Link copied!
Sign in / Sign up
3
Shares

ಅತ್ಯುತ್ತಮ ಲೈಂಗಿಕ ಪರಾಕಾಷ್ಠೆ ಹೊಂದಲು ತಿಂಗಳ ಸೂಕ್ತ ಸಮಯ ಯಾವುದು?! ಇಲ್ಲಿದೆ ಓದಿ!

ಬಹಳಷ್ಟು ಅಂಶಗಳು (ಒತ್ತಡ, ವೃತ್ತಿ, ಮಾನಸಿಕ ಅರೋಗ್ಯ ಹಾಗು ಇತರೆ) ನಮ್ಮ ಲೈಂಗಿಕ ಇಂಗಿತದ ಮೇಲೆ ಪ್ರಭಾವ ಬೀರಿದರು, ನಮ್ಮ ಋತುಚಕ್ರವೇ ಎಲ್ಲದಕ್ಕಿಂತಾ ಮುಖ್ಯ ಆಟಗಾರ. ಹೌದು ಈ ಋತುಚಕ್ರವು ಮತ್ತು ತಿಂಗಳ “ಆ ದಿನಗಳು” ನಿಮ್ಮ ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸ್ಮ್) ಮೇಲೆ ಪ್ರಭಾವ ಬೀರುತ್ತವೆ. ವೈಜ್ಞಾನಿಕ ಸಂಶೋಧಕರು ತಿಂಗಳ ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ನೀವು ಅತ್ಯುತ್ತಮ ಲೈಂಗಿಕ ಪರಾಕಾಷ್ಠೆ ಎಂದರೆ ಅತ್ಯುತ್ತಮ ಲೈಂಗಿಕ ಪರಾಕಾಷ್ಠೆ ಹೊಂದುತ್ತೀರೆಂದು ಕಂಡು ಹಿಡಿದಿದ್ದಾರೆ.

ಯಾವ ಸಮಯದಲ್ಲಿ ಲೈಂಗಿಕ ಪರಾಕಾಷ್ಠೆ ಅತ್ಯುತ್ತಮ ಅನುಭವ ನೀಡುತ್ತವೆ?

ನಿಮ್ಮ ಋತುಚಕ್ರದೊಂದಿಗೆ ಬದಲಾಗುವ ಹಾರ್ಮೋನ್ ಗಳೇ ನಿಮ್ಮ ಲೈಂಗಿಕ ಆಸಕ್ತಿ ಮೇಲೆ ಪ್ರಭಾವ ಬಿರುವಂತವು. ಅವುಗಳೆಂದರೆ - ಈಸ್ಟ್ರೋಜೆನ್ (ಮಾಡಜನಕ) ಮತ್ತು ಪ್ರೊಜೆಸ್ಟರಾನ್. ಕೆಲವು ಹೆಂಗಸರು ತಮ್ಮ ಅಂಡೋತ್ಪತ್ತಿಯ ದಿನದ (ಸಹಜವಾಗಿ ನಿಮ್ಮ ಪಿರಿಯಡ್ ಆಗುವ ದಿನಕ್ಕಿಂತ 10-14 ದಿನಗಳ ಮುಂಚೆ) ಹತ್ತಿರ ಬರುತ್ತಿದ್ದಂತೆ ಲೈಂಗಿಕ ಇಂಗಿತ ಹೆಚ್ಚಾಗುತ್ತದೆ ಎಂದು ಹಾಗು ಅಂಡೋತ್ಪತ್ತಿ ದಿನದ ನಂತರ ಅದು ಕಡಿಮೆ ಆಗುತ್ತಾ ಹೋಗುತ್ತದೆ ಎಂದು ತಿಳಿಸುತ್ತಾರೆ.

ಸರಳವಾಗಿ ಹೇಳಬೇಕೆಂದರೆ ನೀವು ಗರಿಷ್ಟ ಲೈಂಗಿಕ ಇಂಗಿತ ಅನುಭವಿಸುವುದು ನೀವು ಅಂಡೋತ್ಪತ್ತಿ ಮಾಡುವ ದಿನದ ಮುಂಚಿನ ಕೆಲವು ದಿನಗಳಲ್ಲಿ. ಸೂಕ್ಷ್ಮತೆ ಬಗ್ಗೆ ಹೇಳಬೇಕೆಂದರೆ, ಕೆಲವರು ಈ ಸಮಯದಲ್ಲೇ ತಮ್ಮ ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸ್ಮ್ ) ಇಂದ ಅತಿಹೆಚ್ಚು ತೃಪ್ತಿ ಹೊಂದುತ್ತಾರೆ ಮತ್ತು ಲೈಂಗಿಕ ಕ್ರಿಯೆಯ ವೇಳೆ ಇನ್ನಷ್ಟೂ ಪ್ರಚೋದನೆಗೆ ಒಳಗಾಗುತ್ತಾರೆ.

ಅತ್ಯಂತ ಕೆಟ್ಟ ಸಮಯ ಯಾವುದು?

ಹೆಂಗಸರ ಲೈಂಗಿಕ ಇಂಗಿತವು ಅವರ ಋತುಚಕ್ರದ ದ್ವಿತೀಯ ಅರ್ಧಧಲ್ಲಿ (ಋತುಚಕ್ರದ 14-28ನೇ ದಿನಗಳು) ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದಕ್ಕೆ ಕಾರಣ ಪ್ರೊಜೆಸ್ಟರಾನ್ ಹಾರ್ಮೋನ್ ಅಲ್ಲಿನ ಹೆಚ್ಚಳ.

ಅಂಡೋತ್ಪತ್ತಿಯು ಮತ್ತೆ ಯಾವುದರ ಮೇಲೆ ಪ್ರಭಾವ ಬೀರುತ್ತದೆ?

ಒಂದು ಸಣ್ಣ ಅಧ್ಯಯನವು ಅಂಡೋತ್ಪತ್ತಿಯು ಜನರು ಯಾವ ರೀತಿಯ ಸೆಕ್ಸ್ ಅನ್ನು ಬಯಸುತ್ತಾರೆ ಎನ್ನುವುದರ ಮೇಲೆಯೂ ಪ್ರಭಾವ ಬೀರುತ್ತದೆ ಎಂದು ತಿಳಿಸಿದೆ. ಅಂಡೋತ್ಪತ್ತಿಯ ದಿನದ ಸಮೀಪದ ಸಮಯದಲ್ಲಿ ಹೆಂಗಸರು ಮೌಖಿಕ ಲೈಂಗಿಕತೆಗಿಂತ ಹೆಚ್ಚು ಸಂಭೋಗ ಒಳಗೊಂಡ ಸೆಕ್ಸ್ ಅನ್ನು ಬಯಸುತ್ತಾರೆ ಎಂದು ತಿಳಿದು ಬಂದಿದೆ.

ನೆನಪಿಡಬೇಕಾದ ವಿಷಯ

ನಿಖರವಾಗಿ ಹೇಗೆ ಈ ಹಾರ್ಮೋನ್ ಗಳು ನಿಮ್ಮ ಆಸಕ್ತಿ ಮೇಲೆ ಮತ್ತು ನಿಮ್ಮ ಆದ್ಯತೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆ ಆಗಿರಬಹುದು. ಎಲ್ಲರೂ ತಮ್ಮ ಅಂಡೋತ್ಪತ್ತಿ ದಿನದ ಹತ್ತಿರವಾದಂತೆ ಗರಿಷ್ಟ ಲೈಂಗಿಕ ಇಂಗಿತ ಹೊಂದುತ್ತಾರೆ ಎಂದಲ್ಲ. ನೀವು ಎಷ್ಟು ಲೈಂಗಿಕ ಪ್ರಚೋದನೆ ಹೊಂದುತ್ತೀರಾ ಎಂಬುದು ಬಹಳಷ್ಟು ಸಂಕೀರ್ಣವಾದ ಅಂಶಗಳ ಮೇಲೆ ಆಧಾರಿತವಾಗಿರುತ್ತದೆ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon