Link copied!
Sign in / Sign up
3
Shares

ನಿಮ್ಮ ಸ್ತನದಲ್ಲಿ ಹಾಲು ಕಡಿಮೆಯಾದಾಗ ನೀವು ಏನು ಮಾಡಬೇಕು?

ಹಲವು ಬಾರಿ, ತಮ್ಮ ಮಗುವಿಗೆ ಎಷ್ಟು ಹಾಲುಣಿಸಬೇಕು ಎಂಬುದು ಅವರಿಗೆ ಖಚಿತವಾಗಿ ತಿಳಿದಿರುವುದಿಲ್ಲ, ಅಥವಾ ಗೊಂದಲದಲ್ಲಿ ಇರುತ್ತಾರೆ, ಏಕೆಂದರೆ ಅಮ್ಮಂದಿರು ಹಾಲುಣಿಸುವ ಕೆಲಸಕ್ಕೆ ಹೊಸಬರು. ಹಾಲುಣಿಸುವ ಪ್ರಕ್ರಿಯೆಯಲ್ಲಿ ಕೆಲವು ಮಹಿಳೆಯರು ಕಷ್ಟವನ್ನು ಅನುಭವಿಸುತ್ತಾರೆ/ಎದುರಿಸುತ್ತಾರೆ. ಸುಮಾರು, ಶೇಕಡಾ ೬೦% ರಷ್ಟು ಮಹಿಳೆಯರು ತಮ್ಮ ನಿಗದಿತ ಸಮಯಕ್ಕಿಂತ ಮುಂಚೆಯೇ ಹಾಲುಣಿಸುವುದನ್ನು ನಿಲ್ಲಿಸುತ್ತಾರೆ, ಏಕೆಂದರೆ ಅವರು ನಾವು ಇದನ್ನು ಸಮರ್ಥವಾಗಿ ನಿಭಾಯಿಸಲು ಆಗುತ್ತಿಲ್ಲ/ಆಗುವುದಿಲ್ಲ ಎಂದು ಭಾವಿಸುತ್ತಾರೆ. ಅದೇನೇ ಇದ್ದರೂ, ನಿಮ್ಮ ಮಗುವಿಗೆ ೬ ತಿಂಗಳು ತುಂಬುವ ತನಕ ನಿಮ್ಮ ಎದೆಹಾಲು ಬಿಟ್ಟು ಏನನ್ನು ನೀಡದಿರಿ. ನಿಮ್ಮ ಎದೆಹಾಲಿಗೆ ಪರ್ಯಾಯವಾದ ಮತ್ತೊಂದು ಪದಾರ್ಥ ಅಥವಾ ಯಾವುದೇ ಆಹಾರಗಳಿಲ್ಲ. ನಿಮಗೆ ನಾನು ಉತ್ತಮವಾಗಿ ಎದೆಹಾಲನ್ನು ಮಗುವಿಗೆ ನೀಡುತ್ತಿಲ್ಲ ಎಂದು ಭಾವಿಸಿದರೆ, ಕೂಡಲೇ  ವೈದ್ಯರನ್ನು ಭೇಟಿಯಾಗುವುದು, ನಿಮ್ಮ ಮತ್ತು ಮಗುವಿಗೆ ತುಂಬಾ ಒಳ್ಳೆಯದು.

ಅದು ಏನೇ ಇರಲಿ, ನಿಮ್ಮ ಮೊಲೆಯಲ್ಲಿ ಮಗುವಿಗೆ ಅಗತ್ಯವಿರುವಷ್ಟು ಹಾಲು ಇಲ್ಲವೆಂದು, ವೈದ್ಯರು ದೃಡೀಕರಿಸಿದ್ದರೆ, ಇಲ್ಲಿರುವ ಕೆಲವು ವಿಷಯಗಳನ್ನು ನೀವು ತಿಳಿಯುವುದರಿಂದ ನಿಮ್ಮ ಮಗುವಿಗೆ ಎದೆಹಾಲು ನೀಡುವುದನ್ನು ಮುಂದುವರೆಸಬಹುದು(ಮೊದಲಿನಂತೆ ಮಗುವಿಗೆ ಅಗತ್ಯವಿರುವ ಹಾಲನ್ನು ನೀಡಬಹುದು).

೧. ಆಗಾಗ್ಗೆ (ಮತ್ತೆ ಮತ್ತೆ) ಹಾಲುಣಿಸುತ್ತೀರಿ

ಮಗುವು ತನಗೆ ಬೇಕಾದಷ್ಟು ಹಾಲನ್ನು ಸ್ತನದಿಂದ ಹೀರಿಕೊಳ್ಳದ ಕಾರಣ ತುಂಬಾ ಸಲ ಎದೆಹಾಲುಣಿಸುವ ತೊಂದರೆ ಎದುರಾಗಬಹುದು. ಅವರಿಗೆ ಹೆಚ್ಚಿನ ಹಾಲಿನ ಅವಶ್ಯಕತೆ ಇದೆ ಮತ್ತು ಅವರು ಅದನ್ನು ಕುಡಿಯುತ್ತಾರೆ, ಅವರಿಗಾಗಿ ಅವರ ಅವಶ್ಯಕತೆಗೆ ಬೇಕಿರುವ ಹಾಲನ್ನು ಉತ್ಪಾದಿಸಿ. ನಿಮ್ಮ ಮಗುವಿಗೆ ಪದೇ ಪದೇ ಅಥವಾ ಹೆಚ್ಚು ಬಾರಿ ಆಗಾಗ್ಗೆ ಹಾಲುಣಿಸುವುದು ಒಂದು ಒಳ್ಳೆಯ ಉಪಾಯ. ನೀವು ಹೆಚ್ಚು ಹಾಲುಣಿಸುತ್ತಿದ್ದಂತೆ, ಸ್ತನದಲ್ಲಿ ಹಾಲು ತುಂಬುವ ಪ್ರಕ್ರಿಯೆ ಶುರುವಾಗುತ್ತದೆ, ಹೀಗೆ ಮಾಡುವುದರಿಂದ ನೈಸರ್ಗಿಕವಾಗಿ ಹಾಲು ಉತ್ಪತ್ತಿಯಾಗಲು ಶುರುವಾಗುತ್ತದೆ.

೨.ಕಚ್ಚಿಕೊಂಡಿರುವುದು

ಕೆಲವೊಮ್ಮೆ, ನೀವು ಎದೆಹಾಲುಣಿಸುವಾಗ ಎದುರಿಸುವ ತೊಂದರೆಗೆ ನಿಮ್ಮ ಮಗುವನ್ನು ಹಾಲುಣಿಸುವಾಗ ಇರಿಸಿಕೊಂಡಿರುವ ಸ್ಥಾನವು ಕಾರಣವಾಗಬಹುದು. ನಿಮ್ಮ ಮಗು ಮೊಲೆ ಕಚ್ಚುವ ಮೊದಲು ಸರಿಯಾದ ಸ್ಥಾನದಲ್ಲಿ ಇರಿಸಿಕೊಂಡಿರುವಿರಾ ಎಂದು ನೋಡಿಕೊಳ್ಳಿ.. ಇದು ನಿಮ್ಮ ಮೊದಲ ಅನುಭವವಾಗಿದ್ದರೆ, ಅನುಭವಿಗಳನ್ನು ಅಥವಾ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಮಗುವು ನಿದ್ದೆಗಣ್ಣಿನಲ್ಲಿದ್ದರೆ ಮಗುವನ್ನು ಎಚ್ಚರಿಸಿ, ಮಗುವು ತನ್ನ ಅವಶ್ಯಕ ಹಾಲನ್ನು ಕುಡಿದು ನೆಮ್ಮದಿಯ ನಿದ್ರೆ ಮಾಡಲಿ.

೩.ಚಲನೆ

ಒಂದೇ ಸ್ತನದಿಂದ ನಿಮ್ಮ ಮಗುವಿಗೆ ಎದೆಹಾಲನ್ನು ನೀಡಬೇಡಿ. ನಿಮ್ಮ ಎರಡು ಸ್ತನಗಳಿಂದ ಮಗುವಿಗೆ ಹಾಲುಣಿಸಿ, ಒಂದು ಬಾರಿ ಹಾಲುಣಿಸುವಾಗ ಎರಡು ಸ್ತನಗಳಿಂದ ಹಾಲನ್ನು ನೀಡಿ. ಒಂದು ಬಾರಿಗೆ ಒಂದು ಸ್ತನದಲ್ಲಿ ಕನಿಷ್ಠ ಪಕ್ಷ ಎರಡುಬಾರಿಯಂತೆ ಎರಡು ಸ್ತನಗಳಿಂದ ಹಾಲುಣಿಸಿ. ಇದರಿಂದ ಮಗುವಿಗೆ ಅವಶ್ಯವಿರುವ ಹಾಲು ಸಿಗುವ ಜೊತೆಗೆ ನಿಮ್ಮ ಮೊಲೆ ನೋವನ್ನು ನಿವಾರಿಸಿಕೊಳ್ಳಬಹುದು. ನಿಮ್ಮ ದೇಹಕ್ಕೆ ಅಗತ್ಯವಿರುವ ವಿಶ್ರಾಂತಿ ಪಡೆಯಿರಿ, ಮತ್ತು ಹಾಲುಣಿಸುವ ಸಮಯದಲ್ಲಿ ಹಾಡು ಕೇಳುವುದು ಮತ್ತು ಇಂತಹ ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳನ್ನು ಮಾಡಿ.

೪.ಒತ್ತ್ತಿರಿ

ಸ್ತನವನ್ನು ಅದುಮುವ ಉದ್ದೇಶ, ಮೊಲೆಗೆ ಹಾಲು ಸಮರ್ಪಕವಾಗಿ ಪೂರೈಕೆಯಾಗಿಲಿ ಮತ್ತು ಮಗುವಿಗೆ ಸರಾಗವಾಗಿ ಕುಡಿಯುವಂತೆ ಮಾಡಲು. ನಿಮ್ಮ ಮಗು ಸರಿಯಾಗಿ ಹಾಲು ಕುಡಿಯುತ್ತಿಲ್ಲವಾದರೆ ಇದು ಅತ್ಯಂತ ಪರಿಣಾಮಕಾರಿ. ನಿಮ್ಮ ಸ್ತನವನ್ನು ಎದೆಹಾಲುಣಿಸಿದ ನಂತರ ಅಥವಾ ಬಿಡುವಿನ ಸಮಯದಲ್ಲಿ ಈ ಕೆಲಸ ಮಾಡಿ. ನೆನಪಿರಲಿ ಮೃದುವಾಗಿ ಮೂರರಿಂದ ನಾಲ್ಕು ಬಾರಿ ಮಾಡಿದರೆ ಸಾಕು.

೫.ಕ್ಷೀರಚೋದಕ

ಕೊನೆಯದಾಗಿ, ಕ್ಷೀರಚೋದಕವನ್ನು ಉಪಯೋಗಿಸುವುದು ಒಂದು ಒಳ್ಳೆಯ ಉಪಾಯ. ಇವುಗಳು, ಆಹಾರ ಪದಾರ್ಥಗಳು, ಔಷಧಿಗಳು, ಗಿಡಮೂಲಿಕೆಗಳು, ಅಥವಾ ಯಾವದೇ ಪದಾರ್ಥಗಳು ಮತ್ತು ಇದನ್ನು ಸೇವನೆಮಾಡಿದಾಗ ಹಾಲಿನ ಪೂರೈಕೆಯನ್ನು ಹೆಚ್ಚಿಸುತ್ತದೆ. ನೆನಪಿರಲಿ ಇದನ್ನು ವೈದ್ಯರ ಬಳಿ ದೃಢಿಕರಿಸಿಕೊಂಡ ನಂತರವೇ ತೆಗೆದುಕೊಳ್ಳಬೇಕು. ಕ್ಷೀರಚೋದನವು ಸ್ತನದಲ್ಲಿ ಹಾಲು ಹೆಚ್ಚಿಸಲು ಉಪಯೋಗಿಸಿದರು ಅದರಿಂದ ಅಡ್ಡಪರಿಣಾಮಗಳು ಅಪರೂಪವಾಗಿವೆ, ಆದರೆ ಅವು ತೀವ್ರವಾಗಿವೆ, ಆದ್ದರಿಂದ ವೈದ್ಯರ ಸಲಹೆ ಪಡೆಯುವುದು ಉತ್ತಮ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon