Link copied!
Sign in / Sign up
6
Shares

ಒಂದು ವರ್ಷದ ಮಗುವಿಗೆ ಆರೋಗ್ಯಕರ ಮತ್ತು ರುಚಿಕರ ತಿನಿಸುಗಳು

ಪಾಲಕ್ ಸೊಪ್ಪು ತನ್ನಲ್ಲಿ ಅನೇಕ ಪೌಷ್ಟಿಕಾಂಶಗಳನ್ನು ಇರಿಸಿಕೊಂಡಿರುವ ಸಸ್ಯ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ಇದರಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಅವಶ್ಯವಾಗಿ ಬೇಕಾಗಿರುವ ಕಬ್ಬಿಣಾಂಶ ಇದೆ. ಮತ್ತು ಇದರಲ್ಲಿ ಕ್ಯಾಲ್ಸಿಯಮ್ ಹಾಗು ಪೊಟ್ಯಾಸಿಯಂ ಕೂಡ ಹೇರಳವಾಗಿದೆ. ಇವುಗಳ ಜೊತೆ ಎಲ್ಲಾ ತರಕಾರಿ ಮತ್ತು ಸೊಪ್ಪುಗಳಲ್ಲಿರುವ ಪೌಷ್ಟಿಕಾಂಶಗಳು ಇರುವುದರಿಂದ ಬೆಳೆಯುತ್ತಿರುವ ಮಕ್ಕಳಿಗೆ ಇದು ಪ್ರಮುಖವಾಗಿ ಅಗತ್ಯವಿರುವ ಆಹಾರ.

ಮಕ್ಕಳು ಸಾಮಾನ್ಯವಾಗಿ ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸಲು ಇಷ್ಟಪಡುವುದಿಲ್ಲ, ಅದಕ್ಕಾಗಿ ಅದರಿಂದ ರುಚಿಕರ ತಿನಿಸುಗಳನ್ನು ಮಾಡಿದರೆ ಅದನ್ನು ಮಕ್ಕಳು ಸೇವಿಸಲು ಇಷ್ಟಪಡುವರು ಮತ್ತು ಅವರಿಗೆ ಅಗತ್ಯವಿರುವ ಪೌಷ್ಟಿಕಾಂಶಗಳು ಅವರಿಗೆ ಸಿಗುವುದು.

ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಲಾಭಗಳು

೧.ಮೂಳೆಗಳು ಗಟ್ಟಿಯಾಗುತ್ತವೆ.

೨.ಸ್ನಾಯು ಮತ್ತು ಮಾಂಸಖಂಡಗಳಿಗೆ ಒಳ್ಳೆಯದು.

೩.ರಕ್ತಪರಿಚಲನೆಯನ್ನು ಸರಾಗವಾಗಿ ಆಗುವಂತೆ ಮಾಡಲು ಸಹಾಯ ಮಾಡುತ್ತದೆ.

೪.ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.

೫.ದೇಹದಲ್ಲಿ ನೀರಿನಾಂಶ ಇರಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪನ್ನು ಉಪಯೋಗಿಸಿಕೊಂಡು ಶಿಶುಗಳಿಗೆ ನೀಡಬಹುದಾದ ಕೆಲವು ಆರೋಗ್ಯಕರ ಮತ್ತು ರುಚಿಕರ ತಿನಿಸುಗಳು.

೧.ಪಾಲಕ್ ಗಂಜಿ

ನಿಮ್ಮ ಮಗುವಿಗೆ ಅಗತ್ಯವಿರುವ ಪೌಷ್ಟಿಕಾಂಶಗಳ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳನ್ನು ದೊರಕಿಸುವ ಪಾಲಕ್ ಸೊಪ್ಪಿನ ಗಂಜಿಯನ್ನು ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.

ನಿಮಗೆ ಬೇಕಾಗಿರುವುದು

ಎರಡು ಬಟ್ಟಲು ಪಾಲಕ್ ಸೊಪ್ಪು

೪-೫ ಬಟ್ಟಲು ನೀರು

ಮಾಡುವ ವಿಧಾನ

೧.ಪಾಲಕ್ ಸೊಪ್ಪನ್ನು ಸಣ್ಣಗೆ ಹಚ್ಚಿಕೊಳ್ಳಿ, ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ಸಣ್ಣಗೆ ಕತ್ತರಿಸಿರುವ ಪಾಲಕ್ ಸೊಪ್ಪನ್ನು ಹಾಕಿ. ಇದನ್ನು ೫-೭ ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ಅಥವಾ ಸೊಪ್ಪು ಮೃದುವಾಗುವವರೆಗೂ ಬೇಯಿಸಿ.

೨.ನೀರನ್ನು ತೆಗೆದು, ಇದನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಸಿಹಿಯಾಗಿದ್ದರೆ ಮಕ್ಕಳು ಸೇವಿಸುವ ಕಾರಣ ಸಿಹಿಯ ಅಗತ್ಯವಿದ್ದರೆ, ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ರುಬ್ಬಿ.

೩.ನಂತರ ಇದನ್ನು ನಿಮ್ಮ ಮಗುವಿಗೆ ಸೇವಿಸಲು ನೀಡಿ.

೨.ಪಾಲಕ್ ಮತ್ತು ಕ್ಯಾರಟ್ ಗಂಜಿ

ಇವೆರಡು ವಿಟಮಿನ್ A ಯನ್ನು ತನ್ನಲ್ಲಿ ಹೇರಳವಾಗಿ ಇರಿಸಿಕೊಂಡಿವೆ.

ಬೇಕಾಗಿರುವುದು

೨ ಬಟ್ಟಲು ಸಣ್ಣಗೆ ಹಚ್ಚಿದ ಕ್ಯಾರಟ್ ಅಥವಾ ತುರಿದಿರುವ ಕ್ಯಾರಟ್

೨ ಬಟ್ಟಲು ತೊಳೆದು ಸಣ್ಣಗೆ ಕತ್ತರಿಸಿರುವ ಪಾಲಕ್ ಸೊಪ್ಪು

೪-೫ ಬಟ್ಟಲು ನೀರು

ಮಾಡುವುದು

೧.ಪಾಲಕ್ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಕ್ಯಾರಟ್ ಅನ್ನು ಬೇಯಿಸಿಕೊಳ್ಳಿ.

೨.ಎರಡನ್ನು ಒಂದು ಪಾತ್ರೆಗೆ ಹಾಕಿ ಮಿಶ್ರಿಸಿ, ನಂತರ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

೩.ಸ್ವಲ್ಪ ನೀರಿನ ಜೊತೆ ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕ್ಯಾರಟ್ ಸಿಹಿಯಾಗಿರುವುದರಿಂದ ಬೆಲ್ಲ ಅಥವಾ ಸಕ್ಕರೆಯ ಅವಶ್ಯಕತೆ ಇರುವುದಿಲ್ಲ.

೩.ಪಾಲಕ್ ಮತ್ತು ಬಾಳೆಹಣ್ಣು ಮಿಶ್ರಣ

ಬಾಳೆಹಣ್ಣು ಸಿಹಿಯಾಗಿರುವುದರಿಂದ ಸೊಪ್ಪಿನ ಕಹಿಯನ್ನು ಇದು ಕಡಿಮೆ ಮಾಡಿ ಮಕ್ಕಳು ಇಷ್ಟ ಪಟ್ಟು ಸೇವಿಸಲು ಸಹಾಯವಾಗುತ್ತದೆ.

ಬೇಕಾಗಿರುವುದು

ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣು ೨

ಪಾಲಕ್ ಸೊಪ್ಪು ೨ ಬಟ್ಟಲು

ನೀರು

ಮಾಡುವುದು

೧.ಪಾಲಕ್ ಸೊಪ್ಪನ್ನು ನೀರಿನಲ್ಲಿ ಬೇಯಿಸಿಕೊಂಡು, ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

೨.ಬಾಳೆಹಣ್ಣನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ.

೩.ಪಾಲಕ್ ಗಂಜಿ ತಯಾರಾದ ಮೇಲೆ, ಬಾಳೆಹಣ್ಣನ್ನು ಚೆನ್ನಾಗಿ ಗುಳ್ಳೆ ಆಗದ ರೀತಿಯಲ್ಲಿ ಚಿವುಕಿ.

೪.ಚೆನ್ನಾಗಿ ಕಿವುಚಿದ ಬಾಳೆಹಣ್ಣನ್ನು ಪಾಲಕ್ ಗಂಜಿ ಜೊತೆ ಮಿಶ್ರಣ ಮಾಡಿ.

೫.ನೀವು ಬೇಕಿದ್ದರೆ ಇದನ್ನು ಮಿಕ್ಸಿಯಲ್ಲಿ ರುಬ್ಬಬಹುದು.

೪.ಪಾಲಕ್ ಮತ್ತು ಮಾಂಸದ ಗಂಜಿ

ಮಾಂಸ ವಿಟಮಿನ್ ಮತ್ತು ಖನಿಜಾಂಶಗಳನ್ನು ತನ್ನಲ್ಲಿ ಇರಿಸಿಕೊಂಡಿರುವುದರಿಂದ ಪಾಲಕ್ ಜೊತೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಬೇಕಾಗಿರುವುದು

ಮೂಳೆ ರಹಿತ ಮಾಂಸ ೧-೨ ಬಟ್ಟಲು

ಪಾಲಕ್ ಸೊಪ್ಪು ೨ ಬಟ್ಟಲು

೪-೫ ಬಟ್ಟಲು ನೀರು

ಮಾಡುವುದು ಹೇಗೆ

೧.ಮಾಂಸವನ್ನು ಒಂದು ಪಾತ್ರೆಯಲ್ಲಿ ಸ್ವಲ್ಪ ಅರಿಶಿಣ ಪುಡಿ ಹಾಕಿ ಮೃದುವಾಗುವವರೆಗೆ ಬೇಯಿಸಿ. ಮಾಂಸಕ್ಕೆ ಸ್ವಲ್ಪ ಉಪ್ಪನ್ನು ಹಾಕುವುದು ರುಚಿ ನೀಡುತ್ತದೆ.

೨.ಮಾಂಸವನ್ನು ಸಣ್ಣಗೆ ಕತ್ತರಿಸಿರುವುದು ಒಳ್ಳೆಯದು.

೩.ಬಿಸಿ ಬೆಂದಿರುವ ಮಾಂಸಕ್ಕೆ ಪಾಲಕ್ ಗಂಜಿಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಮಗುವಿಗೆ ಹಲ್ಲು ಬೆಳೆದಿದ್ದು ಮಾಂಸವನ್ನು ಅಗಿಯುವವನಾದರೆ, ಮಾಂಸವನ್ನು ಹಾಗೆಯೆ ಬಿಡಿ. ಇಲ್ಲವಾದರೆ ಮಾಂಸವನ್ನು ಪಾಲಕ್ ಜೊತೆ ರುಬ್ಬಿಕೊಳ್ಳಿ.

೫.ಪಾಲಕ್-ಕೋಳಿ ಸೂಪ್

ನಿಮ್ಮ ಮಗುವು ಇದನ್ನು ಖಂಡಿತ ಇಷ್ಟಪಡುವುದು ಏಕೆಂದರೆ ಇದು ರುಚಿಯನ್ನು ನೀಡುತ್ತದೆ. ಸೊಪ್ಪಿನ ಕಹಿ ಕಾಣಿಸುವುದಿಲ್ಲ.

ನಿಮಗೆ ಬೇಕಾಗಿರುವುದು

ಕೋಳಿ ಮಾಂಸ - ೨ ಬಟ್ಟಲು

ಪಾಲಕ್ ಸೊಪ್ಪು - ೨ ಬಟ್ಟಲು

ನೀರು

ಉಪ್ಪು - ರುಚಿಗೆ

ಮಾಡುವುದು ಹೇಗೆ

೧.ಒಂದು ಪಾತ್ರೆಗೆ ಸ್ವಲ್ಪ ನೀರು ಮತ್ತು ಕತ್ತರಿಸಿದ ಕೋಳಿ ಮಾಂಸವನ್ನು ಹಾಕಿ, ಇದಕ್ಕೆ ಸ್ವಲ್ಪ ಅರಿಶಿಣ ಪುಡಿ, ಉಪ್ಪನ್ನು ಸೇರಿಸಿ ಚೆನ್ನಾಗಿ ಬೇಯಿಸಿ, ಅಥವಾ ಕುಕ್ಕರ್ ನಲ್ಲಿ ೫ರಿಂದ ೭ ವಿಷಲ್ ಕೂಗಿಸಿ.

೨.ಪಾಲಕ್ ಗಂಜಿಯನ್ನು ಮೇಲೆ ತಿಳಿಸಿರುವಂತೆ ತಯಾರಿಸಿಕೊಳ್ಳಿ.

೩.ಮಾಂಸವನ್ನು ಚೆನ್ನಾಗಿ ರುಬ್ಬಿ ಪಾಲಕ್ ಗಂಜಿಗೆ ಮಿಶ್ರಣ ಮಾಡಿ. ಮಗುವಿಗೆ ಸೇವಿಸಲು ನೀಡಿ.

ಮಗುವಿಗೆ ಹಲ್ಲು ಬೆಳೆದಿಲ್ಲ ಎಂದರೆ ಮಾಂಸದ ರಸವನ್ನು ಪಾಲಕ್ ಗಂಜಿಗೆ ಮಿಶ್ರಣ ಮಾಡಿ ನೀಡಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon