Link copied!
Sign in / Sign up
0
Shares

ಸಂತೋಷಕರವಾಗಿ ಮತ್ತು ನೋವಿಲ್ಲದೆ ಎದೆ ಹಾಲುಣಿಸಲು ಸಲಹೆಗಳು

ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲೇ ಸಂಜೀವಿನಿ. ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒಳಗೊಂಡ ದೆಹಲಿಯಲ್ಲಿ ಮಗುವಿನ ರೋಗ ಪ್ರತಿರೋಧಕ ಶಕ್ತಿಯನ್ನು ವರ್ಧಿಸಲು ಅಗತ್ಯವಾದ ಎಲ್ಲ ಕೋಶಗಳನ್ನು ಒಳಗೊಂಡಿದೆ. ಆದ ಕಾರಣ ಜನಿಸಿದ ಮೊದಲ ಆರು ತಿಂಗಳವರೆಗಂತೂ, ಮಗುವು ತಾಯಿಯ ಎದೆಹಾಲನ್ನೇ ಸೇವಿಸುವಂತೆ ತನ್ನನ್ನು ತಾನು ಸಿದ್ಧಗೊಳಿಸಬೇಕು.

ಎದೆಹಾಲುಣಿಸುವುದು ತುಸು ತ್ರಾಸದಾಯಕವಾಗಿ ತಾಯಿಯರಿಗೆ ಉಪಯುಕ್ತವೆನಿಸುವ ಕೆಲವು ಸಲಹೆಗಳು ಇಲ್ಲಿದೆ ನೋಡಿ.

೧.ಅಮೃತವನ್ನು ಸವಿಯುವಂತೆ ಸಹಕರಿಸಿ

ಮೊಲೆಯೂಡಿಸುವಾಗ, ಮಗುವಿಗೆ ಸಾಕಷ್ಟು ಎದೆಹಾಲು ಲಭಿಸುವಂತೆ ಗಮನಿಸಬೇಕು. ಸರಿಯಾದ ಪ್ರಮಾಣದಲ್ಲಿ ಎದೆಹಾಲು ಲಭಿಸುವಂತೆ ಮೊಲೆಯೂಡಿಸಬೇಕು. ಎದೆಹಾಲು ಸರಿಯಾಗಿ ಲಭ್ಯವಾಗದಿದ್ದರೆ ಮಗುವು ಕೆಲವೊಮ್ಮೆ ಕಡಿಯಲು ಬಹುದು. ಆದ ಕಾರಣ ಮಗುವಿಗೆ ಸರಿಯಾಗಿ ಎದೆಹಾಲು ಸಿಗುವಂತೆ ಅನುವು ಮಾಡಿಕೊಡಿ.

೨.ಮಗುವಿನ ತೀರ್ಮಾನಕ್ಕೆ ಬಿಟ್ಟುಬಿಡಿ

ಹಸಿವಾದ ಮಗುವು ಅಳಲು ಪ್ರಾರಂಭಿಸುವರು ಹಾಗೂ ಹೊಟ್ಟೆ ತುಂಬಿದ ಬಳಿಕ ತೃಪ್ತಿಗೊಂಡ ಮಕ್ಕಳು ಸ್ವತಃ ಹಾಲು ಕುಡಿಯುವುದನ್ನು ನಿಲ್ಲಿಸುವರು. ಅವರ ಅಭ್ಯಾಸವನ್ನು ಬದಲಿಸುವಂತೆ, ಅವರಿಗೆ ಒತ್ತಡ ಹೇರಿದರೆ ಮಕ್ಕಳು ಕಿರಿಕಿರಿಯನ್ನು ಅನುಭವಿಸುತ್ತಾರೆ. ಆದ ಕಾರಣ,ನಿಮ್ಮ ಮಗುವಿನ ವೇಳಾಪಟ್ಟಿ ಅನುಗುಣವಾಗಿ ಮಗುವಿಗೆ ಹಾಲೂಡಿಸಿರಿ.

೩.ತಾಯಿಯ ಸ್ವಾಸ್ಥ್ಯ ಭರಿತ ಆಹಾರ ಸೇವನೆ

ನೀವು ಏನನ್ನು ಸೇವಿಸುವಿರೋ, ಅದೇ ಮಗುವಿಗೆ ಎದೆಹಾಲು ಮೂಲಕ ಲಭಿಸುವುದು. ಮಗುವಿಗೆ ವಿವಿಧ ರೀತಿಯ ಪೋಷಕಾಂಶಗಳು ಲಭಿಸಬೇಕೆಂದು ನೀವು ಬಯಸಿದರೆ ನೀವು ಆರೋಗ್ಯಪೂರ್ಣ ಆಹಾರವನ್ನು ಸೇವಿಸಬೇಕಾಗುತ್ತದೆ. ನೀವು ಸೇವಿಸುವ ಪ್ರತಿ ಆಹಾರವೂ ನಿಮ್ಮ ಎದೆಹಾಲಿನ ರುಚಿಯನ್ನು ಬದಲಾಯಿಸುತ್ತದೆ. ಆದ ಕಾರಣ ಮಗುವಿಗೆ ವ್ಯತ್ಯಸ್ಥ ರೀತಿಯ ಹಾಲಿನ ರುಚಿ ತೋರಿಸಲು ನೀವು ಹಲವು ರೀತಿಯ ಆಹಾರಗಳನ್ನು ಸೇವಿಸುವುದು ಉತ್ತಮ.

೪.ಸ್ನಾನವಾದ ತಕ್ಷಣವೇ ಎದೆಹಾಲೂಡಿಸಿ

ಮಗುವಿನ ಜನನವಾದ ತಕ್ಷಣವೇ ಮಗುವಿಗೆ ಹಾಲೂಡಿಸಬೇಕು. ಮೊತ್ತ ಮೊದಲಾಗಿ ನಿಮ್ಮ ಶರೀರದಿಂದ ಉತ್ಪಾದಿಸಲ್ಪಡುವ ಹಾಲಿನಲ್ಲಿ ಮಗುವಿಗೆ ಅಗತ್ಯವಾದ ಎಲ್ಲ ಪೋಷಕಾಂಶಗಳು ಅಡಗಿರುತ್ತವೆ.ಆದ ಕಾರಣ ಮಗುವಿನ ಜನನದ ಗಂಟೆಗಳೊಳಗಾಗಿ ಅದಕ್ಕೆ ಮೊಲೆಯುಣಿಸಬೇಕೆಂದು ಉಪದೇಶಿಸಲಾಗಿದೆ.

೫.ಮಗುವನ್ನೆತ್ತಿಕೊಳ್ಳುವ ರೀತಿ

ಮಗುವನ್ನು ಎತ್ತಿಕೊಂಡೇ ಹಾಲುಣಿಸಬೇಕಾಗುತ್ತದೆ. ಆದ ಕಾರಣ ತಾಯಿ ಮಕ್ಕಳಿಬ್ಬರಿಗೂ ಆರಾಮದಾಯಕ ಸ್ಥಿತಿಯನ್ನು ನೀಡುವಂತೆ ಮಗುವನ್ನು ಎತ್ತಿಕೊಳ್ಳಿ. ಹೀಗೆ ಮಾಡುವುದರಿಂದ ನಿಮಗೂ ಆಯಾಸವಾಗದು ಹಾಗೂ ಮಗುವಿಗೂ ಸಂಪೂರ್ಣ ಪೋಷಕಾಂಶ ಭರಿತ ಆಹಾರ ಲಭಿಸುವುದು. ನಿಮ್ಮ ಎತ್ತರಕ್ಕೆ ಅನುಗುಣವಾಗಿ, ನಿಮ್ಮ ಮಡಿಲ ಮೇಲೆ ತಲೆದಿಂಬೊಂದನ್ನಿಟ್ಟುಕೊಂಡು, ಅದರ ಮೇಲೆ ಮಗುವನ್ನು ಮಲಗಿಸಿಯೂ ಅಮೃತವನ್ನೀಯಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon