Link copied!
Sign in / Sign up
61
Shares

ನಿಮ್ಮ ಪತಿಯು ಯಾವ ರೀತಿಯ ತಂದೆ ಎಂದು ಅವರ ರಾಶಿ ತಿಳಿಸುತ್ತದೆ!

ಮೇಷ

ಮೇಷ ರಾಶಿಯ ತಂದೆಯರು ಗಟ್ಟಿ ಮನಸ್ಸಿನವರು ಮತ್ತು ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ. ಇದೇ ಕೆಲವೊಮ್ಮೆ ಅವರಿಗೆ ಮುಳುವಾಗಬಹುದು ಕೂಡ. ಇವರಲ್ಲಿರುವ ಛಲ ಮತ್ತು ರೋಷ ಇವರನ್ನ ಕೆಲವೊಮ್ಮೆ ಭಂಡರಂತೆ ಕಾಣುವಂತೆ ಮಾಡುತ್ತದೆ. ಆದರೆ ಈ ರೀತಿಯ ತಂದೆಯರು ತಮ್ಮ ಮಕ್ಕಳು ಯಶಸ್ವೀ ಮತ್ತು ಸ್ವಾವಲಂಬಿಯೂ ಆಗುವಂತೆ ಮಾಡುವರು.

ವೃಷಭ

ವೃಷಭ ರಾಶಿಯ ತಂದೆಯರು ಸ್ಥಿರತೆ ಮತ್ತು ಅಚ್ಚುಕಟ್ಟಾದ ನಡೆಗಳನ್ನ ಇಚ್ಚಿಸುತ್ತಾರೆ, ಹೀಗಾಗಿ ನೀವು ಇವರ ಮೇಲೆ ಯಾವಾಗಲೂ ನಂಬಿಕೆ ಇಡಬಹುದು. ವೃಷಭ ಚಿಹ್ನೆಯು ಭೂಮಿಯನ್ನ ಒಳಗೊಂಡಿದ್ದು, ಈ ರಾಶಿಯ ವ್ಯಕ್ತಿಯ ನಿಯಮಗಳು ನಿಮಗೆ ಎಷ್ಟೇ ಕಠಿಣ ಎನಿಸಿದರೂ, ನೀವು ಅವರಿಂದ ಎಲ್ಲಾ ಕಾಲದಲ್ಲೂ ಬೆಂಬಲ ಅಪೇಕ್ಷಿಸಬಹುದು. ಇವರೇನಾದರೂ ನಿಮ್ಮೊಂದಿಗೆ ವಾದ ಮಾಡುತ್ತಿದ್ದಾರೆ ಎಂದರೆ, ನಿಮ್ಮನ್ನ ಅವರು ಆಗಲೇ ನಿಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಹಾಗು ನಿಮ್ಮ ಪರವಾಗಿಯೇ ಇದ್ದಾರೆ ಎಂದು.

ಮಿಥುನ

ಮಿಥುನ ರಾಶಿಯ ಅಪ್ಪ ಸಾಮಾನ್ಯವಾಗಿ ಮೋಜಿನ ಪೋಷಕರು ಆಗಿರುತ್ತಾರೆ. ಹೀಗಾಗಿ ಇವರು ಮನೆಯಲ್ಲಿ ಕಠಿಣ ಕಟ್ಟುಪಾಡುಗಳನ್ನ ರೂಪಿಸುವುದಿಲ್ಲ. ಇವರು ಹಾಸ್ಯ, ಮಾತುಗಾರಿಕೆ ಹಾಗು ಕೆಲವೊಮ್ಮೆ ಹಠಾತ್ ಪ್ರವೃತ್ತಿ ಕೂಡ ಹೊಂದಿರುತ್ತಾರೆ. ಹೀಗಾಗಿ ಒಮ್ಮೊಮ್ಮೆ ನಿಮಗೆ ಮಗು ಯಾರು, ಅಪ್ಪ ಯಾರು ಎಂದು ಗೊತ್ತಾಗುವುದಿಲ್ಲ! ಆದರೆ ಇವರ ಬಗ್ಗೆ ಒಳ್ಳೆಯ ವಿಷಯ ಎಂದರೆ, ಇವರು ಆಸಕ್ತಿ ಮೂಡಿಸುವ ಕಥೆಗಳನ್ನ ಹೇಳುವುದರಲ್ಲಿ ಎತ್ತಿದ ಕೈ ಹಾಗು ಮಕ್ಕಳಲ್ಲಿ ತರ್ಕಕ್ಕೆ ಒತ್ತು ನೀಡುವವರು.

ಸಿಂಹ

ಸಿಂಹ ರಾಶಿಯ ತಂದೆಯರು ತಮ್ಮ ಸಂಸಾರದ ಬಗ್ಗೆ ಹೆಮ್ಮೆ ಹೊಂದಿರುವ ಒಡೆಯನಾಗಿರುತ್ತಾರೆ ಹಾಗು ಮಕ್ಕಳ ಬೇಡಿಕೆಗಳಿಗೆ ಬಲು ಬೇಗನೆ ಮನಸೋತು ಶರಣಾಗುತ್ತಾರೆ. ಇವರು ಗದರಿದರುವುದು ಮಕ್ಕಳನ್ನ ಹೆದರಿಸಬೇಕು ಎಂದಲ್ಲ, ಬದಲಿಗೆ ತಮ್ಮ ಮಕ್ಕಳು ಎಷ್ಟು ಉತ್ತಮ ನಡೆ ಉಳ್ಳವರು ಎಂದು ಬೇರೆಯವರು ನೋಡಿ ಹೇಳಬೇಕೆಂದು. ಇವರು ಕಾಡಿನ ರಾಜನಂತೆ ತಮ್ಮ ಸಂಸಾರದ ರಾಜ - ಯಾವಾಗಲೂ ಪ್ರಾಮಾಣಿಕತೆ ಮತ್ತು ರಕ್ಷಣೆ ಎರಡನ್ನು ನೀಡುತ್ತಾರೆ. ಆದರೆ ಇವರ ಅಹಂ ಅನ್ನು ಪೆಟ್ಟು ಮಾಡುವ ಸಾಹಸಕ್ಕೆ ಮಾತ್ರ ಯಾರು ಕೈ ಹಾಕಬಾರದು.

ಕನ್ಯಾ

ಕನ್ಯಾ ರಾಶಿಯ ತಂದೆ ಎಲ್ಲದರಲ್ಲೂ ವ್ಯವಸ್ತೆ ಕಾಪಾಡಿಕೊಳ್ಳಲು ಇಷ್ಟ ಪಡುತ್ತಾರೆ. ಅದು ಮನೆಯ ಸ್ವಚ್ಚತೆ ಇರಬಹುದು ಅಥವಾ ವ್ಯಾಯಾಮ ಇರಬಹುದು, ಇವರು ಎಲ್ಲದರಲ್ಲೂ ಶ್ರದ್ದೆ ಅಪೇಕ್ಷಿಸುತ್ತಾರೆ. ಇದು ಕೆಲವೊಮ್ಮೆ ಅವರಿಗೇನೆ ಆಯಾಸ ಉಂಟು ಮಾಡಬಹುದು. ಇವರು ಚಿಕ್ಕ ಚಿಕ್ಕ ವಿಷಯಗಳ ಬಗ್ಗೆಯೂ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಆತಂಕಕ್ಕೂ ಒಳಗಾಗಬಹುದು. ಆದರೆ ಇವೆಲ್ಲಾ ಮಾಡುವುದು ತಮ್ಮ ಮಕ್ಕಳ ಒಳ್ಳೆಯದಕ್ಕೆ.

ತುಲಾ

ತುಲಾ ರಾಶಿಯ ತಂದೆಯರು ಶ್ರದ್ದೆ ಇಷ್ಟ ಪಡುತ್ತಾರೆ ಆದರೆ ಸಹನಶೀಲರು ಆಗಿರುತ್ತಾರೆ. ಒಟ್ಟಿನಲ್ಲಿ ಅವರಿಗೆ ಮನೆಯಲ್ಲಿ ನೆಮ್ಮದಿ ನೆಲಸಿರಬೇಕು. ಹೀಗಾಗಿ ಮಕ್ಕಳು ಕಾಟ ಕೊಟ್ಟರೆ, ಅವರ ಬೇಡಿಕೆಗಳಿಗೆ ಒಲಿದುಬಿಡುತ್ತಾರೆ. ಇವರು ಸಮಾಜದಲ್ಲಿ ಮುಖ ಕಾಪಾಡಿಕೊಳ್ಳುವುದರ ಬಗ್ಗೆಯೂ ಕಾಳಜಿ ವಹಿಸುತ್ತಾರೆ - ಉದಾಹರಣೆಗೆ ಮಕ್ಕಳು ಹೊರಗಡೆ ಯಾವ ರೀತಿಯ ಮಾತುಗಳನ್ನ ಆಡುತ್ತಾರೆ, ಹೇಗೆ ನಡೆದುಕೊಳ್ಳುತ್ತಾರೆ ಎಂಬುದು. ಇದು ಕೆಲವೊಮ್ಮೆ ತುಂಬಾ ನಿಯಂತ್ರಿಸುವಂತೆ ಅನಿಸಿದರು, ಇದು ಮಕ್ಕಳ ಒಳಿತಿಗಾಗಿಯೇ.

ವ್ರುಶಿಚ್ಕ

ವೃಶ್ಚಿಕ ರಾಶಿಯ ತಂದೆಯರಿಗೆ ತುಲನೆ ಎಂದರೆ ಇಷ್ಟ ಹಾಗು ಮನೆಮಂದಿ ಜೊತೆ ಸಮಯ ಕಳೆಯಲು ಇಷ್ಟ. ಇವರು ಸಾಮಾನ್ಯವಾಗಿ ತುಂಬಾ ಆಳವಾದ ಯೋಚನೆಯಲ್ಲಿ ಮುಳುಗಿರುತ್ತಾರೆ ಮತ್ತು ರಕ್ಷಣಾತ್ಮಕವಾಗಿರುತ್ತಾರೆ. ಇವರು ಕೆಲವೊಮ್ಮೆ ವಿಷಯಗಳನ್ನ ತುಂಬಾ ವಯಕ್ತಿಕವಾಗಿ ತೆಗೆದುಕೊಳ್ಳುವರು, ಉದಾಹರಣೆಗೆ ನಿಮ್ಮ ಮಗುವಿಗೆ ಯಾರಾದರು ಬೈದರೆ ಅಥವಾ ರೇಗಿಸಿದರೆ.

ಧನುರಾಶಿ

ಧನು ರಾಶಿಯ ತಂದೆಯರು ತಮ್ಮದೇ ಶೈಲಿಯಲ್ಲಿ ಬದುಕುವ ಜನ. ಇವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನ ಖುಷಿ, ಉಲ್ಲಾಸದಿಂದ ಕಳೆಯಲು ಇಷ್ಟ ಪಡುತ್ತಾರೆ ಮತ್ತು ಜೀವನದಲ್ಲಿ ಸಾಹಸಗಳನ್ನ ಇಷ್ಟ ಪಡುತ್ತಾರೆ. ಈ ಮನಸ್ತಿತಿಯಲ್ಲಿ ತಪ್ಪೇನಿಲ್ಲ, ಆದರೆ ಇದರಿಂದ ಆಗುವ ಒಂದು ತೊಂದರೆ ಎಂದರೆ ಅದು ಮಕ್ಕಳು ಇವರನ್ನು ಆಡಳಿತಗಾರನನ್ನಾಗಿ ನೋಡುವ ಬದಲು ಒಳ್ಳೆಯ  ಸ್ನೇಹಿತನನ್ನ ನೋಡುತ್ತಾರೆ. ಹೀಗಾಗಿ ನಿಮ್ಮ ಸಂಗಾತಿಯು ಧನುರಾಶಿ ಅವರಾಗಿದ್ದರೆ, ಯಾವಾಗ ತಂದೆಯಾಗಿ ಹದ್ದುಬಸ್ತು ಇಡಬೇಕೆಂದು ನೀವು ನೆನಪಿಸುತ್ತಾ ಇರಬೇಕು.

ಮಕರ

ಮಕರ ರಾಶಿಯ ತಂದೆಯರು ತಮ್ಮ ಸಂಸಾರವು ಒಂದು ಒಳ್ಳೆಯ, ಧೃಢವಾದ ಪ್ಲಾನ್ ಅನ್ನು ಪಾಲಿಸಬೇಕು ಎಂದು ಇಚ್ಚಿಸುವವರು. ಶ್ರಮಜೀವಿ ಮತ್ತು ನಿಷ್ಠೆಯಿಂದ ಸದಾ ತಮ್ಮ ಮಕ್ಕಳ ಒಳಿತಿಗಾಗಿ ದುಡಿಯುವ ಅಪ್ಪ ಇವರಾಗಿದ್ದು, ಇವರು ಮಕ್ಕಳಿಗೆ ಗದರಿ ತಿಳಿಸುವುದಿಲ್ಲ, ಬದಲಿಗೆ ತಮ್ಮ ಕೆಲಸಗಳಿಂದಲೇ ಮಕ್ಕಳಿಗೆ ಮಾದರಿ ಆಗುತ್ತಾರೆ. ಇವರ ಕೆಟ್ಟ ಅಭ್ಯಾಸ ಎಂದರೆ ಅದು ಜೀವನವನ್ನ ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುವುದು, ಹೀಗಾಗಿ ನಿಮ್ಮ ಸಂಗಾತಿ ಮಕರ ರಾಶಿ ಅವರಾಗಿದ್ದಾರೆ, ಅವರಿಗೆ ಆಗಾಗ ಮೋಜು ಮಾಡಲು ಕೂಡ ನೀವು ಹೇಳಿಕೊಡಬೇಕು.

ಕುಂಭ

ಕುಂಭ ರಾಶಿಯ ತಂದೆಯು ಪ್ರಗತಿ ಹೊಂದುವ ಚಿಂತನೆಗಳು, ಮುಕ್ತ ಮನಸ್ಸು, ಕಲಾತ್ಮಕತೆ ಹೊಂದಿರುತ್ತಾರೆ. ಇವರು ಮಕ್ಕಳಿಗೆ ಪರಿಸರವನ್ನ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಸಮಾಜಮುಖಿ ವಿಷಯದ ಬಗ್ಗೆಯೂ ಹೇಳಿಕೊಡುತ್ತಾರೆ ಆದರೆ ಭಾವನಾತ್ಮಕ ಸನ್ನಿವೇಶಗಳಲ್ಲಿ ತಮ್ಮ ನೋವನ್ನು ಇತರರ ಮುಂದೆ ತೋರಿಸಿಕೊಳ್ಳಬಾರದು ಎಂದು ಅಲ್ಲಿಂದ ಕಾಲು ಕೀಳಬಹುದು. ಹೀಗಾಗಿ ನಿಮ್ಮ ಸಂಗಾತಿಯು ಕುಂಭ ರಾಶಿ ಅವರಾಗಿದ್ದಾರೆ, ಮಕ್ಕಳ ಮುಂದೆ ನಿಮ್ಮ ಭಾವನೆಗಳನ್ನ ವ್ಯಕ್ತ ಪಡಿಸುವುದರಲ್ಲಿ ತಪ್ಪಿಲ್ಲ ಎಂಬುದನ್ನ ತಿಳಿಹೇಳಿ.

ಮೀನ

ಮೀನ ರಾಶಿಯ ತಂದೆಯರು ತಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಕನಸುಗಳನ್ನ ಕಾಣಲು ಪ್ರೋತ್ಸಾಹಿಸುವರು. ಇವರು ತುಂಬಾ ಸ್ನೇಹಜೀವಿ ಮತ್ತು ಮಕ್ಕಳ ಬೇಡಿಕೆಗೆ ಬೇಗ ಶರಣಾಗುವರು. ಇವರು ಕೆಲವೊಮ್ಮೆ ಸೋಮಾರಿಯಂತೆ ಮತ್ತು ತುಂಬಾ ಸಲೀಸಾಗಿ ಸಾಗುವ ವ್ಯಕ್ತಿಯಂತೆ ಕಾಣಬಹುದು. ಆದರೆ ಅದಕ್ಕೆ ಕಾರಣ ಎಂದರೆ, ಮೀನ ರಾಶಿ ಅವರ ಸ್ವಭಾವವೇ ಅದು. ಅಷ್ಟು ಸುಲಭವಾಗಿ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.

ಕಟಕ

ಕಟಕ ರಾಶಿಯ ತಂದೆಯರು ಭಾವನಾತ್ಮಕ ಜೀವಿಗಲಾಗಿರುತ್ತಾರೆ. ಇವರಿಗೆ ಮಕ್ಕಳ ಕಾಳಜಿ, ಪೋಷಣೆ ಮತ್ತು ಮಕ್ಕಳ ಜೊತೆ ಸಮಯ ಕಳೆಯುವುದು ಜವಾಬ್ದಾರಿ ಅಲ್ಲ, ಬದಲಿಗೆ ಮನಸ್ಸಿಗೆ ಇಷ್ಟ ಆಗುವ ಚಟ. ಇವರ ಒಂದು ಕೆಟ್ಟ ಅಭ್ಯಾಸ ಎಂದರೆ ಅದು ವಾದಗಳಲ್ಲಿ ಸೋಲಲು ಇಷ್ಟ ಪಡದೆ ಇರುವುದು ಮತ್ತು ಹಿಡಿದ ಹಠ ಬಿಡದೆ ಇರುವುದು. ಅಲ್ಲದೆ, ಇವರ ಮೂಡ್ ನೋಡಿಕೊಂಡೇ ನೀವು ಮಾತನಾಡಬೇಕು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon