Link copied!
Sign in / Sign up
4
Shares

ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಪತಿ ಮಾಡಿದ ಅಸಹ್ಯ ಕೃತ್ಯ ಏನು ಗೊತ್ತಾ?!

ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವುದನ್ನ ನಮ್ಮ ಸಮಾಜದಲ್ಲಿ ನಾವು ಪ್ರತಿದಿನ ಕೇಳುತ್ತಲೇ ಇರುತ್ತವೆ, ಇಲ್ಲ ನೋಡುತ್ತಲೇ ಇರುತ್ತವೆ. ಆದರೆ, ಕಳೆದ ಶುಕ್ರವಾರದಂದು ನಡೆದ ಒಂದು ಘಟನೆ ನಾವು ನಿಜಕ್ಕೂ ತಲೆ ತಗ್ಗಿಸುವಂತದ್ದು ಆಗಿದೆ. ಇದು ನಡೆದಿರುವುದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೆನಮಾಲುರು ಎಂಬ ಊರಿನಲ್ಲಿ. ಇಂತಹ ಪಾಪ ಕೃತ್ಯ ನಡೆದಿರುವುದು ಯಾವುದೋ ಅನಾಗರಿಕ ಜನಾಂಗದಲ್ಲಿ ಅಲ್ಲ, ಬದಲಿಗೆ ಒಬ್ಬ ಓದಿಕೊಂಡಿರುವ ಸಾಫ್ಟ್ ವೆರ್ ಉದ್ಯೋಗಿ ಮನೆಯಲ್ಲಿ!


ಈ ಮನೆಯಲ್ಲಿ ಒಂದು ಆಗ ತಾನೇ ಮಗುವಾಗಿದ್ದ ಹೆಣ್ಣಿದ್ದಳು. ಆದರೆ ಆ ಹೆಣ್ಣಿಗೆ ತಾನು ತಾಯಿ ಆದೆ ಎಂದು ಖುಷಿಪಡಲು ಸಿಕ್ಕಿದ್ದು ಕೆಲವೇ ಕ್ಷಣಗಳು. ಏಕೆಂದರೆ ಆಕೆಯ ಗಂಡನು ಎಗ್ಗಿಲ್ಲದೆ ಆಕೆಯನ್ನ ಥಳಿಸುತ್ತಿದ್ದ. ಆಕೆಯ ಪತಿಯ ಹೆಸರು ರಾಜರತ್ನಂ. ಇವರಿಗೆ ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳಾಗಿದ್ದು, ಎರಡು ವರ್ಷದ ಒಂದು ಗಂಡು ಮಗುವಿದೆ. ಪ್ರತಿದಿನ ಗಂಡ ಮನೆಗೆ ಬಂದು ಈಕೆಯ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದದ್ದು ಸಹಜವಾಗಿಬಿಟ್ಟಿತ್ತು. ಮಾನಸಿಕವಾಗಿ ಈ ಹೆಣ್ಣು ಕೂಡ ಅದಕ್ಕೆ ಒಗ್ಗಿಕೊಂಡುಬಿಟ್ಟಿದ್ದಳು.


ಜನವರಿ 28 ರಂದು ಈಕೆ ಇನ್ನೊಂದು ಮಗುವಿಗೆ ಜನ್ಮ ನೀಡಿದಳು. ನವಜಾತ ಶಿಶುವಿನ ಆರೈಕೆಯಲ್ಲಿ ಹೇಗೋ ತನ್ನ ನೋವನ್ನೆಲ್ಲಾ ಮರೆಯುತ್ತಿದ್ದಳು. ಈ ಎರಡನೇ ಮಗುವಾದ ಮೇಲಂತೂ ರಾಜರತ್ನಂ ಕ್ರೌರ್ಯ ಮುಗಿಲು ಮುಟ್ಟಿತ್ತು. ಈಕೆಯನ್ನ ಮತ್ತಷ್ಟು ಹಿಂಸಿಸಲು ಶುರು ಮಾಡಿದ್ದ, ಹೆಚ್ಚು ವರದಕ್ಷಿಣೆ ತರಬೇಕೆಂದು ಕಾಟ ಕೊಡುತ್ತಿದ್ದ.

ಕಳೆದ ಶುಕ್ರವಾರದಂದು ದಿನ ರಾತ್ರಿ ಆಕೆ ಮಲಗಿ ನಿದ್ದೆ ಮಾಡುತ್ತಿರುವಾಗ, ಆಕೆಯ ಕೈಗೆ ಯಾರೋ ಹಗ್ಗ ಕಟ್ಟುತ್ತಿರುವಂತೆ ಆಯಿತು. ಆಕೆ ಎಚ್ಚರಗೊಂಡು ಏನೆಂದು ನೋಡಿದರೆ, ಆಕೆಯ ಪತಿ, ಅಂದರೆ ರಾಜರತ್ನಂ, ಆಕೆಯ ಕೈಗೆ ಒಂದು ಎಲೆಕ್ಟ್ರಿಕ್ ವೈರ್ ಅನ್ನು ಸುತ್ತುತ್ತಿದ್ದ. ಇನ್ನೇನೂ ಸ್ವಿಚ್ ಹಾಕಬೇಕು ಎನ್ನುವಷ್ಟರಲ್ಲಿ ಆಕೆ ಅದನ್ನ ನೋಡಿಕೊಂಡು, ಕೂಗಾಡಿಕೊಂಡು, ಒದ್ದಾಡಿ, ಬಿಡಿಸಿಕೊಂಡಿದ್ದಾಳೆ. ಇವಳು ಹೀಗೆ ಮಾಡಿದ ನಂತರ ಆ ಪತಿರಾಯ ಆಕೆಗೆ ಮತ್ತಷ್ಟು ಹೊಡೆದು, ಬಡಿದು, ಮನೆಯಲ್ಲಿ ಕೂಡಿ ಹಾಕಿ ಹೋಗಿದ್ದಾನೆ. ಆದರೆ, ಅವನು ತನ್ನ ಹೆಂಡತಿಯನ್ನೇ ಹೀಗೆ ಶಾಕ್ ಕೊಟ್ಟು ಸಾಯಿಸಲು ಮುಂದಾಗಿದ್ದು ಏಕೆ ಗೊತ್ತೇ? ಆ ಹೆಣ್ಣು ಮಾಡಿದ ಪಾಪ ಏನು ಗೊತ್ತೇ? ಇನ್ನೊಂದು ಹೆಣ್ಣಿಗೆ ಜನ್ಮ ನೀಡಿದ್ದು!

ಹೌದು ಹೆಣ್ಣು ಮಗು ಹುಟ್ಟಿತು ಎಂಬ ಕೋಪಕ್ಕೆ ಈ ಪತಿರಾಯ ತನ್ನ ಹೆಂಡತಿಯನ್ನೇ ಕೊಲ್ಲಲು ಮುಂದಾಗಿದ್ದ. ಈ ವಿಷಯವನ್ನ ಹೇಗೋ ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿ ಪೊಲೀಸ್ ಸಹಾಯ ಪಡೆದುಕೊಂಡಳು ಇವಳು. ಪೊಲೀಸರು ಪಾಪಿ ಪತಿ ರಾಜರತ್ನಂ ಮತ್ತು ಆತನ ತಂದೆ ತಾಯಿಯ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ. ವಿಚಾರಣೆ ಈಗಾಗಲೇ ಸಾಗಿದೆ. 21ನೇ ಶತಮಾನದಲ್ಲೂ ನಾವು ಇಂತವರ ನಡುವೆ ಬದುಕುತ್ತಿದ್ದೇವೆ ಎಂಬುದೇ ನಮಗೆ ನಾಚಿಕೆ ತರಿಸುವಂತಹ ವಿಷಯ. ನಮ್ಮ ಸಮಾಜದಲ್ಲಿ ಹೆಣ್ಣಾಗಿ ಹುಟ್ಟುವುದೇ ತಪ್ಪೇ? ಹೆಣ್ಣಿಗೆ ಜನ್ಮ ನೀಡುವುದೇ ತಪ್ಪೇ?

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon