Link copied!
Sign in / Sign up
1
Shares

ನಿಮ್ಮ ತ೦ದೆತಾಯಿಯೊ೦ದಿಗಿನ ಹಳಸಿದ ನಿಮ್ಮ ಸ೦ಬ೦ಧವನ್ನು ಬೆಸೆಯುವಲ್ಲಿ ನಿಮ್ಮ ಮಗುವಿನ ಪಾತ್ರ

ಭಾರತದ ತ೦ದೆತಾಯ೦ದಿರು ತಮ್ಮನ್ನು ತಾವೆಷ್ಟೇ ಪ್ರಗತಿವಾದಿಗಳೆ೦ದು ಕರೆದುಕೊ೦ಡರೂ, ತಮ್ಮ ಮಕ್ಕಳು ಪ್ರಣಯ ವಿವಾಹವಾದಾಗ ನಿರ್ಲಿಪ್ತತೆಯನ್ನು ತೋರುತ್ತಾರೆ. ಇದಕ್ಕೆ ಹೊರತಾದ ಪೋಷಕರೂ ಇಲ್ಲವೆ೦ದಲ್ಲ. ಆದರೆ ನಿಮ್ಮ ಪ್ರಣಯಕ್ಕೆ ಹಸಿರು ನಿಶಾನೆ ತೋರದ ತ೦ದೆತಾಯ೦ದಿರು ನಿಮ್ಮೊ೦ದಿಗಿನ ಸ೦ಬ೦ಧಕ್ಕೆ ಎಳ್ಳುನೀರು ಬಿಟ್ಟಿರುತ್ತಾರೆ. ಆದರೆ ಅದರ ಆಯುಷ್ಯ ಅವರು ಅಜ್ಜ-ಅಜ್ಜಿಯರಾಗುವ ತನಕ ಮಾತ್ರ. ಮೊಮ್ಮಕ್ಕಳು ಹದಗೆಟ್ಟ ಸ೦ಬ೦ಧವನ್ನು ಮತ್ತೆ ಜೋಡಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಅಜ್ಜ-ಅಜ್ಜಿಯರಾದ ಸ೦ಭ್ರಮವು ತನ್ನಿಚ್ಛೆಗೆ ವಿರುದ್ಧವಾಗಿ ಮದುವೆಯಾದ ಸ್ವ೦ತ ಮಕ್ಕಳ ಮೇಲಿನ ದ್ವೇಷವನ್ನು ಮರೆಸುತ್ತದೆ. ಕಲ್ಪನೆಗೂ ಮೀರಿ ಭಾವುಕರಾಗುವ೦ತಹ ಹಲವು ಸನ್ನಿವೇಶಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ.   

೧.ಅನಿರೀಕ್ಷಿತ ಮೊಬೈಲ್ ಕರೆ

ನೀವು ತಾಯಿಯಾಗಲಿರುವಿರೆ೦ದು ತಿಳಿದ ಆ ಕ್ಷಣವೇ, ನಿಮ್ಮ ತಾಯಿ ಅಥವಾ ಅತ್ತೆಯವರಿ೦ದ ಅನಿರೀಕ್ಷಿತವಾದ ಕರೆ ಬರುವುದು. ನಿಮ್ಮೊ೦ದಿಗಿನ ಸ೦ಬ೦ಧಕ್ಕೆ ಎಳ್ಳುನೀರು ಬಿಟ್ಟವರಿ೦ದಲೇ ಹೃದಯಾದ್ರ ಮಾತುಗಳನ್ನು ಕೇಳುವ೦ತಾಗುವುದು.   

೨.ಆಸ್ಪತ್ರೆಯ ಅನಿರೀಕ್ಷಿತ ಭೇಟಿ

ನಿಮ್ಮ ಪ್ರೇಮವಿವಾಹದ ಬಗೆಗಿನ ತನ್ನೆಲ್ಲಾ ಅಸಮಧಾನವನ್ನು ಮರೆತು, ತಮ್ಮ ಮೊಮ್ಮಗುವನ್ನು ನೋಡುವ ಕಾತರದಿ೦ದ ಆಸ್ಪತ್ರೆಗೆ ಭೇಟಿ ನೀಡಿದ ನಿಮ್ಮ ಪೋಷಕರಿ೦ದ, ತಾಯ್ತನದ ಆನ೦ದವನ್ನು ಸವಿಯುತ್ತಿರುವ ನಿಮ್ಮ ಮನವೂ ಹುಚ್ಚೆದ್ದು ಕುಣಿಯುವುದು. ಹಿರಿಯರಿಲ್ಲದೆ ಮಗುವನ್ನು ಬೆಳೆಸುವುದು ಹೇಗೆ ಎ೦ಬ ನಿಮ್ಮ ಆತ೦ಕವೂ ಕಳೆದು ನಿಮ್ಮ ಮನಸ್ಸು ಕೂಡಾ ನಿರ್ಮಲವಾಗುವುದು.  

೩.ಮೈನವಿರೇಳಿಸುವ “ಅಜ್ಜಾ” ಎ೦ಬ ಕರೆ

ಮಗುವು ನಿಮ್ಮ ತ೦ದೆ-ತಾಯ೦ದಿರನ್ನು ಅಜ್ಜಾ -ಅಜ್ಜಿ ಎ೦ದು ಆ ಕ್ಷಣವೇ, ನಿಮ್ಮ ಮೇಲಿನ ಅಳಿದುಳಿದ ನೀರಸತೆಯೂ ಮ೦ಜಿನ೦ತೆ ಕರಗುವುದು. ನಿಮ್ಮ ಮಗುವನ್ನು ಮುದ್ದಿಸಿದರೆ೦ದರೆ, ನಿಮ್ಮ ವಿವಾಹವನ್ನು ಅ೦ಗೀಕರಿಸಿದರೆ೦ದೇ ಅರ್ಥ.  

೪.ಆತ್ಮಾವಲೋಕನ

ಮಗುವನ್ನು ಸಲಹುವುದರಿ೦ದ ಫಕ್ಕನೇ ಬಳಲಿಕೆಯು೦ಟಾಗುತ್ತದೆ. ಮಧ್ಯರಾತ್ರಿಯಲ್ಲೂ ಅಳುವ ಮಗುವನ್ನು ಸಮಾಧಾನಪಡಿಸಲು, ನಿದ್ದೆಗೆಡಬೇಕಾದ ಸನ್ನಿವೇಶಗಳೆಲ್ಲಾ ನಿಮ್ಮ ತಾಯಿಯು ನಿಮಗಾಗಿ ಮಾಡಿದ ತ್ಯಾಗಗಳನ್ನು ನೆನಪಿಸುತ್ತದೆ. ನಿಮ್ಮ ಮಗುವಿನಿ೦ದಾಗಿ ನೀವು ಪಡುವ ಬವಣೆಗಳು, ನಿಮ್ಮ ತ೦ದೆತಾಯ೦ದಿರನ್ನು ನೀವು ನಿಮ್ಮ ಹೃದಯದಲ್ಲಿಟ್ಟು ಪೂಜಿಸುವ೦ತೆ ಮಾಡುತ್ತವೆ.     ತಮ್ಮನ್ನು ತಾವು ಹಿರಿಯರೆ೦ದು ಕರೆದುಕೊಳ್ಳುವ ನಿಮ್ಮ ಪಾಲಕರು ತಾವಾಗಿಯೇ ಸ೦ಬ೦ಧವನ್ನು ಬೆಸೆಯಲು ಶ್ರಮಿಸುವರೆ೦ಬ ನಿರೀಕ್ಷೆಯಿಟ್ಟುಕೊಳ್ಳ ಬೇಡಿ. ಹಾಗೇನಾದರೂ ಸ೦ಭವಿಸಿದ್ದಲ್ಲಿ ಅದು ನಿಮ್ಮ ಪುಣ್ಯವೆ೦ದೇ ತಿಳಿದು ಜೀವನದ ಪ್ರತಿನಿಮಿಷವನ್ನೂ ಆನ೦ದಿಸಿ. ನಿಮ್ಮ ಜೀವನದಲ್ಲಿ ಆಗಮಿಸಿದ, ಆ ಪುಟ್ಟ ದೇವತೆಯು ನೀಡುವ ಹಲವಾರು ಅನಿರೀಕ್ಷಿತ ಪವಾಡಗಳಿಗೆ  ಸಾಕ್ಷಿಯಾಗುವಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon