Link copied!
Sign in / Sign up
8
Shares

ನಿಮ್ಮ ಪತಿಯು ನಿಮ್ಮ ಮಾತನ್ನು ಕೇಳಬೇಕೆ ಮತ್ತು ಗೌರವಿಸಬೇಕೇ? ಹಾಗಿದ್ದರೆ ಈ 5 ಕೆಲಸಗಳನ್ನ ಮಾಡಿ

ಸಂಬಂಧದಲ್ಲಿ ಕಷ್ಟ ಅನ್ನುವಂತದ್ದು ಏನಾದರು ಇದ್ದರೆ, ಅದು ನಿಮ್ಮ ಸಂಗಾತಿಯನ್ನು ಯಾವಾಗಲೂ ಪ್ರೀತಿಸುತ್ತಲೇ ಇರುವುದು. ಹೌದು, ನೀವು ಈ ಒಂದು ಕೆಲಸವನ್ನು ಮಾಡಿದರೆ, ಉಳಿದೆಲ್ಲ ತೊಂದರೆಗಳು ಸಾಗರದ ಅಲೆಗೆ ಕೊಚ್ಚಿ ಹೋಗುವ ಮರಳಿನಂತೆ ಕೊಚ್ಚಿ ಹೋಗುತ್ತವೆ. ಸಂಸಾರ ಎನ್ನುವುದು ಒಂದು ಬಂಡಿಯಂತೆ. ಈ ಬಂಡಿ ಮುಂದೆ ಸಾಗಲು ಎರಡು ಚಕ್ರಗಳಾದ ಗಂಡ, ಹೆಂಡತಿ ಇಬ್ಬರೂ ಒಂದೇ ವೇಗದಲ್ಲಿ, ಒಂದೇ ದಿಕ್ಕಿನಲ್ಲಿ ಮುನ್ನಡೆಯಬೇಕು. ಆದರೆ ಗಂಡ ಎಂಬ ಒಂದು ಚಕ್ರವು ಹೆಂಡತಿ ಎಂಬ ಚಕ್ರವನ್ನು ಹಿಂದೆಯೇ ಬಿಟ್ಟು ಬಿಟ್ಟರೆ ಬಂಡಿಯು ನೆಲಕಚ್ಚುತ್ತದೆ.

ಆದರೆ ಯಾವುದೇ ವ್ಯಕ್ತಿ ಆಗಲಿ ಇನ್ನೊಂದು ವ್ಯಕ್ತಿಯೊಡನೆ ಅನ್ಯೋನ್ಯತೆ, ನಂಬಿಕೆ ಮತ್ತು ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರೆ ಆ ಇನ್ನೊಂದು ವ್ಯಕ್ತಿಯಲ್ಲಿ ಕೆಲವು ಗುಣಗಳಿರಬೇಕು. ಗಂಡ ಹೆಂಡತಿಯ ಸಂಬಂಧದಲ್ಲೂ ಹೀಗೆಯೇ. ಕೇವಲ ಮದುವೆಯ ಬಂಧದಿಂದ ಅನ್ಯೋನ್ಯತೆ ಬೆಳೆಯಬೇಕು ಎಂಬುದು ತರವಲ್ಲ. ನಿಮ್ಮ ಸಂಬಂಧದಲ್ಲಿ ನಿಮ್ಮ ಮಾತಿಗೂ ಬೆಲೆ ಕೊಡಬೇಕು, ಅದನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತರಬೇಕು ಎಂದರೆ, ನೀವು ಕೂಡ ನಿಮ್ಮ ಕೆಲವು ಜವಾಬ್ದಾರಿಗಳನ್ನು, ಪಾತ್ರಗಳನ್ನು ಸರಿಯಾಗಿ ನಿಭಾಯಿಸಬೇಕು. ಅಂತಹದ್ದು ಯಾವುಗಳೆಂದು ಇಲ್ಲಿ ನಾವು ಪಟ್ಟಿ ಮಾಡಿದ್ದೇವೆ ಓದಿರಿ :

೧. ನಿಮ್ಮಲ್ಲಿ ನೀವು ನಂಬಿಕೆ ಇರಿಸಿಕೊಳ್ಳಿ

ಯಾವ ಹೆಣ್ಣು ತನ್ನ ಬಗ್ಗೆ, ತನ್ನ ಅಂದದ ಬಗ್ಗೆ, ತನ್ನ ನಂಬಿಕೆಗಳ ಬಗ್ಗೆ  ಅವಳೇ ಸಂಶಯ ಪಡುವುದಿಲ್ಲವೋ, ಅಂತಹ ಹೆಣ್ಣು ಸ್ವಾಭಾವಿಕವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತಾಳೆ. ನೀವು ಎಷ್ಟು ಸದೃಢ ಎಂದು ನೀವು ಭಾವಿಸುತ್ತಿರೋ, ನಡೆದುಕೊಳ್ಳುತ್ತಿರೋ, ನಿಮ್ಮ ಪತಿ ಕಷ್ಟದ ಸಮಯಗಳಲ್ಲಿ ಅಷ್ಟೇ ನಿಮ್ಮ ಬೆಂಬಲ ಬಯಸುತ್ತಾರೆ. ಅದಕ್ಕಿಂತ ಮುಖ್ಯವಾಗಿ, ಕಷ್ಟದ ಸಮಯಗಳಲ್ಲಿ ಅವರು ನಿಮ್ಮ ಶಕ್ತಿ ಮತ್ತು ಮಾನಸಿಕ ಸ್ಪಷ್ಟತೆಯನ್ನು ಮೆಚ್ಚುತ್ತಾರೆ.


೨. ಆತ್ಮವಿಶ್ವಾಸದಿಂದ ಕೂಡಿರಿ

ಯಾವಾಗ ಅಸೂಯೆ ನಿಮ್ಮ ಸಂಬಂಧದ ಮೇಲೆ ಹಿಡಿತ ಪಡೆಯುತ್ತದೆಯೋ, ನೀವು ಆ ಅಸೂಯೆ ಭಾವನೆಯನ್ನೇ ಬುಡಸಮೇತ ಕಿತ್ತೆಸೆಯಬೇಕು. ನೀವು ನಿಮ್ಮ ಪತಿಯನ್ನು ನಂಬುತ್ತೀರಾ ಎಂದು ಅವರಿಗೆ ತೋರಿಸಿ. ಅಷ್ಟೇ ಅಲ್ಲದೆ ಅವರು ಕೂಡ ನಿಮ್ಮನ್ನ ಅಭದ್ರತೆ, ಅಸಫಲತೆ ಮತ್ತು ಆತಂಕದ ಸಮಯಗಳಲ್ಲಿ ನೀವು ಅವರನ್ನು ನಂಬಬಹುದು ಎಂದು ಅವರಿಗೆ ತಿಳಿಹೇಳಿ ಮತ್ತು ತೋರಿಸಿ.


೩. ಸಹಾನುಭೂತಿ ಉಳ್ಳವರಾಗಿ

ಒಬ್ಬರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಿಮ್ಮ ಮೈಯೆಲ್ಲಾ ಕಿವಿಯಾಗಿರಬೇಕು. ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಮುಖ್ಯವಾಗಿ ಬೇಕಿರುವುದೇ ಕೇಳಿಸಿಕೊಳ್ಳುವುದು. ಯಾವಾಗಲೂ ದೂಷಿಸುವುದನ್ನು ಬಿಡಿ ಮತ್ತು ನಿಮ್ಮ ಸಂಗಾತಿಯ ತಪ್ಪುಗಳನ್ನು ಎತ್ತಿ ಹಿಡಿದು ಅವರಿಗೆ ತೋರಿಸಬೇಕು ಎಂಬ ಭಾವನೆಯಿಂದ ಹೊರಬನ್ನಿ. ಟೀಕೆ ಮಾಡುವ ಅವಕಾಶ ಸಿಕ್ಕರೂ ಬಳಸಬೇಡಿ. ಹೀಗೆ ಮಾಡುವುದರಿಂದ ನೀವು ಕೇವಲ ಹೆಂಡತಿಯಷ್ಟೇ ಅಲ್ಲ, ಕಶ್ಟದ ಸಮಯದಲ್ಲಿ ಹೆಗಲು ನೀಡುವ ಒಂದು ಒಳ್ಳೆಯ ಗೆಳತೀ ಎಂದೆನಿಸುವುದು.


೪. ನಿಮ್ಮ ಬಗ್ಗೆ ಅರ್ಥ ಮಾಡಿಸಿ

ಮೊದಲೇ ಹೇಳಿದ ಹಾಗೆ ಒಬ್ಬರನ್ನು ಅರ್ಥ ಮಾಡಿಕೊಳ್ಳಲು ನೀವು ಒಳ್ಳೆಯ ಕೇಳುಗರಾಗಿರಬೇಕು. ಆದರೆ ನೀವು ಇನ್ನೊಬ್ಬರಿಗೆ ಅರ್ಥೈಸಲು ಸರಿಯಾಗಿ ಮಾತಾಡಲು ತಿಳಿದಿರಬೇಕು. ಮಾತಾಡುವಾಗ ಯಾವತ್ತೂ ಕೂಗಾಡಬೇಡಿ ಅಥವಾ ಹತಾಶೆ ವ್ಯಕ್ತಪಡಿಸಬೇಡಿ. ಸುತ್ತಿಬಳಸಿ ಹೇಳುವುದು ಮಾಡಬೇಡಿ, ನೀವು ಹಿಂದೆ ಆಡಿದ ಮಾತುಗಳನ್ನು ತಿರುಚಬೇಡಿ. ನೇರವಾಗಿ ಮತ್ತು ಸ್ಪಷ್ಟವಾಗಿ ನೀವು ಅಂದುಕೊಂಡಿರುವುದನ್ನು ಹೇಳಿ. ಮನಸ್ತಾಪಗಳು ಹಲವಾರು ನಕಾರಾತ್ಮಕ ವಿಷಯಗಳನ್ನು ಹುಟ್ಟು ಹಾಕುತ್ತವೆ.


೫. ಮಜವಾಗಿ ಇರಿ

ನಿಮಗೆ ಎಲ್ಲವೂ ಗೊತ್ತಿರಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ ಮತ್ತು ಕೆಲವೊಮ್ಮೆ ನಿಮ್ಮ ಬಗ್ಗೆಯೇ ನೀವು ಹಾಸ್ಯ ಮಾಡಿಕೊಳ್ಳಿ. ಇದು ಅವರು ನಿಮ್ಮನ್ನು ಪ್ರತಿದಿನ ಹೆಚೆಚ್ಚು ಪ್ರೀತಿ ಮಾಡುವಂತೆ ಮಾಡುತ್ತದೆ. ನನ್ನನ್ನು ನಂಬಿರಿ, ನಿಮ್ಮ ನಗುವು ಅದೆಂತಹದ್ದೇ ಕೆಟ್ಟ ದಿನವನ್ನು ತಿಳಿಗೊಳಿಸಿ, ನಿಮ್ಮ ಒತ್ತಡದ ಸಮಯವನ್ನು ಹಿತಕಾರವನ್ನಾಗಿ ಪರಿವರ್ತಿಸುತ್ತದೆ. ಅವರೊಂದಿಗೆ ಜೋಕ್ ಮಾಡಿ, ಅವರನ್ನೂ ಕಿಚಾಯಿಸಿ. ನೀವು ಕೇವಲ ಅವರ ಹಿಂದೆ ಬಂಡೆಯಂತೆ ನಿಲ್ಲುವುದಷ್ಟೇ ಅಲ್ಲ, ಅವರ ಜೊತೆಗೂಡಿ ನಗಲು ಕೂಡ ಬಲ್ಲಿರಾ ಎಂಬುದನ್ನು ಅವರಿಗೆ ತೋರಿಸಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon