Link copied!
Sign in / Sign up
7
Shares

ಪಾಲಕರಾಗಿ ನೀವು ಅರಿಯದ ಮಕ್ಕಳ ಹತ್ತು ಮೋಜಿನ ವಿಷಯಗಳು!

ಮಗುವನ್ನು ಪಾಲಿಸುವುದು ಹೇಗೆ ಎಂಬುದರ ಬಗ್ಗೆ ಭಾರಿ ಸಂಶೋಧನೆ ನಡೆಸಿದ ನೀವು ಮಕ್ಕಳ ಬಗ್ಗೆ ನನಗೆ ಎಲ್ಲವೂ ತಿಳಿದಿದೆ ಎಂಬ ಗರ್ವದಿಂದ ಬೀಗುತ್ತಿರಬಹುದು. ಆದರೆ,ನಿಮಗೆ ಈ ೧೦ ವಿಷಯಗಳ ಬಗ್ಗೆ ಯಾವುದೇ ಅರಿವಿಲ್ಲ ಎಂದು ನಾವು ಪ್ರಮಾಣ ಮಾಡಿ ಹೇಳುತ್ತಿದ್ದೇವೆ.

(೧)    ಮಕ್ಕಳು ಮಾತನಾಡಲು ಪ್ರಾರಂಭಿಸುವ ಮೊದಲೇ ಸಂಖ್ಯೆಯನ್ನು ಎಣಿಸಲು ಅರಿತಿರುತ್ತಾರೆ. ಆದಕಾರಣ,ಮಕ್ಕಳಿಗೆ ತುತ್ತು ನೀಡುವಾಗ ತಪ್ಪಾಗಿ ಸಂಖ್ಯೆಗಳನ್ನು ಎಣಿಸಿ ಅವರನ್ನು ಮೂರ್ಖರನ್ನಾಗಿಸುವ ವಿಫಲ ಪ್ರಯತ್ನ ಮಾಡಿ, ನೀವೇ ಪೆದ್ದರಾಗಬೇಡಿ.

 

(೨)೨ ವರ್ಷ ಪ್ರಾಯವಾದ ಮಗುವು ಅತೀವ ಚಟುವಟಿಕೆಯಿಂದ ಕೂಡಿರುತ್ತದೆ. ಒಬ್ಬ ವ್ಯಕ್ತಿಯ ಜೀವನದ ಅತೀವ ಮಟ್ಟದ ಚೈತನ್ಯವಿದು. ಹಾಗಾಗಿ ಎಷ್ಟೇ ಪ್ರಯತ್ನಿಸಿದರೂ ಎರಡು ವರ್ಷದ ಮಗುವಿನ ಕ್ರಿಯಾತ್ಮಕತೆಯನ್ನು ಸರಿಗಟ್ಟಲು ನಿಮ್ಮಿಂದಾಗದು.

 

(೩) ಸೌಂದರ್ಯಾರಾಧನೆ ಮಕ್ಕಳಲ್ಲೂ ಕಂಡುಬರುತ್ತದೆ. ‘ಸಿಡುಕು ಮೋರೆಗಿಂತಾ, ಮುದ್ದಾದ ಹಸನ್ಮುಖ ತಾಯಿಯರಲ್ಲಿ, ಮಕ್ಕಳು ಬೇಗನೆ ಒಲಿಯುತ್ತದೆ’ ಎಂದು ಟೆಕ್ಸಾಸ್ ಯುನಿವರ್ಸಿಟಿಯು ಸಂಶೋಧಿಸಿದೆ. ನಗುಮುಖದಿಂದ ಮಕ್ಕಳಲ್ಲಿ ಸಹಜ ಪ್ರೀತಿಯನ್ನು ತೋರಿಸಿದರೆ, ಮಕ್ಕಳನ್ನು ಬೇಗನೆ ನಿಮ್ಮ ದಾರಿಗೆ ತರಬಹುದು.

 

(೪) ಮಕ್ಕಳಿಂದ ಕಲಿತುಕೊಳ್ಳುವುದೂ ಬಹಳಷ್ಟಿದೆ. ದಿನಕ್ಕೆ ಮುನ್ನೂರು ಬಾರಿ ನಗುವ ಮಕ್ಕಳಿಂದ, ಸರಾಸರಿ ಅರುವತ್ತು ಬಾರಿಯೂ ನಗದ ಹಿರಿಯರು ನಿಷ್ಕಳಂಕ ನಗುಮುಖದಿಂದ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂದು ಅರಿತುಕೊಳ್ಳಬೇಕು.

 

(೫) ೨ ವರ್ಷ ಪ್ರಾಯವಾದ ಮಗುವು ದಿನಕ್ಕೆ ೫ ಹೊಸ ಪದಗಳನ್ನು ತನ್ನ ಶಬ್ದ ಭಂಡಾರದಲ್ಲಿ ಸೇರಿಸಿ ಕೊಳ್ಳುತ್ತದೆ.೩ ವರ್ಷ ಪ್ರಾಯವಾದಾಗ ಮಗುವು ೧೭೨೫ ಹೊಸ ಪದಗಳನ್ನು ತುಂಬಿಸಿಕೊಂಡಿರುತ್ತದೆ.

 

(೬) ಮೇ ತಿಂಗಳಲ್ಲಿ ಹುಟ್ಟಿದ ಮಗುವು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಮೇ ತಿಂಗಳಲ್ಲಿ ಜನಿಸಿದ ಮಗುವು, ಇತರ ತಿಂಗಳುಗಳಲ್ಲಿ ಹುಟ್ಟಿದ ಮಕ್ಕಳಿಗಿಂತ ೨೦೦ ಗ್ರಾಂ ಅಧಿಕ ತೂಕವನ್ನು ಹೊಂದಿರುತ್ತದೆ. ಯಾವುದೇ ತಿಂಗಳುಗಳಲ್ಲಿ ಜನಿಸಿದ್ದರೂ, ಆರು ತಿಂಗಳುಗಳ ಅವಧಿಯಲ್ಲಿ ಮಗುವು ತನ್ನ ತೂಕದ ದುಪ್ಪಟ್ಟು ಭಾರವನ್ನು ಒಂದು ವರ್ಷದ ಅವಧಿಯಲ್ಲಿ, ಮುಪ್ಪಟ್ಟು ತೂಕವನ್ನು ಗಳಿಸಿಕೊಳ್ಳುತ್ತದೆ.

 

(೭) ತಂದೆಯು ತನ್ನ ಕೂಸಿನ ಚೌಕವನ್ನು (ಡಯಪರ್)೧ ನಿಮಿಷ ೩೬ ಸೆಕೆಂಡುಗಳಲ್ಲಿ ಬದಲಾಯಿಸದೆ, ತಾಯಿಯು ೨ಮಿ ೫ಸೆಂ ತೆಗೆದುಕೊಳ್ಳುತ್ತಾರೆ. ಕಾರಣವೇನಾಗಿರಬಹುದು ?

 

(೮) ಅವಳಿ ಮಕ್ಕಳನ್ನು ಪಡೆಯಲು ಬಯಸುತ್ತೀರಾ ? ಗಡ್ಡೆ ಗೆಣಸುಗಳನ್ನು ಯಥೇಚ್ಛವಾಗಿ ಸೇವಿಸಿರಿ. ಇತ್ತೀಚೆಗಿನ ಸಂಶೋಧನೆಗಳು, ದಿನನಿತ್ಯದ ಆಹಾರವಾಗಿ ಗಡ್ಡೆ ಗೆಣಸುಗಳನ್ನು ಸೇವಿಸುವ ಆಫ್ರಿಕಾದ ಬುಡಕಟ್ಟು ಜನಾಂಗದವರು ಸಾಧಾರಣವಾಗಿ ಅವಳಿ ಮಕ್ಕಳಿಗೆ ಜನ್ಮವನ್ನೀಯುವ ಅಸಾಧಾರಣ ಪ್ರವೃತ್ತಿಯನ್ನು ವರದಿ ಮಾಡಿದೆ.

 

(೯)ನಾಲ್ಕು ವರ್ಷ ಪ್ರಾಯವಾದ ಮಗುವು ದಿನಕ್ಕೆ 12 ಪ್ರಶ್ನೆಗಳನ್ನು ಕೇಳುತ್ತಾನೆ. ಉದಾಹರಣೆಗೆ ಈ ವಿಡಿಯೋದಲ್ಲಿ ಮಗುವು –“ಒಂದೇ ರೀತಿಯ ಮಕ್ಕಳು ತನ್ನ ಪಕ್ಕದಲ್ಲಿ ಕುಳಿತಿರುವುದು ಯಾಕೆ” ಎಂದು ಕೇಳುವಂತೆ, ಅದು ಕೆಲವೊಮ್ಮೆ ಕೇವಲ “ಯಾಕೆ” ಎಂಬ ಪ್ರಶ್ನೆ ಮಾತ್ರವಾಗಿರಬಹುದು.

 

(೧೦) ಸರಾಸರಿ ಒಬ್ಬ ತಾಯಿಯು ಹೆಣ್ಣು ಅಥವಾ ಗಂಡು ಮಕ್ಕಳಿಗೆ ಜನ್ಮನೀಡುವ ಸಾಧ್ಯತೆಯು ೫೦/೫೦ ಆಗಿದ್ದರೂ, ಅಂಕಿ ಅಂಶಗಳ ಪ್ರಕಾರ ಪ್ರತಿ ೧೦೦ ಹೆಣ್ಣು ಮಕ್ಕಳು ಜನಿಸಿದಾಗ, ೧೦೫ ಗಂಡುಮಕ್ಕಳು ಜನಿಸಲ್ಪಡುತ್ತಾರೆ.

“ಶಿಶುಹತ್ಯೆ ನಿರುತ್ಸಾಹಗೊಳಿಸಬೇಕಾಗಿರುವುದು ಯಾಕೆ ?” ಎಂಬ ಪ್ರಶ್ನೆಗೆ ಮತ್ತೊಂದು ಉತ್ತರ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon