Link copied!
Sign in / Sign up
6
Shares

ಹಸ್ತಮೈಥುನದಿಂದ ಅತ್ಯದ್ಭುತ ಲೈಂಗಿಕ ಪರಾಕಾಷ್ಠೆ ಹೊಂದಬೇಕಿದ್ದರೆ ಈ 5 ವಿಷಯಗಳನ್ನ ಪಾಲಿಸಬೇಕು

ನೀವು ಹಸ್ತಮೈಥುನದಲ್ಲಿ ತೊಡಗಿಕೊಳ್ಳುತ್ತಿಲ್ಲ ಎಂದರೆ, ಅದರ ಉಪಯೋಗಗಳನ್ನ ಅರಿಯಲು ನೀವು ನಮ್ಮ ಹಿಂದಿನ ಲೇಖನಗಳನ್ನ ಓದಬಹುದು. ನೀವು ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ಒಳ್ಳೆಯದು. ಆದರೆ ನೀವು ನಿಮಗೆ ಬೇಕೆಂದುಕೊಳ್ಳುವ ಅತ್ಯದ್ಭುತ ಲೈಂಗಿಕ ಪರಾಕಾಷ್ಠೆಯನ್ನು ನಿಮ್ಮ ಏಕಾಂತದ ಕಾಲದಲ್ಲಿ ಹೊಂದಲು ಆಗುತ್ತಿಲ್ಲ ಎಂದರೆ, ನಿಮ್ಮ ಏಕಾಂತದ ಅವಧಿಯನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ ಎಂದರ್ಥ.

ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ. ಒಬ್ಬರಿಗೆ ಇಷ್ಟವಾಗುವುದು, ಮತ್ತೊಬ್ಬರಿಗೆ ಆಗದೆ ಇರಬಹುದು. ಅದೃಷ್ಟವಶಾತ್, ಸ್ವಲ್ಪ ಹೆಚ್ಚು ಗಮನವಹಿಸಿ, ಪ್ರಾಯೋಗಿಕವಾಗಿ ಪರೀಕ್ಷಿಸಿದರೆ, ನಿಮಗೆ ನೀವು ಮತ್ತಷ್ಟು ಸುಖವನು ತಂದುಕೊಳ್ಳಬಹುದು. ಇಷ್ಟೇ ಅಲ್ಲ, ಹಸ್ತಮೈಥುನವು ನಿಮ್ಮ ಒಟ್ಟಾರೆ ಲೈಂಗಿಕ ಜೀವನವನ್ನು ವೃದ್ಧಿಸಿ, ನಿಮ್ಮ ಸಂಗಾತಿಯೊಂದಿಗಿನ ಸೆಕ್ಸ್ ಅನ್ನು ಕೂಡ ಅದ್ಭುತಮಯ ಮಾಡಿಸುತ್ತದೆ.

ನೀವು ನಿಮಗೆ ಬೇಕಿರುವ ಅತ್ಯಂತ ರಮಣೀಯವಾದ, ಸೆಕ್ಸಿ ಒರ್ಗ್ಯಾಸಮ್ ಅನ್ನು ಹೊಂದಬೇಕು ಎಂದರೆ ನೀವು ಕೆಲವಷ್ಟು ವಿಷಯಗಳನ್ನ ಪಾಲಿಸಬೇಕು ಎನ್ನುತ್ತಾರೆ ಲೈಂಗಿಕ ತಜ್ಞರು. ಅವುಗಳು ಯಾವುದೆಂದು ಇಲ್ಲಿ ನಾವು ಇಲ್ಲಿ ತಿಳಿಸಿದ್ದೇವೆ ಓದಿ.

೧. ಏನೋ “ತಪ್ಪು” ಮಾಡುತ್ತಿದ್ದೇನೆಂದು ಅಂದುಕೊಳ್ಳುವುದು

ನಿಮಗೆ ಹಸ್ತಮೈಥುನದಲ್ಲಿ ತೊಡಗಿಕೊಳ್ಳಲು ಮುಜುಗರ ಉಂಟಾದರೆ, ನಿಮಗೆ ಬೇಕಿರುವುದು ಸಿಗುವುದಿಲ್ಲ. ನಮಗೆ ಬೇಕಿರುವ ಅದ್ಭುತವಾದ ಹಸ್ತಮೈಥುನದ ಅಬುಭಾವ ನಮಗೆ ಸಿಗದಂತೆ ಮಾಡುವುದೇ ಅದರ ಬಗ್ಗೆ ಇರುವ ಮುಜುಗರ ಎನ್ನುತ್ತಾರೆ ತಜ್ಞರು. ಇದು ಬಹಳಷ್ಟು ಅಸಮರ್ಥ ದಾರಿಯಾಗಿದ್ದು, ಇದು ಒತ್ತಡವನ್ನು ಹೇರುತ್ತದೆ ಮತ್ತು ನಿಮಗೆ ಬೇಕಿರುವುದನ್ನು ನೀವು ಪಡೆಯಲು ಅಡ್ಡಗಾಲು ಹಾಕುತ್ತದೆ. ಹೀಗಾಗಿ ಹಸ್ತಮೈಥುನದ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನೆಲ್ಲಾ ಅಳಿಸಿ ಹಾಕಿ, ತಿಳಿ ಮನಸಿನಿಂದ ಅನುಭವಿಸಿ.


೨. ಇದನ್ನು ನಿಮ್ಮ ಸಂಗಾತಿಯಿಂದ ಮುಚ್ಚಿಡಬೇಕು ಎಂದುಕೊಳ್ಳುವುದು

“ಒಂದು ವೇಳೆ ನಿಮಗೆ ನೀವು ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುವುದನ್ನ ನಿಮ್ಮ ಸಂಗಾತಿಯಿಂದ ಮುಚ್ಚಿಡಬೇಕು ಎಂದೆನಿಸದರೆ, ನೀವು ಮತ್ತಷ್ಟು ಪಾಪಪ್ರಜ್ಞೆ ಮತ್ತು ಒತ್ತಡಕ್ಕೆ ಒಳಗಾಗುವಿರಿ” ಎನ್ನುವರು ತಜ್ಞರು. ಅದರೊಂದಿಗೆ ತಜ್ಞರು ಹೀಗೆನ್ನುತ್ತಾರೆ - “ಜೀವನದಲ್ಲಿ ಎಲ್ಲರು ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ತೊಡಗಿಸಿಕೊಳ್ಳುತ್ತಿರುತ್ತಾರೆ. ಅದು ನಿಮ್ಮ ಸಂಗತಿಯೇ ಆಗಿರಬಹುದು. ಒಂದು ವೇಳೆ ಇಂತಹ ವಿಷಯಗಳನ್ನ ನೀವು ಮುಕ್ತವಾಗಿ ಹೇಳಿಕೊಂಡರೆ, ನಿಮ್ಮ ಲೈಂಗಿಕ ಜೀವನ ಮತ್ತಷ್ಟು ಅನ್ಯೋನ್ಯತೆಯಿಂದ ಕೂಡಿರುತ್ತದೆ ಮತ್ತು ನಿಮ್ಮ ನಡುವಿನ ವಿಶ್ವಾಸವೂ ಹೆಚ್ಚುತ್ತದೆ”. ಒಂದು ವೇಳೆ ನಿಮಗೆ ಹೇಳಲು ಇಷ್ಟವಿಲ್ಲ ಎಂದರೆ, ಆ ವಿಷಯದ ಬಗ್ಗೆ ಪಶ್ಚಾತಾಪದ ಭಾವವನ್ನು ಕೂಡ ಬಿಟ್ಟುಬಿಡಿ. ನೀವು ಇದರಲ್ಲಿ ತೊಡಗುವುದರಿಂದ ನಿಮ್ಮ ಸಂಬಂಧಕ್ಕೆ ಮೋಸ ಅಥವಾ ಯಾರಿಗಾದರೂ ಅಪಚಾರ ಎಸಗುವುದು ಆಗುವುದಿಲ್ಲ! ಹೀಗಾಗಿ ನೀವು ಈ ವಿಷಯವನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ ಹಸ್ತಮೈಥುನದಲ್ಲಿ ತೊಡಗಿದರೆ, ನಿಮಗೆ ಬೇಕಿರುವುದು ಸಿಗುತ್ತದೆ.


೩. ನಿಮ್ಮ ಕಲ್ಪನೆಗಳನ್ನ ನಿರ್ಲಕ್ಷಿಸುವುದು

ನಿಮ್ಮ ಕಲ್ಪನೆಗಳನ್ನು ಹರಿದು ಬಿಡಿ. ನಾವು ಹಸ್ತಮೈಥುನದಲ್ಲಿ ತೊಡಗಿಕೊಳ್ಳುವಾಗ ಯಾವುದಾದರು ಒಂದನ್ನು ನೆನೆಸಿಕೊಳ್ಳುತ್ತಲೇ ತೊಡಗಿಸಿಕೊಳ್ಳುವುದು. ಅದು ವ್ಯಕ್ತಿ ಆಗಿರಬಹುದು, ಚಿತ್ರ ಆಗಿರಬಹುದು ಅಥವಾ ನೀವು ಹಿಂದೆಂದೂ ಪ್ರಯತ್ನಿಸಿರದ ಒಂದು ವಿಚಿತ್ರ ಲೈಂಗಿಕ ಬಯಕೆ ಇರಬಹುದು. ನಿಮ್ಮ ಈ ಕಲ್ಪನೆಗಳ ಬಗ್ಗೆ ನೀವೇ ಮುಜುಗರ ಹೊಂದಿದರೆ, ಇದು ನಿಮ್ಮ ಹಸ್ತಮೈಥುನದ ಅನುಭವಕ್ಕೆ ಅಡಚಣೆ ಉಂಟು ಮಾಡಿ, ನಿಮ್ಮ ಲೈಂಗಿಕ ಅನುಭವವನ್ನ ಸಪ್ಪೆ ಮಾಡಬಹುದು. ಅದರ ಬದಲಿಗೆ ನೀವೇ ಅವುಗಳ ಕಲ್ಪನೆಯಲ್ಲಿ ಭಾಗವಹಿಸಿ, ಅವುಗಳಿಗೆ ಜೀವ ಕೊಟ್ಟು, ಅವಿಸ್ಮರಣೀಯ ಹಸ್ತಮೈಥುನದ ಅನುಭವ ನಿಮ್ಮದಾಗಿಸಿಕೊಳ್ಳಿ !


೪. ಗುರಿಯನ್ನು ನಿಗದಿಪಡಿಸಿಕೊಳ್ಳುವುದು

ನೀವು ಒಂದು ವೇಳೆ ಇಂತಿಷ್ಟೇ ಸಮಯದಲ್ಲಿ ಅಥವಾ ಹೀಗೆ ಮಾಡಿಯೇ ವಿಸರ್ಜನೆ ಹೊಂದಬೇಕು ಎಂದುಕೊಂಡರೆ, ನಿಮಗೆ ಬೇಕಾದ ಅನುಭವ ಸಿಗುವುದಿಲ್ಲ. ಬಹಳಷ್ಟು ಹೆಂಗಸರು ತಮಗೆ ಇಂತದ್ದೇ ರೀತಿಯ ಲೈಂಗಿಕ ಪರಾಕಾಷ್ಠೆ (ಜಿ-ಸ್ಪಾಟ್ ಒರ್ಗ್ಯಾಸಮ್, ಬಹುಸಂಖ್ಯೆ ಒರ್ಗ್ಯಾಸಮ್, ಇತರೆ) ಹೊಂದಬೇಕು ಎಂದು ನಿಗದಿಪಡಿಸಿಕೊಂಡು ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ನಿಮ್ಮ ಮೇಲೆ ಅನಾವಶ್ಯಕ ಒತ್ತಡವನ್ನು ಹೇರಿ, ನೀವು ಯಾವುದೇ ರೀತಿಯ ಪರಾಕಾಷ್ಠೆ ಹೊಂದದಂತೆ ಮಾಡಿಬಿಡುತ್ತದೆ.


೫. ಅದರ ಬಗ್ಗೆ ಯೋಚಿಸುವುದು

ಯೋಚಿಸುವುದು ನೀವು ಲೈಂಗಿಕ ಪರಾಕಾಷ್ಠೆ ಹೊಂದುವುದನ್ನು ತಪ್ಪಿಸುತ್ತದೆ, ಏಕೆಂದರೆ ನಿಮ್ಮ ಮನಸ್ಸು ಯೋಚನೆಯಲ್ಲೇ ಮುಳುಗಿರುತ್ತದೆ. ಇದರ ಬದಲು ನೀವು ಯಾವುದೇ ಯೋಚನೆಯಲ್ಲಿ ಮುಳುಗದೆ, ನಿಮ್ಮ ದೇಹವನ್ನು ಪರಾಕಾಷ್ಠೆ ಹೊಂದದೆ ಪ್ರಚೋದಿಸಿ. ನೀವು ಬೇರೆ ಬೇರೆ ಭಾಗಗಳೊಂದಿಗೆ ಆಟವಾಡುತ್ತಾ, ಬೇರೆ ಪ್ರಮಾಣದ ಒತ್ತಡ ಅವುಗಳ ಮೇಲೆ ಹೇರುತ್ತಾ, ನಿಮಗೆ ಯಾವುದು ಹೆಚ್ಚು ಸುಖ ನೀಡುತ್ತದೆ ಎಂದು ಮತ್ತು ನಿಮ್ಮ ಉಸಿರಾಟ, ಹೃದಯಬಡಿತ ಹೆಚ್ಚಿಸಿ ನಿಮ್ಮ ಯೋಚನೆಯನ್ನು ಮರೆಸುತ್ತದೆ ಎಂದು ತಿಳಿಯಲು ಒಳ್ಳೆಯ ದಾರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon