ನೀವು ತಾಯಿಯಾದ ಮೇಲೂ ನಿಮ್ಮ ತಾಯಿ ನಿಮ್ಮ ಬಗ್ಗೆ ಕಾಳಜಿ ತೋರಿಸುವ ೬ ಪರಿಗಳು
ತಾಯಿಯ ಪ್ರೀತಿಯು ಬೇಷರತ್ತಾಗಿರುತ್ತದೆ(ಬೇಡಿಕೆಯಿಲ್ಲದ) ಮತ್ತು ನಿಸ್ವಾರ್ಥದಿಂದ ಕೂಡಿರುತ್ತದೆ. ಅವರು ನಿಮ್ಮ ಯಶಸ್ಸನ್ನು ಆಚರಿಸುತ್ತಾರೆ, ಮತ್ತು ಅದೇ ರೀತಿ, ನೀವು ಬೇಸರಗೊಂಡಾಗ ಮತ್ತು ಖಿನ್ನತೆಗೆ ಒಳಗಾದಾಗ ಶಕ್ತಿಯುತ ಸ್ತಂಭವಾಗಿ ನಿಮ್ಮ ಜೊತೆ ನಿಲ್ಲುತ್ತಾರೆ, ಮತ್ತು ನಿಮ್ಮನ್ನು ಪ್ರೇರೇಪಿಸುತ್ತಾರೆ. ನೀವು ೪ ತಿಂಗಳ ಮಗುವಾಗಿರಿ, ಅಥವಾ ೪೦ ವರ್ಷದವರಾಗಿರಿ, ಅವರು ನಿಮ್ಮನ್ನು ಯಾವಾಗಲೂ ಅದೇ ರೀತಿ ಮುದ್ದಿಸುತ್ತಾರೆ. ನೀವು ಮದುವೆಯಾಗಿ ನಿಮ್ಮ ಸ್ವಂತ ಮಗುವನ್ನು ನೀವು ಹೊಂದಿದ್ದರು ಅವರ ಪ್ರೀತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅವರಿಗೆ, ನೀವು, ಪ್ರತಿ ಹೆಜ್ಜೆಗೂ ಸಹಾಯ ಮತ್ತು ಮಾರ್ಗದರ್ಶನ ಅಗತ್ಯವಿರುವ ಮಗುವಾಗಿರುತ್ತೀರಿ.
೧. ಒಂದು ಕೋಮಲ ತಲೆ ಮಾಲೀಸು ಮಾಡುವುದು ನಿಮ್ಮ ದಿನವನ್ನಾಗಿಸುತ್ತದೆ
ಮಗುವನ್ನು ನೋಡಿಕೊಳ್ಳುವುದು ತಾಯಿಗೆ ಆಯಾಸ ಮತ್ತು ತೀವ್ರವಾಗಿ ಬಳಲುವಂತೆ ಮಾಡಬಹುದು. ನಿಮ್ಮ ತಾಯಿ, ಇದರಲ್ಲಿ ಅನುಭವ ಹೊಂದಿದ್ದು, ನೀವು ಬಾಯಿ ತೆರೆಯುವ ಮೊದಲೇ ನಿಮ್ಮ ಅನಿಸಿಕೆಯನ್ನು, ಮತ್ತು ನೋವನ್ನು ಅರ್ಥಮಾಡಿಕೊಂಡಿರುತ್ತಾರೆ, ಅದು ನಿಮ್ಮ ತಲೆನೋವಾಗಿರಬಹುದು. ನಿಮ್ಮ ತಲೆಯನ್ನು ಮಾಲೀಸು ಮಾಡುವ ಮೂಲಕ ನಿಮ್ಮನ್ನು ಉಲ್ಲಾಸಗೊಳ್ಳುವಂತೆ ಮಾಡುತ್ತಾರೆ. ಯಾವ ಸ್ಪಾಗಳು ನಿಮಗೆ ಈ ರೀತಿ ಮಾಲೀಸು ಮಾಡುವುದಿಲ್ಲ, ನಿಮ್ಮ ತಾಯಿಯ ಕೈ ಬೆರಳುಗಳಲ್ಲಿ ನಿಮಗೆ ಬೇಕಾಗಿರುವ ಒಂದು ಅದ್ಭುತ ಮಾಂತ್ರಿಕ ಶಕ್ತಿ ಅಡಗಿದೆ.
೨. ಹೊಸ ತಾಯಿಯಾದವಳಿಗೆ ಸರಿಯಾದ ವಿಶ್ರಾಂತಿ ಮತ್ತು ನಿದ್ರೆಯ ಅವಶ್ಯಕವಿರುತ್ತದೆ
ಮಗುವಿನ ಪಾಲನೆ ಮತ್ತು ಪೋಷಣೆಯಲ್ಲಿ, ತಾಯಿಯ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವೆವು. ಅವಳು ನಿದ್ರೆಯಿಂದ ವಂಚಿತಳಾಗುತ್ತಳೆ. ಚಿಂತಿಸ ಬೇಡಿ, ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲು ಒಬ್ಬ ಮಹಿಳೆ ಬಿಡುವುದಿಲ್ಲ. ನಿಮ್ಮ ತಾಯಿ, ನಿಮ್ಮ ನಿದ್ರೆಗೆ ಯಾರೂ ಭಂಗಮಾಡದಂತೆ ನೋಡಿಕೊಳ್ಳುತ್ತಾರೆ. ತನ್ನ ನಿದ್ರಾ ಸಮಯವನ್ನು ಕಡಿಮೆ ಮಾಡಿಕೊಂಡು ನಿಮಗೆ ಸರಿಯಾದ ವಿಶ್ರಾಂತಿ ಮತ್ತು ನಿದ್ರೆಯನ್ನು ಒದಗಿಸುತ್ತಾರೆ.
೩. ಹೊಸ ತಾಯಿಯ ಆಹಾರಪಥ್ಯವು ಉನ್ನತ ಆದ್ಯತೆಯನ್ನು ಹೊಂದಿದೆ
ನಿಮ್ಮ ಆಹಾರದಲ್ಲಿ ನಿಮಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳು ಇರಬೇಕು. ನಿಮ್ಮ ತಾಯಿ ಅದರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ನೀವು ಇಷ್ಟಪಡುತ್ತಿದ್ದ ಬಾಯಿ-ಚಪ್ಪರಿಸುವ ಭಕ್ಷ್ಯಗಳು ನಿಮ್ಮ ಪ್ರಿಯರಿಗೆ ಬಡಿಸಲಾಗುತ್ತದೆ. ಅದು ನಿಮ್ಮ ಆರೋಗ್ಯಕ್ಕೆ ಹಾನಿಕರ. ನಿಮ್ಮ ತಾಯಿ ಅಂಗಡಿಯಿಂದ ನಿಮಗೆ ಬೇಕಾದ ಹಣ್ಣು, ಹಸಿರು ತರಕಾರಿಗಳನ್ನು ತಂದು ನಿಮಗಾಗಿ ನೀಡುವರು. ದಿನ ಪೂರ್ತಿ ನಿಮಗೆ ಅಗತ್ಯವಿರುವ ಪೌಷ್ಟಿಕಾಂಶಗಳ ಆಹಾರವನ್ನು ಸಮಯಕ್ಕೆ ಸರಿಯಾಗಿ ರುಚಿಯಾಗಿ ಮಾಡಿಕೊಡುತ್ತಾರೆ.
೪. ಹಾಯಾಗಿ ಇರಲು ಹಾಯಾಗಿರುವುದನ್ನು ಧರಿಸಿ
ಸರಿಯಾದ ಉಡುಪು(ಬಟ್ಟೆ) ಧರಿಸುವುದು, ಹೊಸ ತಾಯಿಯಂದಿರಿಗೆ ಆರಾಮದಾಯಕವಾಗಿರಲು ಸಹಕಾರಿಯಾಗುತ್ತದೆ. ಇಲ್ಲಿ ಮತ್ತೆ ನಿಮ್ಮ ತಾಯಿ ಇದರ ಬಗ್ಗೆ ನಿಮಗೆ ವಿವರಿಸುತ್ತಾರೆ, ಮತ್ತು ಅಗತ್ಯಗಳನ್ನು ನಿಮಗೆ ಒದಗಿಸುತ್ತಾರೆ.
೫. ಮನೆಗೆಲಸ ಮಾಡಲು ನಿಮ್ಮ ತಾಯಿ ಬಿಡುವುದಿಲ್ಲ
ನಿಮ್ಮ ತಾಯಿ ನಿಮ್ಮನ್ನು ದಣಿವಾಗದಂತೆ ನೋಡಿಕೊಳ್ಳುತ್ತಾರೆ. ಅವರಿಗೆ ನೀವು ಇಗಲೂ ಮಗುವಿದ್ದಂತೆ. ಅವರ ಕೀಲು ನೋವು, ಮತ್ತು ಸೊಂಟ ನೋವು, ಅವರನ್ನು ಇದರಿಂದ ಕುಂದಂತೆ ತಡೆಯಲು ಆಗದು. ಅವರು ನಿಮಗಾಗಿ ಉತ್ಸುಕರಾಗಿ ಕಾರ್ಯ ನಿರ್ವಹಿಸುತ್ತಾರೆ. ನೀವು ಮಾಡಬೇಕೆಂದುಕೊಂಡಿರುವ ಕೆಲಸಗಳನ್ನು ಅವರೇ ಮಾಡಿರುತ್ತಾರೆ.
೬. ನಿಮ್ಮ ಮಗಳಿಗೆ ದೃಷ್ಟಿ ತೆಗೆಯಲು ನಿಮ್ಮ ತಾಯಿ ಕೆಂಪು ಮೆಣಸಿನಕಾಯಿ, ಸಾಸಿವೆ, ಅಥವಾ ಉಪ್ಪನ್ನು ಸುಡುವುದು
ಇದು ಮೂಢನಂಬಿಕೆ ಮತ್ತು ಅವೈಜ್ಞಾನಿಕವಾದರೂ, ಇದು ನಿಮ್ಮ ತಾಯಿಗೆ, ನಿಮ್ಮ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತದೆ.
ನಿಮ್ಮ ತಾಯಿಗೆ ನೀವು ಎಷ್ಟು ಧನ್ಯವಾದ ಅರ್ಪಿಸಿದರೂ ಸಾಲದು, ಅವರು ಯಾವುದೇ ನಿರೀಕ್ಷೆ ಇಲ್ಲದೆ ನಿಮ್ಮ ಆರೈಕೆಯನ್ನು ಮಾಡುತ್ತಾರೆ. ನಿಮ್ಮ ಮೇಲೆ ಅತಿಯಾದ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿರುತ್ತಾರೆ. ನಿಮ್ಮ ಮಗುವಿನ ಜನನದ ನಂತರ, ನಿಮ್ಮ ಜೀವನವನ್ನು ಸುಲಭವಾಗಿರಿಸುವ ಅವರಿಗೆ ನೀವು ಜೀವನ ಪೂರ್ತಿ ಋಣಿಯಾಗಿರಬೇಕು.
