ನರ್ಸ್ ಗಳು ಎಂತಹ ಕರ್ತವ್ಯ ಪ್ರಜ್ಞೆ ಉಳ್ಳ ಅದ್ಭುತ ವ್ಯಕ್ತಿಗಳು ಎಂದು ಈ ಚಿತ್ರಗಳು ತೋರಿಸುತ್ತವೆ!
ನರ್ಸ್ ವೃತ್ತಿ ಸಾಮಾನ್ಯದ್ದಲ್ಲ, ನೋವಿನಲ್ಲಿ ಇರುವವರಿಗೆ ಸಹಾಯ ನೀಡಿ, ಸಾಂತ್ವನ ಹೇಳಿ, ನೊಂದವರ ಮೊಗದ ಮೇಲೆ ನಗು ಬರಿಸುವವರೆಗು, ಇಂತಹ ಕಠಿಣ ಅಥವಾ ಹೃದಯ ವಿದ್ರಾವಕ ಪರಿಸ್ಥಿತಿಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆಗೆ ಬದ್ಧರಾಗಿ ಜನರ ಸೇವೆ ಮಾಡುವವರು.
ಹೆರಿಗೆ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಇಂತಹ ನರ್ಸ್ ಗಳ ಭಾವಚಿತ್ರಗಳನ್ನ ಸೆರೆ ಹಿಡಿದ ಛಾಯಾಗ್ರಾಹಕಿ ಕೇಟಿ ಲ್ಯಾನ್ಸರ್ ತನ್ನ ಫೇಸ್ಬುಕ್ ಖಾತೆಯಲ್ಲಿ ಅವುಗಳನ್ನ ಹಂಚಿಕೊಂಡಿದ್ದಾಳೆ. ನರ್ಸ್ ಗಳು ಎಂತಹ ಧೈರ್ಯಶಾಲಿಗಳು, ಧೃತಿಗೆಡದೆ ಕಾರ್ಯ ನಿರ್ವಹಿಸುವ, ಜನರ ನೋವಿಗೆ ಸ್ಪಂದಿಸುವ ದೇವದೂತರು ಎಂಬುದನ್ನು ನಾವು ಈ ಭಾವಚಿತ್ರಗಳಿಂದ ತಿಳಿದುಕೊಳ್ಳಬಹುದು. ನಿಮಗೂ ಈ ಚಿತ್ರಗಳು ಇಷ್ಟ ಆಗುತ್ತವೆ, ನೋಡಿ ಬನ್ನಿ .
