Link copied!
Sign in / Sign up
16
Shares

ಈ ಮನೆಮದ್ದುಗಳಿಂದ ಚಳಿಗಾಲ ಎಂದರೆ ಪಾದಗಳು ಒಡೆಯುವ ಕಾಲ ಎಂಬುದನ್ನ ಸುಳ್ಳು ಮಾಡಿ!

ಚಳಿಗಾಲದಲ್ಲಿ ತ್ವಚೆ ಬಿರುಕು ಬಿಡುವುದು, ಚರ್ಮ ಎಡೆಯುವುದು ಸಾಮಾನ್ಯ, ಅದರಲ್ಲೂ ಪಾದದ ಚರ್ಮದಲ್ಲಿ ಏರುಪೇರಾಗುವುದು ತುಂಬಾ ಸಹಜ, ಇದರಿಂದ ಮುಕ್ತಿ ಪಡೆಯಲು ನೀವು ಇಲ್ಲಿ ನೀಡಿರುವ ನೈಸರ್ಗಿಕ ವಿಧಾನಗಳನ್ನು ಉಪಯೋಗಿಸಿದರೆ ಬೇಗನೆ ನಿಮ್ಮ ಸುಂದರ ತ್ವಚೆಯನ್ನು ಮರು ಪಡೆಯಬಹುದು.

ಹಲವು ಜನರು ಈ ಸಮಸ್ಯೆಯನ್ನು ಎದುರಿಸುವರು, ಅದು ಪಾದದ ಕೆಳಗೆ ಅಥವಾ ಬೆರಳಿನ ಮದ್ಯ ಚರ್ಮ ಎಡೆಯುವುದು ಸಾಮಾನ್ಯ, ಇದು ನಿಮಗೆ ಮುಜುಗರವನ್ನು ಉಂಟು ಮಾಡಬಹುದು.

ಇದಕ್ಕೆ ಕಾರಣ, ನೀರನ್ನು ಕಡಿಮೆ ಕುಡಿಯುವುದು, ದೇಹದಲ್ಲಿ ನೀರಿನಾಂಶ ಕಡಿಮೆ ಆಗುವುದು, ಫಂಗಲ್ ಸೋಂಕು, ಡರ್ಮಟೈಟಿಸ್, ಮತ್ತು ಕೆಲವು ಬಾರಿ ಅಲರ್ಜಿಯಿಂದ ಕೂಡ ಆಗಬಹುದು.

ಹಲವು ಮನೆ ಔಷಧಿಗಳು ಸುಲಭವಾಗಿದ್ದು, ಬೇಗನೆ ಪರಿಹಾರವನ್ನು ನೀಡುತ್ತವೆ.

೧.ಬೆಚ್ಚಗಿನ ನೀರಿನಲ್ಲಿ ಪಾದವನ್ನು ನೆನೆಸುವುದು

ಪ್ರತಿ ದಿನ ನಿಮ್ಮ ಪಾದವನ್ನು ಬೆಚ್ಚನೆಯ ನೀರಿನಲ್ಲಿ ನೆನೆಸುವುದು ಸತ್ತ ಚರ್ಮವನ್ನು ಕಳೆದುಕೊಳ್ಳಲು ಸಹಾಯವಾಗುತ್ತದೆ. ನಂತರ ಕಾಲನ್ನು ಉಜ್ಜುವುದರಿಂದ ಸತ್ತ ಚರ್ಮವು ಸಂಪೂರ್ಣವಾಗಿ ದೂರವಾಗಿ ಕಾಲಿನ ತ್ವಚೆಯ ಹೊಳಪು ಹೆಚ್ಚುತ್ತದೆ. ಇದರಿಂದ ನಿಮ್ಮ ದೇಹಕ್ಕೂ ವಿಶ್ರಾಂತಿ ಸಿಗುತ್ತದೆ, ಆರಾಮದಾಯಕ ಎನಿಸುತ್ತದೆ.

೧.ಒಂದು ಅಗಲವಾದ ಪಾತ್ರೆ ಅಥವಾ ಟಬ್ ನಲ್ಲಿ ಬೆಚ್ಚನೆಯ ನೀರನ್ನು ಹಾಕಿ ನಿಮ್ಮ ಪಾದವನ್ನು ನೀರಿನಲ್ಲಿ ಮುಳುಗಿಸಿ ೧೦ ನಿಮಿಷಗಳ ಕಾಲ ಹಾಗೆ ಇರಿ.

೨.ಒಂದು ಬ್ರಷ್ ಅಥವಾ ಮೃದು ಕಲ್ಲಿನಿಂದ ಪಾದವನ್ನು ಉಜ್ಜಿ, ಇದರಿಂದ ಸತ್ತ ಚರ್ಮಕೋಶಗಳು ಪಾದದಿಂದ ದೂರವಾಗುತ್ತವೆ.

೩.ಪಾದವನ್ನು ಚೆನ್ನಾಗಿ ತೊಳೆದುಕೊಳ್ಳಿ.

೨.ತೈಲ ಲೇಪನ(ಆಯಿಲ್ ಮಸಾಜ್)

ಚರ್ಮ ಒಣಗುವುದು ಚರ್ಮ ಎಡೆಯಲು ಮೂಲ ಕಾರಣ, ಆದ್ದರಿಂದ ಚರ್ಮವನ್ನು ನೀರಿನಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ಉತ್ತಮ. ಎಣ್ಣೆಯಿಂದ ನಿಮ್ಮ ಪಾದವನ್ನು ಮಸಾಜ್ ಮಾಡುವುದು ಚರ್ಮವನ್ನು ನೀರಿನಾಂಶದಿಂದ ಇರಿಸಲು ಸಹಾಯವಾಗುತ್ತದೆ.

ನೈಸರ್ಗಿಕ ತೈಲಗಳಾದ, ಬಾದಾಮಿ ಎಣ್ಣೆ, ವಿಟಮಿನ್ E ಎಣ್ಣೆ, ಅಥವಾ ಆಲಿವ್ ಎಣ್ಣೆಯನ್ನು ಬಳಸಿ.

೧.ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಕಾಯಿಸಿ ಬೆಚ್ಚಗೆ ಮಾಡಿಕೊಳ್ಳಿ.

೨.ಪಾದಕ್ಕೆ ಇದನ್ನು ನಿಧಾನವಾಗಿ ಹಚ್ಚಿ, ಮಸಾಜ್ ಮಾಡಿ.

೩.ಪ್ರತಿ ದಿನ ಇದನ್ನು ಮಾಡುವುದರಿಂದ ಬೇಗನೆ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

೩.ಲೋಗಸರ

ಶಾಂತಗೊಳಿಸುವ ಗುಣ ಹೊಂದಿರುವ ಲೋಗಸರವು, ಚರ್ಮ ಎಡೆತದಿಂದ ಆಗಿರುವ ಕಿರಿಕಿರಿ ಮತ್ತು ನವೆಯಿಂದ ಮುಕ್ತಿ ನೀಡುವುದರ ಜೊತೆಗೆ ಅದನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಜೊತೆಗೆ ಇದು ಉರಿ, ಊತ ಮತ್ತು ತುರಿಕೆಯನ್ನು ನಿವಾರಿಸುತ್ತದೆ.

ಲೋಗಸರ ಕಾಲಜನ್ ಅನ್ನು ಚರ್ಮದಲ್ಲಿ ಹೆಚ್ಚುವಂತೆ ಮಾಡುತ್ತದೆ, ಇದು ಆರೋಗ್ಯಕರ ಚರ್ಮಕ್ಕೆ ತುಂಬಾ ಅವಶ್ಯಕವಾದದ್ದು.

೧.ಲೋಗಸರದ ಲೋಳೆಯನ್ನು ತೆಗೆದುಕೊಂಡು, ಅದನ್ನು ಪಾದದ ಚರ್ಮಕ್ಕೆ, ಸಂಪೂರ್ಣವಾಗಿ ಹಚ್ಚಿರಿ, ಮತ್ತು ಅದಾಗಿಯೇ ಒಣಗಲು ಬಿಡಿ.

೨.ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.

೩.ಮಲಗುವ ಮುನ್ನ ಲೋಗಸರದ ಲೋಳೆಯನ್ನು ಪಾದಕ್ಕೆ ಹಚ್ಚಿ, ಶುದ್ಧವಾದ ಸಾಕ್ಸ್ ಅನ್ನು ಕಾಲಿಗೆ ಹಾಕಿ ಮಲಗಿರಿ. ಇದರಿಂದ ನಿಮ್ಮ ಪಾದವು ಸುಂದರವಾಗುತ್ತದೆ.

೪.ನಿಂಬೆಹಣ್ಣು

ಆಮ್ಲಿಯ ಗುಣವನ್ನು ಹೆಚ್ಚಾಗಿ ಹೊಂದಿರುವ ನಿಂಬೆಹಣ್ಣು ಸತ್ತ ಚರ್ಮವನ್ನು ಸಂಪೂರ್ಣವಾಗಿ ತೊಲಗಿಸಲು ತುಂಬಾ ಸಹಾಯಕಾರಿ ಆಗಿದೆ. ಜೊತೆಗೆ ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ, ಸೋಂಕನ್ನು ತಡೆಯುತ್ತದೆ.

೧.ನಿಂಬೆಹಣ್ಣಿನ ರಸವನ್ನು ಒಂದು ಅಗಲವಾದ ಪಾತ್ರೆಯಲ್ಲಿ ಬೆಚ್ಚನೆಯ ನೀರಿನ ಜೊತೆ ಮಿಶ್ರಣ ಮಾಡಿ, ಪಾದವನ್ನು ೧೦ ನಿಮಿಷಗಳ ನೆನೆಸಿ.

೨.ನಂತರ ತೊಳೆದುಕೊಳ್ಳಿ.

೩.ಅಥವಾ ನಿಂಬೆಹಣ್ಣಿನ ರಸವನ್ನು ನೇರವಾಗಿ ಪಾದಕ್ಕೆ ಹಚ್ಚಿ, ಅದು ಒಣಗುವ ವರೆಗೆ ಬಿಡಿ.

೪.ಒಣಗಿದ ನಂತರ ಪಾದವನ್ನು ಬೆಚ್ಚನೆಯ ನೀರಿನಿಂದ ತೊಳೆಯಿರಿ.

೫.ಬಾಳೆಹಣ್ಣು

ಇದು ಸಹ ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಸಹಾಯ ಮಾಡುತ್ತದೆ.

೧.ತುಂಬಾ ಹಣ್ಣಾಗಿರುವ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ಪೇಸ್ಟ್ ತರ ಮಾಡಿಕೊಳ್ಳಿ. ಇದಕ್ಕೆ ಒಂದೆರಡು ಹನಿ ಜೇನುತುಪ್ಪವನ್ನು ಸೇರಿಸಬಹುದು.

೨.ಪಾದಕ್ಕೆ ಇದನ್ನು ಹಚ್ಚಿ, ೧೦ ರಿಂದ ೧೫ ನಿಮಿಷಗಳ ಕಾಲ ಬಿಡಿ, ನಂತರ ನೀರಿನಲ್ಲಿ ತೊಳೆಯಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon