Link copied!
Sign in / Sign up
109
Shares

ಅತ್ತೆಯೇ, ಒಬ್ಬಳು ನೊಂದ ಸೊಸೆಯಾದ ನಾನು ಹೇಳ ಬಯಸುವ ವಿಷಯಗಳು

‘ಅತ್ತೆ’ ! ನನ್ನ ಪ್ರೀತಿಯ ಗಂಡನ ತಾಯಿ. ನನ್ನ ಕನಸನ್ನು ನುಚ್ಚುನೂರಾಗಿಸಿದವರು. ಚುಚ್ಚುಮಾತಿನಿಂದ ಮನ ನೋಯಿಸುವವರು. ತಣ್ಣಗಿನ ನೋಟದಿಂದ ತಿವಿಯುವವರು... ಇಷ್ಟೆಲ್ಲಾ ತಿರಸ್ಕಾರವನ್ನು ಅನುಭವಿಸಲು ನಾನು ಮಾಡಿದ ತಪ್ಪಾದರೂ ಏನು ?

ಇವೆಲ್ಲವನ್ನು ಕೆಲವು ಕ್ಷಣಗಳ ಕಾಲ ಮರೆತು, ಸುಂದರ ಲೋಕದಲ್ಲಿ ವಿಹರಿಸೋಣ. ಆ ಸುಂದರ ಸಾಮ್ರಾಜ್ಯದಲ್ಲಿ, ನಿಮ್ಮ ಅತ್ತೆಯು ಅರ್ಥ ಮಾಡಿಕೊಳ್ಳಬೇಕೆಂದು ನೀವು ಬಯಸುವ ಕಾರ್ಯಗಳು ಯಾವುವು?

ತನ್ನ ಅತ್ತೆಯ ಅರ್ಥ ಮಾಡಿಕೊಳ್ಳಬೇಕೆಂದು ಪ್ರತಿಯೊಬ್ಬ ಸೊಸೆಯೂ ಬಯಸುವ ೫ ಸನ್ನಿವೇಶಗಳ ಬಗ್ಗೆ ಒಂದು ಪಕ್ಷಿ ನೋಟ.

೧.ಯಾರೂ ಪರಿಪೂರ್ಣರಲ್ಲ

ನಿಮ್ಮ ಮನೆಯೂ “ಸ್ವಚ್ಛ ಭಾರತ್” ಪಂದ್ಯದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಳ್ಳದಿರಬಹುದು. ಮಾಡುವ ಅಡುಗೆಯಲ್ಲಿ ಉಪ್ಪು,ಹುಳಿ,ಖಾರ ಸರಿಯಾಗಿರದಿರಬಹುದು. ಆದರೂ, ನಾನು ಪ್ರಯತ್ನಿಸುತ್ತಿಲ್ಲವೇ ? ಪ್ರಯತ್ನಿಸಿದರೆ ಮಾತ್ರವಲ್ಲವೇ ಪರಿಪೂರ್ಣತೆ ಪಡೆಯಲು ಸಾಧ್ಯ? ಪ್ರಪಂಚದ ಪೂರ್ಣ ಪ್ರಮಾಣದ ಅತ್ಯುತ್ತಮ ಪ್ರವೃತ್ತಿಯನ್ನು ಬಯಸುವಿರೇಕೆ ? ಮಾಡುವ ಕೆಲಸದಲ್ಲಿ ತನ್ನಿಂದಾದ ಪ್ರಯತ್ನವನ್ನು ನಾನು ಮಾಡುತ್ತಿಲ್ಲವೇ ?

ಅಷ್ಟರಲ್ಲೂ “ನೀವೆಷ್ಟು ಉತ್ತಮರು” ಎಂಬುದರ ಬಗ್ಗೆ ಎಂದಾದರೂ ಅವಲೋಕಿಸಿದ್ದೀರಾ ? 

೨. ಯಾರನ್ನು ಅಧಿಕವಾಗಿ ಪ್ರೀತಿಸುತ್ತೇವೋ, ಅವರೊಂದಿಗೇನೇ ಹೆಚ್ಚು ಜಗಳ ಕಾಯುವುದು

ಕಿಟಿಕಿ ಬದಿಯಲ್ಲಿ ಕುಳಿತ ಕಸವನ್ನು ಕಂಡಾಗ... ಅಡುಗೆಯಲ್ಲಿ ಕೈತಪ್ಪಿ ಚಿಟಿಕೆ ಉಪ್ಪು ಹೆಚ್ಚಾದಾಗ... ಆಜನ್ಮ ಶತ್ರುವಿನಂತೆ ಜಗಳ ಕಾಯದೆ ಸಮಾಧಾನದಿಂದ ತಿಳಿ ಹೇಳಬಹುದಲ್ಲವೇ ?ನೀವು ನಮ್ಮನ್ನು ಪ್ರೀತಿಸುತ್ತಿರದಿರಬಹುದು.ಆದರೆ ಗೌರವಿಸಬಹುದಲ್ಲವೇ? 

೩.ಅರ್ಥ ಮಾಡಿಕೊಳ್ಳುವುದೇ ನಿಜವಾದ ಪ್ರೀತಿ

ನೀವು ಒಮ್ಮೆ ಸೊಸೆಯಾಗಿದ್ದವರೇ ಅಲ್ಲವೇ ? ಸಾಸ್ ಭೀ ಕಭೀ ಬಹೂ ಥೀ... ಹೊಸದಾಗಿ ಬೇರೊಂದು ಕುಟುಂಬಕ್ಕೆ ಕಾಲಿರಿಸಿದವರ ಮನೋಧರ್ಮ,ವಿಷಮ ಸ್ಥಿತಿ ಏನಿರಬಹುದೆಂದು ಅರಿಯದವರಲ್ಲ ನೀವು. ಹಾಗಿರುವಾಗ ಯಾವಾಗಲಾದರೊಮ್ಮೆ ತಡವಾಗಿ ಏಳುವುದರಿಂದ ಅಥವಾ ಮನೆಗೆಲಸ ಮಾಡಲು ಆಲಸ್ಯವೆನಿಸಿದರೆ ಅರ್ಥ ಮಾಡಿಕೊಳ್ಳದವರಂತೆ ನಟನೆಯೇಕೆ ? ನಿನ್ನನ್ನು ತಿಳಿದುಕೊಂಡು ನಮಗೇನು ಆಗ ಬೇಕಾದ್ದಿಲ್ಲ ಎಂಬ ಅಸಡ್ಡೆಯಲ್ಲವೇ ? 

೪.ಎಲ್ಲಿ ಮನವಿರುವುದೋ... ಅಲ್ಲೇ ಮನೆ ಇರುವುದು

ಇದು ಈಗ ನನ್ನ ಮನೆಯೂ ಹೌದು. ನೀವು ಈ ಸಾಮ್ರಾಜ್ಯದ ಅನಭಿಷಿಕ್ತ ರಾಜ್ಞಿ ಎಂಬ ಭಾವನೆಯಿಂದ

ದಯವಿಟ್ಟು ಹೊರಬನ್ನಿ. ನಾನು ಕೂಡ ಈ ಮನೆಯ, ಕುಟುಂಬದ ಅಂಗವೆಂದು ತಿಳಿದು ನನ್ನ ಅಭಿಪ್ರಾಯ ಸ್ವಾತಂತ್ರ್ಯಕ್ಕೂ ಪ್ರಾಧಾನ್ಯತೆ ನೀಡಿ. ವೃದ್ಧಾಪ್ಯದಲ್ಲಿ ರಾಜ್ಯವನ್ನು ಯುವಕರಿಗೆ ಹಸ್ತಾಂತರಿಸಿ ಸಂತೋಷವನ್ನು ಪಡೆಯಿರಿ. 

೫.ಯಾವುದು ನನ್ನದು, ಅದು ನಿಮ್ಮದೇ

ನಿಮ್ಮ ಮಗ ಯಾವತ್ತಿದ್ದರೂ ನಿಮ್ಮ ಮಗನೇ....! ನನ್ನ ಆಗಮನದಿಂದ, ನಿಮ್ಮ ಸಂಬಂಧಕ್ಕೆ ಧಕ್ಕೆ ಬೀಳುವುದೆಂಬ ಭಯವೇಕೆ ? ಎಷ್ಟು ಬೇಗ ಈ ಸತ್ಯವನ್ನು ಮನಗಾಣುವಿರೋ.. ಅದು ನಿಮಗೇ ಒಳ್ಳೆಯದು. ನಿಮ್ಮ ಚಾಣಾಕ್ಷತನದಿಂದ ಅಸುರಕ್ಷತೆಯ ಹೆದರಿಕೆಯಿಂದ ನನಗೆ ಮಸಿ ಬಳಿದು ನನ್ನ ಜೀವನವನ್ನು ನರಕ ಮಾಡುವುದರಿಂದ ನಿಮಗೆಂತ ಸಂತೃಪ್ತಿ ?

ಅತ್ತೆಯೇ, ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಿಮ್ಮ ಪಾತ್ರವನ್ನು ನಿಭಾಯಿಸಲು ನಿಮ್ಮಿಂದ ಮಾತ್ರ ಸಾಧ್ಯ !!

 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon