Link copied!
Sign in / Sign up
42
Shares

ನಿಮ್ಮ ಸೆಕ್ಸ್ ಜೀವನದ ಬಗ್ಗೆ ನಿಮ್ಮ ರಾಶಿ ಏನು ಹೇಳುತ್ತದೆ

ನೀವು ನಿಮ್ಮ ನಿತ್ಯದ ಭವಿಷ್ಯವನ್ನ ದಿನಪತ್ರಿಕೆಯಲ್ಲೋ ಅಥವಾ ಟಿವಿಯಲ್ಲೋ ಓದಿರುತ್ತೀರ ಅಥವಾ ನೋಡಿರುತ್ತೀರ. ಆದರೆ ನಿಮ್ಮ ಲೈಂಗಿಕ ಸಂಬಂಧವು ಕೂಡ ನಿಮ್ಮ ರಾಶಿಯ ಮೇಲೆ ಆಧಾರಿತವಾಗಿದ್ದರೆ?

ನಾನು ಲೈಂಗಿಕ ಜೀವನದ ನಿರ್ಧಾರಗಳನ್ನ ಜ್ಯೋತಿಷ್ಯದ ಆಧಾರದ ಮೇಲೆ ಮಾಡಬೇಕೆಂದು ಖಂಡಿತ ಹೇಳುತ್ತಿಲ್ಲ, ಆದರೆ ಇಬಾರ ನಡುವಿನ ಕೆಮಿಸ್ಟ್ರಿ ಎನ್ನುವುದು ವಿಶ್ಲೇಷಿಸಲು ಅಥವಾ ಹೀಗೆ ಎಂದು ಹೇಳುವುದು ತುಂಬಾನೇ ಕಷ್ಟ. ಕೆಲವೊಂದು ರಾಶಿಯವರ ಜೊತೆ ನೀವು ಒಳ್ಳೆಯ ಕೆಮಿಸ್ಟ್ರಿ ಹೊಂದಬಹುದು.ನಿಮ್ಮ ರಾಶಿಯು ನಿಮ್ಮ ಲೈಂಗಿಕ ಸಂಬಂಧದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ ಬನ್ನಿ

೧. ಮೇಷ

ನಿಮ್ಮದು ಮೊದಲ ರಾಶಿ ಆಗಿದ್ದು, ನೀವುಗಳು ಖಚಿತತೆ ಮತ್ತು ಆಕ್ರಮಣಕಾರಿ ಹೊಂದುವಂತವರು. ಅಲ್ಲದೆ, ನೀವು ನಿಮ್ಮ ಲೈಂಗಿಕ ಸಾಹಸಗಳನ್ನ ಆಸ್ವಾದಿಸುತ್ತೀರ. ನೀವು ಎಲ್ಲದರಲ್ಲೂ ತಕ್ಷಣವೇ ಫಲ ಸಿಗಬೇಕೆಂದು ಬಯಸುವಿರಿ ಮತ್ತು ಭಾವಾನಾತ್ಮಕ ಆಟಗಳಿಗೆ ಮಣೆ ಹಾಕುವುದಿಲ್ಲ. ನಿಮ್ಮ ಕೂದಲಿನೊಂದಿಗೆ ಯಾರಾದರು ಆಟ ಆಡಿದರೆ ಅಥವಾ ನಿಮ್ಮ ತಲೆಯನ್ನ ಸವರಿದರೆ ನಿಮಗೆ ತುಂಬಾ ಇಷ್ಟ ಆಗುತ್ತದೆ. ನೀವು ನಿಮ್ಮನ್ನ ಯಾರಾದರು ಹುಡುಕುತ್ತಾ ಬರುವುದನ್ನು ಕಾಯುವುದಿಲ್ಲ, ಬದಲಿಗೆ ನೀವೇ ಹುಡುಕುವಿರಿ.

೨. ವೃಷಭ

ನಿಮಗೆ ಲೈಂಗಿಕ ತೃಪ್ತಿಗಿಂತ ಇಂದ್ರಿಯಗಳ ತೃಪ್ತಿ ಮುಖ್ಯ. ನೀವು ಲೈಂಗಿಕ ಪ್ರಚೋದನೆ ಹೊಂದುವುದಕ್ಕಿಂತ, ದೇಹದ ಭಾಗಗಳಿಗೆ ಉದ್ದೀಪನ ನೀಡಿಸಿಕೊಳ್ಳುವುದನ್ನ ಹೆಚ್ಚು ಇಚ್ಚಿಸುತ್ತೀರ. ಅಲ್ಲದೆ, ನಿಮಗೆ ಸಂಭೋಗಕ್ಕಿಂತ ಹೆಚ್ಚು ಮುಖ್ಯವಾದದ್ದು ಆ ಕ್ರಿಯೆಯಲ್ಲಿನ ಗಂಧ, ಶಬ್ದ ಮತ್ತು ಸ್ಪರ್ಶ. ನೀವು ಲೈಂಗಿಕ ಅನುಭವಗಳು ನಿಮ್ಮನ್ನು ಹುಡುಕಿ ಬರುವವರೆಗೂ ಕಾಯುವಿರೆ ಹೊರೆತು ನೀವು ಮುಂದಾಳತ್ವ ವಹಿಸುವುದಿಲ್ಲ.

೩. ಮಿಥುನ

ಇವರು ತಮ್ಮ ಲೈಂಗಿಕ ಆಸಕ್ತಿಗಳಲ್ಲಿ ಆಗಲಿ ಅಥವಾ ಇಚ್ಚೆಗಳಲ್ಲಿ ಆಗಲಿ ಯಾವುದಕ್ಕೂ ಹಿಂಜರಿಯುವುದಿಲ್ಲ. ನೀವು ನಿಮಗೆ ಬೇಕಾದ ಸಮಯ, ಸ್ಥಳದಲ್ಲಿಯೇ ಕ್ರಿಯೆಯಲ್ಲಿ ತೊಡಗಲು ಹಿಂದೆ ನೋಡುವುದಿಲ್ಲ ಮತ್ತು ನಿಮ್ಮ ಸಂಗಾತಿಯೊಂದಿಗೆ ಇದರ ಬಗ್ಗೆ ಮುಕ್ತವಾಗಿ ಮಾತಾಡಲು ಹಿಂಜರಿಯುವುದಿಲ್ಲ. ನೀವು ನಿಮ್ಮ ಲೈಂಗಿಕ ಜೀವನದಲ್ಲಿ ಉಲಾಸವನ್ನ ಬಯಸುತ್ತೀರ ಹಾಗು ಹೊಸ ಹೊಸ ವಿಷಯಗಳನ್ನ ಪ್ರಯೋಗ ಮಾಡುತ್ತೀರ.

೪. ಕಟಕ

ಲೈಂಗಿಕ ಕ್ರಿಯೆ ಬಗ್ಗೆ ನಿಮ್ಮ ಯೋಚನೆಗಳು ಸೃಜನಶೀಲತೆಯಿಂದ ಮತ್ತು ಇಂದ್ರಿಯಗಳ ತಣಿಸುವುದರಿಂದ ಕೂಡಿರುತ್ತದೆ. ಆದರೆ ನೀವು ಯಾರೊಂದಿಗಾದರೂ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದರೆ, ಮೊದಲು ಅವರು ನಿಮ್ಮ ಮನಸನ್ನು ಒಲೈಸಬೇಕು. ನೀವು ಇತರರನ್ನು ಬೇಗನೆ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದ್ದು, ನಿಮ್ಮ ಸಂಗಾತಿಯು ನಿಮ್ಮಿಂದ ಏನು ಬಯಸುತ್ತಿದ್ದಾರೆ ಎಂದು ಕೂಡಲೇ ಅರ್ಥ ಮಾಡಿಕೊಳ್ಳುವಿರಿ. ನಿಮಗೆ ಸೆಕ್ಸ್ ಪ್ರೀತಿಯ ಒಂದು ಭಾಗ ಹಾಗು ಬಯಕೆಗಳನ್ನ ತೀರಿಸಿಕೊಳ್ಳುವ ದಾರಿ.

೫. ಸಿಂಹ

ಸಿಂಹ ರಾಶಿಯವರು ಸ್ಥಿರವಾದ ಮತ್ತು ಶಕ್ತಿಶಾಲಿ ಲೈಂಗಿಕ ಆಸಕ್ತಿ ಉಳ್ಳವರು ಹಾಗು ಇವರು ತಮ್ಮ ಕಾಂತಿ ಹಾಗು ಕೆಮಿಸ್ಟ್ರಿ ಇಂದ ಸಂಗಾತಿಯರನ್ನ ಆಕರ್ಷಿಸುವರು. ನಿಮ್ಮ ಜೊತೆ ಇರುವುದೇ ಸುಖಕರ ಮತ್ತು ನೀವು ಕೂಡ ಸುಖವನ್ನ ಬಹಳ ಬಯಸುತ್ತೀರ. ಒಂದು ಪ್ರೇಮಿಯಾಗಿ ನೀವು ಬಹಳಷ್ಟು ಭಾವೋದ್ರಿಕ್ತರು ಮತ್ತು ತುಂಬಾ ಗಮನ ನೀಡುವಂತವರು. ನೀವು ನಿಮ್ಮನ್ನು ಯಾರಾದರು ಲೈಂಗಿಕವಾಗಿ ಕೆರಳಿಸುವುದನ್ನ ಮತ್ತು ಮೌಖಿಕ ಲೈಂಗಿಕತೆಯನ್ನ ಇಷ್ಟ ಪಡುತ್ತೀರ. ನಿಮ್ಮ ಬೆನ್ನು ಮತ್ತು ಸೊಂಟ ನಿಮ್ಮ ಅತ್ಯಂತ ಕಾಮಪ್ರವಚೋದಕ ವಲಯಗಳು.

೬. ಕನ್ಯಾ

ಕನ್ಯಾ ಎಂದ ಮಾತ್ರಕ್ಕೆ ಇವರು ಬ್ರಹ್ಮಚರ್ಯ ಪಾಲಿಸುವವರು ಎಂದುಕೊಳ್ಳಬೇಡಿ. ನಿಜ ಹೇಳಬೇಕೆಂದರೆ ಈ ರಾಶಿಯವರು ತುಂಬಾನೇ ಲೈಂಗಿಕ ಹಾಗು ತುಂಬಾನೇ ಇಂದ್ರೀಯ ಆಗಿರುವವರು. ಮುಂಕೇಳಿ ಅಥವಾ ಫೋರ್ ಪ್ಲೇ ಆಗಿ ಎಂತಹ ರೀತಿಯ ಸ್ಪರ್ಶವನ್ನಾದರು ಆಸ್ವಾದಿಸುತ್ತೀರ. ಮುತ್ತಿಕ್ಕುವುದು ಅಥವಾ ಮಸಾಜ್ ಮಾಡುವುದು ನಿಮ್ಮನ್ನ ಲೈಂಗಿಕವಾಗಿ ಪ್ರಚೋದಿಸುತ್ತವೆ. ನಿಮಗೆ ವಿಧವಿಧವಾದ ಅನುಭವಗಳ ಲೈಂಗಿಕ ಜೀವನ ಬೇಡದಿದ್ದರೂ, ನಿಮಗೆ ಕಾಳಜಿ ಉಳ್ಳ, ಸರಿಯಾಗಿ ಯೋಜಿಸಿದ, ಪ್ರಾಮಾಣಿಕತೆ ಉಳ್ಳ ಲೈಂಗಿಕ ಕ್ರಿಯೆಯೆಂದರೆ ಇಷ್ಟ.

೭. ತುಲಾ

ತುಲಾ ರಾಶಿಯವರು ಎಲ್ಲಾ ರಾಶಿ ಅವರಿಗಿಂತ ಹೆಚ್ಚು ಆದ್ಯತೆಗಳನ್ನ ಹೊಂದಿರುತ್ತಾರೆ. ಇವರಿಗೆ ಬೇರೆಯವರಿಗೆ ಹೋಲಿಸಿಕೊಂಡರೆ ಅತ್ಯುತ್ತಮ ಅಭಿರುಚಿ ಮತ್ತು ಸೂಕ್ಷ್ಮವಾದ ಸಂವೇದನೆ ಇರುತ್ತದೆ. ಇವರು ಮಾನಸಿಕ ಉತ್ತೇಜನ ಮತ್ತು ಮಾತಿನ ರೋಮ್ಯಾನ್ಸ್ ಅನ್ನು ಇಷ್ಟ ಪಡುತ್ತಾರೆ. ಒಂದು ಒಳ್ಳೆಯ ಸಂಗಾತಿಯು ನಿಮ್ಮ ಎಲ್ಲಾ ಇಚ್ಛೆಗಳನ್ನ ಮಾತಿಗೆಳೆದು ಹೊರ ತರಿಸುವರು. ಅಲ್ಲದೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಸೂಚಿತ ವಿಷಯಗಳಾದ ಮಂದ ಬೆಳಕು, ಸಂಗೀತ, ಸುಗಂಧಭರಿತ ಮೊಂಬತ್ತಿಗಳ ಇರುವಿಕೆಯನ್ನ ಇಷ್ಟ ಪಡುತ್ತೀರ.

೮. ವೃಶ್ಚಿಕ

ವೃಶ್ಚಿಕ ಅವರು ಬಹಳ ಭಾವಾನಾತ್ಮಕತೆ, ವಿಷಯಾಸಕ್ತಿ ಮತ್ತು ಬಹಳ ಕಾಮಾಸಕ್ತಿಯುಳ್ಳ ವ್ಯಕ್ತಿಗಳು ಆಗಿರುತ್ತಾರೆ. ನೀವು ನಿಮ್ಮ ಲೈಂಗಿಕ ಜೀವನದಲ್ಲಿ ಬಹಳಷ್ಟು ಭಾವುಕತೆ ಮತ್ತು ಉತ್ಸಾಹವನ್ನ ಬಯಸುತ್ತೀರ. ಅಲ್ಲದೆ ನೀವು ನಿಮ್ಮ ಶಕ್ತಿ ಮತ್ತು ನಿಯಂತ್ರಣ ಪ್ರದರ್ಶಿಸುವಂತ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರ. ಅತಿಯಾದ ಲೈಂಗಿಕ ಆಸಕ್ತಿ ಮತ್ತು ಅತಿಯಾದ ಭಾವನಾತ್ಮಕತೆಯು ಕೂದುವುದರಿಂದ, ನೀವು ಒಮ್ಮೊಮ್ಮೆ ನಿಮ್ಮ ಬಯಕೆಗಳಿಗೆ ಹಪಹಪಿಸುತ್ತಾ ಕಷ್ಟ ಪಡುತ್ತೀರ.

೯. ಧನು

ಇವರು ಅಲೆದಾಟವನ್ನು ಮತ್ತು ಹೊಸತನ್ನು ಶೋಧಿಸುವುದನ್ನ ಇಷ್ಟ ಪಡುತ್ತಾರೆ. ಇವರು ಮಂಚದ ಮೇಲೆ ಅಕ್ಕರೆ ಹಾಗು ಗಮನ ತೋರಿಸುವಂತವರು ಆಗಿರುತ್ತಾರೆ. ಆದರೆ ನಿಮಗೆ ಬಹಳ ಬೇಗ ಒಂದು ವಿಷಯದ ಮೇಲೆ ಬೇಸರ ಮೂಡುತ್ತದೆ. ಹಾಗಾಗಿ ನೀವು ನಿಮ್ಮ ಲೈಂಗಿಕ ಜೀವನದಲ್ಲಿ ಸ್ವಾಭಾವಿಕತೆಯನ್ನ ಬಯಸುತ್ತೀರಿ. ನೀವು ಹೊಸ ಹೊಸ ಪ್ರಯೋಗಗಳನ್ನು ಮಾಡಲು ಇಚ್ಚಿಸುತ್ತೀರ.

೧೦. ಮಕರ

ವ್ರುಸ್ಚಿಕದಂತೆ ಮಕರ ರಾಶಿಯವರು ಕೂಡ ಬಹಳಷ್ಟು ಕಾಮಾಸಕ್ತಿ ಹೊಂದಿರುತ್ತಾರೆ, ಆದರೆ ಅದರೊಂದಿಗೆ ಇವರು ಇಂದ್ರೀಯ ಇಚ್ಛೆಗಳನ್ನ ಹೊಂದಿರುತ್ತಾರೆ. ಮಕರ ರಾಶಿಯವರನ್ನ ಲೈಂಗಿಕವಾಗಿ ಕೆರಳಿಸಲು ಹೆಚ್ಚಿನ ಸಮಯ ಏನು ಬೇಕಾಗಿಲ್ಲ. ಆದರೂ ಇವರ ಅತ್ಯಂತ ಬಲವಾದ ಕಾಮಪ್ರಚೋದಕ ವಲಯಗಳು ಎಂದರೆ ಅದು ತೊಡೆ ಮತ್ತು ಮೊಣಕಾಲುಗಳು. ಇವರು ತಮ್ಮ ಲೈಂಗಿಕ ಶಕ್ತಿಯ ಬಗ್ಗೆ ಹೆಮ್ಮೆ ಹೊಂದಿರುತ್ತಾರೆ.

೧೧. ಕುಂಭ

ಇವರು ಭೌಧಿಕತೆ ಮತ್ತು ಆದರ್ಶಗಳಿಗೆ ಹೆಸರುವಾಸಿ. ಇವರು ಕೋಣೆಯ ಒಳಗೆ ಅಸಾಂಪ್ರದಾಯಿಕ ದಾರಿಗಳನ್ನ ಹೊಂದಿರುತ್ತಾರೆ. ನೀವು ಕೆರಳಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತೀರ ಆದರೆ ನಿಮ್ಮ ಮೇಲಿನ ಎಲ್ಲಾ ನಿಯಂತ್ರಣವನ್ನ ಸಂಗಾತಿಗೆ ಬಿಟ್ಟು ಕೊಡುವುದಿಲ್ಲ. ನೀವು ಲೈಂಗಿಕತೆ ಅಲ್ಲಿ ಆಸಕ್ತಿ ಇಲ್ಲದವರಂತೆ ಕಂಡು ಬಂದರೂ, ಪರದೆ ಹಿಂದೆ ನೀವು ತುಂಬಾನೇ ಉತ್ಸಾಹ ಮತ್ತು ಕಲ್ಪನೆಗಳನ್ನ ಹೊಂದಿರುತ್ತೀರಿ. ಆದರೆ ನಿಮ್ಮ ಸಂಗಾತಿಯು ಕೂಡ ಭೌಧಿಕವಾಗಿ ನಿಮ್ಮ ಮಟ್ಟದಲ್ಲೇ ಇರಬೇಕು.

೧೨. ಮೀನ

ಮೀನ ರಾಶಿಯವರು ಎಲ್ಲಾ ರೀತಿಯ ಜನರೊಂದಿಗೆ ಬೇರೆತುಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಅಲ್ಲದೆ ಇವರು ಆಕ್ರಮಣಕಾರಿ ಮನೋಭಾವ ವ್ಯಕ್ತ ಪಡಿಸದೆಯೇ ಅನೇಕ ಆರಾಧಕರನ್ನ ಪಡೆದುಕೊಳ್ಳುತ್ತಾರೆ. ಮಂಚದ ಮೇಲೆ ಇವರು ರಸಮಯ, ಇಂದ್ರೀಯ ಹಾಗು ವಿನೋದಮಯ. ಕಲ್ಪನಾಶಕ್ತಿಗೆ ಇವರು ಹೆಚ್ಚು ಒತ್ತು ನೀಡುತ್ತಾರೆ ಹಾಗು ತಮ್ಮ ಲೈಂಗಿಕ ಜೀವನದಲ್ಲಿ ತಮ್ಮ ಕಲ್ಪನೆಗಳಿಗೆ ಜೀವ ತುಂಬಲು ಇಚ್ಚಿಸುತ್ತಾರೆ. ಇವರ ಕಲ್ಪನೆಗಳಿಗೆ ಜೀವ ಬಂದರೆ ಸಾಕು,ಇವರು ತಾವು ಸುಖ ಪದುವುದಕ್ಕಿಂತ ತಮ್ಮ ಸಂಗಾತಿಯನ್ನ ಸುಖ ಪಡಿಸುವುದರ ಮೇಲೆ ಹೆಚ್ಚು ಗಮನ ಹರಿಸುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon