Link copied!
Sign in / Sign up
3
Shares

ಗರ್ಭಾವಸ್ಥೆಯಲ್ಲಿ ಪಾನಿ ಪೂರಿ ತಿನ್ನುವುದು ಎಷ್ಟು ಸುರಕ್ಷಿತ?

ಸಿಹಿ, ಹುಳಿ ಮತ್ತು ಮಸಾಲೆಯುಕ್ತವಾದ ರುಚಿಯಾದ ತಿಂಡಿಗಳನ್ನು ಯಾರು ಇಷ್ಟಪಡುವುದಿಲ್ಲ? ಅಂತಹ ರುಚಿಯನ್ನು ಭಾರತೀಯ ತಿಂಡಿ ತಿನಿಸುಗಳಾದ ಚ್ಯಾಟ್ಸ್, ಆಲೂ ಟಿಕ್ಕಿ, ಪಾನಿ ಪುರಿ, ಪಕೋಡ, ಭೆಲ್ ಪುರಿ, ಭುಜಿಯಾ, ಇತ್ಯಾದಿ ಸ್ಟ್ರೀಟ್ ಫುಡ್ ನೀಡುತ್ತವೆ. ತಲತಲಾಂತರದಿಂದ ಇವುಗಳು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡು ಬಂದಿವೆ. ಮಾರುಕಟ್ಟೆಯಲ್ಲಿ ನಮಗೆ ಸಾಕಷ್ಟು ಪ್ರಲೋಭನಗೊಳಿಸುವ ಆಯ್ಕೆಗಳಿವೆ. ಆದ್ದರಿಂದ ಇಂತಹ ತಿಂಡಿ ತಿನಿಸುಗಳನ್ನು ಗರ್ಭಾವಸ್ಥೆಯಲ್ಲಿ ಬಯಸುವುದು ಸಹಜ. ಆದರೆ ಗರ್ಭಾವಸ್ಥೆಯಲ್ಲಿ ಪಾನಿ ಪುರಿ ರೀತಿಯ ಜಂಕ್ ಆಹಾರವನ್ನು ಸೇವಿಸುವುದು ಸುರಕ್ಷಿತವೇ? ಜಂಕ್ ಆಹಾರದ ಪರಿಣಾಮಗಳು ಯಾವುವು? ನೀವು ತಿಳಿಯಬೇಕಾದ ವಿಷಯಗಳು ಇಲ್ಲಿವೆ.

ಪರಿವಿಡಿ:

೧. ಪಾನಿ ಪುರಿ ಎಂದರೇನು?

೨. ಪಾನಿ ಪುರಿಯನ್ನು ತಯಾರಿಸುವುದು ಹೇಗೆ?

೩. ಗರ್ಭಾವಸ್ಥೆಯ ಸಮಯದಲ್ಲಿ ಪಾನಿ ಪುರಿ ಸುರಕ್ಷಿತವೇ?

೪. ಗರ್ಭಾವಸ್ಥೆಯಲ್ಲಿ ಸ್ಟ್ರೀಟ್ ಫುಡ್ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡದಂತೆ ಹೇಗೆ ಸಂರಕ್ಷಿಸಿಕೊಳ್ಳಬೇಕು?

ಪಾನಿ ಪುರಿ ಎಂದರೇನು?

ಗೋಲ್-ಗಪ್ಪಾ ಎಂದೂ ಕರೆಯಲಾಗುವ ಪಾನಿ ಪುರಿ ಭಾರತೀಯ ಆಹಾರದ ರುಚಿಕರವಾದ, ಕುರುಕಲಾಗಿರುವ, ಮಸಾಲೆಭರಿತ ತನಿಸು.

ಪಾನಿ ಪುರಿಯನ್ನು ಸ್ವಾದಿಷ್ಟವಾದ ಇಮ್ಲಿ ಪಾನಿ, ಹುಣಸೆಹಣ್ಣಿನ ಚಟ್ನಿ, ಚಾಟ್ ಮಸಾಲ, ಕಡಲೆ ಹಾಗೂ ಆಲೂವನ್ನು ಪುರಿಯಲ್ಲಿ ತೊಂಬಿಸಿ ಸೇವಿಸಲಾಗುತ್ತದೆ. “ಪಾನಿ” ಎಂಬುದು ಹಿಂದಿ ಪದವಾಗಿದ್ದು, ನೀರು ಎಂಬರ್ಥ ನೀಡುತ್ತದೆ.

ಪಾನಿ ಪುರಿ ಅಥವಾ ಗೋಲ್-ಗಪ್ಪಾಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.

ಹರಿಯಾಣ ರಾಜ್ಯ - ಪಾನಿ ಕೆ ಕತಾಷೆ

ಮಧ್ಯ ಪ್ರದೇಶ - ಫುಲ್ಕಿ

ಉತ್ತರ ಪ್ರದೇಶ - ಗೋಲ್-ಗಪ್ಪಾ

ವೆಸ್ಟ್ ಬಂಗಾಳ, ಅಸ್ಸಾಂ, ಬಾಂಗ್ಲಾದೇಶ, ನೇಪಾಳ - ಪುಚ್ಕ

ಒಡಿಶಾ - ಗುಪ್-ಚುಪ್

ಗುಜರಾತ್ - ಪಕೋಡಿ

ಬಿಹಾರ್, ಜಾರ್ಖಂಡ್, ಛತ್ತೀಸಘರ್ - ಗುಪ್-ಚುಪ್

ಆದರೆ ಪುಚ್ಕ ಪಾನಿ ಪುರಿಯಿಂದ ಸ್ವಲ್ಪ ಭಿನ್ನವಾಗಿರುತ್ತದೆ. ಅವುಗಳೊಳಗಿರುವ ಅಂಶ ಹಾಗೂ ಅವುಗಳ ರುಚಿಗಳಲ್ಲಿ ವ್ಯತ್ಯಾಸವಿರುತ್ತದೆ. ಪುಚ್ಕಾದ ರುಚಿ ಕಟುವಾಗಿಯೂ, ಹುಲಿ ಮತ್ತು ಮಸಾಲೆಯುಕ್ತವಾಗಿಯೂ ಇರುತ್ತದೆ.

ಪಾನಿ ಪುರಿಯಲ್ಲಿ ಕ್ಯಾಲೊರಿಗಳು ಹೆಚ್ಚು. ಪಾನಿ ಪುರಿಯ (6 ಪುರಿಗಳು) ಪ್ರತಿಯೊಂದು ಪ್ಲೇಟ್ 475 ಕ್ಯಾಲರಿಗಳನ್ನು ಮತ್ತು 12.5 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ.

[Back To Top]

ಪಾನಿ ಪುರಿಯನ್ನು ತಯಾರಿಸುವುದು ಹೇಗೆ?

ಪಾನಿ ಪುರಿಯ ಪುರಿಗಳು ಯಾವುದೇ ಭಾರತೀಯ ಅಂಗಡಿಯಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಇಲ್ಲವೇ ನಿಮಗೆ ಮನೆಯಲ್ಲೇ ಮಾಡುವ ಸಂಯಮವಿದ್ದರೆ ಇಂಟೆರ್-ನೆಟ್-ನಲ್ಲಿ ಸುಲಭವಾದ ಪಾನಿ ಪುರಿ ತಯಾರಿಸುವ ವಿಧಾನವನ್ನು ಓದಿ ತಿಳಿದುಕೊಂಡು ಮಾಡಬಹುದು.

ಪಾನಿ ತಯಾರಿಸುವ ವಿಧಾನ:

ಬೇಕಾಗುವ ಸಾಮಗ್ರಿಗಳು: ಪುದೀನಾ ಎಲೆಗಳು, ಕೊತ್ತಂಬರಿ, ಹುಣಿಸೇಹಣ್ಣು, ಶುಂಠಿ, ಹಸಿರು ಮೆಣಸಿನಕಾಯಿ, ಜೀರಿಗೆ ಪುಡಿ, ಕಪ್ಪು ಉಪ್ಪು, ಸಾಧಾರಣ ಉಪ್ಪು, ಬೆಲ್ಲ.

ವಿಧಾನ:

ಹುಣಸೆಹಣ್ಣನ್ನು ಅರ್ಧಗಂಟೆಯ ಕಾಲ ನೆನಸಿಡಿ. ನಂತರ ಆ ನೆನೆಸಿಟ್ಟ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದಿಡಿ.

ಕಪ್ಪು ಉಪ್ಪು ಹೊರತುಪಡಿಸಿ, ಉಳಿದೆಲ್ಲ ಸಾಮಗ್ರಿಗಳನ್ನು (ಹುಣಸೆಹಣ್ಣಿನ ತಿರುಳನ್ನೂ ಸೇರಿಸಿ) ಮಿಕ್ಸರ್ನಲ್ಲಿ ಹಾಕಿ ತಯಾರಿಸಿಕೊಳ್ಳಿ.

ಆ ರೀತಿ ತಯಾರಿಸಿದ ಪೇಸ್ಟ್-ನೊಂದಿಗೆ ನೀರು, ಕಪ್ಪು ಉಪ್ಪು ಮತ್ತು ಉಪ್ಪು ಸೇರಿಸಿರಿ. ಅಲ್ಲಿಗೆ ಪಾನಿ ಸಿದ್ಧ.

ಗರ್ಭಾವಸ್ಥೆಯಲ್ಲಿ ಎದೆಯುರಿ ಸಾಮಾನ್ಯವಾಗಿದ್ದು, ಮಸಾಲೆಯುಕ್ತ ಆಹಾರವು ಎದೆಯುರಿಯನ್ನು ಪ್ರಚೋದಿಸಬಹುದು. ಹಾಗಾಗಿ, ಪಾನಿಯಲ್ಲಿ ಮಸಾಲೆ ಮಟ್ಟವನ್ನು ಸಮತೋಲನ ಮಾಡಲು ನೀವು ಬೆಲ್ಲವನ್ನು ಸೇರಿಸಬಹುದು.

ಪುರಿಯೊಳಗೆ ತುಂಬುವ ಪದಾರ್ಥವನ್ನು ತಯಾರಿಸುವುದು:

ಒಂದು ಬಟ್ಟಲಿನಲ್ಲಿ, ಬೇಯಿಸಿದ ಆಲೂಗಡ್ಡೆ, ಕಾಲಾ ಚನ್ನಾ (ಕಡಲೆ), ಮೆಣಸಿನ ಪುಡಿ, ಚಾಟ್ ಮಸಾಲ,ಜೀರಿಗೆ-ಕೊತ್ತಂಬರಿ ಪುಡಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಹಾಕಿ, ಕಲಸಿಟ್ಟುಕೊಳ್ಳಿ. ಹಾಗೆ ಕಲಸಿಟ್ಟ ಮಿಶ್ರಣ ಪಾನೀಪುರಿಯಲ್ಲಿ ತುಂಬುವುದಕ್ಕಿ ಸಿದ್ಧ.

ಹೇಗೆ ಸೇವಿಸಬೇಕು?

ಪುರಿಯನ್ನು ತಯಾರಿಸಿರಿವ ಮಿಶ್ರಣದಿಂದ ತುಂಬಿ, ಅದನ್ನು ಪಾನಿಯದಲ್ಲಿ ಮುಳುಗಿಸಿ, ಸವಿಯಿರಿ.

ಗರ್ಭಾವಸ್ಥೆಯ ಸಮಯದಲ್ಲಿ ಪಾನಿ ಪುರಿ ಸುರಕ್ಷಿತವೇ?

ಪಾನಿ ಪುರಿ ನಿಮಗೆ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಎಷ್ಟು ಸುರಕ್ಷಿತ? ಅದನ್ನು ಗರ್ಭಾವಸ್ಥೆಯ ಸಮಯದಲ್ಲಿ ಸೇವಿಸಬಹುದೇ ಅಥವಾ ಅದನ್ನು ತಿನ್ನದೇ ಇರುವುದು ಸೂಕ್ತವೇ? ಇಲ್ಲಿದೆ ಆ ಪ್ರಶ್ನೆಗಳಿಗೆ ಉತ್ತರ.

ಗರ್ಭಾವಸ್ಥೆಯಲ್ಲಿ ಚ್ಯಾಟ್ ಅಥವಾ ಸ್ಟ್ರೀಟ್ ಫುಡ್-ಗಳನ್ನು ಸೇವಿಸುವುದರ ಬಗ್ಗೆ ನಿಷೇಧವಿಲ್ಲ. ಆದರೆ ನೀವು ಏನು ತಿನ್ನಬೇಕು ಮತ್ತು ನೀವು ಎಲ್ಲಿ ತಿನ್ನಲು ಬಯಸುತ್ತೀರಿ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಪಾನಿ ಪುರಿ ಅಸುರಕ್ಷಿತವಲ್ಲ. ಆದರೆ ಆರೋಗ್ಯಕ್ಕೆ ತೊಂದರೆ ನೀಡಬಹುದಾದ ವಿಷಯವೆಂದರೆ ಪಾನಿ ಪುರಿಯ ಅಂಗಡಿಗಳಲ್ಲಿ ಇಟ್ಟಿರುವ ಅಶುಚಿಯಾದ ನೀರು. ಅದರಿಂದ ಗರ್ಭಾವಸ್ಥೆಯಲ್ಲಿ ಹೊಟ್ಟೆ ನೋವು ಅಥವಾ ಎದೆಯುರಿ ಮುಂತಾದ ಹಾನಿಕಾರಕ ಪರಿಣಾಮಗಳನ್ನು ನೀವು ಎದುರಿಸಬೇಕಾಗಬಹುದು.

ಗರ್ಭಾವಸ್ಥೆಯಲ್ಲಿ ತಾಯಿಯ ದೇಹವು ದುರ್ಬಲಗೊಂಡಿರುತ್ತದೆ. ಆದ್ದರಿಂದ ಆಕೆಗೆ ಯಾವುದೇ ರೀತಿಯ ಸೋಂಕುಗಳು ಅಥವಾ ಅರೋಗ್ಯ ತೊಂದರೆಗಳು ಕಾಡುವುದು ಸಹಜ. ಆಹಾರದಲ್ಲಿರುವ ಚಿಕ್ಕಪುಟ್ಟ ವಿಷದ ಅಂಶಗಳೂ ದೊಡ್ಡ ಪ್ರಮಾಣದಲ್ಲಿ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಅಡರೊಂದಿಗೆ, ಪಾನಿ ಪುರಿ ಮಸಾಲೆಭರಿತವಾಗಿರುವುದರಿಂದ ಆಸಿಡ್ ರಿಫ್ಲಕ್ಸ್, ಎದೆಯುರಿಯಂತಹ ತೊಂದರೆಗಳೂ ಎದುರಾಗಬಹುದು. ಈ ರೀತಿಯ ಯಾವುದಾದರೂ ಸೋಂಕುಗಳು ನಿಮಗೆ ಕಾಡತೊಡಗಿದರೆ, ಔಷಧಿ ಸೇವನೆ ಅನಿವಾರ್ಯವಾಗುತ್ತದೆ. ಅತಿಯಾದ ಔಷಧಿ ಸೇವನೆಯಿಂದ ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಬೀದಿಯಲ್ಲಿ ನಿಂತು ಪಾನಿಪುರಿಯನ್ನು ತಿನ್ನುವುದನ್ನು ತಡೆಗಟ್ಟುವುದು ಉತ್ತಮ.

ಆದಾಗ್ಯೂ ನಿಮ್ಮ ಬಯಕೆಗಳನ್ನು ತೀರಿಸಿಕೊಳ್ಳುವ ಆಸೆ ಇದ್ದರೆ, ಈ ಸ್ಟ್ರೀಟ್ ಫುಡ್-ಅನ್ನು ಮನೆಯಲ್ಲೇ ತಯಾರಿಸುವುದು ಸೂಕ್ತ. ಮೇಲೆ ನೀಡಿರುವ ಪಾನಿ ಪುರಿ ತಯಾರಿಸುವ ವಿಧಾನವನ್ನು ಅನುಕರಿಸಿ, ನಿಮ್ಮ ನೆಚ್ಚಿನ ತಿನಿಸಾದ ಪಾನೀಪುರಿಯನ್ನು ಸಿದ್ಧಪಡಿಸಬಹುದು. ಈ ರೀತಿ ಮನೆಯಲ್ಲೇ ಪಾನಿ ಪುರಿಯನ್ನು ತಯಾರಿಸುವುದರಿಂದ ಆ ಆಹಾರವನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ರುಚಿಯನ್ನು, ಉಪಯೋಗಿಸುವ ಸಾಮಗ್ರಿಗಳನ್ನು ಬದಲಾಯಿಸಬಹುದು.

[Back To Top]

ಗರ್ಭಾವಸ್ಥೆಯಲ್ಲಿ ಸ್ಟ್ರೀಟ್ ಫುಡ್ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡದಂತೆ ಹೇಗೆ ಸಂರಕ್ಷಿಸಿಕೊಳ್ಳಬೇಕು?

ಜಂಕ್ ಫುಡ್-ನಿಂದ ಆರೋಗ್ಯಕ್ಕೆ ಆಗುವ ಹಾನಿ ಸುಮಾರು. ಆದರೆ, ಪಾನಿ ಪುರಿಯಿಂದ ಯಾವುದೇ ಅಪಾಯಕಾರಿ ಪರಿಣಾಮಗಳಿಲ್ಲ. ಗರ್ಭಾವಸ್ಥೆಯ ಸಮಯದಲ್ಲಿ ಈ ತಿನಿಸನ್ನು ತಿನ್ನುವುದರಿಂದ ಕೆಡಕಿಲ್ಲದಿದ್ದರೂ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಗರ್ಭಾವಸ್ಥೆಯಲ್ಲಿ ಮನೆ ಅಡಿಗೆ ಅಥವಾ ಆಹಾರ ಆರೋಗ್ಯಕ. ಆದರೆ ನೀವು ಸ್ಟ್ರೀಟ್ ಫುಡ್ ಗೆ ಹಂಬಲಿಸುತ್ತಿದ್ದರೆ, ಇಲ್ಲಿದೆ ಸೂಕ್ತ ಸಲಹೆಗಳು.

೧. ಪಾನಿ ಪುರಿ ತಿನ್ನಲು ಸ್ವಚ್ಛ ಮತ್ತು ಆರೋಗ್ಯಕರ ಸ್ಥಳ ಯಾವುದೆಂದು ಪತ್ತೆಹಚ್ಚಿ. ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಶಿಫಾರಸ್ಸನ್ನು ಪಡೆದು ಅಥವಾ ಅಂತರ್ಜಾಲದಲ್ಲಿ ಹುಡುಕಿ ಅಥವಾ ಆ ಸ್ಥಳಗಳ ಬಗ್ಗೆ ಬರೆದಿರುವ ವಿಮರ್ಶೆಗಳನ್ನು ಪರಿಶೀಲಿಸಿ, ಪಾನೀಪುರಿಯನ್ನು ತಿನ್ನಲು ಒಳ್ಳೆಯ ಸ್ಥಳವನ್ನು ಹುಡುಕಿ. ಈ ರೀತಿಯ ಒಳ್ಳೆಯ ವಿಮರ್ಶೆ ಹೊಂದಿರುವ ಸ್ಥಳಗಳಲ್ಲಿ ಸಾಮಾನ್ಯವಾಗಿ ಶುದ್ಧ ಹಾಗೂ ಆರೋಗ್ಯಕರವಾಗಿರುತ್ತವೆ.

೨. ಆಹಾರವನ್ನು ಹೊಟ್ಟೆ ತುಂಬಾ ತಿನ್ನುವ ಮೊದಲು ಆಹಾರವನ್ನು ಪರೀಕ್ಷಿಸುವುದು ಒಳ್ಳೆಯದು. ಸ್ಥಳ ಹೊಸದಾದರೆ, ಮೊದಲು ಸ್ವಲ್ಪವೇ ಆಹಾರವನ್ನು ಸೇವಿಸಿ, ಪರೀಕ್ಷಿಸಿ. ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗದಿದ್ದರೆ, ಆ ಸ್ಥಳದಲ್ಲಿ ಆಗಾಗ ತಿನ್ನುವುದು ಮುಂದುವರಿಸಬಹುದು.

೩. ಕಲುಷಿತ ನೀರು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ಹಾಗಾಗಿ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಬೀದಿಯಲ್ಲಿ ನಿಂತು ತಿನಿಸುಗಳನ್ನು ಮಾರುವವರ ಬಳಿ ನೀರು ಸೇವಿಸುವುದಕ್ಕಿಂತ ಮನೆಯಿಂದ ಹೊರಬರುವಾಗ ಸ್ವಂತ ನೀರಿನ ಬಾಟಲಿಯನ್ನು ತರುವುದು ಒಳ್ಳೆಯದು.

4. ಬೇಯಿಸದ ಆಹಾರವನ್ನು ಅಥವಾ ಭಾಗಶಃ ಬೇಯಿಸಿದ ಆಹಾರವನ್ನು ಅಥವಾ ಕಚ್ಚಾ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಏಕೆಂದರೆ ಇಂತಹ ಆಹಾರಗಳು ಸೂಕ್ಷ್ಮಾಣುಜೀವಿಗಳ ಸಂತಾನೋತ್ಪತ್ತಿಗೆ ಅಗತ್ಯವಿರುವ ಎಲ್ಲಾ ಪರಿಸರವನ್ನು ಒದಗಿಸುತ್ತವೆ. ಈ ರೀತಿಯ ಸೂಕ್ಷ್ಮಜೀವಿಗಳು ಆರೋಗ್ಯದಲ್ಲಿ ಏರುಪೇರು ಉಂಟುಮಾಡಿ, ತೀವ್ರವಾದ ಭೇದಿ ಮತ್ತು ವಾಂತಿಗೆ ಕಾರಣವಾಗಬಹುದು. ಆದ್ದರಿಂದ, ಕತ್ತರಿಸಿಟ್ಟಿರುವ ಹಣ್ಣುಗಳು, ತರಕಾರಿಗಳನ್ನು ತಿನ್ನುವುದಕ್ಕಿಂತ ಬೇಯಿಸಿರುವ ಆಹಾರವನ್ನು ಸೇವಿಸುವುದು ಅರೋಗ್ಯದಾಯಕ.

೫. ಕಚ್ಚಾ ಅಥವಾ ಬೇಯಿಸದ ಮೊಟ್ಟೆಯನ್ನು ಸೇವಿಸುವುದು ಅನಾರೋಗ್ಯಕರ. ಅವುಗಳು ಸಲ್ಮೊನೆಲ್ಲಾ ಸೂಕ್ಷ್ಮಜೀವಿಯನ್ನು ಹೊಂದಿರುವ ಸಾಧ್ಯತೆಗಳಿದ್ದು, ಆರೋಗ್ಯಕ್ಕೆ ಹಾನಿಕಾರಕ.

೬. ದಹಿ ಬಲ್ಲಾಸ್ ಎಂಬ ಸ್ಟ್ರೀಟ್ ಫುಡ್ ಗರ್ಭಾವಸ್ಥೆಯಲ್ಲಿ ತಿನ್ನುವುದು ಅನಾರೋಗ್ಯಕರ. ಇದು ರುಚಿಕರವಾಗಿದ್ದರೂ, ಇದರಲ್ಲಿ ಬಳಸಲಾಗುವ ಮೊಸರು, ಪುದಿನಾ ದ್ರಾವಣದಲ್ಲಿನ ಹುಳಿ ಜೀರ್ಣಕ್ರಯೆಗೆ ತೊಂದರೆಯುಂಟು ಮಾಡಬಹುದು.

೭. ಆಲೂ ಟಿಕ್ಕಿ ಮತ್ತು ಚೋಲೆ ಬಟೂರೆ ಜಂಕ್ ಫುಡ್-ಗಳಲ್ಲಿ ಅತಿ ಕಡಿಮೆ ಅನಾರೋಗ್ಯಕರ ಪರಿಣಾಮ ಬೀರುತ್ತವೆ. ಆದರೆ ಅವುಗಳಲ್ಲಿರುವ ಮಸಾಲೆ ಪದಾರ್ಥ ಆಮ್ಲತೆ ಹಾಗೂ ಎದೆಯುರಿಯುಂಟು ಮಾಡಬಹುದು.

೮. ಸ್ಟ್ರೀಟ್ ಫುಡ್ ಮಾರಾಟ ಮಾಡುವವರ ಬಳಿ ಪುದೀನಾ ಚಟ್ನಿ, ಇಮ್ಲಿ ಚಟ್ನಿ, ಇತ್ಯಾದಿ ರೀತಿಯ ಚಟ್ನೆಯನ್ನು ತಿನ್ನದಿರುವುದು ಸೂಕ್ತ.

೯. ಪಾನಿ ಪುರಿಯಿಂದ ಯಾವುದೇ ಪ್ರತ್ಯೇಕ ಹಾನಿ ಇರದಿದ್ದರೂ, ಮಳೆಗಾಲದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಅದಕ್ಕೆ ಕಾರಣ ಕಲುಷಿತಗೊಂಡಿರುವ ನೀರು.

೧೦. ಗರ್ಭಾವಸ್ಥೆಯ ಸಮಯದಲ್ಲಿ ಚೀಸ್ ಅಥವಾ ಪನೀರ್ ಸೇವಿಸದಿರುವುದು ಒಳ್ಳೆಯದು.

೧೧. ಬೀದಿಯಲ್ಲಿ ನಿಂತು ಮಾರಾಟ ಮಾಡುವವರ ಬಳಿ ಹಣ್ಣುಗಳನ್ನು ತಿನ್ನುವ ಬದಲಿಗೆ ಮನೆಯಲ್ಲಿಯೇ ತಾಜಾ ಹಣ್ಣುಗಳನ್ನು ಕತ್ತರಿಸಿ, ನಿಮ್ಮ ರುಚಿಗೆ ತಕ್ಕಂತೆ ನಿಂಬೆ ಹಣ್ಣು, ಚಾಟ್ ಮಸಾಲೆ ಹಾಕಿಕೊಂಡು ಸೇವಿಸುವುದು ಉತ್ತಮ.

೧೨. ಸ್ಟ್ರೀಟ್ ಫುಡ್ ತಿನ್ನುವ ಬಯಕೆ ಇದ್ದರೆ, ಅಂಗಡಿಯವರು ನೀಡುವ ಪುದಿನಾ ಮತ್ತು ಕೊತ್ತಂಬರಿಯನ್ನು ನಿರಾಕರಿಸುವುದು ಉತ್ತಮ.

ಪಾನಿ ಪುರಿ ಇಲ್ಲಿಯವರೆಗೂ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದರೂ, ಗರ್ಭಾವಸ್ಥೆಯಲ್ಲಿ ನೀವು ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ಈ ಚ್ಯಾಟ್ ಅನ್ನು ಆಸ್ವಾದಿಸಲು ಮತ್ತು ಆರೋಗ್ಯಕರ ಗರ್ಭಧಾರಣೆಯನ್ನು ಆನಂದಿಸಲು, ಮನೆ-ನಿರ್ಮಿತ ಪಾನಿ ಪುರಿಯನ್ನು ಸೇವಿಸುವುದು ಸೂಕ್ತ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon