Link copied!
Sign in / Sign up
1
Shares

ನಿಮ್ಮ ತ್ವಚೆಯ ಆರೈಕೆಗಾಗಿ ಆಲಿವ್ ಎಣ್ಣೆಯನ್ನು ಬಳಸಬಹುದಾದ ೧೫ ಆಸಕ್ತಿದಾಯಕ ಮಾರ್ಗಗಳು (15 Interesting Ways You Can Use Olive Oil For Skin Care in Kannada)

"ದ್ರವ ರೂಪದ ಬಂಗಾರ" ಎಂದು ಖ್ಯಾತಿ ಪಡೆದಿರುವ ಆಲಿವ್ ಎಣ್ಣೆ ಯುಕ್ತತೆ ಹೊಂದುವ ಬಯಕೆ ಇರುವವರಲ್ಲಿ ಮತ್ತು ಅರೋಗ್ಯ ಜಾಗೃತಿ ಹೆಚ್ಚಿರುವವರಲ್ಲಿ ಜನಪ್ರಿಯತೆ ಪಡೆದಿದೆ. ಪ್ರತಿಯೊಬ್ಬರ ನೆಚ್ಚಿನ, ಅನೇಕ ಆರೋಗ್ಯಕರ ಪಾಕವಿಧಾನಗಳಲ್ಲಿ ಇದು ರಹಸ್ಯ ಘಟಕವಾಗಿದೆ. ಅಡುಗೆಗಾಗಿ ಮಾತ್ರವಲ್ಲದೇ ವಯಸ್ಸಿನವರಿಗೆ ವೈಯಕ್ತಿಕ ಆರೈಕೆಗಾಗಿಯೂ ಬಳಸಲಾಗುತ್ತಿದೆ. ನಿಮ್ಮ ತ್ವಚೆಯನ್ನು ಆರೋಗ್ಯಕರ ಮತ್ತು ಸುಂದರವಾಗಿಸಲು ಆಲಿವ್ ಎಣ್ಣೆಯನ್ನು ಹಲವು ಬಗೆಗಳಲ್ಲಿ ಬಳಸಬಹುದು. ಈ ಲೇಖನದಲ್ಲಿ ಆಲಿವ್ ಎಣ್ಣೆಯ ಬಗೆಗೆ ಬಳಕೆಗಳು ಮತ್ತು ಅದರಿಂದಾಗುವ ಲಾಭಗಳ ಬೆಗ್ಗೆ ವಿವರಿಸಲಾಗಿದೆ.

ಪರಿವಿಡಿ: 

೧. ಆಲಿವ್ ಎಣ್ಣೆ ಎಂದರೇನು? (What Is Olive Oil? in Kannada)

೨. ಆಲಿವ್ ಎಣ್ಣೆಯ ಮುಖ್ಯ ಪ್ರಯೋಜನಗಳೇನು? (What Are The Main Olive Oil Benefits? in Kannada)

೩. ನಿಮ್ಮ ತ್ವಚೆಗಾಗಿ ಆಲಿವ್ ಎಣ್ಣೆಯ ೧೫ ಆರೋಗ್ಯಕರ ಲಾಭಗಳು (15 Interesting Uses Of Olive Oil For Skin in Kannada)

೪. ನಿರ್ಣಯ (Conclusion in Kannada)

೧. ಆಲಿವ್ ಎಣ್ಣೆ ಎಂದರೇನು? (What Is Olive Oil? in Kannada)

ಮೆಡಿಟರೇನಿಯನ್ ಪ್ರದೇಶಗಳಲ್ಲಿ ಬೆಳೆಯುವ ಆಲಿವ್ ಮರದಿಂದ ಆಲಿವ್ ಹಣ್ಣನ್ನು ಪಡೆಯಲಾಗುತ್ತದೆ, ಈ ಹಣ್ಣನ್ನು ಹಿಂಡಿ, ಆಲಿವ್ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಅಡುಗೆ ಮನೆಯಿಂದ ಬ್ಯೂಟಿ ಸಲೂನ್ ವರೆಗೆ, ಆಲಿವ್ ಎಣ್ಣೆಯ ಪ್ರಯೋಜನಗಳು ನಮ್ಮ ದೈನಂದಿನ ಜೀವನದ ಪ್ರತಿಯೊಂದು ಮೂಲೆಯನ್ನು ತಲುಪಿವೆ. 'ಜೈತುನ್ ಕಾ ಟೆಲ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಆಲಿವ್ ಎಣ್ಣೆಯನ್ನು ಪ್ರಾಚೀನ ಕಾಲದಲ್ಲಿ 'ದ್ರವ ಚಿನ್ನದ' ಎಂದು ಕರೆಯಲ್ಪಡುತ್ತಿತ್ತು. ಈಗ ನಾವು ಆಲಿವ್ ಎಣ್ಣೆ ಎಂದರೇನು ಮತ್ತು ಅದನ್ನು ಹೇಗೆ ಪಡೆದುಕೊಳ್ಳಲಾಗಿದೆ ಎನ್ನುವುದನ್ನು ನಮಗೆ ತಿಳಿದುಕೊಂಡಿದ್ದೇವೆ. ಆಲಿವ್ ಎಣ್ಣೆಯನ್ನು ಜನಪ್ರಿಯತೆಗೆ ಪಾತ್ರವಾಗಿಸಿರುವ ಅದರ ಬಳಕೆಗಳ ಬಗ್ಗೆ ತಿಳಿದುಕೊಳ್ಳೋಣ. 

೨. ಆಲಿವ್ ಎಣ್ಣೆಯ ಮುಖ್ಯ ಪ್ರಯೋಜನಗಳೇನು? (What Are The Main Olive Oil Benefits? in Kannada)

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಆಲಿವ್ ಎಣ್ಣೆಯಿಂದ ಹಲವಾರು ಉಪಯೋಗಗಳು ಹಾಗೂ ಅದರಿಂದ ಲಾಭಗಳಿವೆ. ಹಲವಾರು ವೈಜ್ಞಾನಿಕ ಸಂಶೋಧನೆಗಳು ಆಲಿವ್ ಎಣ್ಣೆಯ ಲಾಭಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿವೆ. ಅವುಗಳಲ್ಲಿ ಕೆಲವು ಇಲ್ಲಿವೆ:

ಮಗುವಿಗೆ ಆಲಿವ್ ಎಣ್ಣೆ: 

ಎಲ್ಲೆರಿಗೂ ತಿಳಿದಿರುವ ಪ್ರಕಾರ ಮಗುವಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ, ಮಗುವಿನ ಚರ್ಮ ಮೃದು ಮತ್ತು ನಯವಾಗುತ್ತದೆ. ಈ ಎಣ್ಣೆ ನಿಮ್ಮ ಮಗುವಿನ ಚರ್ಮಕ್ಕೆ ಅತ್ಯಂತ ಸುರಕ್ಷಿತ ಆರ್ಧ್ರಕವಾಗಿಯೂ ಪತ್ರ್ ನಿರ್ವಹಿಸುತ್ತದೆ. ನಿಮ್ಮ ಮಗು ಮಲಬದ್ಧತೆಯಿಂದ ಬಳಲುತ್ತಿದ್ದಲ್ಲಿ ಆಲಿವ್ ಎಣ್ಣೆಯನ್ನು ನಿಮ್ಮ ಮಗುವಿನ ಹೊಟ್ಟೆಯ ಮೇಲೆ ತಿಕ್ಕಿದರೆ, ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. 

ದೇಹಕ್ಕೆ ಆಲಿವ್ ಎಣ್ಣೆಯ ಬಳಕೆಗಳು:

ಆಲಿವ್ ಎಣ್ಣೆಯ ಬಳಕೆಯಿಂದ ಯಾವುದಾದರೂ ನೋವು ಅಥವಾ ಉರಿಯೂತವಿದ್ದಲ್ಲಿ ಅವುಗಳನ್ನು ನಿವಾರಿಸಬಹುದು. ಪ್ರತಿಯೊಂದು ಸಣ್ಣ-ಪುಟ್ಟ ನೋವುಗಳಿಗೆ ಗುಳಿಗೆಗಳನ್ನು ಸೇವಿಸುವ್ಸ್ ಬದಲಿಗೆ, ಆಲಿವ್ ಎಣ್ಣೆ ಮಸಾಜ್ ಮಾಡಿ. ಇದು ಎಲ್ಲಾ ರೀತಿಯ ನೋವುಗಳಿಂದ ನಿಮಗೆ ಮುಕ್ತಿ ದೊರಕಿಸುತ್ತದೆ. ಮಂಡಿ ನೋವನ್ನು ನಿವಾರಿಸುವ ಶಕ್ತಿಯನ್ನೂ ಆಲಿವ್ ಎಣ್ಣೆ ಹೊಂದಿದೆ. 

ಅಡುಗೆಗೆ ಆಲಿವ್ ಎಣ್ಣೆಯ ಬಳಕೆಗಳು:

ಆಲಿವ್ ಎಣ್ಣೆಯ ಬಳಕೆಗಳು ಅಸಂಖ್ಯಾತ. ಅಡುಗೆಯ ವಿಷಯದಲ್ಲಿ ಆಲಿವ್ ಎಣ್ಣೆ ಅತ್ಯಂತ ಆರೋಗ್ಯಕಾರಿ ಎಂದು ಪರಿಗಣಿಸಲಾಗುತ್ತದೆ. ಬೆಣ್ಣೆ ಅಥವಾ ಬೇರೆ ಬಗೆಯ ಎಣ್ಣೆಗಳಿಗೆ ಪರ್ಯಾಯವಾಗಿ ಬಳಸುವುದರಿಂದ ನಿಮ್ಮ ಹೃದಯದ ಅರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. 

ಹೊಟ್ಟೆ ತೊಂದರೆಗಳಿಗೆ ಆಲಿವ್ ಎಣ್ಣೆ:

ಆಲಿವ್ ಎಣ್ಣೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಹಾಗಾಗಿ ನಿಮ್ಮ ದೇಹ ಉಪಯೋಗಕಾರಿ ಪೋಷಕಾಂಶಗಳನ್ನು ಹೀರಿಕೊಂಡು, ಅನಗತ್ಯ ಆಹಾರವನ್ನು ತಿರಸ್ಕರಿಸುತ್ತದೆ. 

[Back To Top]

೩. ನಿಮ್ಮ ತ್ವಚೆಗಾಗಿ ಆಲಿವ್ ಎಣ್ಣೆಯ ೧೫ ಆರೋಗ್ಯಕರ ಲಾಭಗಳು (15 Interesting Uses Of Olive Oil For Skin in Kannada):

ಮೇಲೆ ಕೊಟ್ಟಿರುವ ಲಾಭಗಳಷ್ಟೇ ಅಲ್ಲದೆ, ಚರ್ಮಕ್ಕೆ ಆಲಿವ್ ಎಣ್ಣೆಯ ಲಾಭಗಳು ಹಲವಾರು. ನಿಮ್ಮ ಮುಖಕ್ಕೆ ಆಲಿವ್ ಎಣ್ಣೆಯನ್ನು ಹೇಗೆ ಬಳಸಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಅದಕ್ಕೆ ಉತ್ತರ. 

೧. ಒಣ ಚರ್ಮವನ್ನು ಆರ್ಧ್ರೀಕರಿಸುತ್ತದೆ:

ನಿಮ್ಮ ತ್ವಚೆ ಶುಷ್ಕವಾಗಿದ್ದಲ್ಲಿ, ಪ್ರತಿ ರಾತ್ರಿ ಮಲಗುವ ಮುನ್ನ ಆಲಿವ್ ಎಣ್ಣೆಯನ್ನು ಬಳಸಿ. ಇದನ್ನು ಸ್ನಾನದ ನಂತರ ಮಾಡುವುದು ಒಳಿತು. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಅರ್ಧ್ರೀಕಗೊಳ್ಳುತ್ತದೆ. ಆಲಿವ್ ಎಣ್ಣೆಯನ್ನು ನಿಮ್ಮ ಮುಖಕ್ಕೂ ಹಚ್ಚಬಹುದು. 

೨. ಚರ್ಮದ ಟಾನ್ ತೆಗೆದುಹಾಕುತ್ತದೆ:

ನಿಮ್ಮ ಮುಖಕ್ಕೆ ಆಲಿವ್ ಎಣ್ಣೆಯ ಪ್ರಯೋಜನಗಳಲ್ಲಿ ಒಂದು ನಿಮ್ಮ ತ್ವಚೆಯನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ಸಂರಕ್ಷಿಸುವುದು. ಇದರಿಂದಾಗಿ ಚರ್ಮದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆಗಳನ್ನೂ ಕಡಿಮೆಗೊಳಿಸುತ್ತದೆ. ಆಲಿವ್ ಎಣ್ಣೆಯನ್ನು  ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿದರೆ, ಅದು ಸೂರ್ಯನ ವಿರುದ್ಧದ ರಕ್ಷಾ ಕವಚವಾಗಿಯೂ  ವರ್ತಿಸುತ್ತದೆ.

೩. ಸ್ಟ್ರೆಚ್ ಮಾರ್ಕ್ ಗಳನ್ನೂ ನಿವಾರಿಸುತ್ತದೆ: 

ಆಲಿವ್ ಎಣ್ಣೆಯ ಹಲವಾರು ಪ್ರಯೋಜನಗಳಲ್ಲಿ ಒಂದು ಸ್ಟ್ರೆಚ್ ಮಾರ್ಕ್ ಗಳನ್ನು ನಿವಾರಿಸುವುದು. ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆಗಳನ್ನು ಉಪಯೋಗಿಸಿಕೊಂಡು ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ ಗಳನ್ನು ಹೊಂದಿರುವ ಚರ್ಮದ ಮೇಲೆ ಲೇಪಿಸಿರಿ. ಈ ಮಿಶ್ರಣವನ್ನು ಗರ್ಭಿಣಿಯರೂ ಸ್ಟ್ರೆಚ್ ಮಾರ್ಕ್ ಗಳನ್ನೂ ತಡೆಗಟ್ಟಲು ಉಪಯೋಗಿಸಬಹುದು. 

[Back To Top]

೪. ಅಕಾಲಿಕ ಮುಪ್ಪಿನ ಚರ್ಮವನ್ನು ತಡೆಯುತ್ತದೆ: 

ಚರ್ಮದ ಮೇಲೆ ಅಕಾಲಿಕ ಮುಪ್ಪಿನ ಕುರುಹುಗಳು ಕಾಣುವುದನ್ನು ತಡೆಗಟ್ಟುತ್ತದೆ. ಆಲಿವ್ ಎಣ್ಣೆಯನ್ನು ನಿಮ್ಮ ಮುಖದ ತ್ವಚೆಗೆ ಬಳಸಿದಾಗ, ಪೊಲಿಫೆನೋಲ್ ಎನ್ನುವ ಆಂಟಿಆಕ್ಸಿಡೆಂಟ್ ಬಿಡುಗೋಡೆಗೊಂದು ಭರ್ಮದ ರಕ್ತ ಸಂಚಲನವನ್ನು ಉತ್ತಮಗೊಳಿಸುತ್ತದೆ. 

೫. ತಲೆಹೊಟ್ಟು ಮತ್ತು ಮೊಡವೆಗಳನ್ನು ನಿವಾರಿಸುತ್ತದೆ:

ನಿಮ್ಮ ಮೊಡವೆಗಳಿಗೆ ಕಾರಣ ನಿಮ್ಮ ತಲೆಹೊಟ್ಟಿರಬಹುದು. ಆಲಿವ್ ಎಣ್ಣೆಯ ಲಾಭಗಳಲ್ಲಿ ಒಂದು - ಈ ತಲೆಹೊಟ್ಟಿನ ವಿರುದ್ಧ ಹೋರಾಡುವುದು. ಒಂದು ನಿಂಬೆ ಹಣ್ಣಿನ ರಸವನ್ನು ೨ ಚಮಚ ಆಲಿವ್ ಎಣ್ಣೆಯಲ್ಲಿ ಕಲಸಿ, ನಿಮ್ಮ ಕೂದಲಿಗೆ ಮಸಾಜ್ ಮಾಡಿ. ಒಂದು ಗಂಟೆಯ ನಂತರ ತೊಳೆದುಕೊಳ್ಳಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುವುದು ಸೂಕ್ತ. 

೬. ಸತ್ತ ಜೀವಕೋಶಗಳನ್ನು ಕಡಿಮೆಗೊಳಿಸುತ್ತದೆ: ಮುಖದ ಮೇಲಿರುವ ಸತ್ತ ಜೀವಕೋಶಗಳನ್ನು ತೊಡೆದುಹಾಕಲು ಆಲಿವ್ ಎಣ್ಣೆಯನ್ನು ಹೇಗೆ ಬಳಸಬೇಕು ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ಉತ್ತರ. ೧೦ ಗ್ರಾಂ ಉಪ್ಪನ್ನು ೧೦ ಮಿಲಿಲೀಟರ್ ಆಲಿವ್ ಎಣ್ಣೆಯಲ್ಲಿ ಬೆರೆಸಿ, ನಿಮ್ಮ ಮುಖದ ಚರ್ಮಕ್ಕೆ ಮಸಾಜ್ ಮಾಡಿ. ೨೦-೩೦ ನಿಮಿಷದ ನಂತರ ತೊಳೆದುಕೊಳ್ಳಿ. 

೭. ಮೇಕ್-ಅಪ್ ತೊಡೆದುಹಾಕುತ್ತದೆ: ಆಲಿವ್ ಎಣ್ಣೆಯ ಹಲವಾರು ಪ್ರಯೋಜನಗಳಲ್ಲಿ ಒಂದು ಮೇಕ್-ಅಪ್ ತೊಡೆದುಹಾಕುವುದು. ಹತ್ತಿಯ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಅದ್ದಿ, ನಿಮ್ಮ ಮುಖದ ಮೇಲೆ ಮೆತ್ತಗೆ ಸವರಿಕೊಳ್ಳಿ. ಇದರಿಂದ ನಿಮ್ಮ ಮೇಕ್-ಅಪ್ ತೊಡೆದುಹಾಕಬಹುದು. 

೮. ಒಡೆದ ಹಿಮ್ಮಡಿಯನ್ನು ಚಿಕಿತ್ಸಿಸುತ್ತದೆ: ನಿಮ್ಮ ಪಾದವನ್ನು ನಿಂಬೆ ರಸವನ್ನು ಹಾಕಿರುವ ಬೆಚ್ಚಗಿನ ನೀರಿನಲ್ಲಿ ಅಡ್ಡಿ. ನಂತರ ನಿಮ್ಮ ಕಾಲನ್ನು ತೊಳೆದುಕೊಂಡು, ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಮಲಗುವ ಮುನ್ನ ಕಾಲುಚೀಲಗಳನ್ನು ತೊಟ್ಟುಕೊಂಡು ಮಲಗಿ. 

೯. ಆರೋಗ್ಯಕರ ಉಗುರುಗಳು: ಗಡುಸಾದ ಉಗುರುಗಳು ನೋವನ್ನುಂಟು ಮಾಡಬಹುದು. ನಿಮ್ಮ ಉಗುರುಗಳನ್ನು ಬಲಿಷ್ಠಗೊಳಿಸಲು, ನಿಮ್ಮ ಉಗುರುಗಳನ್ನು ಕೆಲವು ಹನಿ ಆಲಿವ್ ಎಣ್ಣೆಯನ್ನು ನಿಮ್ಮ ಉಗುರುಗಳಿಗೆ ಹಚ್ಚಿಕೊಳ್ಳಿ. ಆಲಿವ್ ಎಣ್ಣೆಯಲ್ಲಿರುವ ವಿಟಮಿನ್ ಇ ತನ್ನ ಚಮತ್ಕಾರವನ್ನು ಮಾಡುತ್ತದೆ. ೨೦ ನಿಮಿಷಗಳ ನಂತರ ನೀರಿನಿಂದ ನಿಮ್ಮ ಉಗುರುಗಳನ್ನು ತೊಳೆದುಕೊಳ್ಳಿ. 

೧೦. ತುಟಿಯ ಸ್ಕ್ರಬ್: ಆಲಿವ್ ಎಣ್ಣೆಯ ಲಾಭಗಳಲ್ಲಿ ತುಟಿಗಳಿಗೂ ಆಗುವ ಲಾಭಗಳಿವೆ. ಆಲಿವ್ ಎಣ್ಣೆಗೆ ಅರ್ಧ ಚಮಚ ಬ್ರೌನ್ ಸಕ್ಕರೆ ಸೇರಿಸಿ, ನಿಮ್ಮ ತುಟಿಗೆ ಸ್ಕ್ರಬ್ ಮಾಡಿಕೊಳ್ಳಿ. ಇದ್ರಿಂದ ನಿಮ್ಮ ತುಟಿ ಸುಂದರವಾಗುತ್ತದೆ. 

೧೧. ಕೂದಲನ್ನು ಅರೋಗ್ಯಕರವಾಗಿಸುತ್ತದೆ: ಆಲಿವ್ ಎಣ್ಣೆ ಕೂದಲ ಕಾಳಜಿಯನ್ನೂ ವಹಿಸುತ್ತದೆ. ಆಗಾಗ ನಿಮ್ಮ ಕೂದಲಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿ ಬಲಿಷ್ಠವಾಗುತ್ತದೆ. 

೧೨. ಶೇವಿಂಗ್ ಗೆ ಕೀಲೆಣ್ಣೆ: ಶೇವಿಂಗ್ ಕ್ರೀಮ್ ಅಥವಾ ಸೋಪ್ ಬಳಸುವ ಬದಲಿಗೆ ಆಲಿವ್ ಎಣ್ಣೆಯನ್ನು ಬಳಸಿ. ಇದು ಅತ್ಯುತ್ತಮ ಕೀಲೆಣ್ಣೆಯಾಗಿ ವರ್ತಿಸುತ್ತದೆ, 

೧೩. ಆಂಟಿಬ್ಯಾಕ್ಟೀರಿಯಲ್ ಗುಣಗಳು: ಆಲಿವ್ ಎಣ್ಣೆಯ ಆಂಟಿಬ್ಯಾಕ್ಟೀರಿಯಲ್ ಗುಣದಿಂದ ಮೊಡವೆಗಳನ್ನು ಉಂಟು ಮಾಡುವ ಸೂಕ್ಷ್ಮಜೀವಿಗಳನ್ನು ತೊಡೆದುಹಾಕಬಹುದು. ಒಂದು ಚಮಚ ಆಲಿವ್ ಎಣ್ಣೆಯಲ್ಲಿ, ಜೇನು ತುಪ್ಪ ಮತ್ತು ಮೊಸರನ್ನು ಬೆರೆಸಿ, ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ೧೫-೨೦ ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. 

೧೪. ತ್ವಚೆಯನ್ನು ಮೃದುಗೊಳಿಸುತ್ತದೆ: ಕೆಲವು ಹನಿ ಲ್ಯಾವೆಂಡರ್ ಎಣ್ಣೆ ಮತ್ತು ನೀರನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಬೆರೆಸಿ. ಅದರಿಂದ ಸ್ನಾನ ಮಾಡಿದರೆ, ನಿಮ್ಮ ದೇಹಕ್ಕೆ ಉಲ್ಲಾಸಭರಿತ ಭಾವನೆಯನ್ನು ನೀಡುತ್ತದೆ. 

೧೫. ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ:

ನಿತ್ಯ ಆಲಿವ್ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಚರ್ಮ ಸ್ವಚ್ಛವಾಗಿ, ಹೊಳೆಯುತ್ತದೆ. ನಿಮ್ಮ ಎಣ್ಣೆಯ ಬಾಟಲಿಗೆ ಕೇಸರಿಯನ್ನು ಬೆರೆಸಿ, ನಿಮ್ಮ ಮುಖ ಮತ್ತು ದೇಹಕ್ಕೆ ಸ್ನಾನದ ನಂತರ ಲೇಪಿಸಿಕೊಳ್ಳಿ. ಇದರಿಂದ ನಿಮ್ಮ ಚರ್ಮ ಆರೋಗ್ಯಕರವಾಗಿ, ಹೊಳೆಯುತ್ತದೆ. 

[Back To Top]

೪. ನಿರ್ಣಯ (Conclusion in Kannada):

ನಿಮ್ಮ ಚರ್ಮ ಅತಿಯಾದ ಸೂಕ್ಷ್ಮತೆಯನ್ನು ಪಡೆಯದೇ, ಯಾವುದೇ ಅಲ್ಲರ್ಜಿಯಾಗುವ ಸಾಧ್ಯತೆಗಳು ಕಡಿಮೆಯಿದ್ದರೆ, ನಿರ್ಭಯವಾಗಿ ಆಲಿವ್ ಎಣ್ಣೆಯ ಲಾಭಗಳನ್ನು ನೀವು ಅನುಭವಿಸಬಹುದು. ಮೇಲೆ ತಿಳಿಸಿರುವ ಎಲ್ಲಾ ಸುಲಭ ಮತ್ತು  ಪರಿಣಾಮಕಾರಿ ಉಪಯೋಗಗಳನ್ನು ನಿಮ್ಮ ಚರ್ಮಕ್ಕೆ ಬಳಸಬಹುದು. 

ಸಂತೋಷವಾಗಿ ಎಣ್ಣೆಲೇಪನವನ್ನು ಅನುಭವಿಸಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon