Link copied!
Sign in / Sign up
1
Shares

ಮಗುವಾದ 6 ತಿಂಗಳುಗಳ ನಂತರವೂ ಸೆಕ್ಸ್ ವೇಳೆ ನೋವಾಗುತ್ತಿದ್ದರೆ ಏನರ್ಥ?

ಮಗುವಾದ ಮೇಲೆ ನೋವು ಒಳಗೊಂಡ ಲೈಂಗಿಕ ಅನುಭವವನ್ನ ನೀವು ಸುಮ್ಮನೆ ಸಹಿಸಿಕೊಳ್ಳಬೇಕಿಲ್ಲ. ಅದೃಷ್ಟವಶಾತ್, ಬಹುತೇಕ ಅಸ್ವಸ್ಥತೆಗಳನ್ನ ನಾವು ಗುಣಪಡಿಸಬಹುದು. ಹೆರಿಗೆಯಾದ 6 ವಾರಗಳ ನಂತರ ಬಹುತೇಕ ಹೆಂಗಸರು ಹಿತಕರ ಲೈಂಗಿಕ ಅನುಭವವನ್ನ ಹೊಂದಬಹುದು. ಆದರೆ ಕೆಲವಷ್ಟು ಹೆಂಗಸರು ಮಗುವಾಗಿ ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷಗಳ ಕಾಲ ಕಳೆದರೂ, ಹಿತಕರ ಲೈಂಗಿಕ ಅನುಭವವನ್ನ ಹೊಂದಲು ಆಗುವುದಿಲ್ಲ. ಆದರೆ ನಿಮಗೆ ಮಗುವಾಗಿ ಆರು ತಿಂಗಳುಗಳ ಕಾಲ ಕಳೆದರೂ ಸೆಕ್ಸ್ ವೇಳೆ ನೋವು ಉಂಟಾಗುತ್ತಿದ್ದರೆ, ಅದಕ್ಕೆ ಕಾರಣಗಳು ಮತ್ತು ವೈದ್ಯರು ನಿಮಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸುತ್ತೇವೆ.


೧. ಎದೆಹಾಲುಣಿಸುವಿಕೆ


ಮಗುವಿಗೆ ನೀವು ಎದೆಹಾಲು ನೀಡುವಾಗ, ನಿಮ್ಮ ದೇಹದಲ್ಲಿ ಈಸ್ಟ್ರೋಜೆನ್ (ಮದಜನಕ) ಹಾರ್ಮೋನ್ ಪ್ರಮಾಣ ಕಡಿಮೆ ಇರುತ್ತದೆ. ದುರದೃಷ್ಟವಶಾತ್, ಈಸ್ಟ್ರೋಜೆನ್ ಕೊರತೆಯು ನಿಮ್ಮ ಯೋನಿಯು ವದ್ದೆಯಾಗದೆ, ಡ್ರೈ ಆಗಿ ಇರುವಂತೆ ಮಾಡುತ್ತದೆ. ಇದು ನಿಮ್ಮ ಲೈಂಗಿಕ ಅನುಭವವು ನೋವಿನಿಂದ ಕೂಡಿರುವಂತೆ ಮಾಡುತ್ತದೆ. ಹೀಗಾಗಿ ನೀವು ಸೆಕ್ಸ್ ವೇಳೆ ಲ್ಯೂಬ್ರಿಕ್ಯಾಂಟ್ ಅನ್ನು ಬಳಸಬಹುದು. ಈ ತೊಂದರೆಯು ತಾನಾಗಿಯೇ ಕಾಲಕ್ರಮೇಣ ಕಡಿಮೆ ಆಗುತ್ತಾ ಹೋಗುತ್ತದೆ.


೨. ವಾಸಿ ಆಗಿರದ ಹರಿತ


ಒಂದು ವೇಳೆ ನಿಮ್ಮ ಹೆರಿಗೆಯ ವೇಳೆ ನಿಮ್ಮ ದೇಹದಲ್ಲಿ ದೊಡ್ಡ ಹರಿತ ಉಂಟಾಗಿದ್ದರೆ, ಸೆಕ್ಸ್ ವೇಳೆ ನೀವು ನೋವು ಅನುಭವಿಸುವ ಸಾಧ್ಯತೆಗಳು ಇನ್ನೂ ಹೆಚ್ಚಾಗುತ್ತವೆ. ಆದರೆ ಒಂದು ವರ್ಷದಷ್ಟೊತ್ತಿಗೆ, ಈ ಸಾಧ್ಯತೆಗಳು ಕೇವಲ 8 ರಿಂದ 10 ಪ್ರತಿಶತ ಮಾತ್ರ ಇರುತ್ತವೆ. ಹೆರಿಗೆ ವೇಳೆ ಉಂಟಾದ ಹರಿತಗಳು, ಗಾಯಗಳು ಗುಣಮುಖವಾಗುವುದರ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ.


೩. ವಜಿನಿಸ್ಮಸ್, ಸ್ನಾಯು ಸೆಳೆತ ಅಥವಾ ಕಂಡು ಹಿಡಿಯಲಾಗದ ಅಸ್ವಸ್ಥತೆ


ಕೆಲವು ತಜ್ಞರ ಪ್ರಕಾರ ಹೆರಿಗೆಯು ವಜಿನಿಸ್ಮಸ್ ಉಂಟುಮಾಡಬಹುದು. ಇದು ಏನೆಂದು ಕೇವಲ ಕೆಲವರಿಗೆ ಮಾತ್ರ ತಿಳಿದಿದ್ದು, ಇದು ಹೆರಿಗೆ ನಂತರದ ಹಲವು ತಿಂಗಳುಗಳು, ವರ್ಷಗಳು ಕಳೆದ ನಂತರವೂ ನಿಮಗೆ ಸೆಕ್ಸ್ ವೇಳೆ ನೋವು ಉಂಟುಮಾಡಬಹುದು. ಒಂದು ವೇಳೆ ನಿಮಗೂ ಹಲವಾರು ತಿಂಗಳುಗಳು ಕಳೆದ ನಂತರವೂ ಸಂಭೋಗ ಕ್ರಿಯೆಯಲ್ಲಿ ನೋವು ಉಂಟಾಗುತ್ತಿದ್ದರೆ, ವೈದ್ಯರನ್ನ ಸಂಪರ್ಕಿಸಿ.

ಮಸಲ್ ಸ್ಪಾಸ್ಮ್ ಅಥವಾ ಸೆಡೆತವು ಮಗುವಿಗೆ ಜನ್ಮ ನೀಡಿದ ಮೇಲೆ ಉಂಟಾಗಬಹುದು. ಆದರೆ ನೀವು ಇದನ್ನು ನಿಶ್ಚಿತವಾಗಿ ಕಂಡು ಹಿಡಿಯಲು ಆಗುವುದಿಲ್ಲ. ಹೀಗಾಗಿ ನಿಮಗೆ ಸ್ವಲ್ಪವೇ ಹೆಚ್ಚು ನೋವು ಕಾಣಿಸಿಕೊಂಡರೂ, ನೀವು ಲ್ಯೂಬ್ರಿಕ್ಯಾಂಟ್ ಬಳಸುವುದು ಒಳ್ಳೆಯದು.


೪. ಮಾನಸಿಕ ಒತ್ತಡ, ಆಯಾಸ ಮತ್ತು ಹೊಸ ತಾಯ್ತನ


ಹೆಂಗಸರು ಮಗುವಿಗೆ ಜನ್ಮ ನೀಡಿದ ಮೇಲೆ, ಹಲವಾರು ಬದಲಾವಣೆಗಳನ್ನ ಎದುರಿಸಬೇಕು. ಇದರೊಂದಿಗೆ ಹೊಸ ಜವಾಬ್ದಾರಿ, ದೈಹಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ಅವರಿಗೆ ಸಮಯ ಕೂಡ ಸಿಗುವುದಿಲ್ಲ. ಇಂತಹ ಸಮಯದಲ್ಲಿ ಅವರಲ್ಲಿ ಲೈಂಗಿಕಾಸಕ್ತಿ ಕಡಿಮೆ ಆಗುತ್ತದೆ. ಆಗ ಯೋನಿಯು ಒಣಗುತ್ತದೆ ಮತ್ತು ಅದರಿಂದ ಸೆಕ್ಸ್ ವೇಳೆ ನೋವು ಉಂಟಾಗುತ್ತದೆ. ಹೀಗಾಗಿ ನೀವು ಒತ್ತಡವನ್ನ ನಿಭಾಯಿಸುವ ದಾರಿಯನ್ನು ಕಂಡುಕೊಂಡರೆ, ಈ ತೊಂದರೆಯನ್ನೂ ದೂರ ಮಾಡಬಹುದು.


೫. ಪ್ರಸವ ನಂತರದ ಖಿನ್ನತೆ


ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಅವರ ಪ್ರಕಾರ ಹತ್ತರಲ್ಲಿ ಒಂದು ಮಹಿಳೆಯಲ್ಲಿ  ಪ್ರಸವ ನಂತರದ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವುಗಳು ಅಕ್ಷರಸಹ ನಿಮ್ಮ ಲೈಂಗಿಕಾಸಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಒಂದು ವೇಳೆ ನೀವು ಹೊಸ ತಾಯಿಯಾಗಿದ್ದು, ಖಿನ್ನತೆಯಿಂದ ಬಳಲುತ್ತಿದ್ದೀರಾ ಎಂದಾದಲ್ಲಿ ಕೂಡಲೇ ತಜ್ನರನ್ನ ಭೇಟಿ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon