Link copied!
Sign in / Sign up
23
Shares

ನಿಮ್ಮ ಸಂಗಾತಿ ನಿಮ್ಮಿಂದ ಏನನ್ನಾದರೂ ಮುಚ್ಚಿಡುತ್ತಿದ್ದರೆ ಹೇಗೆ ಪತ್ತೆಹಚ್ಚುವುದು ?


ನಾವು ಈ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ತುಂಬ ಮುಂದೆ ಹೋಗಿದ್ದೇವೆ, ಇಂಟರ್ನೆಟ್ ನಲ್ಲೆ ಪರಿಚಯ, ಸ್ನೇಹ ಮದುವೇ ವರೆಗೂ ಹೋಗುತ್ತದೆ. ನಮ್ಮ ದಿನದ ಎಷ್ಟೋ ಸಮಯವನ್ನು ನಾಮವು ಇಂಟರ್ನೆಟ್ನಲ್ಲಿ, ಚಾಟಿಂಗ್ ನಲ್ಲಿ ಕಳೆಯುತ್ತೇವೆ, ಇಂತಹ ಕಾಲದಲ್ಲಿ ನಿಮ್ಮ ಸಂಗಾತಿ ಬೇರೆ ವ್ಯಕ್ತಿಜೊತೆ ಗೆ ಹತ್ತಿರವಾಗಿದ್ದರೆ ಅಥವಾ ಇಂಟರ್ನೆಟ್ ಬಿಟ್ಟು ಬೇರೆ ಕಡೆ ಇಂದ ಪರಿಚಯ ಕೂಡ ಆಗಿರಬಹುದು, ಅಂತಹ ಸನ್ನಿವೇಶದಲ್ಲಿ ನೀವು ಮೋಸ ಹೋಗಬಹುದು, ನಿಮ್ಮ ಸಂಗಾತಿ ನಿಮಗೆ ಮೋಸಮಾಡುತ್ತಿದ್ದರೆ, ಅಥವಾ ನಿಮಗೆ ಸಂಶಯವಿದ್ದರೆ ಅದನ್ನು ಹೇಗೆ ಪತ್ತೆಹಚ್ಚುವುದೆಂದು ನಾವು ಈ ಕೆಳಗೆ ತಿಳಿಸಿದ್ದೇವೆ.

ಮುಖಕ್ಕೆ ಮುಖ ಕೊಟ್ಟು ಮಾತನಾಡುವುದಿಲ್ಲ

ನಿಮ್ಮ ಸಂಗಾತಿ  ಬೇರೆಯವರ ಬಲೆಗೆ ಸಿಲುಕಿದ್ದಾರೆ ಅಂತಹವರು ನಿಮ್ಮಜೊತೆ ಕಣ್ಣಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ಅವರು ತಮ್ಮ ಭಾವನೆಗಳನ್ನು ಒಳಗೆ ನುಂಗಲು ಪ್ರಯತ್ನಿಸುತ್ತಾರೆ, ಅವರಿಗೆ ಅವರು ಮಾಡುತ್ತಿರುವ ತಪ್ಪು ಕಾಣಿಸುತ್ತದೆಂಬ ಭಯ ಕಾಡುತ್ತದೆ.

ಉಡುಗೆ ತೊಡುಗೆಗಳಲ್ಲಿ ಅನಿರೀಕ್ಷಿತ ಬದಲಾವಣೆ

ನಿಮ್ಮ ಸಂಗಾತಿಯ ತಮ್ಮ ದೇಹ ಸೌಂದರ್ಯವನ್ನು ಹಠಾತ್ ಆಗಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಅಥವಾ ಅವರ ಉಡುಗೆ ತೊಡುಗೆ ಬೇರೆಯವರನ್ನು ಮೆಚ್ಚಿಸಲು ಹಾಕಿಕೊಂಡಂತಿದ್ದರೆ ಅವರಕಡೆ ಗಮನವಿಡಿ. ಅವರು ಯಾರನ್ನೋ ಮೆಚ್ಚಿಸಲು ಹಠಾತ್ ಆಗಿ ತಮ್ಮ ಚಹರೆಯನ್ನು ಬದಲಾಯಿಸಿಕೊಳ್ಳುತ್ತಿರಬಹುದು.

ನಿಮಗೆ ಹಠಾತ್ ಆಗಿ ಅತೀ ಪ್ರೀತಿತೋರಿಸುವುದು

ನಿಮ್ಮ ಸಂಗಾತಿ ನಿಮಗೆ ಅನಿರೀಕ್ಷಿತ ಗಿಫ್ಟ್ಸ್ ಗಳಿಂದ ಹೋಟೆಲ್ ನಲ್ಲಿ ಭೋಜನ ಹೀಗೆ ನಿಮ್ಮನ್ನು ತೃಪ್ತಿ ಪಡಿಸಲು ಪ್ರಯತ್ನಿಸಬಹುದು. ನಿಮಗೆ ಅವರ ಬೇರೆ ವಿಷಯಗಳು ಗೊತ್ತಾಗದಿರಲಿ ಎಂದು ಅವರು ಹೀಗೆ ಮಾಡಬಹುದು.

ಬ್ಯುಸಿ ಆಗಿರುವುದು

ನಿಮ್ಮ ಸಂಗಾತಿ ಏನು ಕಾರಣ ತಿಳಿಸದೆ ಅಥವಾ ಬ್ಯುಸಿ ಆಗಬಹುದು. ಮನೆಯಲ್ಲಿದ್ದಾಗ ಆಫೀಸಿ ಕೆಲಸದಲ್ಲಿ ತೊಡಗುವುದು ಮತ್ತು ರಜಾ ದಿನಗಳಲ್ಲಿ ಬೇರೆ ಕಾರಣಗಳಿಗೆ ಹೊರಹೋಗುವುದು.

ಫೋನ್ ಬಳಸುವ ರೀತಿ ಚೇಂಜ್ ಆಗುವುದು

ನಿಮ್ಮ ಸಂಗತಿ ಯಾವಾಗಲು ಫೋನ್ ಬಳಸುತ್ತಿದ್ದರೆ ಮತ್ತು ಅವರ ನಡುವಳಿಕೆ ಬದಲಾಗುತ್ತಿದ್ದರೆ, ಫೋನ್ ಅನ್ನು ನಿಮಗೇ ಬಳಸಲು ಅಥವಾ ಸಂದೇಶಗಳನ್ನು ನಿಮಗೆ ತೋರಿಸದಿದ್ದರೆ, ಫೋನ್ ಲಾಕ್ ನಿಮಗೆ ಗೊತ್ತಿಲ್ಲದೇ ಚೇಂಜ್ ಮಾದಿದ್ದರೆ ನೀವು ನಿಮ್ಮ ಸಂಗಾತಿಯ ಮೇಲೆ ಒಂದು ಕಣ್ಣಿಡುವುದು ಒಳ್ಳೆಯದು.

ಇವು  ಕೇವಲ  ಉದಾಹರಣೆಗಳಷ್ಟೇ ...

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon