Link copied!
Sign in / Sign up
14
Shares

ನಿಮ್ಮ ತ್ವಚೆ ಹಾಗೂ ಕೇಶ ಸೌಂದರ್ಯ ಕಾಪಾಡುವಲ್ಲಿ ಮೊಸರಿನ ಒಂಬತ್ತು ಉಪಯೋಗಗಳು (9 Uses of Curd In Your Skin And Hair Care Routine in Kannada)

ನಾವು ಪೋಷಕರಾದೊಡನೆ ನಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯುವುದು ಸಹಜ. ಏಕೆಂದರೆ “ಪೋಷಕ” ಎನ್ನುವ ಪಾತ್ರದೊಂದಿಗೆ ಬರುವ ಜವಾಬ್ದಾರಿಗಳು ಅಗಾಧ. ಆ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ, ನಮ್ಮ ಮಗುವ ಲಾಲನೆ-ಪಾಲನೆ ಮಾಡುವ ಗುಂಗಿನಲ್ಲಿ ಸಹಜವಾಗಿಯೇ ನಾವೆಲ್ಲರೂ ನಮ್ಮ ತ್ವಚೆ ಹಾಗೂ ತಲೆಗೂದಲನ್ನು ನಿರ್ಲಕ್ಷಿಸುತ್ತೇವೆ. ಆದರೆ ನಾವು ಗಮನಿಸದ ಸತ್ಯವೆಂದರೆ ಮಕ್ಕಳು ತಂದೆ-ತಾಯಿಯ ನಡೆ-ನುಡಿಯನ್ನು ಪಾಲಿಸುತ್ತಾರೆ. ಹಾಗಾಗಿ ನಾವು ನಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ, ನಮ್ಮ ತ್ವಚೆಯ ಬಗ್ಗೆ, ನಮ್ಮ ತಲೆಗೂದಲಿನ ಬಗ್ಗೆ, ಒಟ್ಟಾರೆ ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಳಕಳಿಯಿಂದ ಆರೈಕೆ ಮಾಡುತ್ತೇವೆಯೋ, ಮಕ್ಕಳು ಅದನ್ನೇ ಮಾದರಿಯನ್ನಾಗಿಟ್ಟುಕೊಂಡು ಪಾಲಿಸುತ್ತಾರೆ. ಹಾಗಾಗಿ ನಿಮ್ಮ ಬಗ್ಗೆ, ನಿಮ್ಮ ತ್ವಚೆ ಹಾಗೂ ನಿಮ್ಮ ಕೊದಲಿನ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಮಯವಿಲ್ಲ ಎನ್ನುವ ನೆಪ ಮಾಡುವ ಬದಲಿಗೆ, ಮೊಸರು ಹಾಗೂ ಸುಲಭವಾಗಿ ದೊರಕುವ ಅಡಿಗೆ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ನಿಮ್ಮ ತ್ವಚೆ ಹಾಗೂ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದಲ್ಲಿ ಓದಿರಿ.

ಪರಿವಿಡಿ:

೧. ಮೊಸರು ತಲೆಹೊಟ್ಟಿಗೆ ಪರಿಹಾರ (Curd to treat dandruff in Kannada)

೨. ಮೊಸರಿನಿಂದ ಕೂದಲು ಉದುರುವಿಕೆಗೆ ಪರಿಹಾರ (Curd for hair fall or hair loss in Kannada)

೩. ಕಂಡೀಷನಿಂಗ್ ಮೂಲಕ ಕೇಶ ಸೌಂದರ್ಯ ಹೆಚ್ಚಿಸಲು ಮೊಸರು ಉಪಯುಕ್ತ (Curd for deep conditioning in Kannada)

೪. ಚರ್ಮ ಕಂದಾಗುವಿಕೆ ತಡೆಯುವಲ್ಲಿ ಮೊಸರಿನ ಪಾತ್ರ (Curd to remove skin tan in Kannada)

೫. ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳಿಗೆ ಪರಿಹಾರ ಮೊಸರು (Curd to treat dark circles in Kannada)

೬. ಮೊಸರು ತ್ವಚೆಯ ಆರ್ಧ್ರಕ (Curd as a moisturiser for oily skin in Kannada)

೭. ಮೊಡವೆಗೆ ಪರಿಹಾರ ಮೊಸರು (Curd to treat acne in Kannada)

೮. ಮೊಸರು ಮುಪ್ಪಡರಾದ ತ್ವಚೆ ನೀಡಬಲ್ಲದು (Curd for anti-ageing in Kannada)

೯. ಮೊಸರು ತ್ವಚೆಯ ಶುಭ್ರಕಾರಕ (Curd as a cleanser in Kannada)

೧. ಮೊಸರು ತಲೆಹೊಟ್ಟಿಗೆ ಪರಿಹಾರ (Curd to treat dandruff in Kannada):

ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿರುವ ಮೊಸರು ಜನಪ್ರೀಯತೆ ಪಡೆದಿದೆ. ಮೊಸರನ್ನು ನೇರವಾಗಿ ನಿಮ್ಮ ನೆತ್ತಿ ಮತ್ತು ತಲೆಬುರುಡೆಗೆ ಹಚ್ಚಿದರೆ, ಅದರಲ್ಲಿರುವ ಹುಳಿ ಅಂಶದಿಂದ ನಿಮ್ಮ ತಲೆಯಲ್ಲಿರುವ ಹೊಟ್ಟು ಕ್ರಮೇಣ ಕಡಿಮೆಯಾಗುತ್ತದೆ. ಅದರೊಂದಿಗೆ ಕೆಳಗೆ ನೀಡಿರುವ ಪದ್ದತಿಗಳನ್ನು ಬಳಸಿದರೆ, ತಲೆಹೊಟ್ಟನ್ನು ಪರಿಹರಿಸುವಲ್ಲಿ ಹೆಚ್ಚು ಪ್ರಭಾವಶಾಲಿ.

ಮೊಸರು ಮತ್ತು ಮೆಣಸಿನ ಕಾಳು:

೬-೭ ಮೆಣಸಿನ ಕಾಳನ್ನು ಅರೆದು, ಪುಡಿ ಮಾಡಿರಿ.

ಈ ಅರೆದ ಚೂರ್ಣವನ್ನು ಒಂದು ಬಟ್ಟಲು ಮೊಸರಿನೊಂದಿಗೆ ಸೇರಿಸಿ.

ಈ ರೀತಿ ತಯಾರಿಸಿದ ಮಿಶ್ರಣವನ್ನು ನಿಮ್ಮ ತಲೆಬುರುಡೆ ಹಾಗೂ ನೆತ್ತಿಗೆ ಹಚ್ಚಿ, ಅರ್ಧ ತಾಸಿನವರೆಗೆ ಬಿಡಿ.

ನಂತರ ನೀರು ಹಾಗೂ ಶ್ಯಾಂಪುವಿನಿಂದ ತೊಳೆದುಕೊಳ್ಳಿ.

ಮೊಸರು ಹಾಗೂ ನಿಂಬೆ ರಸ:

ಒಂದು ನಿಂಬೆ ಹಣ್ಣಿನ ರಸವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.

ಅದಕ್ಕೆ ನಾಲ್ಕು ಚಮಚದಷ್ಟು ಮೊಸರು ಸೇರಿಸಿ.

ಅದನ್ನು ನಿಮ್ಮ ತಲೆಬುರುಡೆಗೆ ಹಚ್ಚಿಕೊಳ್ಳಿ.

ಅರ್ಧ ಗಂಟೆಯ ನಂತರ, ನೀರಿ ಹಾಗೂ ಶ್ಯಾಂಪೂವಿನಿಂದ ತೊಳೆದುಕೊಳ್ಳಿ.

ಈ ಪದ್ಧತಿಗಳನ್ನು ಅನುಸರಿಸಿ, ಆಗಾಗ ನಿಮ್ಮ ತಲೆ ಕೂದಲಿನ ಕಾಳಜಿವಹಿಸಿದರೆ ನಿಮ್ಮ ತಲೆಯ ಹೊಟ್ಟನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

೨. ಮೊಸರಿನಿಂದ ಕೂದಲು ಉದುರುವಿಕೆಗೆ ಪರಿಹಾರ (Curd for hair fall or hair loss in Kannada):

ಪ್ರಸವದ ನಂತರ ಕೂದಲು ಉದುರಿವಿಕೆ ತಾಯಂದಿರು ಎದುರಿಸುವ ಸಾಮಾನ್ಯ ಸಮಸ್ಯೆ. ಇದರ ಪರಿಹಾರಕ್ಕೆ ನಿಮಗೆ ಬೇಕಿರುವ ಸಾಮಗ್ರಿಗಳು ಮೆಂತೆ ಕಾಲು ಹಾಗೂ ಮೊಸರು.

ಮೊಸರು ಹಾಗೂ ಮೆಂತೆ ಕಾಳು:

೩ ಚಮಚದಷ್ಟು ಮೆಂತೆ ಕಾಲನ್ನು ಅರ್ಧ ಬಟ್ಟಲು ಮೊಸರಿನಲ್ಲಿ ಕುಡಿಸಿದಿ.

ಈ ಮಿಶ್ರಣವನ್ನು ನಿಮ್ಮ ತಲೆಗೂದಲು ಹಾಗೂ ತಲೆಬುರುಡೆ, ನೆತ್ತಿಗೆ ಹಚ್ಚಿಕೊಳ್ಳಿ. ಹೇರ್-ಬ್ರಷ್ ನ ಸಹಾಯದಿಂದ ಅದನ್ನು ನಿಮ್ಮ ಎಲ್ಲ ತಲೆಗೂದಲಿಗೆ ಹರಡುವಂತೆ ಮಾಡಿಕೊಳ್ಳಬಹುದು.

ಒಂದು ಗಂಟೆಯ ನಂತರ ಯಾವುದಾದರೂ ಸೌಮ್ಯವಾದ ಶಾಂಪೂವಿನಿಂದ ತೊಳೆದುಕೊಳ್ಳಿ.

ಮೆಂತೆ ಕಾಳು ತಲೆಗೂದಲು ಉದುರುವಿಕೆ ಹಾಗೂ ನೆತ್ತಿಗೆ ಆಗಬಹುದಾದ ಸೋಂಕುಗಳನ್ನು ತಡೆಯುತ್ತದೆ. ಆದ್ದರಿಂದ ಮೊಸರು ಹಾಗೂ ಮೆಂತೆ ಕಾಳು - ಎರಡನ್ನು ಒಟ್ಟಿಗೆ ಉಪಯೋಗಿಸುವುದರಿಂದ ಲಾಭಗಳು ಹೆಚ್ಚು.

[Back To Top]

೩. ಕಂಡೀಷನಿಂಗ್ ಮೂಲಕ ಕೇಶ ಸೌಂದರ್ಯ ಹೆಚ್ಚಿಸಲು ಮೊಸರು ಉಪಯುಕ್ತ (Curd for deep conditioning in Kannada):

ಮೊಸರು ತ್ವಚೆಗೆ ಆರ್ಧ್ರತೆ ನೀಡುವ ಹಾಗೂ ಕೇಶಕ್ಕೆ ಕಂಡೀಷನಿಂಗ್ ಮಾಡುವ ಸಾಅಮರ್ಥ್ಯವನ್ನು ಹೊಂದಿದೆ. ಹಾಗಾಗಿ ಪ್ರತಿ ವಾರ ಒಂದು ಅಥವಾ ಎರಡು ಬಾರಿ ನಿಮ್ಮ ಕೇಶಕ್ಕೆ ಮೊಸರು ಬಳಸಿಕೊಂಡು ಡೀಪ್ ಕಂಡೀಷನಿಂಗ್ ಮಾಡಿಕೊಳ್ಳುವುದು ಉತ್ತಮ. ಹೇಗೆ ಮಾಡಿಕೊಳ್ಳಬೇಕು? ಇಲ್ಲಿದೆ ಓದಿ.

ಮೊಸರು, ಮೊಟ್ಟೆ ಮತ್ತು ಆಲಿವ್ ಎಣ್ಣೆ:

ಒಂದು ಬಟ್ಟಲು ಮೊಸರಿನಲ್ಲಿ, ಒಂದು ಮೊಟ್ಟೆಯನ್ನು ಒಡೆದು, ಅದರ ಅಂಶವನ್ನು ಕೂಡಿಸಿ.

ಅದರೊಂದಿಗೆ ಎರಡು ಚಮಚದಷ್ಟು ಆಲಿವ್ ಎಣ್ಣೆಯನ್ನು ಸೇರಿಸಿ, ಸರಿಯಾಗಿ ಕಲಸಿಟ್ಟುಕೊಳ್ಳಿ.

ನಿಮ್ಮ ತಲೆಗೂದಲು, ನಿಮ್ಮ ನೆತ್ತಿಗೆ ಈ ಮಿಶ್ರಣವನ್ನು ಹೇರ್-ಬ್ರಷ್ ನ ಸಹಾಯದಿಂದ ಹಚ್ಚಿಕೊಳ್ಳಿ.

ಅರ್ಧ ತಾಸಿನ ನಂತರ, ಅದನ್ನು ತೊಳೆದುಕೊಳ್ಳಬಹುದು.

ಪ್ರೋಟೀನ್ ಇಂದ ಕೂಡಿರುವ ಮೊಟ್ಟೆ, ನಿಮ್ಮ ತಲೆಗೂದಲನ್ನು ಸದೃಢಗೊಳಿಸುತ್ತದೆ. ಆಲಿವ್ ಎಣ್ಣೆ ತಲೆಗೂದಲನ್ನು ಆರೋಗ್ಯಕರವಾಗಿಸುವುದಷ್ಟೇ ಅಲ್ಲದೇ, ಕೇಶ ಸೌಂದರ್ಯಕ್ಕೆ ಅಗತ್ಯವಿರುವ ಹೊಳಪನ್ನೂ ನೀಡುತ್ತದೆ.

[Back To Top]

೪. ಚರ್ಮ ಕಂದಾಗುವಿಕೆ ತಡೆಯುವಲ್ಲಿ ಮೊಸರಿನ ಪಾತ್ರ (Curd to remove skin tan in Kannada):

ಮೊಸರು ಚರ್ಮ ಕಂದಾಗುವಿಕೆಯನ್ನು ತಡೆಯುವಲ್ಲಿ ಸಹಾಯ ಮಾಡುವುದಾದರೂ ಬಿಸಿಲಿನ ಕಾರಣದಿಂದ ಸುಟ್ಟಿರುವ ಚರ್ಮದ ಮೇಲೆ ಈ ಕೆಳಗೆ ಕೊಟ್ಟಿರುವ ಪದ್ದತಿಯನ್ನು ಬಳಸಬೇಡಿ. ಇದನ್ನು ಬಳಸಲು, ಬಿಸಿಲಿನ ಬೇಗೆಯ ಕಾರಣದಿಂದ ಆಗಿರುವ ಸುಟ್ಟು ಗಾಯ ಶಮನಗೊಳ್ಳಬೇಕು. ಆಲೋ ವೆರಾ ಈ ರೀತಿಯ ಸುಟ್ಟುಗಾಯವನ್ನು ನಿವಾರಿಸುತ್ತದೆ.

ನಿಮ್ಮ ತ್ವಚೆಗೆ ಮೊಸರು ಮತ್ತು ನಿಂಬೆ ರಸ:

ಒಂದು ಬಟ್ಟಲು ಮೊಸರಿನಲ್ಲಿ ಅರ್ಧ ನಿಂಬೆ ಹಣ್ಣಿನ ರಸವನ್ನು ಸೇರಿಸಿ.

ಅದಕ್ಕೆ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಸೇರಿಸಿ.

ಅವುಗಳನ್ನು ಸರಿಯಾಗಿ ಕೂಡಿಸಿ, ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.

ಇಪ್ಪತ್ತು ನಿಮಿಷದ ನಂತರ ತೊಳೆದುಕೊಳ್ಳಿ.

ತ್ವಚೆಯ ಆರೋಗ್ಯಕ್ಕಾಗಿ ಮೊಸರು ಮತ್ತು ಅರಿಶಿನ:

ಒಂದು ಚಮಚದಷ್ಟು ಅರಿಶಿನ ಪುಡಿಯನ್ನು ಒಂದು ಬಟ್ಟಲು ಮೊಸರಿಗೆ ಸೇರಿಸಿ.

ಈ ಮಿಶ್ರಣವನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ.

ಇಪ್ಪತ್ತು ನಿಮಿಷದ ಅದನ್ನು ಒಣಗಿಸಿಕೊಂಡು, ತೊಳೆದುಕೊಳ್ಳಿ.

ಲಿಂಬೆ ಹಣ್ಣಿನ ರಸ ಅದರ ನೈಸರ್ಗಿಕವಾದ ಬ್ಲೀಚಿಂಗ್ ಗುಣಗಳಿಗೆ ಖ್ಯಾತಿ ಪಡೆದಿದ್ದರೆ, ಅರಿಶಿನ ಚರ್ಮದ ಬಣ್ಣವನ್ನು ಸುಧಾರಿಸುವಲ್ಲಿ ಕಾರ್ಯಗತವಾಗುತ್ತದೆ. ಈ ಪದಾರ್ಥಗಳನ್ನು ಮೊಸರಿನ ಜೊತೆ ಸೇರಿಸಿ ಬಳಸುವುದರಿಂದ ಹೆಚ್ಚು ಪರಿಣಾಮಕಾರಿಯಾಗುತ್ತದೆ.

೫. ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳಿಗೆ ಪರಿಹಾರ ಮೊಸರು (Curd to treat dark circles in Kannada):

ಕಣ್ಣಿನ ಕೆಳಗಿನ ಚರ್ಮ ತೆಳ್ಳಗಿದ್ದು, ನಾಜೂಕಾಗಿಯೂ ಇರುತ್ತದೆ. ಹಾಗಾಗಿ ಕಣ್ಣಿನ ಕೆಳಗಿನ ಚರ್ಮಕ್ಕೆ ಯಾವುದಾದರೂ ಚಿಕಿತ್ಸೆ ನೀಡುವ ಮುನ್ನ ಕಾಳಜಿವಹಿಸುವುದು ಅತ್ಯಗತ್ಯ.

ಕಪ್ಪು ವೃತ್ತಗಳನ್ನು ತಡೆಗಟ್ಟುವುದಕ್ಕೆ ಹೀಗೆ ಮಾಡಿ:

ಒಂದು ಹತ್ತಿಯ ಉಂಡೆಯನ್ನು ಒಂದು ಬಟ್ಟಲು ಮೊಸರಿನಲ್ಲಿ ಅದ್ದಿ, ನಿಮ್ಮ ಕಣ್ಣ ಕೆಳಗಿನ ಚರ್ಮಕ್ಕೆ ಲೇಪಿಸಿ.

ಈ ರೀತಿ ಮೊಸರನ್ನು ನಿಮ್ಮ ಕಣ್ಣ ಕೆಳಗಿನ ಚರ್ಮಕ್ಕೆ ಹಾಗೂ ಕಣ್ಣು ರೆಪ್ಪೆಗಳಿಗೆ ಲೇಪಿಸಿಕೊಳ್ಳಬಹುದು.

ಹತ್ತು ನಿಮಿಷದ ನಂತರ, ಅದನ್ನು ತೊಳೆದುಕೊಳ್ಳಿ.

[Back To Top]

೬. ಮೊಸರು ತ್ವಚೆಯ ಆರ್ಧ್ರಕ (Curd as a moisturiser for oily skin in Kannada):

ನಿಮ್ಮ ತ್ವಚೆ ಎಣ್ಣೆಯುಕ್ತ ಚರ್ಮವಾಗಿದ್ದರೆ, ನಿಮಗೆ ಆರ್ಧ್ರಕ ಅಥವಾ ಮೊಯಿಶ್ಚರೈಸರ್ ಹಚ್ಚಿಕೊಳ್ಳುವ ಮನಸ್ಸಾಗದೇ ಇರಬಹುದು. ಆದರೆ, ಮೊಯಿಶ್ಚರೈಸರ್ ಹಚ್ಚಿಕೊಳ್ಳದೇ ಹೋದರೆ ಸಮಯ ಕಳೆದಂತೆ ನಿಮ್ಮ ತ್ವಚೆಯ ಎಣ್ಣೆಯ ಅಂಶ ವರ್ಧಿಸುತ್ತದೆ.

ನಿಮ್ಮ ಮುಖದ ತ್ವಚೆಗೆ ಮೊಸರು:

ಎರಡು ಚಮಚದಷ್ಟು ಮುಲ್ತಾನಿ ಮಿಟ್ಟಿಯನ್ನು ಒಂದು ಬಟ್ಟಲು ಮೊಸರಿನಲ್ಲಿ ಬೆರೆಸಿಡಿ.

ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.

ಇಪ್ಪತ್ತು ನಿಮಿಷದ ನಂತರ, ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

೭. ಮೊಡವೆಗೆ ಪರಿಹಾರ ಮೊಸರು (Curd to treat acne in Kannada)

ನಿಮ್ಮ ಚರ್ಮ ಸೂಕ್ಷ್ಮವಾಗಿದ್ದು, ಮೊಡವೆಗೆ ಗುರಿಯಾಗಬಲ್ಲಂತದ್ದಾಗಿದ್ದರೆ, ಮೊಸರು ನಿಮಗೆ ಪರಿಹಾರ ನೀಡಬಲ್ಲದು. ನಿಮ್ಮ ಚರ್ಮದ ಆರೋಗ್ಯಕ್ಕಾಗಿ ಮೊಸರನ್ನು ಪ್ರತಿದಿನ ಸೇವಿಸುವುದು ಸೂಕ್ತ. ನೈಸರ್ಗಿಕವಾಗಿ ಪ್ರೋಬಯೋಟಿಕ್ ಆಗಿರುವ ಮೊಸರು ನಿಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಬಟ್ಟಲು ಮೊಸರು ಸೇವಿಸುವುದು ಆರೋಗ್ಯಕರ. ಮೊಸರನ್ನು ನಿಮ್ಮ ಚರ್ಮಕ್ಕೆ ನೇರವಾಗಿ ಲೇಪಿಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಮೇಲೆ ಆಗಬಹುದಾದ ಮೊಡವೆಯನ್ನು ತಡೆಗಟ್ಟಬಹುದು ಹಾಗೂ ಮೊಡವೆ ಕಲೆಗಳನ್ನೂ ನಿವಾರಿಸಬಹುದು.

ಮೊಸರು ಮತ್ತು ಕಡಲೆ:

ಒಂದು ಬಟ್ಟಲಿನಲ್ಲಿ ಮೊಸರು ಹಾಗೂ ಒಂದು ಚಮಚದಷ್ಟು ಕಡಲೆ ಹಿಟ್ಟನ್ನು ಸೇರಿಸಿ, ಬೆರೆಸಿಡಿ.

ಈ ಕಣಕವನ್ನು ನಿಮ್ಮ ಚರ್ಮಕ್ಕೆ ಲೇಪಿಸಿ.

ಇಪ್ಪತ್ತರಿಂದ ಮೂವತ್ತು ನಿಮಿಷದ ನಂತರ, ಅದನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ಈ ರೀತಿ ಪ್ರತಿ ವಾರ ಎರಡರಿಂದ ಮೂರು ಬಾರಿ ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ, ಮೊಡವೆಗಳನ್ನು ಹಾಗೂ ಅವುಗಳ ಕಲೆಗಳನ್ನು ನಿವಾರಿಸಿಕೊಳ್ಳಬಹುದು ಮತ್ತು ಮುಂದೆ ಆಗಬಹುದಾದ ಮೊಡವೆಗಳನ್ನು ತಡೆಗಟ್ಟಬಹುದು.

[Back To Top]

೮. ಮೊಸರು ಮುಪ್ಪಡರದ ತ್ವಚೆ ನೀಡಬಲ್ಲದು (Curd for anti-ageing in Kannada)

ಮುಪ್ಪಿನಿಂದ ಯಾವ ಜೀವಿಯೂ ತಪ್ಪಿಸಿಕೊಳ್ಳಲಾರರು. ಆದರೆ ವಯಸ್ಸಾಗುತ್ತಿದೆ ಎಂದು ತೋರ್ಪಡಿಸುವ ಸೂಚಕಗಳನ್ನು ತಕ್ಕಮಟ್ಟಿಗೆ ವಿಳಂಬಿಸಬಹುದು. ಮುಪ್ಪಡರುತ್ತಿದ್ದಂತೆ ಮುಖದಲ್ಲಿ ಕಂಡುಬರುವ ಸುಕ್ಕುಗಳನ್ನು ಮುಂದೂಡಬಹುದು.

ಮೊಸರು, ಜೇನುತುಪ್ಪ ಮತ್ತು ಟಿಸೊಪ್ಪು (ಅಥವಾ ಚಹಾ ಎಳೆಗಳು):

ಒಂದು ಬಟ್ಟಲಿನಲ್ಲಿ ಒಂದು ಚಮಚದಷ್ಟು ಮೊಸರು, ಒಂದು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಕೂಡಿಸಿ, ಅವುಗಳೊಂದಿಗೆ ಪುಡಿ ಮಾಡಿದ ಚಹಾ ಎಲೆಗಳನ್ನು ಸೇರಿಸಿ.

ಅದನ್ನು ಕಣಕದಂತೆ ತಯಾರಿಸಿ, ನಿಮ್ಮ ಚರ್ಮಕ್ಕೆ ಲೇಪಿಸಿ.

ಅರ್ಧ ಗಂಟೆಯ ನಂತರ, ಬೆಚ್ಚಗಿನ ನೀರಿನಿಂದ ಶುಚಿಗೊಳಿಸಿ.

[Back To Top]

೯. ಮೊಸರು ತ್ವಚೆಯ ಶುಭ್ರಕಾರಕ (Curd as a cleanser in Kannada)

ಮೊಸರನ್ನು ಮುಖದ ಶುಭ್ರಕಾರಕ ಹಾಗೂ ಸ್ಕ್ರಬ್ ಆಗಿ ಉಪಯೋಗಿಸಬಹುದು. ಹೇಗೆ ಎಂಬುದು ಇಲ್ಲಿದೆ ಓದಿ.

ಮೊಸರು ಹಾಗೂ ಓಟ್ಸ್:

ಮೊಸರು ಹಾಗೂ ಓಟ್ಸ್ -ಎರಡನ್ನು ಸಮಾನ ಭಾಗದಲ್ಲಿ ಬೆರೆಸಿಡಿ.

ನಿಮ್ಮದು ಒಣ ಚರ್ಮ ಅಥವಾ ಶುಷ್ಕ ಚರ್ಮವಾಗಿದ್ದಲ್ಲಿ, ಈ ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಬಹುದು.

ಮಿಶ್ರಣವನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ.

ಐದರಿಂದ ಹತ್ತು ನಿಮಿಷದ ನಂತರ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon