Link copied!
Sign in / Sign up
20
Shares

ನಿಮ್ಮ ಮೊಲೆತೊಟ್ಟುಗಳು ನೋವುತ್ತಿದ್ದರೆ, ಇಲ್ಲಿವೆ 5 ಮನೆ ಮದ್ದುಗಳು!

ಎಲ್ಲಾ ಸಸ್ತನಿಗಳಂತೆ ಎದೆಹಾಲುಣಿಸುವುದು ಮಾನವರ ಸ್ವಾಭಾವಿಕ ಗುಣ ಲಕ್ಷಣವಾಗಿದೆ. ಮಗು ಜನನದ ನಂತರ  ಯಾವುದೇ ವಿಳಂಬವಿಲ್ಲದೆ ಶಿಶುವಿಗೆ ಎದೆಹಾಲುಣಿಸುವುದು ವೈದ್ಯಕೀಯವಾಗಿ ಪ್ರೋತ್ಸಾಹಿಸಲ್ಪಡುತ್ತದೆ. ಇದು ತಾಯಿ ಮತ್ತು ಮಗು ಇಬ್ಬರ ಆರೋಗ್ಯ ದೃಷ್ಟಿಯಿಂದ ತುಂಬಾ ಪ್ರಮುಖವಾದ ಕೆಲಸ. ಇದು ಸಹಜ ಮತ್ತು ನೈಸರ್ಗಿಕ ಕ್ರಿಯೆ. ಎದೆಹಾಲುಣಿಸುವುದರ ಜೊತೆಗೆ ಸಹಜವಾಗಿ ಕೆಲವು ಸಮಸ್ಯೆಗಳು ಬರುತ್ತವೆ, ಅದರಲ್ಲಿ ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ, ಮೊಲೆತೊಟ್ಟು ನೋಯುವುದು. ಅಂಕಿಅಂಶಗಳ ಪ್ರಕಾರ ತಾಯಿಯಂದಿರು ಎದೆಹಾಲುಣಿಸುವಾಗ ಶೇಕಡ ೮೦(೮೦%) ಮಹಿಳೆಯರು ತೊಟ್ಟು ನೋಯುವ ತೊಂದರೆಯನ್ನು ಅನುಭವಿಸುತ್ತಾರೆ.

ಒಳ್ಳೆಯ ವಿಷಯವೇನೆಂದರೆ, ಇದು ವಾಸಿಯಾಗುವಂತಹ ನೋವು ಮತ್ತು ಇದನ್ನು ಸರಿಪಡಿಸಿಕೊಳ್ಳಲು ಬೇಕಾಗುವ ಅಂಶಗಳು ಅಥವಾ ವಿಧಾನಗಳು ನಿಮ್ಮ ಮನೆಯಲ್ಲೇ ಸಿಗುತ್ತದೆ.

ಮೊಲೆತೊಟ್ಟುಗಳ ಬೇನೆ(ನೋವು) ಉಂಟಾಗಲು ಕಾರಣವೇನು?

ಮಗುವು ಎದೆಹಾಲು ಕುಡಿಯುವಾಗ ತನ್ನ ತಾಯಿಯ ಮೊಲೆಯನ್ನು ಸರಿಯಾಗಿ ಹಿಡಿಯದಿರುವುದು, ಮೊಲೆತೊಟ್ಟು ಬೇನೆ ಉಂಟಾಗಲು ಸಾಮಾನ್ಯ ಕಾರಣವಾಗಿದೆ. ಮಗುವನ್ನು ಸರಿಯಾದ ಸ್ಥಾನದಲ್ಲಿ ಇರಿಸಿಕೊಂಡು ಎದೆಹಾಲು ಕುಡಿಸುವುದು ಒಂದು ಒಳ್ಳೆಯ ಪರಿಹಾರ.

ಇದರ ಜೊತೆಗೆ ಮೊಲೆತೊಟ್ಟು ಬೇನೆಯಾಗಲು ಇತರೆ ಕಾರಣಗಳೆಂದರೆ, ಗರ್ಭಾವಸ್ಥೆಯಲ್ಲಾದ ಹಾರ್ಮೋನುಗಳ ಬದಲಾವಣೆ, ತಪ್ಪಾದ ಸ್ತನಬಂಧ(ಬ್ರಾ) ಗಾತ್ರ, ಒಣ ಚರ್ಮ ಮೊಲೆಯಮೇಲೆ ಬಿರುಕುಗಳನ್ನು ಉಂಟುಮಾಡುತ್ತದೆ, ಚರ್ಮ ಸೋಂಕು, ಸ್ತನ ಕ್ಯಾನ್ಸರ್, ಎದೆಯಲ್ಲಿ ತೊಂದರೆಗಳು, ಮುಟ್ಟಿನ ನಂತರದ ಲಕ್ಷಣಗಳು, ಅಥವಾ ಕೆಲವು ಮಾತ್ರೆಗಳನ್ನು ಮಹಿಳೆ ಸೇವಿಸುವುದರಿಂದ ಮೊಲೆತೊಟ್ಟು ಬೇನೆ ಉಂಟಾಗುತ್ತದೆ.

ಬೇನೆಯಾದ ಮೊಲೆತೊಟ್ಟುಗಳ ಸಾಮಾನ್ಯ ರೋಗಲಕ್ಷಣಗಳು:

ಬೇನೆಯಾದ ಮೊಲೆತೊಟ್ಟುಗಳಿಂದ ಬಳಲುತ್ತಿರುವ ತಾಯಂದಿರು ಸ್ತನ ಪ್ರದೇಶದಲ್ಲಿ ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸುತ್ತಾರೆ ಎಂದು ಗಮನಿಸಲಾಗಿದೆ, ಜೊತೆಗೆ ಸ್ತನಗಳಲ್ಲಿ ಅಥವಾ ಸ್ತನದ ತೊಟ್ಟುಗಳಲ್ಲಿ ಕಡಿತ, ಸೋರಿಕೆ, ಊತವಾಗುವುದು ಇದರ ರೋಗಲಕ್ಷಣವಾಗಿದೆ. ಸ್ತನ ಮೃದುವಾಗುವುದು, ಸ್ತನಗಳಲ್ಲಿ, ಬಿರುಕು, ರಕ್ತಸ್ರಾವ, ತಲೆನೋವು, ನಿದ್ರಾಹಿನತೆ, ಊರಿಯುವುದು ಮುಂತಾದ ಲಕ್ಷಣಗಳನ್ನು ಕಾಣಬಹುದು.

ಮೊಲೆತೊಟ್ಟುಗಳ ಬೇನೆಯನ್ನು ತಡೆಗಟ್ಟಲು ಕೆಲವು ಸಲಹೆಗಳು:

೧.ವೈದ್ಯಕೀಯ ಸಿಬ್ಬಂದಿ ನೀಡಿದ ಸಲಹೆ ಪ್ರಕಾರ ಸ್ತನ್ಯಪಾನ ಮಾಡಿಸುವಾಗ ಸರಿಯಾದ ಭಂಗಿಯಲ್ಲಿ ಎದೆಹಾಲುಣಿಸುವುದು.

೨.ಮಗುವಿನ ಭುಜದ ಕೆಳಗೆ ನಿಮ್ಮ ಕೈಯನ್ನು ಇರಿಸುವ ಮೂಲಕ ಮಗುವಿಗೆ ಆಸರೆಯಾಗುವುದು.

೩.ಮಗುವು ನಿಮ್ಮ ಮೊಲೆಯ ತೊಟ್ಟನ್ನು ತಪ್ಪಾಗಿ ಹಿಡಿದುಕೊಂಡಿದ್ದರೆ, ನಿಮ್ಮ ಬೆರಳನ್ನು ಮಗುವಿನ ಬಾಯಿಗೆ ಹಾಕಿ ಸ್ತನದಿಂದ ಬಿಡಿಸಿ, ಮತ್ತೇ ಸರಿಯಾಗಿ ಸ್ತನ ತೊಟ್ಟನ್ನು ಹಿಡಿಸಿ ಎದೆಹಾಲುಣಿಸುವುದು.

೪.ವೈದ್ಯಕೀಯವಾಗಿ ಸಲಹೆ ಪಡೆಯಿರಿ, ವಿಳಂಬವಾದರೆ, ದೊಡ್ಡ ಸಮಸ್ಯೆ ಹಾಗಬಹುದು.

ನೋಯುತ್ತಿರುವ ಮೊಲೆತೊಟ್ಟುಗಳಿಗೆ ಐದು ಸರಳ ಮನೆಮದ್ದು ಪರಿಹಾರಗಳು:

೧. ಎದೆ ಹಾಲು

ಈ ಸಮಸ್ಯೆಗೆ ಎದೆ ಹಾಲು ಕುಡಿಸುವುದು ಒಂದು ಪ್ರತಿವಿಷವಾಗಿದೆ ಎಂದು ಆಶ್ಚರ್ಯ ಪಡಬೇಕಿಲ್ಲ. ಎದೆ ಹಾಲನ್ನು ಮಗುವಿಗೆ ಎದೆಹಾಲುಣಿಸುವ ಮೊದಲು ಮತ್ತು ಎದೆಹಾಲುಣಿಸಿದ ನಂತರ ತೊಟ್ಟುಗಳಿಗೆ ಹಾಕಿಕೊಂಡು, ಸ್ವಲ್ಪ ಹೊತ್ತು ಒಣಗಲು ಬಿಡುವುದು ಒಳ್ಳೆಯ ಪರಿಹಾರ. ಒಂದು ದಿನದಲ್ಲಿ ಹಲವು ಬಾರಿ ಇದನ್ನು ಮಾಡುವುದು ಒಳ್ಳೆಯದು.

೨. ಬಿಸಿ ಬಟ್ಟೆ(ಹಾಟ್ ಪ್ಯಾಡ್)

ಒಂದು ಬಟ್ಟೆಯನ್ನು ಬೆಚ್ಚನೆಯ ನೀರಿನಲ್ಲಿ ಅದ್ದಿ, ಅದರಲ್ಲಿರುವ ಹೆಚ್ಚುವರಿ ನೀರು ಕೆಳಗೆ ಬಿಳುವಂತೆ ಹಿಂಡಿ, ಆ ಬಟ್ಟೆಯನ್ನು ಸ್ತನದ ಮೇಲೆ ಮೆತ್ತಗೆ ಒತ್ತುವುದರಿಂದ ನೋವಿನಿಂದ ಉಪಶಮನ ದೊರಕುತ್ತದೆ. ಪುನಾರವರ್ತಿತವಾಗಿ ಮಾಡಬಹುದು. ಈ ವಿಧಾನದಿಂದ ಹೆಚ್ಚಿನ ತಾಯಿಯಂದಿರು ನೋವಿನಿಂದ ಮುಕ್ತಿಯೊಂದಿದ್ದಾರೆ.

೩. ಮಂಜು ಗಡ್ಡೆಗಳು

ಒಂದು ತೆಳ್ಳನೆಯ ಬಟ್ಟೆಗೆ ನಾಲ್ಕೈದು ಮಂಜುಗಡ್ಡೆಗಳನ್ನು ಹಾಕಿ ಕಟ್ಟಿ, ಅದನ್ನು ಸ್ತನಗಳಿಗೆ ಒತ್ತುವುದರಿಂದಲೂ ಕೂಡ ನೋವನ್ನು ಕಡಿಮೆ ಮಾಡಬಹುದು.

೪. ತುಳಸಿ

ಸಾಮಾನ್ಯವಾಗಿ ಕಂಡುಬರುವ ಮತ್ತು ಸುಲಭವಾಗಿ ಲಭ್ಯವಿರುವ ಗಿಡಮೂಲಿಕೆ ಈ ಸ್ಥಿತಿಗೆ ತುಂಬಾ ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ. ಕೆಲವು ತುಳಸಿ ಎಲೆಗಳನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಂಡು ಗಂಜಿಯಂತೆ(ಪೇಸ್ಟ್) ಮಾಡಿಕೊಳ್ಳಿ, ಅದನ್ನು ನೋವಾಗುತ್ತಿರುವ ಜಾಗದಲ್ಲಿ ಹಾಕಿ ಸ್ವಲ್ಪ ಹೊತ್ತು ಒಣಗಲು ಬಿಡಿ, ದಿನಕ್ಕೆ ಮೂರರಿಂದ ನಾಲ್ಕು ಬಾರಿ ಇದೆ ತರ ಒಂದು ವಾರದ ವರೆಗೆ ಅಥವಾ ನೋವು ಕಡಿಮೆಯಾಗುವವರೆಗೆ ಮಾಡಿ. ಮಗುವಿಗೆ ಹಾಲುಣಿಸುವ ಮೊದಲು ನಿಮ್ಮ ಸ್ತನಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

೫.ಲೋಗಸರ(ಆಲೋವೆರಾ)

ರಕ್ಷಿಸಲು ಬರುವ ಮತ್ತೊಂದು ಅದ್ಭುತ ಗಿಡ ಮೂಲಿಕೆ!, ಲೋಗಸರ, ಗಿಡದ ಎಲೆಯಲ್ಲಿ ಬರುವ ಲೋಳೆಯನ್ನು(ಜೆಲ್) ತಗೆದುಕೊಂಡು ನಿಮ್ಮ ಸ್ತನದ ಮೇಲೆ ಅಂಗಮರ್ಧನ ಮಾಡಿಕೊಳ್ಳಿ, ಮತ್ತು ಸ್ವಲ್ಪ ಸಮಯ ಅದನ್ನು ಅಲ್ಲೇ ಒಣಗಲು ಬಿಡಿ. ತುಳಸಿ ಎಲೆಯಲ್ಲಿ ಮಾಡುವ ವಿಧಾನವನ್ನೇ ಇದರಲ್ಲೂ ಅನುಸರಿಸಿ. ಮಗುವಿಗೆ ಹಾಲುಣಿಸುವ ಮೊದಲು ಸ್ತನವನ್ನು ತೊಳೆದುಕೊಳ್ಳಿ. 

ನೀವು ಮೊದಲ ಬಾರಿಗೆ ತಾಯಿಯಾಗಿದ್ದರೆ, ನಿಮ್ಮ ಮನೆಯಲ್ಲಿ ಅನುಭವವಿರುವವರನ್ನು ಕೇಳಿ, ಅಥವಾ ವೈದ್ಯರಿಂದ ಸಲಹೆ ಪಡೆಯುವುದು ಒಳ್ಳೆಯದು. ಅಂತರ್ಜಾಲದ ಯುಗಕ್ಕೆ ಧನ್ಯವಾದಗಳು, ಈ ದಿನಗಳಲ್ಲಿ ಒಂದು ತಾಯಿಯು ಹೊಂದಿರಬಹುದಾದ ಪ್ರತಿ ಪ್ರಶ್ನೆಗೆ ಉತ್ತರಗಳನ್ನು ಮತ್ತು ಬೆಂಬಲವನ್ನು ಒದಗಿಸುವ ಹಲವಾರು ಅಂತರ್ಜಾಲ ತಾಣಗಳು ಇವೆ. ನಿಮ್ಮ ತಾಯ್ತನವನ್ನು ಆನಂದದಿಂದ ಅನುಭವಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon