Link copied!
Sign in / Sign up
3
Shares

ಪಿರಿಯಡ್ಸ್ ವೇಳೆ ನಿಮ್ಮ ನೋವು ಹೆಚ್ಚಿಸುವುದು ಈ 5 ವಿಷಯಗಳೇ

ತಿಂಗಳ ಆ ಸಮಯದಲ್ಲಿ, ನಿಮಗೂ ಒಂದು ಹೊದಿಕೆ ಹೊಂದಿಸಿಕೊಂಡು ಮಂಚ ಬಿಟ್ಟು ಬರದೇ ಸುಮ್ಮನೆ ಮಲಗಬೇಕು ಅನಿಸುವುದೇ? ನಿಮಗೆ ಈ ಸಮಯದಲ್ಲಿ ಹೆಚ್ಚು ಆಯಾಸ ಮತ್ತು ಮೈ ಕೈ ನೋವಿನ ಅನುಭವ ಆದರೂ, ಸಂಸಾರ ಅಂತೂ ನಡೆಸಲೇ ಬೇಕು. ನಿಮ್ಮ ದೈನಂದಿನ ಜೀವನ ಎಂದಿನಂತೆ ಸಾಗಲು, ನೀವು ಈ ಸಮಯದಲ್ಲೂ ಎಂದಿನಂತೆಯೇ ಕೆಲಸಗಳಲ್ಲಿ ತೊಡಗಿಸಿಕೊಳ್ಳಲೇ ಬೇಕು.

ನಿಮಗೆ ಈ ಸಮಯದ ಎಲ್ಲಾ ಅಹಿತಕರ ದೇಹ ಬದಲಾವಣೆಗಳನ್ನ ತಡೆಗಟ್ಟಲು ಆಗದಿದ್ದರೂ, ಕೆಲವೊಂದು ವಿಷಯಗಳನ್ನ ಪಾಲಿಸುವ ಮೂಲಕ ಕನಿಷ್ಠಪಕ್ಷ ನಿಮ್ಮ ನೋವು, ಬಳಲಿಕೆಯನ್ನಾದರೂ ಕಡಿಮೆ ಮಾಡಿಕೊಳ್ಳಬಹುದು. ಋತುಸ್ರಾವದ ಸಮಯದ ನೋವನ್ನು ಉಂಟುಮಾಡುವ ಕೆಲವೊಂದು ವಿಷಯಗಳು ಮತ್ತು ಸಂಭಾವ್ಯ ಪರಿಹಾರಗಳ ಪಟ್ಟಿ ಇಲ್ಲಿದೆ ನೋಡಿ.

ಕೆಲವೊಂದು ವ್ಯಾಯಾಮಗಳು

ಅಮೆರಿಕಾದ ಟೆಕ್ಸಾಸ್ ರಾಜ್ಯದ ಬೇಯ್ಲೋರ್ ಸ್ಕಾಟ್ ಅಂಡ್ ವೈಟ್ ಹೆಲ್ತ್ ಸೆಂಟರಿನ ಸಂಶೋಧಕಿಯಾದ ರಾಚೆಲ್ ಅವರ ಅಧ್ಯಯನದ ಪ್ರಕಾರ ತಿಳಿ ವ್ಯಾಯಾಮಗಳಾದ ಕಡಿಮೆ ವೇಗದ ಓಟ (ಸ್ಲೋ ಜಾಗಿಂಗ್) ಅಥವಾ ಕಡಿಮೆ ಪರಿಣಾಮಕಾರಿ ವ್ಯಾಯಾಮಗಳಾದ ಯೋಗ ಮತ್ತು ಪೈಲೇಟ್ಸ್ ಮಾಡುವುದು ಋತುಸ್ರಾವದ ಸಮಯದ ಅಹಿತಕರ ಲಕ್ಷಣಗಳಾದ ನೋವು ಮತ್ತು ಭಾವನತ್ಮಕ ಏರುಪೇರುಗಳನ್ನ ಜಾಸ್ತಿ ಮಾಡುತ್ತವೆ ಎಂಬುದು ತಿಳಿದು ಬಂದಿದೆ. ಹೀಗಾಗಿ ನೀವು ಹೆಚ್ಚು ತೀವ್ರತೆಯ ವ್ಯಾಯಾಮಗಳನ್ನ ಮಾಡಿ, ಇಲ್ಲವಾದಲ್ಲಿ ಪಿರಿಯಡ್ಸ್ ಮುಗಿದ ಮೇಲೆಯೇ ವ್ಯಾಯಾಮಗಳನ್ನ ಮಾಡಿ.


ಸಿಹಿ ತಿನಿಸುಗಳು ಮತ್ತು ಮದ್ಯ

ಪಿರಿಯಡ್ಸ್ ಸಮಯದಲ್ಲಿ ನಿಮಗೆ ಚಾಕಲೇಟ್ ತಿನ್ನಬೇಕು ಎಂಬ ಬಯಕೆ ಮತ್ತಷ್ಟು ಹೆಚ್ಚುತ್ತದೆ. ಈ ಆಸೆಯಿಂದ ನಿಮ್ಮನ್ನು ನೀವು ಹಿಡಿದಿಟ್ಟುಕೊಳ್ಳಲು ಆಗದಷ್ಟು ಆಸೆ ಆಗಬಹುದು, ಆದರೆ ಕೆಲವೊಮ್ಮೆ ಇದರಿಂದಲೇ ನಿಮ್ಮ ಲಕ್ಷಣಗಳು ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ. ತಜ್ಞರ ಪ್ರಕಾರ ನೀವು ಈ ಸಮಯದಲ್ಲಿ ಸಿಹಿ ತಿನಿಸುಗಳು ಮತ್ತು ಮದ್ಯಪಾನದಿಂದ ದೂರವಿರಬೇಕು. ಏಕೆಂದರೆ ಇವುಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ಒಂದೇ ಸಮನೆ ಏರಿಸುತ್ತವೆ ತೇಗು ಮತ್ತು ಆಯಾಸ ಉಂಟು ಮಾಡುತ್ತವೆ.


ಕೆಫೇನ್

ಕಾಫಿ ಅಲ್ಲಿ ಕಾಣಸಿಗುವ ಕೆಫೆನ್ ಮೂತ್ರವರ್ಧಕ ವಸ್ತು ಎಂಬುದು ತಿಳಿದು ಬಂದಿದ್ದು, ಇದು ಹೆಂಗಸರಲ್ಲಿ ನಿರ್ಜಲೀಕರಣ (ಡಿಹೈಡ್ರೇಷನ್) ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇದು ಒಂದು ಉದ್ದೀಪಕ ವಸ್ತು ಆಗಿದ್ದು, ಇದು ಗರ್ಭಕೋಶಕ್ಕೆ ತೊಂದರೆ ಮಾಡಿ ಸೆಡೆತಗಳನ್ನ ಹೆಚ್ಚು ಮಾಡಿದರು, ಕೇವಲ ಕಾಫಿ ಕುಡಿಯುವುದನ್ನ ಬಿಟ್ಟರೆ ಋತುಸ್ರಾವದ ನೋವು ತುಂಬಾ ಕಡಿಮೆ ಆಗುತ್ತದೆ ಎನ್ನುವುದು ಕೂಡ ಸಾಬೀತಾಗಿಲ್ಲ. ಹೀಗಾಗಿ ನಿಮಗೆ ಬೆಳಗ್ಗೆ ಎದ್ದೊಡನೆ ಕಾಫಿ ಇಲ್ಲದೆ ಮುಂದುವರೆಯಲು ಆಗುವುದೇ ಇಲ್ಲ ಎಂದರೆ, ನೀವು ಎಂದಿನಂತೆ ಕಾಫೀ ಸೇವಿಸಿ. ಆದರೆ ನಿಮಗೆ ಕಾಫಿ ಇಲ್ಲದೆ ಇದ್ದರೂ ನಡೆಯುತ್ತದೆ ಎಂದರೆ, ಈ ಸಮಯದಲ್ಲಿ ಕುಡಿಯುವುದನ್ನೇ ಬಿಟ್ಟು ಬಿಡಿ.


ಒತ್ತಡ

ಮಾನಸಿಕ ಒತ್ತಡವು ನಿಮ್ಮ ಋತುಸ್ರಾವದ ನೋವಿನ ಮೇಲೆ ಪರಿಣಾಮ ಬೀರದೆ ಇದ್ದರೂ, ಇದು ನಿಮ್ಮ ಭಾವನಾತ್ಮಕ ಏರುಪೇರುಗಳನ್ನ ಮತ್ತಷ್ಟು ಕೆಟ್ಟದಾಗಿಸುತ್ತದೆ. ಬಹುತೇಕ ಜನರಿಗೆ ತಮ್ಮ ಮೇಲಿರುವ ಒತ್ತಡವನ್ನ ಸಂಪೂರ್ಣವಾಗಿ ಕೆಳಗಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ, ಅವರ ಮನಸ್ಸಿಗೆ ಶಾಂತಿ ನೀಡುವಂತಹ ಯಾವುದಾದರೂ ಒಂದು ಚಟುವಟಿಕೆಯನ್ನು ತಮ್ಮ ದಿನದ ವೇಳಾಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು. ಉದಾಹರಣೆಗೆ ವಾಕಿಂಗ್, ಯೋಗ ಮಾಡುವುದು, ಸಾಕು ಪ್ರಾಣಿಗಳೊಂದಿಗೆ ಆಟ ಆಡುವುದು.


ದಿನಕ್ಕೆ ಕನಿಷ್ಠಪಕ್ಷ ಮೂರು ಬಾರಿ ಆದರೂ ಊಟ ಮಾಡದೇ ಇರುವುದು

ಸಾಧಾರಣವಾಗಿ ಎಲ್ಲರೂ ಶಿಫಾರಸು ಮಾಡುವುದು ದಿನಕ್ಕೆ ಮೂರು ಬಾರಿ ಆಹಾರ ಸೇವಿಸಿ ಎಂದು. ಆದರೆ ನಿಮಗೆ ವಾಕರಿಕೆ ಉಂಟಾಗುತ್ತಿದ್ದರೆ, ನೀವು ಸ್ವಲ್ಪ ಪ್ರಮಾಣದಲ್ಲಿಯೇ ಆಹಾರವನ್ನ, ಆಗಿದಾಂಗ್ಗೆ ತಿನ್ನಿ. ನೀವು ಬಹಳ ಹೊತ್ತು ಹೊಟ್ಟೆಯನ್ನು ಖಾಲಿ ಬಿಟ್ಟರೆ, ಅದು ಅಸಿಡಿಟಿ ಉಂಟು ಮಾಡಿ ವಾಕರಿಕೆ ತರುತ್ತದೆ. ಆಗಿಂದಾಗೆ ತಿನ್ನುವುದು ನಿಮ್ಮ ಶಕ್ತಿಯನ್ನು ಕೂಡ ಹಾಗೆ ಇಟ್ಟಿರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನೂ ನಿಯಂತ್ರಣದಲ್ಲಿರಿಸಿ ನಿಮಗೆ ಆಯಾಸ, ಇರಿಸುಮುರಿಸು ಉಂಟಾಗುವುದನ್ನು ತಪ್ಪಿಸುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon