Link copied!
Sign in / Sign up
1
Shares

ನಿರ್ಜಲೀಕರಣದ ೫ ಲಕ್ಷಣಗಳು

ನೀರು, ತನ್ನ ಮಹತ್ವದಿಂದಾಗಿ ಜೀವನದ ನಿಜವಾದ ಮಕರಂದವಾಗಿದೆ .ಹೆಚ್ಚಿನ ಮಾನವ ದೇಹವು ನೀರಿನಿಂದ ಮಾಡಲ್ಪಟ್ಟಿದೆ ಮತ್ತು ಈ ನೀರನ್ನು ನಿರಂತರವಾಗಿ ಮರುಪೂರಣ ಮಾಡಬೇಕು. ಮತ್ತು ದೇಹಕ್ಕೆ ನೀರಿನ ಮರು ಪೂರಣ ಸಿಗದಿದ್ದಲ್ಲಿ , ಅದು ವಿಚಿತ್ರವಾಗಿ  ವರ್ತಿಸುವುದನ್ನು ಪ್ರಾರಂಭಿಸುತ್ತದೆ ಮತ್ತು ಮೆದುಳು ಸಂಕೇತಗಳನ್ನು ಕಳುಹಿಸುವುದನ್ನು ಪ್ರಾರಂಭಿಸುತ್ತದೆ. ನಿರ್ಜಲೀಕರಣವು ಸಾಮಾನ್ಯವಾಗಿ ದೇಹದಲ್ಲಿ ಉಂಟಾಗುವ ಹೆಚ್ಚಿನ ರೋಗಲಕ್ಷಣಗಳಿಗೆ ಕಾರಣವಾಗಬಹುದು, ಅದು ನಿರ್ಜಲೀಕರಣಕ್ಕೆ ಸಂಬಂಧಿಸಿರಬಹುದು ಅಥವಾ ಇರದೇ ಇರಬಹುದು.ಆದರೆ ಕೆಲವೊಂದು ವಿಲಕ್ಷಣ ರೋಗಲಕ್ಷಣಗಳು ಕೆಲವು ಅನಾರೋಗ್ಯವನ್ನು ಎದುರಿಸುತ್ತಿರುವಂತೆ ಕಂಡುಬರುತ್ತವೆ ಆದರೆ ನಿಜಾರ್ಥದಲ್ಲಿ  ಇದರ ಹಿಂದಿನ ಕಾರಣ ಕೇವಲ ನಿರ್ಜಲೀಕರಣವಾಗಿದೆ. ಆದ್ದರಿಂದ, ನಾವು ೫ ಅಂತಹ ಲಕ್ಷಣಗಳ ಪಟ್ಟಿಯನ್ನು ಮಾಡಿದ್ದೇವೆ.

೧.ಮಲಬದ್ಧತೆ

ನಿಮ್ಮ ದೇಹವು ನಿರ್ಜಲೀಕರಣಗೊಂಡಾಗ, ಅದು  ದೇಹದ ಅಗತ್ಯವಲ್ಲದ ಭಾಗಗಳಿಂದ ಕೊಲೊನ್ ನಂತಹ ಅಂಗಗಳಿಂದ ನೀರಿನಲ್ಲಿ ಎಳೆಯಲು ಪ್ರಾರಂಭಿಸುತ್ತದೆ  ಮತ್ತು ಅಗತ್ಯವಾದ ಅಂಗಗಳಿಗೆ ಸರಬರಾಜು ಮಾಡುತ್ತದೆ. ಇದರ ಪರಿಣಾಮವಾಗಿ, ಕರುಳಿನ ಚಲನೆ ಹೆಚ್ಚು ಕಷ್ಟವಾಗುತ್ತದೆ. ಇದು  ವ್ಯಕ್ತಿಗೆ ಮಲಬದ್ಧತೆಯಾಗಿದೆಎಂಬ ಭಾವನೆಗೆ ಕಾರಣವಾಗುತ್ತದೆ, ಇದರಿಂದ ಆತ ವಿಲಕ್ಷಣವಾಗಿ ವರ್ತಿಸಬಹುದು. ಆದರೆ, ಬಹುಶಃ, ನೀವು ಮಾಡಬೇಕಾದುದು ಕೇವಲ ಶೌಚಾಲಯಕ್ಕೆ ಹೋಗುವ ಮೊದಲು ಸ್ವಲ್ಪ ನೀರಿನ ಸೇವನೆಯನ್ನು ಮಾತ್ರ ,ಇದು ಈ ಸಮಸ್ಯೆಯನ್ನು ಬಗೆಹರಿಸುತ್ತದೆ.

೨.ಬಳಲಿಕೆ

ಬಳಲಿಕೆ  ಮತ್ತು ದಣಿವು ಅನುಭವಿಸುವಿಕೆಯು ಸಾಮಾನ್ಯವಾಗಿ ಅತಿಯಾದ ಕೆಲಸ ಅಥವಾ ಅನುಚಿತ ನಿದ್ರೆಗೆ ಸಂಬಂಧಿಸಿದೆ.ಆದರೆ ನೀವು ಬಹಳ ಹೊತ್ತಿನವರೆಗೆ ಒಂದು ಲೋಟ ನೀರನ್ನು ಸೇವಿಸಿಲ್ಲದ ಕಾರಣ ನೀವು ನಿಜವಾಗಿಯೂ ದುರ್ಬಲ ಮತ್ತು ದಣಿವು ಅನುಭವಿಸಬಹುದು ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ .ನೀವು ನಿರ್ಜಲೀಕರಣಗೊಂಡರೆ, ನಿಮ್ಮ ಮೆದುಳು ತನ್ನ ಗಮನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸಂರಕ್ಷಿಸಲು ಮತ್ತು ಇದರಿಂದ ಶಕ್ತಿಯನ್ನು ಕಬಳಿಸುವುದನ್ನು  ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಈ ಶಕ್ತಿಯ ಸಂರಕ್ಷಣೆ ಉಂಟಾಗುವಾಗ ಮೆದುಳು ನಿಮಗೆ ಸೂಚನೆಯನ್ನು ಕಳುಹಿಸುತ್ತದೆ ಇದರ ಪರಿಣಾಮವಾಗಿ ಬಳಲಿಕೆ  ಮತ್ತು ದಣಿವುಂಟಾಗುತ್ತದೆ.

೩.ಆತಂಕ ಮತ್ತು ಸ್ಪಷ್ಟವಾಗಿ ಯೋಚಿಸಲು ಸಾಧ್ಯವಿರದೇ ಇರುವುದು

ಹೌದು, ಹಲವಾರು ಕಾರಣಗಳಿಂದ ನೀವು ನಿರುತ್ಸಾಹಿಯಾಗಬಹುದು ಮತ್ತು ಆತಂಕ ಉಂಟಾಗಬಹುದು ಅಲ್ಲದೆ ಜೊತೆಗೆ ನಿಮಗೆ ಸ್ಪಷ್ಟವಾಗಿ ಯೋಚಿಸದೆ ಇರುವುದಕ್ಕಾಗಿ ಇನ್ನೂ ಹೆಚ್ಚಿನ ಕಾರಣಗಳಿವೆ.ಆದರೆ, ನಿಮಗೆ ಅಗತ್ಯವಿರುವ ಒಂದು ಲೋಟ ನೀರಿನ ಸೇವನೆ ಅಥವಾ ನಿಮ್ಮ ನೆಚ್ಚಿನ ಹಣ್ಣಿನ ರಸವನ್ನು ಕುಡಿಯಲು ಶುರು ಮಾಡುವುದರಿಂದ ಮತ್ತೊಮ್ಮೆ ಸಂತೋಷವನ್ನು ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಕೆಟ್ಟ ಮನಸ್ಥಿತಿ ಅಥವಾ ಮಿದುಳಿನ ಮಂಜುಗಳಿಗೆ ನಿರ್ಜಲೀಕರಣವು ಸಾಮಾನ್ಯವಾಗಿ ಕಾರಣ ಎಂದು ಸಂಶೋಧನೆ ತೋರಿಸಿದೆ.

೪.ಅಹಿತರ  ರಕ್ತದೊತ್ತಡ

ರಕ್ತ ಹೆಚ್ಚಾಗಿ ಮತ್ತು ಪ್ರಮುಖವಾಗಿ ನೀರಿನಿಂದ ಮಾಡಲ್ಪಟ್ಟಿದೆ. ಮತ್ತು ನೀವು ಇತರ ಅನಾರೋಗ್ಯದ ಬಳಲುತ್ತಿರುವ ಸಾಧ್ಯತೆಗಳು ಇದ್ದರೂ, ನಿಮ್ಮ ರಕ್ತದೊತ್ತಡದ ಹೆಚ್ಚು ಕಡಿಮೆಗೆ ಕೇವಲ ನಿರ್ಜಲೀಕರಣದ ಕಾರಣ ಇರಬಹುದು. ನೀರಿನ ಪ್ರಮಾಣವು ಕಡಿಮೆಯಿದ್ದಾಗ ಹೃದಯವು ಅಷ್ಟೇ ಪ್ರಮಾಣದ ನೀರನ್ನು ಬೇರೆ ಅಂಗಗಳು ಹೀರಿಕೊಳ್ಳದಂತೆ ಪೂರೈಸುವುದರಿಂದ ಅಹಿತಕರ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

೫.ತಲೆನೋವು

ತಲೆನೋವು ನಿಮ್ಮ ದೇಹದ ವ್ಯವಸ್ಥೆಯಲ್ಲಿ ನೀರಿನ ವಿಷಯದ ಕೊರತೆಗೆ ನೇರವಾಗಿ ಸಂಬಂಧಿಸಿರಬಹುದು ಮತ್ತು ಇದು ನಿಜವಾಗಿ ನೀರಿನ ಕೊರತೆಯನ್ನು ನಿಭಾಯಿಸುವ ನಿಮ್ಮ ದೇಹದ ವಿಧಾನವಾಗಿ  ಕಾಣಬಹುದಾಗಿದೆ. ಆದ್ದರಿಂದ, ನೀವು ಯಾವುದೇ ತಲೆನೋವಿನ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ಒಂದು ಇಲ್ಲವೇ ಎರಡು ಲೋಟಗಳಷ್ಟು ನೀರನ್ನು ಕುಡಿಯುವುದು ಮುಖ್ಯವಾಗಿದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon