Link copied!
Sign in / Sign up
4
Shares

ಪಾಲಕರು ತಾವು ಇಷ್ಟ ಪಡುವಂತೆ ತಮ್ಮ ಮಕ್ಕಳನ್ನು ತಯಾರು ಮಾಡಲು ಬಳಸುವ ೫ ಮಿತಿ ಮೀರಿದ ವಿಷಯಗಳು

ಪೋಷಕತ್ವ  ಸುಲಭದ ಕೆಲಸವಲ್ಲ.ನಿಮ್ಮ ಮಗು ಯಾವ ರೀತಿ ಬೆಳೆಯುತ್ತಿದೆ ಎಂಬುದರ ಬಗ್ಗೆ ನೀವು ಯಾವಾಗಲೂ ಭಯಪಡುತ್ತೀರಿ ಮತ್ತು ನಿಮ್ಮ ಮಗುವಿನ ಅಭಿಪ್ರಾಯ, ಆಲೋಚನೆಗಳು ಮತ್ತು ನಂಬಿಕೆಗಳಂತಹ ವಿಷಯಗಳಲ್ಲಿ ನೀವು ಹಸ್ತಕ್ಷೇಪ ಮಾಡಬೇಕೆಂದು ನೀವು ಬಯಸುತ್ತೀರಿ. ಉಪ-ಪ್ರಜ್ಞೆಯಿಂದ ಪೋಷಕರು ತಮ್ಮ ಮಕ್ಕಳ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರಲ್ಲಿ ಕೆಲವರು ತಾವು ಇಷ್ಟ ಪಡುವ  ವಿಷಯಗಳನ್ನು ತಮ್ಮ ಮಕ್ಕಳು ಕೂಡ ಇಷ್ಟಪಡಬೇಕು  ಮತ್ತು ಅವರು ಇಷ್ಟ ಪಡದ ವಿಷಯಗಳನ್ನು ಮಕ್ಕಳು ಸಹ ಇಷ್ಟಪಡದಿರಲು ಬಯಸುತ್ತಾರೆ.ಈ ರೀತಿಯಾಗಿ, ಒಟ್ಟಾಗಿ ಅವರ ಎಲ್ಲಾ ಇನ್ಸ್ಟ್ರಾಗ್ರಾಮ್ ( Instagram )ಚಿತ್ರಗಳು #ಕುಟುಂಬದ ಗುರಿ ಆಗಿರುತ್ತದೆ.ಈ ವಿಷಯಗಳು ಕೆಲವೊಮ್ಮೆ ನಿರುಪದ್ರವ ಮತ್ತು ಭವಿಷ್ಯದಲ್ಲಿ ಮಗುವಿನ ಆದ್ಯತೆಗಳ ಮೇಲೆ ಸ್ವಲ್ಪ ಇಲ್ಲವೇ ಯಾವುದೇ ಪರಿಣಾಮ ಬೀರುವುದಿಲ್ಲ.

ಆದ್ದರಿಂದ, ಹೆತ್ತವರು (ನೀವು ಸಹ ಆಗಿರಬಹುದು ) ಏನು ಮಾಡುತ್ತೀರೆಂಬುವುದನ್ನು  ಈ ಕೆಲವು ವಿಷಯಗಳ ಮೂಲಕ  ನೋಡೋಣ …

೧. ಆಯ್ಕೆಗಳನ್ನು ಕಡಿತಗೊಳಿಸುವುದು

ವೃತ್ತಿ ಆಯ್ಕೆಗಳು ಅಥವಾ ಇತರ ಪ್ರಮುಖ ಜೀವನ ನಿರ್ಧಾರಗಳಂತಹ ವಿಷಯಗಳನ್ನು ಕಡಿತಗೊಳಿಸಬೇಕೆಂಬುವುದು ನಾವು ಹೇಳುವಿದಿಲ್ಲ  ಆದರೆ ಬಣ್ಣದ ಆಯ್ಕೆಯಂತಹ ಸಣ್ಣ ವಿಷಯಗಳಲ್ಲಿ, ನಿಮ್ಮ ಮಗುವಿನ ಕೋಣೆಯಲ್ಲಿನ ಪರದೆಗಳ ಆಯ್ಕೆಯ ವಿಷಯದಲ್ಲಿ ಮಗುವಿಗೆ ಸ್ವಾತಂತ್ರ್ಯ  ಇರಬೇಕು.ಅಥವಾ, ಅಂಗಡಿಗೆ ಹೋಗುವಾಗ  ನಿಮ್ಮ ಮಗುವಿಗೆ ನಿಮ್ಮ ನೆಚ್ಚಿನ ತಿಂಡಿಗಳನ್ನು  ಮಾತ್ರ ಅನುಕೂಲಕರವಾಗಿ ತೋರಿಸುವುದನ್ನು  ಪೋಷಕರು ಮಾಡುವುದು  ಸಾಮಾನ್ಯವಾಗಿದೆ.ಅದನ್ನು ಒಪ್ಪಿಕೊಳ್ಳುವುದು ಸರಿ ,ಪ್ರತಿ ಪೋಷಕರು ಅದನ್ನು ಮಾಡುತ್ತಾರೆ!ನೀವು ಪೋಷಕರಾದಾಗ, ಇದ್ದಕ್ಕಿದ್ದಂತೆ ಎಲ್ಲವೂ ನಿಮ್ಮ ಮಗುವಿನ ಬಗ್ಗೆ  ಕೇಂದ್ರೀಕೃತವಾಗುತ್ತದೆ, ಆದ್ದರಿಂದ ನೀವು ಅದೇ ವಿಷಯಗಳನ್ನು ಇಷ್ಟ ಪಡಲು ಅಥವಾ ಅದೇ ತಿನಿಸುಗಳನ್ನು ಆನಂದಿಸಲು ಮಾಡುವಂತೆ ಇರುವ ಏಕೈಕ ಮಾರ್ಗವೆಂದರೆ ನಿಮ್ಮ ಮಗುವು ಸಹ ಅದೇ ವಿಷಯಗಳನ್ನು ಇಷ್ಟ ಪಡುತ್ತದೆಯೇ ಎಂದು ಗಮನ ಹರಿಸುವುದು .

೨. ಪ್ರೋತ್ಸಾಹಕ

ಮಕ್ಕಳಿಗೆ ಪ್ರೋತ್ಸಾಹಕವನ್ನು ನೀಡುವುದು  ವಯಸ್ಕರಿಗೆ ಲಂಚ ಪಾವತಿಸುವ ಸಮಾನವಾಗಿರುತ್ತದೆ.ಸರಿಯಾದ ಪ್ರೋತ್ಸಾಹಕವು ಬಹಳಷ್ಟು ಕೆಲಸವನ್ನು ಪಡೆಯಬಹುದು, ಮತ್ತು  ಅದನ್ನು ಎಲ್ಲಾ ಪೋಷಕರು ಕಂಡುಕೊಂಡಿದ್ದಾರೆ.ಪ್ರಸಿದ್ಧ ಪಾವ್ಲೋವ್ಸ್ ಡಾಗ್ ಪ್ರಯೋಗವು ಹಲವು ಮನೆಗಳಲ್ಲಿ ಪೋಷಕರ ಬಯಕೆಯನ್ನು ಮಕ್ಕಳು ಅನುಸರಿಸುವಂತೆ ಪ್ರೇರೇಪಿಸಲು ಸಾಕಷ್ಟು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿದೆ ."ನೀನು ನನ್ನೊಂದಿಗೆ ವಾಯು ವಿಹಾರಕ್ಕಾಗಿ ಬಂದರೆ ನಾನು ನಿನಗೆ ಜ್ಯೂಸು ಅನ್ನು ಖರೀದಿಸಿ ನೀಡುತ್ತೇನೆ "ಪರಿಚಿತವಾಗಿ  ಧ್ವನಿಸುತ್ತದೆಯೇ?ಅತ್ಯುತ್ತಮ ಪೋಷಕರು ಸಹ ಮಕ್ಕಳನ್ನು ತಮ್ಮ ಜೊತೆಗೆ ಸೆಳೆಯಲು ಇದನ್ನು ಮಾಡುತ್ತಾರೆ .ನಾವು ನಿಮ್ಮನ್ನು  ನಿರ್ಣಯಿಸುತ್ತಿಲ್ಲ .

೩. ಭಯವನ್ನು ಪ್ರಚೋದಿಸುವುದು

ಇದು ತಮ್ಮ ಚಿಕ್ಕಮಕ್ಕಳನ್ನು ಮಲಗಿಸಲು ಪ್ರಯತ್ನಿಸುವಾಗ ಪೋಷಕರು ಬಳಸುವ ಒಂದು ಸಾಮಾನ್ಯ ತಂತ್ರ ಆಗಿದೆ. ಶೀಘ್ರದಲ್ಲೇ ಸಾಕಷ್ಟು, ಪೋಷಕರು ನಿಮ್ಮ ಮಕ್ಕಳು ನಿದ್ರೆ ಪಡೆಯಲು ಆರಕ್ಷಕರು ಅಥವಾ ಪ್ರೇತಗಳು ಅವರನ್ನು ದೂರ ಒಯ್ಯುವ ಬಗ್ಗೆ ಹೇಳಿ ಭಯ ಹುಟ್ಟಿಸಿ ಮಲಗಿಸಲು ಪ್ರಯತ್ನಿಸುತ್ತಾರೆ .ಅವರ ಒಳ್ಳೆಯದಕ್ಕಾಗಿ ಮಾತ್ರ ನೀವು ಇದನ್ನು ಮಾಡುತ್ತಿದ್ದೀರಿ  ಎಂದು ನಾವು ತಿಳಿದಿದ್ದೇವೆ, ಆದರೆ ಪ್ರಕ್ರಿಯೆಯಲ್ಲಿ ನೀವು  ಮಕ್ಕಳನ್ನು ಹೆದರಿಸುವ ಪ್ರಯತ್ನವನ್ನು ಮಾಡದಿರುವುದು ಮುಖ್ಯವಾಗಿದೆ.

೪. ಅಭಿಪ್ರಾಯಗಳನ್ನು ಪ್ರಭಾವಿಸುವುದು

ಹೆಚ್ಚಾಗಿ, ನಿಮ್ಮ ಮಗುವು ನೀವು ನೀವು ಇಷ್ಟಪಡದಿರುವ ಏನನ್ನಾದರೂ ಬಯಸಿದಾಗ ,ಆ ವಿಷಯವು ಅವರಿಗೆ ಏಕೆ ಎಷ್ಟು ಭಯಂಕರವಾಗಿದೆ ಎಂಬುದರ ಕುರಿತು ವಿಸ್ತಾರವಾದ ವಿವರಣೆಯೊಂದಿಗೆ ನೀವು ಬರುತ್ತೀರಿ.ನಿಮ್ಮ ಮಗುವು ಚಿಕ್ಕದಾಗಿದ್ದರೆ ,ಇದು ಹೆಚ್ಚು ಪ್ರಯತ್ನವನ್ನು ತೆಗೆದುಕೊಳ್ಳುವುದಿಲ್ಲ.  ಅಸಹ್ಯ ತೋರಿಸುವ ಎರಡು ಬೆಪ್ಪಾದ  ಮುಖಗಳು ಇದರ ಹಿಂದಿನ ತಂತ್ರವಾಗಿದೆ.ಆದಾಗ್ಯೂ ನಿಮ್ಮ ಮಗುವು ದೊಡ್ದದಾಗಿದ್ದರೆ ,ನಿಮ್ಮೊಳಗಿನ ಸ್ಟೀಫನ್ ಕಿಂಗ್ ರನ್ನು ಹೊರಕ್ಕೆಳೆದು ನೀವು ಒಂದು  ಪ್ರಚಂಡ ಬುದ್ಧಿಶಕ್ತಿಯ ಕತೆಯನ್ನು ರಚಿಸಿ ಮಕ್ಕಳ ಮೇಲೆ ಪ್ರಭಾವಿ ಪರಿಣಾಮ ಬೀರುವ ಪ್ರಯತ್ನವನ್ನು ಮಾಡುತ್ತೀರಿ .

೫. ಭಾವನಾತ್ಮಕ ಬೆದರಿಕೆ

ಬಾಲಿವುಡ್ ನಮಗೆ ಏನನ್ನಾದರೂ ಕಲಿಸಿದ್ದೇ ಆದರೆ ಅದು ದೂರ ಕಳಿಸುವ ಬೆದರಿಕೆಯ ತಂತವನ್ನು ಆಗಿದೆ ."ನಾನು ನಿನಗಾಗಿ ಎಲ್ಲವನ್ನೂ ಮಾಡಿದ  ನಂತರ, ನೀನು  ಬಯಸಿದಷ್ಟು ಮಾಡಲು ಬಯಸಿದರೆ, ಅದು ನಿನಗೆ  ಬಿಟ್ಟಿದೆ". ಇದು ಪಾಲಕರ ಪ್ರಮಾಣಿತ ಹೇಳಿಕೆ.ಸಹಜವಾಗಿ, ಪ್ರತಿ ಭಾಷೆಯಲ್ಲಿ, ಈ ವಾಕ್ಯವನ್ನು ಸ್ವಲ್ಪ ವಿಭಿನ್ನವಾಗಿ ಮಾರ್ಪಡಿಸಲಾಗಿದೆ, ಆದರೆ ಸನ್ನಿವೇಶವು ಒಂದೇ ಆಗಿರುತ್ತದೆ. ಇದು ಪ್ರತಿಯೊಂದು ಪೋಷಕರ ನೆಚ್ಚಿನ ಸಂಭಾಷಣೆಯಾಗಿದೆ.

ಆದ್ದರಿಂದ, ನೀವು ಎಷ್ಟು ವಿಷಯಗಳನ್ನು ಮಾಡುತ್ತೀರಿ?

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon