲ್ಲಿ ಸವಿಸ್ತಾರವಾಗಿ ಹರಡಿಕೊಂಡಿರುವ ಇಂದಿನ ಸಮೂಹಗಳಲ್ಲಿ, ಪರಸ್ಪರ ಹಂಚಿ ಕೊಳ್ಳುವುದೆಂದರೆ ಪಾಸ್ವರ್ಡ್ ಅನ್ನು ಹಂಚಿಕೊಳ್ಳಲೇಬೇಕೇ ಎನ್ನುವ ಪ್ರಶ್ನೆಯೂ ಏಳುತ್ತದೆ. ಇದರ ಬಗೆಗಿನ ನಿಮ್ಮ ಅನಿಸಿಕೆಯನ್ನು ಧೈರ್ಯವಾಗಿ ತಿಳಿಸಿ ಹೇಳಿ. ಪರಸ್ಪರ ಬ್ಯಾಂಕ್ ಅಕೌಂಟುಗಳ ಬಗೆಗಿನ ವಿವರ ಹಾಗೂ ವೈಯ್ಯಕ್ತಿಕ ಹಣಕಾಸು ವ್ಯವಹಾರಗಳ ಬಗ್ಗೆ ವಿವರವಾಗಿ ಹಂಚಿಕೊಳ್ಳುವಿಕೆಯು ಮುಂದಿನ ಅಸುರಕ್ಷಿತ ಭಾವನೆಯನ್ನು ತಡೆಯುತ್ತದೆ.

೪.ಸಾಂಕ್ರಾಮಿಕ ರೋಗಗಳು

ಎಚ್ ಐ ವಿ ಪರಿಶೋಧನೆಯು ಆರೋಗ್ಯಕರ ಸಂಬಂಧಕ್ಕೆ ತಳಹದಿ. ಆಹಾರಾಭ್ಯಾಸಗಳು ಹಾಗೂ ಅಲರ್ಜಿಗಳ ಬಗೆಗಿನ ಚರ್ಚೆಯೂ ಪರಸ್ಪರ ಪ್ರೀತಿಯನ್ನು ತೋರುತ್ತದೆ. ನಂತರ ನಿಮ್ಮ ಧಾರ್ಮಿಕ ಹಾಗೂ ರಾಷ್ಟ್ರೀಯ ಅಭಿಪ್ರಾಯಗಳ ಬಗ್ಗೆಯೂ ವಿವರವಾಗಿ ಮಾತನಾಡಿಕೊಳ್ಳಬೇಕು.

೫.ಸಮಸ್ಯೆಗಳನ್ನು ಪರಿಹರಿಸುವ ರೀತಿ

ಪರಸ್ಪರ ಹೊಂದಾಣಿಕೆಯಿಲ್ಲದೆ ದಾಂಪತ್ಯ ಜೀವನವು ಸುಗಮವಾಗಿ ಮುಂದೆ ಸಾಗದು. ಇಂತಹ ಸಂದರ್ಭಗಳಲ್ಲಿ ಸಮಸ್ಯೆಯ ಮೂಲ ಕಾರಣಗಳನ್ನು ಕಂಡು ಹಿಡಿದು ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕು. “ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ”-ಎಂಬ ಮಾತು ಕೇಳಿಲ್ಲವೇ ಹಾಗಿರಬೇಕು ಜೀವನ. ಮನೆಯವರ ಅಥವಾ ಗೆಳೆಯರ ಮುಂದೆ ಚರ್ಚಿಸಲ್ಪಡುವಂತಹುದಲ್ಲ ನಿಮ್ಮ ದಾಂಪತ್ಯ ಜೀವನ. (ಅಷ್ಟು ದೊಡ್ಡ ಸಮಸ್ಯೆಯಾಗಿದ್ದರೆ ಮಾತ್ರ ಹಿರಿಯರ ಗಮನಕ್ಕೆ ತನ್ನಿ) ಪತ್ನಿಯು ಹೊರಗಿನ ಅಥವಾ ಆಫೀಸ್ ಕೆಲಸಗಳಲ್ಲಿ ಬಿಜಿ಼ಯಾಗಿರುವಾಗ ಗಂಡನು ಮಕ್ಕಳನ್ನು ಪಾಲಿಸಬಹುದಲ್ಲ. ?

೬.ಮಹತ್ವಾಕಾಂಕ್ಷೆ

ಇಬ್ಬರು ಮಹತ್ವಾಕಾಂಕ್ಷಿಗಳು ಪ್ರಣಯ ಬದ್ಧರಾಗಿ ವಿವಾಹ ಬಂಧನದಲ್ಲೇರ್ಪಡುವಾಗ, ತಮ್ಮ ಕನಸುಗಳನ್ನು ತ್ಯಾಗ ಮಾಡಬೇಕಾದ ಸನ್ನಿವೇಶವೆದುರಾಗುತ್ತದೆ. ಅಂತಹ ಸಾಹಸಕ್ಕೆ ಕೈ ಹಾಕುವ ಮುನ್ನ ನಿಮ್ಮ ಜೀವನ ಸಂಗಾತಿಯಲ್ಲೊಮ್ಮೆ ಚರ್ಚಿಸಿರಿ.

ನನ್ನ ಆಂಟಿಯೊಬ್ಬರು ಪ್ರಪಂಚ ಪರ್ಯಟನೆ ಮಾಡುವ ತಮ್ಮ ಕನಸನ್ನು ಗಂಡನಿಂದ ಮುಚ್ಚಿಟ್ಟರು. ನಂತರ ಅವರ ಸಂಕೋಚ ಸ್ವಭಾವದ ಗಂಡನು ತಮ್ಮ ಪತ್ನಿಯನ್ನು, ಅವರ ಏಕಾಂಗಿತನದಿಂದ ಹೊರ ತರಲು ಪಾಡು ಪಡುವಂತಾಯಿತು.

ಸಲಹೆ : ಈಗಲೇ ಮನಬಿಚ್ಚಿ; ಕನಸು ಹಂಚಿಕೊಳ್ಳಿರಿ

೭.ಗತಕಾಲ

‘ವಿವಾಹ ಬಂಧ’ವೆನ್ನುವುದು ಹೊಸ ಜೀವನ.ನಮ್ಮ ವರ್ತಮಾನ ಹಾಗೂ ಭವಿಷ್ಯವಾದ ಕಾರಣ, ಗತಕಾಲದ ನೆನಪನ್ನು ಗುಂಡಿ ತೋಡಿ ಮುಚ್ಚಿಡುವುದು ಜಾಣತನ  ಇದರಿಂದ ನಿಮ್ಮ ಸೌಹಾರ್ದವು ಬಿಗಿಯಾಗಿ ಬಂಧಿಸಲ್ಪಡುವುದಲ್ಲದೇ, ಅನಗತ್ಯ ಅಸುರಕ್ಷಿತ ಭಾವನೆಯೂ ನೀಗಿಸಲ್ಪಡುತ್ತದೆ. ಪರಸ್ಪರ ಗತಕಾಲ ಜೀವನವನ್ನು ಕೆದಕದಿರುವುದೇ ನಮ್ಮಿಬ್ಬರ ಉತ್ತಮ ಸಂಬಂಧಕ್ಕೆ ಬುನಾದಿ. ಹೀಗೆ ಮಾಡುವುದರಿಂದ ನೀವಿಬ್ಬರು ಪರಸ್ಪರ ಕಾದಾಡುವ ಬದಲು, ಸಮಾಜ ಕಲ್ಯಾಣಕ್ಕಾಗಿ ಹೋರಾಡುವಂತಹ ಆದರ್ಶ ದಂಪತಿಗಳ ಆಗಬಹುದು.

೮.ನಿಮ್ಮ ಅನಿಸಿಕೆ

ಆಕಾಶದ ಕೆಳಗಿನ ಯಾವುದೇ ವಿಷಯಗಳ ಬಗ್ಗೆ ಚರ್ಚಿಸುವಾಗಲೂ, ವೈವಾಹಿಕ ಬಂಧದ ಹಿರಿಮೆಯನ್ನು ಕೂಡ ಸೇರ್ಪಡಿಸುವುದರಿಂದ ನಿಮ್ಮಿಬ್ಬರ ಪರಸ್ಪರ ಪ್ರಣಯವೂ ಮಧುರವೆನಿಸುವುದು. ನೀವಿಬ್ಬರೂ ಒಟ್ಟಿಗೆ ಕಳೆದ ಮಧುರ ಕ್ಷಣಗಳ ನೆನಪುಗಳನ್ನು ಹಸಿರಾಗಿರುವಂತೆ ನೆನಪಿನ ಕಾಣಿಕೆಗಳನ್ನು ನೀಡುವುದ, ನೀವು ಮುನಿಸಿಕೊಂಡ ಕ್ಷಣಗಳಲ್ಲಿ ನೆರವಾಗುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon