Link copied!
Sign in / Sign up
10
Shares

ಈ 5 ವಿಷಯಗಳನ್ನ ನಿಮ್ಮ ಪತಿ ಬಾಯ್ಬಿಟ್ಟು ಹೇಳುವುದಿಲ್ಲ,ಆದರೆ ನೀವು ತಿಳಿದಿರಬೇಕು ಎಂದು ಇಚ್ಛಿಸುವರು

ಗಂಡಂದಿರು ಬಹಳ ಕಾಳಜಿ, ನಿಸ್ವಾರ್ಥ ಮತ್ತು ಅಕ್ಕರೆ ತೋರಿಸುವವರು ಆಗಿರುತ್ತಾರೆ. ಅವರು ಎಂತಹ ಸಂದರ್ಭವನ್ನೂ  ಧೃತಿಗೆಡದೆ ನಿಭಾಯಿಸಬಲ್ಲರು ಮತ್ತು ನೀವು ಒಬ್ಬರೇ ಎಲ್ಲಾ ಜವಾಬ್ದಾರಿ ಹೊರುವಂತೆ ಎಂದಿಗೂ ಬಿಡುವುದಿಲ್ಲ. ಒಂದು ವೇಳೆ ಯಾವುದಾದರು ಸಂದರ್ಭವನ್ನ ಅವರಿಗೆ ಸರಿಪಡಿಸುವುದು ಹೇಗೆ ಎಂದು ತಿಳಿಯದೆ ಇದ್ದರೂ, ಅವರು ತಮ್ಮ ಸಾಮರ್ಥ್ಯಕ್ಕೆ ಮೀರಿ ಏನು ಮಾಡಬಹುದೆಂದು ಯೋಚಿಸುತ್ತಾರೆ. ಈ ಎಲ್ಲಾ ಕಾರಣಗಳಿಗೆ ನೀವು ಅವರನ್ನ ಅಷ್ಟೊಂದು ಪ್ರೀತಿಸುವುದು ಸಹಜ. ಆದರೆ, ಅವರು ನಿಮ್ಮಿಂದ ಕೆಲವು ಗುಟ್ಟುಗಳನ್ನು ಮುಚ್ಚಿಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ನಿಮ್ಮನ್ನು ಇಷ್ಟ ಪಡುವುದಿಲ್ಲ ಅಥವಾ ನಿಮ್ಮನ್ನು ನಂಬುವುದಿಲ್ಲ ಎಂದರ್ಥವಲ್ಲ. ಅವರು ಹೀಗೆ ಮಾಡಲು ಕಾರಣ ಅವರಲ್ಲಿನ ಅಭದ್ರತೆಯ ಭಾವನೆ ಮತ್ತು ಎಲ್ಲಿ ನೀವು ಅವರನ್ನ ಬೇರೆ ರೀತಿ ನೋಡುತ್ತಿರೋ ಎಂಬ ಭಯ. ಆ ಗುಟ್ಟುಗಳು ಏನು ಎಂಬುದು ತಿಳಿದರೆ, ನೀವು ಅವರನ್ನು ಇನ್ನಷ್ಟು ಪ್ರೀತಿಸುತ್ತೀರಾ.

೧. ಅವರಿಗೆ ನಿಮ್ಮ ಪ್ರಶಂಸೆ ಬೇಕು

ನಿಮಗೆ ಹೊಗಳಿಕೆ ಎಷ್ಟು ಇಷ್ಟವೋ, ನಿಮ್ಮ ಪತಿಗೂ ಅಷ್ಟೇ ಇಷ್ಟ. ನೀವು ಅವರನ್ನು ದೂಷಿಸಲಿಕ್ಕೆ ಕಾರಣಗಳು ಇರಬಹುದು, ಆದರೆ ಪ್ರತಿ ಬಾರಿ ನೀವು ದೂಷಿಸಿದಾಗ, ಅದಕ್ಕೆ ಪ್ರತಿಯಾಗಿ 5 ಹೊಗಳಿಕೆ ಮಾತುಗಳನ್ನೂ ಆಡಿ. ನಿಮಗೂ ಪ್ರಶಂಸೆ ಇಷ್ಟವಾಗಿರುವುದರಿಂದ, ನೀವು ದಿನದ ಕೆಲವು ನಿಮಿಷಗಳನ್ನ ಒಬ್ಬರನ್ನೊಬ್ಬರು ನೀವು ಏಕೆ ಇಷ್ಟ ಪಡುತ್ತೀರಾ ಎಂದು, ಮತ್ತು ಇನ್ನೊಬ್ಬರ ಒಳ್ಳೆ ಗುಣಗಳು ಯಾವುಗಳು ಎಂದು ಹೇಳುವುದಕ್ಕೆ., ಒಳ್ಳೆಯ ಮಾತುಗಳನ್ನ ಆಡುವುದಕ್ಕೆ ಮೀಸಲಿಡಬಹುದು. ಅವರು ಧರಿಸಿರುವ ಹೊಸ ಶರ್ಟ್ ಅವರ ಮೇಲೆ ಚೆನ್ನಾಗಿ ಕಾಣಿಸುತ್ತಿದೆ ಎಂದರೆ, ಅವರಿಗೆ ಅದನ್ನು ಹೇಳಿ. ಒಂದು ವೇಳೆ ಅವರು ಧರಿಸಿರುವ ಶೂ ಕೆಟ್ಟದಾಗಿ ಇದೆ ಎಂದರೆ, ಅದನ್ನೂ ಅವರಿಗೆ ಹೇಳಿ. ಅವರು ಹೇಗೆ ಕಾಣುತ್ತಿದ್ದಾರೆ ಎಂಬ ನಿಮ್ಮ ಅಭಿಪ್ರಾಯಕ್ಕೆ ಅವರು ತುಂಬಾ ಬೆಲೆ ಕೊಡುತ್ತಾರೆ.

೨. ಅವರು ಪರಿಪೂರ್ಣ ಅಲ್ಲ, ಆದರೂ ಅದಾಗಲಿಕ್ಕೆ ಪ್ರಯ್ತ್ನಿಸುತ್ತಲೇ ಇರುತ್ತಾರೆ

ಪ್ರತಿಯೊಬ್ಬ ಪುರುಷನು ತನ್ನ ಕುಟುಂಬಕ್ಕೆ ಹೀರೋ ಆಗಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅವರು ತಮ್ಮ ಸಾಮರ್ಥ್ಯಕ್ಕೂ ಮೀರಿ ತಮ್ಮ ಕುಟುಂಬಕ್ಕೆ ಬೇಕಿರುವುದಕ್ಕಿಂತ ಹೆಚ್ಚಿನದನ್ನೆ ಒದಗಿಸುತ್ತಾರೆ. ಆದರೆ ತನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯಾವತ್ತಿಗೂ ಹೇಳುವುದಿಲ್ಲ. ಇದು ಅವರ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಿಸುತ್ತದೆ. ಏಕೆಂದರೆ, ಅವರು ಹೆಚ್ಚೆಚ್ಚು ಮಾಡಿದಷ್ಟು, ಕುಟುಂಬವು ಅವರಿಂದ ಹೆಚ್ಚೆಚ್ಚು ಅಪೇಕ್ಷಿಸುತ್ತದೆ. ಆದರೆ ಪ್ರತಿ ಬಾರಿಯೂ ಕುಟುಂಬದ ಅಪೇಕ್ಷೆಯನ್ನು ಅವರಿಗೆ ನಿಜ ಮಾಡಲು ಆಗುವುದಿಲ್ಲ - ಏಕೆಂದರೆ ಅವರೂ ಕೂಡ ಮನುಷ್ಯರೇ ಅಲ್ಲವೇ. ಇದನ್ನು ನೀವು ಅರಿತು, ಅವರಿಗೆ ಸಹಾಯ ಬೇಕಿರುವ ಸಂದರ್ಭಗಳಲ್ಲಿ ನಿಮ್ಮ ಸಹಾಯ ಹಸ್ತ ಚಾಚಿ. ಅವರು ಮಾಡಿದ ಪ್ರಯತ್ನದ ಬಗ್ಗೆ ನಿಮಗೆ ಖುಷಿ ಇದೆ ಎಂದು ಹೇಳಿ ಮತ್ತು ಒಂದು ದಿನ ಮನೆಗೆ ಬರಬೇಕಾದರೆ ನೀವು ಕೇಳಿದ ಯಾವುದೋ ವಸ್ತುವನ್ನು ಮರೆತು ಬಂದರೆ, ಪರವಾಗಿಲ್ಲ ಬಿಡಿ ಎಂದು ಹೇಳಿ.

೩. ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಅವರು ನಿಮ್ಮನ್ನು ಪ್ರೀತಿಸುತ್ತಾರೆ

ಗಂಡಸರು ತಮ್ಮ ಭಾವನೆಗಳನ್ನ ಸೂಕ್ತವಾಗಿ ಹೊರಹಾಕುವುದನ್ನೇ ಕಲಿತಿರುವುದಿಲ್ಲ. ನಿಮ್ಮ ಪತಿ ಪ್ರತಿದಿನವೂ ನಿಮ್ಮನ್ನು ಅವರು ಎಷ್ಟು ಇಷ್ಟ ಪಡುತ್ತಾರೆ ಎಂದು ನಿಮಗೆ ಹೇಳದೇ ಇರಬಹುದು ಅಥವಾ ತಿಳಿಸಿದರು, ಅದು ಕೇಳಲಿಕ್ಕೆ ಒಂಥರಾ ರೊಬೋಟಿಕ್ ಅನಿಸಬಹುದು. ಆದರೆ ಇದರ ಅರ್ಥ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ ಎಂದರ್ಥವಲ್ಲ. ಅವರು ಮಾತುಗಳಿಗಿಂತ ಅವರ ಕಾರ್ಯಗಳು ಅವರು ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಒಂದು ದಿನ ನಿಮಗೆ ಹುಷಾರಿಲ್ಲದೆ ಮನೆಯಲ್ಲಿ ಏನು ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿದರೆ, ಅವರು ಮನೆಗೆ ಹಿಂದಿರುಗುವಾಗ ಔಷಧಿ, ಆಹಾರದೊಂದಿಗೆ ಪ್ರೀತಿ, ಕಾಳಜಿಯನ್ನೂ ತರುತ್ತಾರೆ.

೪. ನಿಮ್ಮ ಇರುವಿಕೆಯನ್ನು ಸದಾ ಬಯಸುತ್ತಾರೆ

ಗಂಡಸರು ತಮ್ಮ ಕುಟುಂಬದ ನಾಯಕರು ಎಂದು ಬಿಂಬಿತವಾಗಿದ್ದರೂ, ಗಂಡಸರು ತಮ್ಮ ಬೆನ್ನ ಹಿಂದೆ ತಮ್ಮ ಪತ್ನಿಯರ ಇರುವಿಕೆಯನ್ನು, ಬೆಂಬಲವನ್ನು ಮತ್ತು ಜೊತೆಗೂಡಿ ಕೆಲಸ ಮಾಡುವುದನ್ನು ಬಯಸುತ್ತಾರೆ. ಒಂದು ವೇಳೆ ಏನಾದರು ಕಷ್ಟದ ಕಾಲ ಎದುರಾಗಿ ನಿಮ್ಮ ಮಗುವಿಗೆ ಹುಷಾರು ಇಲ್ಲದಂತೆ ಆದರೆ ಅಥವಾ ನಿಮ್ಮ ಪತಿ ಕೆಲಸ ಕಳೆದುಕೊಂಡರೆ, ಅಂತಹ ಸಂದರ್ಭವನ್ನ ಅವರೊಬ್ಬೊರಿಗೆ ಎದುರಿಸಲು ಬಿಡದೆ, ನೀವು ಅವರೊಂದಿಗೆ ಕೈ ಜೋಡಿಸಿ. ಇದು ವಾದಗಳು, ಮನಸ್ತಾಪಗಳನ್ನ ಕಡಿಮೆ ಮಾಡುತ್ತದೆ. ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ತೊಂದರೆಗಳನ್ನ ಬಗೆಹರಿಸುವುದು ಇನ್ನಷ್ಟು ಸುಲಭ ಆಗುತ್ತದೆ.

೫. ಅವರು ದುಂದುವೆಚ್ಚ ಮಾಡುತ್ತಲೇ ಇರುತ್ತಾರೆ

ನಿಮ್ಮ ಪತಿಯೊಂದಿಗೆ ನೀವು ಸೂಪರ್ ಮಾರ್ಕೆಟ್ಟಿಗೆ ಖರೀದಿಗೆಂದು ಹೋದರೆ, ಅವರು ಕೇವಲ ಮನೆಗೆ ಬೇಕಿರುವ ವಸ್ತುಗಳನ್ನಷ್ಟೇ ಖರೀದಿ ಮಾಡುತ್ತಾರೆ ಎಂದು ಅಂದುಕೊಳ್ಳಬೇಡಿ. ಅವರು ಪ್ರತಿ ಬಾರಿ ಸೂಪರ್ ಮಾರ್ಕೆಟ್ಟಿಗೆ ಬಂದಾಗಲೂ ಚಾಕಲೇಟ್ ಮಿಕ್ಸ್, ಹೊಸ ಪೆನ್ ಸ್ಟಾಂಡ್, ಮೊಬೈಲ್ ಹೋಲ್ಡರ್ ಅಥವಾ ಇನ್ನ್ಯಾವುದೋ ಮನೆಯಲ್ಲಿ ಯಾರು, ಎಂದಿಗೂ ಉಪಯೋಗಿಸದ ವಸ್ತುಗಳನ್ನ ಖರೀದಿಸುತ್ತಾರೆ. ಅವರು ನೀವು ತರಲು ಹೇಳಿದ ವಸ್ತುಗಳನ್ನ ನೆನಪಲ್ಲಿ ಇಟ್ಟುಕೊಂಡಿರುತ್ತಾರೆ, ಆದರೆ ಆ ಮಾರ್ಕೆಟ್ಟಿನಲ್ಲಿ ಕಣ್ಣಿಗೆ ಬೀಳುವ ತರಾವರಿ ಆಕರ್ಷಣೀಯ ವಸ್ತುಗಳು ಅವರ ಗಮನವನ್ನೆಲ್ಲಾ ಅವುಗಳ ಕಡೆ ಸೆಳೆದು ಬಿಡುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon