Link copied!
Sign in / Sign up
182
Shares

ನಿಮ್ಮ ಪ್ರಣಯ ಜೀವನದ ಬಗ್ಗೆ ನಿಮ್ಮ ರಾಶಿಯು ಏನು ಹೇಳುತ್ತದೆ?

ನೀವು ನಂಬಿರಿ ಅಥವಾ ನಂಬದೆ ಇರಿ, ಆದರೆ ನಿಮ್ಮ ರಾಶಿಯು ನಿಮ್ಮ ಬಗ್ಗೆ ಹಾಗು ನಿಮ್ಮ ಪ್ರೀತಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ. ನೀವು ಯಾವುದೋ “ದೈವಿಕ ಶಕ್ತಿ” ಯನ್ನು ನಂಬದೆ ಇರಬಹುದು, ನೀವು ಮೇಷದವರೆ ಆಗಿರಲಿ ಅಥವಾ ಕರ್ಕಾಟಕದವರೆ ಆಗಿರಲಿ, ನಿಮ್ಮ ರೋಮಾಂಚಕ ವಿಧಿ ನಿಮ್ಮ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಇಲ್ಲಿ ನೀವು ನಿಮ್ಮ ಮಂದಿನ ಪ್ರಣಯ ಜೀವನದ ಜಾತಕವನ್ನೇ ನೋಡಬಹುದು. ನಿಮಗೆ ಏನೇನು ಕಾದಿದೆ ಎಂದು ತಿಳಿದುಕೊಳ್ಳಲು ಹಾಗು ನಿಮ್ಮ ಸಂಬಂಧಗಳು ಹೇಗೆ ಇರುತ್ತವೆ ಎಂಬುದನ್ನು ತಿಳಿಯಲು ಇದನ್ನು ಓದಿ :

೧. ಮೇಷ (ಮಾರ್ಚ್ ೨೧ - ಏಪ್ರಿಲ್ ೧೯)

ಮೇಷ ರಾಶಿಯವರು ಹೊರಗಡೆಯಿಂದ ಒರಟಾಗಿ ಕಂಡರೂ ಒಳಗಿನಿಂದ ತುಂಬಾ ನಿಷ್ಕಲ್ಮಶವಾಗಿ ಇರುತ್ತಾರೆ. ಅವರು ಎಲ್ಲೆಡೆ  ನೈಜ್ಯವಾಗಿ  ಇರಲು ಯತ್ನಿಸುತ್ತಾರೆ ಹಾಗು ಅಭದ್ರತೆ ಅನ್ನುವುದು ಅವರ ಹತ್ತಿರ ಸುಳಿವಂತಿಲ್ಲ. ಇವರು ತುಂಬಾ ಭಾವೋದ್ರಿಕ್ತ ಪ್ರೇಮಿಗಳಾಗಿದ್ದು, ರೂಮಿನ ಒಳಗೆ ಆಗಲಿ ಅಥವಾ ರೂಮಿನ ಆಚೆಯೇ ಆಗಲಿ, ಮುಂದಾಳತ್ವ ಅವರದ್ದೇ ಆಗಿರುತ್ತದೆ. ಅದಲ್ಲದೆ, ಇವರು ತಮ್ಮ ಸಂಗಾತಿಯು ತಮಗೆ ಆಗಲಿ ಅಥವಾ ತಮ್ಮ ಸಂಬಂಧಕ್ಕೆ ಆಗಲಿ ಮಾಡುವ ಕೆಲಸದ ಬಗ್ಗೆ ತುಂಬಾನೇ ಸೂಕ್ಷ್ಮವಗಿರುತ್ತಾರೆ.

೨. ವೃಷಭ (ಏಪ್ರಿಲ್ ೨೦ - ಮೇ ೨೦)

ಈ ರಾಶಿಯವರು ತಮ್ಮನ್ನು ಮುದ್ದು ಮಾಡಿಸಿಕೊಳ್ಳಲು ತುಂಬಾ ಇಚ್ಚಿಸುತ್ತಾರೆ. ಇವರು ತಮ್ಮ ಸಂಗಾತಿಯು ತಮ್ಮನ್ನು ಇರುವುದಕ್ಕಿಂತ ವಿಶೇಷವಾಗಿ ಪರಿಗಣಿಸಲು ಅಪೇಕ್ಷಿಸುತ್ತಾರೆ. ಇವರು ತಮ್ಮ ಜೀವನದಲ್ಲು ಹಾಗು ಪ್ರೀತಿಯಲ್ಲು ಸ್ಥಿರತೆಯನ್ನು ಇಚ್ಚಿಸುತ್ತಾರೆ ಹಾಗು ಅವರ ಸಂಗಾತಿಗಳಿಂದ ತುಂಬಾನೇ ಹೆಚ್ಚು ಅಪೇಕ್ಷಿಸುತ್ತಾರೆ. ಇದಲ್ಲದೇ, ಅವರು ತಮ್ಮ ಸಂಗಾತಿಯ ಒಳಿತಿಗಾಗಿ ಏನು ತ್ಯಾಗ ಮಾಡಲು ಹಿಂಜರಿಯುವುದಿಲ್ಲ.

೩. ಮಿಥುನ (ಮೇ ೨೧ - ಜೂನ್ ೨೦)

ಮಿಥುನ ರಾಶಿಯವರು ತಿಳಿದೋ ಅಥವಾ ತಿಳಿದೆಯೋ ಪ್ರಣಯದಲ್ಲಿ ತಜ್ಞರಿರುತ್ತಾರೆ. ಸಂಬಂಧಗಳು ಎಂದು ಬಂದಾಗ ಇವರು ಸಂಗಾತಿ ಆರಿಸುವುದರಲ್ಲಿ ತುಂಬಾನೇ ಸೂಕ್ಷ್ಮ ರುಚಿ ಹೊಂದಿರುತ್ತಾರೆ ಹಾಗು ತುಂಬಾ ನಿಯತ್ತಿನ ವ್ಯಕ್ತಿಯಾಗಿರುತ್ತಾರೆ. ಅವರ ಉತ್ತಮ ಹಾಸ್ಯಪ್ರಜ್ಞೆ ಹಾಗು ಮನಮೋಹಕ ನಡವಳಿಕೆ, ಸಂಭಾವ್ಯ ಪ್ರೇಮಿಗಳನ್ನು ಸದಾಕಾಲ ಅವರ ಹಿಂದೆ ಇರುವಂತೆಯೇ ಮಾಡುತ್ತದೆ.

೪. ಕರ್ಕಾಟಕ ರಾಶಿ (ಜೂನ್ ೨೧ - ಜುಲೈ ೨೨ )

ಈ ರಾಶಿಯವರು ತುಂಬಾ ಸೂಕ್ಷ್ಮ ಮನಸ್ಸು ಹೊಂದಿರುತ್ತಾರೆ ಹಾಗು ಸದಾಕಾಲ ಬದುಕಿನಲ್ಲಿ ಸ್ಥಿರತೆ ಹೊಂದಲು ಹಪಹಪಿಸುತ್ತಿರುತ್ತಾರೆ. ಒಮ್ಮೆ ಅವರು ಯಾರೊಡನೆ ಪ್ರೀತಿಯಲ್ಲಿ ಬಿದ್ದರೆ, ಅವರ ಹಿಂದೆ ದುಂಬಾಲು ಬೀಳುತ್ತಾರೆ ಅಲ್ಲದೆ ತಾವು ಅವರ ಸಂಬಂಧಕ್ಕೆ ಎಷ್ಟು ಬದ್ಧನಾಗಿದ್ದೇನೆ ಎಂದು ತಿಳಿಸಲು ಸಾಹಸ ಮಾಡುತ್ತಾರೆ. ತನ್ನ ಮನಸ್ಸನ್ನು ತೆರೆಯುವ ಮುನ್ನ ಈ ರಾಶಿಯವರು ಮೊದಲು ಕೇಳಿಸಿಕೊಳ್ಳುತ್ತಿರುವ ವ್ಯಕ್ತಿಯು ವಿಶ್ವಾಸಹಾರ್ಹ ವ್ಯಕ್ತಿಯೇ ಎಂದು ತಿಳಿದುಕೊಳ್ಳುತ್ತಾರೆ.

೫. ಸಿಂಹ (ಜುಲೈ ೨೩ - ಆಗಸ್ಟ್ ೨೨ )

ಸಿಂಹ ರಾಶಿ ಅವರು ತಿರಸ್ಕರಣೆ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಹಾಗಾಗಿ ಇವರಿಗೆ ಪ್ರಣಯದ ನಡೆಗಳು ಲಭಿಸುವ ಸಾಧ್ಯತೆ ಹೆಚ್ಚಿರುತ್ತವೆ. ಇವರ ಸಂಬಂಧಗಳು ಒಂದು ತುಂಬಾನೇ ಸ್ಪೋಟಕವಾಗಿ ಇರುತ್ತದೆ ಇಲ್ಲವಾದಲ್ಲಿ ತುಂಬಾನೇ ನೀರಿಸವಾಗಿ ಇರುತ್ತದೆ. ಇದಕ್ಕೆ ಕಾರಣ ಅವರ ಸ್ವಭಾವ. ಇವರು ಎಲ್ಲರಲ್ಲೂ ಒಳ್ಳೆಯದನ್ನೇ ನೋಡಲು ಬಯಸುತ್ತಾರೆ ಹಾಗು ಅವರ ಜೋತೆಗಿರುವವರನ್ನು ಉಡುಗೊರೆಗಳಿಂದ ಖುಷಿಯಾಗಿ ಇಡುತ್ತಾರೆ.

೬. ಕನ್ಯಾ (ಆಗಸ್ಟ್ ೨೩ - ಸೆಪ್ಟೆಂಬರ್ ೨೨ )

ಈ ರಾಶಿಯವರು ಎಲ್ಲದರಲ್ಲೂ ಅಚ್ಚುಕಟ್ಟಾಗಿ ಇರಲು ಬಯಸುತ್ತಾರೆ. ಇವರು ಸದಾ ಸ್ವಾವಲಂಬಿ ಆಗಿರಲು ಹಾಗು ಏಕಾಂಗಿ ಇರಲು ಇಚ್ಚಿಸುತ್ತಾರೆ. ಅವರು ಕೆಲವೊಮ್ಮೆ ರೋಮಂಚಕವಾಗಿ ಹಾಗು ಭಾನತ್ಮಕವಾಗಿ ಆಡಬಹುದು, ಆದರೆ ಪ್ರೀತಿ ಅವರನ್ನು ಕುರುಡು ಮಾಡಲು ಬಿಡುವುದಿಲ್ಲ. ಇವರು ತಮ್ಮ ಸಂಗಾತಿಯೊಡನೆ ಅಸಮ್ಮತಿ ಸೂಚಿಸಲು ಹಿಂಜರಿಯುವುದಿಲ್ಲ. ಇವರು ಸಾಮಾನ್ಯ ಪ್ರಜ್ಞೆ ಹಾಗು ವಿವೇಚನೆ ಉಪಯೋಗಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

೭. ತುಲಾ (ಸೆಪ್ಟೆಂಬರ್ ೨೩ - ಅಕ್ಟೋಬರ್ ೨೨)

ತುಲಾ ರಾಶಿಯರು ವಿಭಿನ್ನತೆ ಇಂದ ಕೂಡಿದ್ದು ಅವರು ಮುಕ್ತ ಮನಸ್ಸಿನವರು ಆಗಿರುತ್ತಾರೆ. ಅವರು ಸ್ವಾಭಿವಿಕವಾಗಿ ತಮ್ಮ ಸಂಭಾವ್ಯ ಪ್ರೀತಿ ಪಾತ್ರರನ್ನು ಆರಿಸುವಾಗ ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರು ಯಾರಾದರು ತಮ್ಮ ಗಡಿಗಳನ್ನು ಗೌರವಿಸುವರನ್ನು ಹಾಗು ತಾವು ನೀಡುವ ಪ್ರೀತಿಯನ್ನು ಮರುಕಳಿಸುವರನ್ನು ಹುಡುಕುತ್ತಾರೆ. ತುಲಾ ರಾಶಿಯವರು ತಮ್ಮ ಸಂಗಾತಿಯೊಡನೆ ಪ್ರಬುಧ್ಹ ಹಾಗು ಭಾವನಾತ್ಮಕ ಸಂಬಂಧ ಹೊಂದಲು ಇಚ್ಚಿಸುತ್ತಾರೆ.

೮. ವೃಶ್ಚಿಕ (ಅಕ್ಟೋಬರ್ ೨೩ - ನವೆಂಬರ್ ೨೧ )

ಈ ರಾಶಿಯವರು ಸ್ಥೈರ್ಯ, ಸೂಕ್ಷ್ಮತೆ ಹಾಗು ಆಕಾಂಕ್ಷೆಗಳನ್ನು ಪಸರಿಸುತ್ತಾರೆ. ಇವರು ಮುಂದೆ ಏನು ಮಾಡಬೇಕೆಂದು ಯೋಚಿಸುವವರೆಗೂ ತಮ್ಮ ಸಂಗಾತಿಯನ್ನು ಕಾಯಿಸುವ ಅಭ್ಯಾಸ ಹೊಂದಿರುತ್ತಾರೆ. ಇವರು ಎಲ್ಲದ್ದನ್ನೂ ತೀವ್ರವಾಗಿ ತೆಗೆದುಕೊಳ್ಳುವವರು ಹಾಗು ಒಮ್ಮೆ ಪ್ರೀತಿಯಲ್ಲಿ ಬಿದ್ದ ಮೇಲೆ, ಹಿಂತಿರುಗಿ ನೋಡುವ ಮಾತೆ ಇಲ್ಲ.

೯. ಧನು (ನವೆಂಬರ್ ೨೧ - ಡಿಸೆಂಬರ್ ೨೨ )

ಇವರು ಸದಾಕಾಲ ಏನಾದರು ಹೊಸತನ್ನು ಹುಡುಕುತ್ತಲೇ ಇರುವರು. ಇವರಿಗೆ ಜೀವನದ ಹೊಸ ಹೊಸ ಅನುಭವಗಳ ಹಸಿವು ಇರುತ್ತದೆ. ಇವರು ಕೆಲವೊಮ್ಮೆ ಎಷ್ಟು ಪ್ರಾಮಾಣಿಕರಾಗುತ್ತಾರೆ ಎಂದರೆ ಅದು ಅವರ ಸಂಭಾವ್ಯ ಸಂಗಾತಿಯನ್ನು ವಿಚಲಿತಗೊಳಿಸಬಹುದು. ಅಲ್ಲದೆ, ಇವರು ಆಶವಾದಿಗಳಾಗಿದ್ದು, ಇದು ಅವರ ಪ್ರಣಯ ಜೀವನದಲ್ಲೂ ಕಾಣಬಹುದು.

೧೦. ಮಕರ (ಡಿಸೆಂಬರ್ ೨೩ - ಜನವರಿ ೧೯)

ಮಕರ ರಾಶಿಯವರು ತುಂಬಾ ಮಹತ್ವಾಕಾಂಕ್ಷೆಯ ಉಳ್ಳವರಾಗಿರುತ್ತಾರೆ ಹಾಗು ಅವರ ಗಮನ ಸದಾ ಗುರಿಯೆಡೆಗೆ ಇರುತ್ತದೆ. ಇದಲ್ಲದೇ ಇವರು ಒಬ್ಬ ಸಂಗಾತಿ ಇಂದ ಇನ್ನೊಂದು ಸಂಗಾತಿಗೆ ಹಾರುವುದಕ್ಕಿಂತ, ಒಂಟಿಯಾಗಿರುವುದು ಮೇಲು ಎಂದು ನಂಬುವರು. ಇವರು ತಮ್ಮ ಸಂಗಾತಿಯಲ್ಲಿನ ವಿಶ್ವಾಸಕ್ಕೆ ಬಹಳ ಬೆಲೆ ಕೊಡುತ್ತಾರೆ ಹಾಗು ಅವರು ಒಳಗಿನಿಂದ ತುಂಬಾ ಸೂಕ್ಷ್ಮವಾಗಿರುತ್ತಾರೆ.

೧೧. ಕುಂಭ (ಜನವರಿ ೨೦ - ಫೆಬ್ರವರಿ ೧೮)

ಈ ರಾಶಿಯವರು ತುಂಬಾ ಒಳ್ಳೆ ಮಾತುಗಾರರು.ಹಾಗಾಗಿ, ಸಂಬಂಧದಲ್ಲಿ ಯಾವುದಾದರು ಚರ್ಚೆ ಅಥವಾ ವಾದ ಶುರು ಮಾಡಿದರೆ, ಅದು ಇವರೇ ಶುರು ಮಾಡುವುದು. ಇವರು ಸಹಜವಾಗಿ ತಾಳ್ಮೆಯಿಂದ ತಣ್ಣನೆ ಇರುತ್ತಾರೆ. ಇವರು ತಮ್ಮ ಪ್ರತ್ಯೇಕತೆಯನ್ನು ಪ್ರಜ್ವಲಿಸುವಂತೆ ಮಾಡುತ್ತಾರೆ. ಆದರೆ ಇವರು ತಮ್ಮ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳುವ ಮುನ್ನ ಮೊದಲು ಆ ವ್ಯಕ್ತಿಯ ಸ್ನೇಹ ಮಾಡುತ್ತಾರೆ.

೧೨. ಮೀನ (ಫೆಬ್ ೧೯ - ಮಾರ್ಚ್ ೨೦)

ಇವರು ಗಮನಾರ್ಹ ರೋಮಾಂಚಕತೆ ಹೊಂದಿರುತ್ತಾರೆ. ಇವರಿಗೆ ತುಂಬಾ ಒಳ್ಳೆ ಕಲ್ಪನಾಶಕ್ತಿ ಹಾಗು ಸೃಜನಶೀಲತೆ ಇರುತ್ತದೆ. ಇದರಿಂದಲೇ ಇವರು ಸಂಬಂಧಗಳಲ್ಲಿ ತುಂಬಾ ಲಕ್ಷ್ಯವಿಡುತ್ತಾರೆ ಹಾಗು ಒಳ್ಳೆಯ ಸಂಗಾತಿ ಆಗುತ್ತಾರೆ. ಇವರು ಯಾರಾದರು ನಂಬಬಹುದಾದಂತ ಹಾಗು ತಮ್ಮ ಪ್ರೀತಿಗೆ ಬೆಲೆ ಕೊಡುವಂತ ವ್ಯಕ್ತಿಯನ್ನು ಹುಡುಕುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon