Link copied!
Sign in / Sign up
11
Shares

ನಿಮ್ಮ ನವಜಾತ ಶಿಶುವಿನ ಆಹಾರ ಕ್ರಮ ಮತ್ತು ನಿದ್ರೆ ಮಾದರಿಯನ್ನು ಅರ್ಥಮಾಡಿಕೊಳ್ಳುವುದು

ಹೊಸ ತಾಯಿಯಾಗಿ, ನೀವು ನವಜಾತ ಶಿಶುವನ್ನು ಹೇಗೆ ಆರೈಕೆ ಮಾಡಬೇಕು, ಅದರ ಅಗತ್ಯಗಳನ್ನು ಹೇಗೆ ಹೊಂದಿಸಬೇಕು ಎಂದು ತಿಳಿಯಲು, ಹಲವು ಪುಸ್ತಕಗಳನ್ನು ಓದುವಿರಿ, ದೃಶ್ಯ ಗಳನ್ನು ನೋಡುವಿರಿ ಮತ್ತು ನಿಮ್ಮ ದೂರವಾಣಿಯಲ್ಲಿ ಮಕ್ಕಳ ವೈದ್ಯರ ಸಂಖ್ಯೆ ಮೊದಲಿರುವುದು. ಪ್ರತಿ ತಾಯಿಯ ಸಾಮಾನ್ಯ ಸಮಸ್ಯೆಯು ನವಜಾತ ಶಿಶುಗಳ ನಿದ್ರಾ ಕಾಳಜಿ. ೦-೬ ತಿಂಗಳುಗಳ ಮಗುವು ದಿನಕ್ಕೆ ೧೬-೨೦ ಗಂಟೆಗಳ ಕಾಲ ನಿದ್ರೆ ಮಾಡುತ್ತದೆ, ಮತ್ತು ಅದು ಏಳುವುದು, ಆಹಾರಕ್ಕಾಗಿ ಮಾತ್ರ. ನಿಮಗೆ ಗೊಂದಲವಿರಬಹುದು, ಮಗುವನ್ನು ಆಹಾರಕ್ಕಾಗಿ, ನಾವೇ ಏಳಿಸಬೇಕೇ?, ಅಥವಾ ಮಗುವೆ ಹಸಿವಾದಾಗ ಎಚ್ಚರಗೊಳ್ಳುವುದೇ?. ಕೆಲವರಿಗೆ ಶಿಶುಗಳ ನಿದ್ರಾ ಚಕ್ರವು ಹೇಗಿರುತ್ತದೆ ಎಂದು ತಿಳಿದಿರುವುದಿಲ್ಲ. ಅದನ್ನು ಇಲ್ಲಿ ವಿವರಿಸಲಾಗಿದೆ. 

ಶಿಶುವಿನ ನಿದ್ರಾಚಕ್ರ

ನೀವು ಅಂದುಕೊಳ್ಳುವುದಕ್ಕಿಂತ ಹೆಚ್ಚಿನ ನಿದ್ರೆಯನ್ನು ಮಗು ಬಯಸುತ್ತದೆ/ಮಾಡುತ್ತದೆ. ನಿಮ್ಮ ಮಗುವಿಗೆ ನಾಲ್ಕು ತಿಂಗಳು ತುಂಬುವವರೆಗೆ ಕನಿಷ್ಟ ಪಕ್ಷ ದಿನಕ್ಕೆ ೧೬ ತಾಸು(ಗಂಟೆ)ಗಳ ನಿದ್ರೆ ಅವಶ್ಯಕವಿರುತ್ತದೆ. ಪ್ರತಿ ಮಗುವಿನ ನಿದ್ರಾಚಕ್ರವು ವಿಭಿನ್ನವಾಗಿರುತ್ತದೆ, ಮತ್ತು ಅದನ್ನು ಯಾರು ಕೂಡ ಊಹಿಸಲಾಗುವುದಿಲ್ಲ. ಶಿಶುಗಳು ತಮ್ಮ ದಿನದ ಶೇಕಡ ೮೦ರಷ್ಟು ಸಮಯವನ್ನು REM[rapid eye movement- ಕ್ಷಿಪ್ರ ಕಣ್ಣಿನ ಚಲನೆ] ನಿದ್ರೆಯಲ್ಲಿ ಕಳೆಯುತ್ತಾರೆ. ವಯಸ್ಕರು ಶೇಕಡ ೨೦ರಷ್ಟು ಮಾತ್ರ ಆರ್.ಇ.ಎಮ್ ನಿದ್ರೆಯನ್ನು ಮಾಡುತ್ತಾರೆ. ಅವರು ಕನಸು ಕಾಣುವ ಹಂತ ಇದು. ಇದರ ಅರ್ಥ ಶಿಶುಗಳು ನಮಗಿಂತ ಹೆಚ್ಚು ನಿದ್ರಿಸುತ್ತವೆ. ಮತ್ತು ಇದು ಅವರಿಗೆ ಒಳ್ಳೆಯದು, ಇದರಿಂದ ಅವರ ಮೆದುಳು ಚುರುಕುಗೊಳ್ಳುತ್ತದೆ. ನಿಮ್ಮ ಮಗುವಿನ ಗಾಡ ಮತ್ತು ತುಸು ನಿದ್ರೆಯ ಮಾದರಿಯನ್ನು ನೀವು ಅರಿತುಕೊಳ್ಳಬೇಕು. ಒಂದು ಮಗುವಿನ ತುಸು ಮತ್ತು ಗಾಡ ನಿದ್ರೆಯ ಸರಾಸರಿ ೫೦-೭೦ ನಿಮಿಷಗಳು ಮಾತ್ರ. ಇದು ಮಗುವಿನಿಂದ ಮಗುವಿಗೆ ಬದಲಾಗಬಹುದು. ನಿಮ್ಮ ಮಗುವನ್ನು ಎಚ್ಚರಗೋಳಿಸಬೇಕ್ಕಿದ್ದರೆ ಇದು ಒಳ್ಳೆಯ ಸಮಯ(ತುಸು ನಿದ್ರೆ- ಲೈಟ್ ಸ್ಲೀಪ್). 

ನಾನು ನನ್ನ ಮಗುವನ್ನು ಏಕೆ ಎಚ್ಚರಗೊಳಿಸಬೇಕು?

ಅದಕ್ಕೆ ಸ್ಪಷ್ಟವಾದ ಕಾರಣವೆಂದರೆ ಅವರಿಗೆ ಆಹಾರ ನೀಡಲು. ವಯಸ್ಕರಾಗಿ ರಾತ್ರಿಯಿಡಿ ಬೇಕಾಗುವಷ್ಟು ಆಹಾರವನ್ನು ನೀವು ಸೇವಿಸುವಿರಿ, ಆದರೆ ಶಿಶುವಿಗೆ ನಿಯಮಿತ ಅಂತರದಲ್ಲಿ ಆಹಾರ ನೀಡಬೇಕು. ಮತ್ತೊಂದು ಕಾರಣವೆಂದರೆ ನಿಮ್ಮ ಮಗುವಿಗೆ ಹಗಲು ಮತ್ತು ರಾತ್ರಿಗೆ ಇರುವ ವ್ಯತ್ಯಾಸ ಹೇಳಿಕೊಡಲು. ಮಗುವಿಗೆ ೫-೬ ತಿಂಗಳು ಆಗುತ್ತಿದ್ದಂತೆ ರಾತ್ರಿಯು ನಿದ್ದೆ ಮಾಡುವ ಸಮಯ ಎಂದು ತಿಳಿದುಕೊಳ್ಳುತ್ತವೆ. ಆದ್ದರಿಂದ ಅವರನ್ನು ಹಗಲಿನಲ್ಲಿ, ಹೆಚ್ಚು ಆಟವಾಡಿಸಿ ಅಥವಾ ಎಚ್ಚರವಿರಿಸಿ. ರಾತ್ರಿ ಬೆಳಕನ್ನು ಆರಿಸಿ, ಗದ್ದಲಗಳನ್ನು ಕಡಿಮೆ ಮಾಡಿ ಅವು ಆಗ ಇದು ಮಲಗುವ ಸಮಯ ಎಂದು ಕಲಿಯಲು ಪ್ರಾರಂಭಿಸುತ್ತವೆ. 

ನನ್ನ ಮಗುವಿಗೆ ಎಷ್ಟು ಹಾಲಿನ ಅಗತ್ಯವಿದೆ?

ಪ್ರತಿ ಮಗುವಿನ ಸರಿಯಾದ ಬೆಳವಣಿಗೆಗೆ ಸರಿಯಾದ ಪೋಷಣೆಯ ಅಗತ್ಯವಿದೆ. ಪ್ರತಿ ತಾಯಿಗೂ ನಿಮ್ಮ ಮಗುವಿಗೆ ಎಷ್ಟು ಎದೆ ಹಾಲು/ ಹಸು ಹಾಲು ಬೇಕು ಮತ್ತು ಯಾವಾಗ ಹಾಲುಕುಡಿಸುವುದು ಎಂಬುದು ತಿಳಿದಿರಬೇಕು. ಮೊದಲು ನಿಮ್ಮ ಮಗುವಿಗೆ ಹಸಿವಾದಾಗ ಮತ್ತು ಹೊಟ್ಟೆ ತುಂಬಿದಾಗ ಮಾಡುವ ಚಿಹ್ನೆಗಳನ್ನು ತಿಳಿದುಕೊಳ್ಳಿ. ಪ್ರತಿ ಮಗುವಿಗೆ ದಿನಕ್ಕೆ ಪ್ರತಿ ಕಿಲೋಗ್ರಾಂಗೆ ೧೫೦-೨೦೦ ಎಮ್.ಎಲ್ ಹಾಲು ಬೇಕು ಎಂದು ಸಂಶೋಧನೆ ತಿಳಿಸಿದೆ.

೧.ಮೊದಲ ೨-೪ ವಾರಗಳಲ್ಲಿ, ಪ್ರತಿ ಉಣಿಸುವಿಕೆಯಲ್ಲಿ ೬೦-೭೦ ಮಿಲಿ ಲೀ. ಗಿಂತ ಹೆಚ್ಚು ಹಾಲು ನೀಡಬಾರದು.

೨.೩ ವಾರಗಳಿಂದ ೨ ತಿಂಗಳುಗಳಲ್ಲಿ, ಮಗುವಿಗೆ ಪ್ರತಿ ಉಣಿಸುವಿಕೆಯಲ್ಲಿ ೭೫-೧೦೦ ಮಿಲಿ ಲೀ. ಹಾಲನ್ನು ನೀಡಬಹುದು.

೩.೨-೬ ತಿಂಗಳುಗಳ ನಡುವೆ ನಿಮ್ಮ ಮಗುವಿಗೆ ಪ್ರತಿ ಉಣಿಸುವಿಕೆಯಲ್ಲಿ ೧೦೦-೨೦೦ಮಿಲಿ ಲೀ. ಹಾಲಿನ ಅಗತ್ಯವಿರುತ್ತದೆ.

ಮೇಲಿನ ಮಾಹಿತಿ ಕೇವಲ ಅಂದಾಜು ಪ್ರಮಾಣವಾಗಿದೆ. ವಯಸ್ಕರಂತೆ, ಪ್ರತಿ ಮಗುವಿಗೆ ಬೇರೆ ಹಸಿವು ಇರುತ್ತದೆ. ಆದ್ದರಿಂದ, ನಿಮ್ಮ ಮಗುವಿಗೆ ಪ್ರತಿ ಬಾರಿ ಒಂದೇ ಸೇವನೆಯಿಲ್ಲದಿದ್ದರೆ ತೊಂದರೆ ಏನು ಇಲ್ಲ.

ಮಗುವಿಗೆ ಆಹಾರ ತಿನ್ನಿಸಲು ಅವನನ್ನು ಎಚ್ಚರಗೊಳಿಸಲೇ?

ಹೌದು, ನಿಯಮಿತ ಅಂತರದಲ್ಲಿ ನೀವು ಮಲಗಿರುವ ಮಗುವನ್ನು ಎಚ್ಚರಗೊಳಿಸಬೇಕು. ಸಾಮಾನ್ಯವಾಗಿ ಮಲಗಿರುವ ಮಗು ಪೂರ್ಣ(ಹೊಟ್ಟೆ ತುಂಬಿದೆ) ಮತ್ತು ತೃಪ್ತಿಯನ್ನು ಹೊಂದಿದೆಯೆಂದು ಭಾವಿಸಲಾಗುತ್ತದೆ. ಅದು ಏನೇ ಇದ್ದರು ನಿಮ್ಮ ಮಗುವಿಗೆ ನಿಯಮಿತ ಆಹಾರದ ಅಗತ್ಯವಿದೆ.ಆರಂಭಿಕ ೨-೩ ವಾರಗಳು, ನಿಮ್ಮ ಮಗುವಿಗೆ ಪ್ರತಿ ೨ ತಾಸು(ಗಂಟೆ)ಗಳಿಗೊಮ್ಮೆ ಆಹಾರ ನಿಡುವ ಅವಶ್ಯಕತೆ ಇರುತ್ತದೆ. ಮಗು ಬೆಳೆದಂತೆ ಅನುಗುಣವಾಗಿ ಆಹಾರ ಸಮಯವನ್ನು ಬದಲಾಯಿಸಬಹುದು. ರಾತ್ರಿಯ ಸಮಯದಲ್ಲಿ ೪-೫ ತಾಸುಗಳ ಅಂತರವನ್ನು ಕೊಡಬಹುದು. ಮೇಲಿನ ಮಾಹಿತಿಯೂ ನಿಮ್ಮ ಮಗುವಿನ ಬೆಳವಣಿಗೆಗೆ ಸಹಾಯಕವಾಗಿದೆಯೆಂದು ಭಾವಿಸುತ್ತೇವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon