Link copied!
Sign in / Sign up
6
Shares

ಗರ್ಭಿಣಿಯರು ತಿಳಿಯಲೇ ಬೇಕಾದ ೧೦ ಸತ್ಯ ಸಂಗತಿಗಳು

ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಹಲವು ಮಹಿಳೆಯರು ಗರ್ಭಾವಸ್ಥೆಯಲ್ಲಿನ ಸಮಸ್ಯೆಗಳಿಂದ ಹೆರಿಗೆಯ ಸಮಯದಲ್ಲಿ, ಹೆರಿಗೆಗೆ ಮುಂಚೆ ಅಥವಾ ಮಗುವಿಗೆ ಜನ್ಮ ನೀಡಿದ ನಂತರ ಸಾವನ್ನಪ್ಪುತ್ತಾರೆ. ಇದರಲ್ಲಿ ಹಲವರನ್ನು ಸರಿಯಾದ ಚಿಕಿತ್ಸೆ ಮಾಡುವುದರ ಮೂಲಕ ಮತ್ತು ಔಷಧಿಗಳ ಸರಿಯಾದ ಪೂರೈಕೆ ಮೂಲಕ ಸಾವಿನಿಂದ ತಪ್ಪಿಸಬಹುದು. ಇದಕ್ಕೆ ಕಾರಣವೆಂದರೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಮತ್ತು ಮಗುವಿಗೆ ಜನ್ಮ ನೀಡಿದ ನಂತರ ಸರಿಯಾದ ಗುಣಮಟ್ಟದ ಚಿಕಿತ್ಸೆ ಸಿಗದಿರುವುದು ಮತ್ತು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದು.

ಸಂಗತಿ ೧:

ದಿನಕ್ಕೆ ಹತ್ತಿರ ೮೩೦ ಮಹಿಳೆಯರು ಹೆರಿಗೆ ಸಮಯದಲ್ಲಿ ಅಥವಾ ಜನ್ಮ ನೀಡಿದ ನಂತರ ಸಾವನ್ನಪ್ಪುತ್ತಾರೆ.

ಪ್ರಪಂಚದಾದ್ಯಂತ ಸುಮಾರು ೩೦೩೦೦೦ ಮಹಿಳೆಯರು ತಮ್ಮ ಹೆರಿಗೆ ಸಮಯದಲ್ಲಿ ಅಥವಾ ಮಗುವಿಗೆ ಜನ್ಮ ನೀಡಿದ ಬಳಿಕ ಸಾವಿಗೆ ಶರಣಾಗಿದ್ದಾರೆ.(ವಿಶ್ವ ಅರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ೨೦೧೫ರಲ್ಲಿ)

ಸಂಗತಿ ೨:

೫ ಮುಖ್ಯ ಕಾರಣಗಳಿಂದ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಜನ್ಮ ನೀಡಿದ ಬಳಿಕ ಭೂಮಿಗೆ ವಿಧಾಯ ಹೇಳುತ್ತಾರೆ.

ಅವುಗಳೆಂದರೆ, ಅತಿ ಹೆಚ್ಚು ರಕ್ತಸ್ರಾವ, ಸೋಂಕುಗಳು, ಅಸುರಕ್ಷಿತ ಗರ್ಭಪಾತ, ಅಧಿಕ ರಕ್ತದೊತ್ತಡ ಅಸ್ವಸ್ಥೆಗಳು, ಮತ್ತು ವೈದ್ಯಕಿಯ ತೊಂದರೆಗಳಾದ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಮತ್ತು ಎಚ್ ಐ ವಿ(ಏಡ್ಸ್).

ಸಂಗತಿ ೩:

ವರ್ಷಕ್ಕೆ ೧೩೫ ಮಿಲಿಯನ್ ಗಿಂತಲೂ ಹೆಚ್ಚು ಮಹಿಳೆಯರು ಮಕ್ಕಳಿಗೆ ಜನ್ಮ ನೀಡುತ್ತಾರೆ.

ಅದರಲ್ಲಿ ೨೦ ಮಿಲಿಯನ್ ನಷ್ಟು ಮಕ್ಕಳು ತೊಂದರೆಗೆ ಒಳಗಾಗುತ್ತಾರೆ.

ಸಂಗತಿ ೪:

ಪ್ರತಿ ವರ್ಷ ೧೫ರಿಂದ ೧೯ ವರ್ಷ ವಯಸ್ಸಿನ ೧೬ ಮಿಲಿಯನ್ ಹುಡುಗಿಯರು ತಮ್ಮ ಮಗುವಿಗೆ ಜನ್ಮವನ್ನು ನೀಡುತ್ತಾರೆ.

ಗರ್ಭಾವಸ್ಥೆಯ ತೊಡಕಿನಿಂದ/ತೊಂದರೆಗಳಿಂದ ೧೫-೧೯ ವಯಸ್ಸಿನ ಹುಡುಗಿಯರು ಹೆರಿಗೆಯಾಗುವಾಗ ಅಥವಾ ಜನ್ಮ ನೀಡಿದ ಬಳಿಕ ಸಾವನ್ನಪ್ಪುತ್ತಾರೆ.

ಸಂಗತಿ ೫:

ತಾಯಿಯ ಆರೋಗ್ಯ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಪ್ರತಿಬಿಂಬಿಸುತ್ತದೆ.

ಹೆಚ್ಚು ಆದಾಯ ಗಳಿಕೆ ಇರುವ ದೇಶಗಳಲ್ಲಿ ೧%ಗಿಂತ ಕಡಿಮೆ ಮಹಿಳೆಯರು ಗರ್ಭಾವಸ್ಥೆಯ ಸಮಸ್ಯೆಯನ್ನು ಅಥವಾ ಸಾವನ್ನು ಎದುರಿಸುತ್ತಾರೆ.

ಸಂಗತಿ ೬:

ಹೆಚ್ಚಿನ ತಾಯಿಯರ ಸಾವನ್ನು ತಡೆಯಬಹುದು.

ಸರಿಯಾದ ವೈದ್ಯಕೀಯ ಚಿಕಿತ್ಸೆಯಿಂದ ಮಹಿಳೆಯರು ಹೆರಿಗೆ ಸಮಯದಲ್ಲಿ ಅಥವಾ ಜನ್ಮ ನೀಡಿದ ನಂತರ ಸಾಯುವುದನ್ನು ತಪ್ಪಿಸಬಹುದು.

ಸಂಗತಿ ೭:

ಹೆಚ್ಚು ಗರ್ಭಿಣಿಯರು ನುರಿತ ವೈದ್ಯರನ್ನು ಭೇಟಿಮಾಡುವುದಿಲ್ಲ. ಮತ್ತು ಕಾಲಕಾಲಕ್ಕೆ ಅಗತ್ಯವಿರುವ ಚಿಕಿತ್ಸೆಯನ್ನು ಪಡೆಯುವುದಿಲ್ಲ.

ಸಂಗತಿ ೮:

ಪ್ರತಿ ವರ್ಷ ೨೨ ಮಿಲಿಯನ್ ಮಹಿಳೆಯರು ಅಸುರಕ್ಷಿತ ಗರ್ಭಪಾತವನ್ನು ಅನುಭವಿಸುತ್ತಿದ್ದಾರೆ.

ಇದರಲ್ಲಿ ೫ಮಿಲಿಯನ್ ಮಹಿಳೆಯರು ಸಾವಿನಲ್ಲಿ ತಮ್ಮ ನೋವನ್ನು ಕೊನೆಗೊಳಿಸುತ್ತಾರೆ.

ಸಂಗತಿ ೯:

ತಾಯಿಯ ಸಾವಿನ ಅನುಪಾತವನ್ನು ತಗ್ಗಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ.

ಸಂಗತಿ ೧೦:

ನುರಿತ ಆರೈಕೆ ಕೊರತೆ ಇವೆಲ್ಲಕ್ಕೂ ಪ್ರಮುಖ ಕಾರಣವಾಗಿವೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon