Link copied!
Sign in / Sign up
39
Shares

ಹೀಗೆ ಮಾಡಿದರೆ ನಿಮ್ಮ ಮತ್ತು ನಿಮ್ಮ ಪತಿಯ ನಡುವಿನ ಸಂಬಂಧ ಗಟ್ಟಿಯಾಗುತ್ತದೆ!

ಸಂಸಾರವೆಂದರೆ ಜಗಳ, ಮನಸ್ತಾಪಗಳು ಸಹಜ. ಹಾಗೆಂದ ಮಾತ್ರಕ್ಕೆ ಸಾಂಸಾರಿಕ ಜೀವನೆವೇ ನರಕವೆಂದಲ್ಲ. ದಂಪತಿಗಳಿಬ್ಬರು ಇಬ್ಬರ ಆಗು ಹೋಗುಗಳನ್ನು ಅರ್ಥ ಮಾಡಿಕೊಂಡು ಮುಂದೆ ನಡೆದರೆ ಸಂಸಾರವೆಂಬುದು ಸುಖ ಮಾಯವಾಗಿರುತ್ತದೆ. ಹೊಸದಾಗಿ ಮದುವೆ ಆದ/ಆಗುವ ದಂಪತಿಗಳು ತಮ್ಮ ಸಾಂಸಾರಿಕ ಜೀವನವನ್ನು ಸಂತೋಷದಿಂದ ಮುನ್ನಡೆಸಬೇಕಾದಲ್ಲಿ, ಕೆಳಗೆ ಹೇಳಿರುವ ಸೂತ್ರಗಳನ್ನು ಅನುಸರಿಸಿದರೆ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.


೧. ಕೇಳಿಸಿಕೊಳ್ಳಿ

ನಿಮ್ಮ ಪತಿ/ಪತ್ನಿ ಯಾವುದಾದರು ವಿಷಯವನ್ನು ನಿಮ್ಮ ಬಳಿ ಚರ್ಚಿಸಬೇಕಾದರೆ, ಅವರ ಅಭಿಪ್ರಾಯಗಳನ್ನು ಗೌರವಿಸಿ. ನೀವು ಹೀಗೆ ಮಾಡಿದಲ್ಲಿ ನಿಮ್ಮ ಸಂಗಾತಿಯು ಸಹ ನಿಮ್ಮ ಅಭಿಪ್ರಾಯಗಳು, ಯೋಚನೆಗಳನ್ನು ಗೌರವಿಸುತ್ತಾರೆ. ಇದರಿಂದ ನಿಮ್ಮಿಬರ ಸಂಸಾರ ಮತ್ತಷ್ಟು ಬಲಿಷ್ಠವಾಗುತ್ತದೆ.


೨. ಕ್ಸಮಿಸಿಬಿಡಿ

ಜಗಳ ಆಡದ ದಂಪತಿಗಳಿಲ್ಲ. ಹೀಗೆ ಜಗಳ ಆಡಿದ ಸಂದರ್ಭದಲ್ಲಿ ಒಬ್ಬರನ್ನು ಒಬ್ಬರು ಕ್ಷಮಿಸಿದರೆ, ಜಗಳ ಅಲ್ಲಿಗೆ ಮುಕ್ತಾಯವಾಗಿ ಮನಸ್ಸು ತಿಳಿಯಾಗಿ, ನೆಮ್ಮದಿಯಿಂದ ಬದುಕಬಹುದು. ಸಿಟ್ಟಿನ ಸಮಯದಲ್ಲಿ ಹೀಗೆ ಮಾಡುವುದು ಕಷ್ಟವೆನಿಸಿದರೂ, ಒಂದೆರಡು ಬಾರಿ ಶಾಂತವಾಗಿರುವುದನ್ನು ನೀವು ಅಭ್ಯಸಿಸಿದರೆ, ಕ್ರಮೇಣ ಇದು ಸುಲಭವಾಗಿ ಬರುತ್ತದೆ.


೩. ಕೃತಜ್ಞರಾಗಿರಿ

ನಿಮ್ಮ ಸಂಗಾತಿಗೆ ದಿನದಲ್ಲಿ ಒಂದು ಬಾರಿಯಾದರೂ ಕೃತಜ್ಞತೆ ತಿಳಿಸಿ, ಅದು ಎಷ್ಟು ಚಿಕ್ಕವಿಷಯವಾಗಿದ್ದರು ಸರಿ. ಉದಾ. ಅಡಿಗೆ ಚೆನ್ನಾಗಿದೆ ಎಂದೋ ಅಥವಾ ತಮಗೆ ತಮ್ಮ ಕೆಲಸದಲ್ಲಿ ಸಹಾಯ ಮಾಡಿದ ಚಿಕ್ಕ-ಪುಟ್ಟ ವಿಷಯಗಳಿಗೆ ನೀವು ಕೃತಜ್ಞತೆ ವ್ಯಕ್ತಪಡಿಸುವುದರಿಂದ ನಿಮ್ಮ ದಾಂಪತ್ಯ ಜೀವನ ಮತ್ತಷ್ಟು ಗಟ್ಟಿಯಾಗುತ್ತದೆ.


೪. ಒಬ್ಬರಿಗೊಬ್ಬರು ಸಮಯವನ್ನು ನೀಡಿ

ಇದು ದಂಪತಿಗಳು ಮಾಡಬೇಕಾದ ಅತೀ ಮುಖ್ಯವಾದ ಕೆಲಸವೆಂದರೆ ತಪ್ಪಾಗುವುದಿಲ್ಲ. ಸಂಜೆಯ ಕಾಫಿಯ ವೇಳೆ ನಿಮ್ಮ ಕಷ್ಟ ಸುಖವನ್ನು ಹಂಚಿಕೊಳ್ಳಲು ಒಳ್ಳೆಯ ಸಮಯ. ಇದರಿಂದ ಇಬ್ಬರ ಮನಸ್ಸಿನಲ್ಲಿರುವ ಒತ್ತಡ ದೂರವಾಗಿ, ನಿಮ್ಮ ಮುಂದಿನ ಜೀವನದ ಬಗ್ಗೆ ಹೆಚ್ಚು ಗಮನವಹಿಸಲು ಅನುಕೂಲವಾಗುತ್ತದೆ.


೫. ವಾದ-ವಿವಾದಗಳಿಂದ ದೂರವಿರಿ

ಜಗಳಕ್ಕೆ ಮೊದಲ ಕಾರಣವೆಂದರೆ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಹಾಗು ವಾದ ಮಾಡುವುದು. ಜಗಳದ ಸಮಯದಲ್ಲಿ ಯಾವುದೇ ರೀತಿಯ ವಾದ ವಿವಾದಗಳಿಗೆ ಆಸ್ಪದ ನೀಡದಿರಿ. ಪತಿ/ಪತ್ನಿ ಜಗಳ ಶುರು ಮಾಡಿದಲ್ಲಿ, ನೀವು ಆ ಸಮಯದಲ್ಲಿ ಸುಮ್ಮನೆ ಮೌನ ವಹಿಸಿದರೆ, ಜಗಳ ತಾನಾಗಿಯೇ ನಿಂತು ಹೋಗಿ, ನೀವು ಸದಾ ಸಂತೋಷದಿಂದ ಸಂಸಾರ ಮಾಡಬಹುದು.


೬. ಪ್ರೀತಿ ತೋರಿಸಿ

ಪ್ರೀತಿಯಿಂದ ಗೆಲ್ಲಲಾಗದ ಮನುಷ್ಯನಿಲ್ಲ, ಹಾಗೆಯೇ, ಪ್ರೀತಿಯಿಂದ ನಿಮ್ಮ ಸಂಗಾತಿಯನ್ನು ಗೆಲ್ಲಬಹುದು. ಕೇವಲ ಅವರ ಹುಟ್ಟಿದ ದಿನ ಅಥವಾ ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ ನೀಡದೆ, ಮಾಮೂಲಿ ದಿನಗಳಲ್ಲಿ, ಅವರಿಗೆ ಇಷ್ಟ ಆಗುವ ಹೂವನ್ನು ನೀಡಿದರೆ ಸಾಕು ನಿಮ್ಮ ಸಾಂಸಾರಿಕ ಜೀವನ ಹಸನಾಗಿರುತ್ತದೆ.


೭. ಮಾತನಾಡಿ ಹಾಗು ಹಂಚಿಕೊಳ್ಳಿ

ಜೀವನದಲ್ಲಿ ನೆಮ್ಮದಿಯಿಂದಿರುವ ದಂಪತಿಗಳನ್ನು ನೀವೆಲ್ಲರೂ ನೋಡಿರಬಹುದು. ಅವರಿಬ್ಬರ ಮಧ್ಯೆ ಯಾವುದೇ ರೀತಿಯ ರಹಸ್ಯಗಳಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಇಬ್ಬರು ಮುಕ್ತವಾಗಿ ತಮ್ಮ ತಮ್ಮ ಜೀವನದ ಒಳ್ಳೆಯ ಹಾಗು ಕೆಟ್ಟ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿರುತ್ತಾರೆ. ಆದ್ದರಿಂದ ನೀವು ಕೂಡ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ, ನಿಮ್ಮಿಬರ ಸಂಬಂಧ ಒಡೆಯಲಾಗದಷ್ಟು ಭದ್ರವಾಗಿರುತ್ತದೆ.

ಮೇಲೆ ಹೇಳಿದ ವಿಷಯಗಳನ್ನು, ನಿಮ್ಮ ಜೀವನದಲ್ಲಿ ಅಳವಡಿಸಕೊಳ್ಳುವುದರಿಂದ ನೀವು ನಿಮ್ಮ ಸಂಗಾತಿಯೊಂದಿಗೆ ಸದಾ ಸಂತೋಷಾದ ಕ್ಷಣಗಳನ್ನು ಕಳೆಯಬಹುದು ಎಂದು ಹೇಳುತ್ತಾ, ನಿಮೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯವನ್ನು ಕೋರುತ್ತಿದೇವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon