Link copied!
Sign in / Sign up
19
Shares

ನಿಮ್ಮ ಪತಿಯೊಂದಿಗೆ ಸಂಭಾಷಿಸಬೇಕಾದ ೫ ವಿಷಯಗಳು

ಪರಸ್ಪರ ವಿಚಾರ ವಿನಿಮಯವೇ ಆರೋಗ್ಯಕರ ಸಂಬಂಧದ ತಳಹದಿ.ಪರಸ್ಪರ ಅರಿತು ನಡೆಸುವ ಸಹಬಾಳ್ವೆಯು ನಿಮ್ಮನ್ನು ಸಂತೃಪ್ತ ಜೀವನ ನಡೆಸಲು ಸಹಕರಿಸುವುದು.  

ನಿಮ್ಮ ಪತಿಯಲ್ಲಿ ಇದುವರೆಗೂ ಚರ್ಚಿಸದೇ ಇದ್ದರೆ, ಇವತ್ತಿನಿಂದ ಚರ್ಚಿಸಲೇ ಬೇಕಾದ ೫ ವಿಷಯಗಳ ಬಗ್ಗೆ ನಾವಿಂದು  ತಿಳಿಯೋಣ.

೧.ಆರ್ಥಿಕ ವ್ಯವಹಾರಗಳು

ಆರ್ಥಿಕ ವ್ಯವಹಾರಗಳ ಬಗೆಗಿನ ವಿಚಾರವೆಂದರೆ, ಕೇವಲ ನಿಮ್ಮ ಪತಿಯ ವರಮಾನ ಹಾಗೂ ಖರ್ಚುಗಳ ಬಗ್ಗೆ ಲೆಕ್ಕವಿರಿಸಿಕೊಳ್ಳುವುದಿಲ್ಲ. ಮಗುವಿನ ಶಾಲಾ ಕಾಲೇಜು, ವಿದ್ಯಾಭ್ಯಾಸ,  ಮುಂದಿನ ನಿಮ್ಮ ನಿವೃತ್ತಿ ಜೀವನದ ಯೋಜನೆ, ದಿನನಿತ್ಯದ ಖರ್ಚು ವೆಚ್ಚದ ಬಗೆಗಿನ ಚರ್ಚೆಗಳು ನಿಮ್ಮ ವಿವಾಹ ಜೀವನದ ಭದ್ರತೆಗೆ ಅಡಿಪಾಯವಾಗುವುದು.

೨.ಕಾಮೋದ್ರೇಕ ಮಾತುಕತೆಗಳು

ಪರಸ್ಪರ ಬಯಕೆಗಳು ಹಾಗೂ ಅವಶ್ಯಕತೆಗಳ ಬಗೆಗಿನ ಮುಕ್ತವಾದ ಚರ್ಚೆಯು ನಿಮ್ಮನ್ನು ದಿಗ್ಭ್ರಮೆಗೊಳಿಸಬಹುದು. ಮೊದಮೊದಲು ಈ ರೀತಿ ಮನ ಬಿಚ್ಚಿ ಮಾತನಾಡಲು ಮುಜುಗರವಾದರೂ, ಇದರಿಂದ ನೀವೊಮ್ಮೆಯೂ ಪಶ್ಚಾತ್ತಾಪ ಪಡಬೇಕಾದ ಸಂದರ್ಭ ಎದುರಾಗಲಿಕ್ಕಿಲ್ಲ.

೩.ಭವಿಷ್ಯದ ಬಗೆಗಿನ ಕನಸುಗಳು

ಪ್ರತಿಯೊಬ್ಬ ಮನುಷ್ಯನು ಮಹತ್ವಾಕಾಂಕ್ಷಿಯಾಗಿರುತ್ತಾನೆ.  

ನಿಮ್ಮ ಗಂಡನ ಕನಸೇನು ಅಥವಾ ಮುಂದಿನ ಯೋಜನೆಗಳೇನು ಎಂದು ತಿಳಿದುಕೊಳ್ಳಲು ಒಂದು ಕ್ಷಣವಾದರೂ ವ್ಯಯಿಸಿದ್ದೀರಾ ? ನಿಮ್ಮ ನಿರೀಕ್ಷೆಗೂ ನಿಲುಕದ ಉತ್ತರಗಳು ನಿಮ್ಮನ್ನು ಚಕಿತಗೊಳಿಸಬಹುದು.  

ನೀವಿಬ್ಬರೂ ಸೇರಿ ಮನೆ ಕೊಂಡುಕೊಳ್ಳುವುದರ ಬಗ್ಗೆ ಅಥವಾ ನಿಮ್ಮ ಮಗುವಿನ ಸುಂದರ ಭವಿಷ್ಯದ ರೂಪೀಕರಣದ ಬಗೆಗಿನ ಕನಸನ್ನು ಹಂಚಿಕೊಳ್ಳುವುದರಿಂದ ನಿಮ್ಮ ವಿವಾಹ ಜೀವನವನ್ನು ಆಶಾಭಾವದಿಂದ ಕಳೆಯಲು ನೆರವಾಗುತ್ತದೆ.

೪.ಬಾಲ್ಯಕಾಲದ ಸವಿನೆನಪುಗಳ ಹಂಚಿಕೆ

ನಿಮ್ಮ ಪತಿಯು ಚಿಕ್ಕವರಾಗಿದ್ದಾಗ ಬಹಳ ತುಂಟರಾಗಿದ್ದರೇ.... ಶಾಲೆಯನ್ನು ತಪ್ಪಿಸಿಕೊಳ್ಳಲು ಜ್ವರದ ನೆವವನ್ನೊಡ್ಡಿದ್ದರೇ..? ನೀವು ತಿಳಿದುಕೊಳ್ಳಲು ಇಚ್ಛಿಸದ ಹೊರತು ಅವರಾಗಿಯೇ ಎಂದಿಗೂ ಇಂತಹ ವಿಷಯಗಳ ಕುರಿತು, ಮನಬಿಚ್ಚಲಿಕ್ಕಿಲ್ಲ. 

ಬಾಲ್ಯದ ಘಟನೆಗಳನ್ನು ಮೆಲುಕು ಹಾಕುವುದರಿಂದ ನಿಮ್ಮ ಪತಿಯ ಬಾಲ್ಯವನ್ನೂ,ಅವರು ಬೆಳೆದು ಬಂದ ವಾತಾವರಣ ಅಥವಾ ಪರಿಸ್ಥಿತಿಗಳನ್ನು ತಿಳಿಯಲು ಸಹಕಾರಿಯಾಗುತ್ತದೆ.

೫.ಭಯ ಹಾಗೂ ಅಭದ್ರತಾ ಭಾವನೆಗಳು

ಪ್ರತಿಯೊಬ್ಬ ಮನುಷ್ಯನಲ್ಲೂ, ಅವನು ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಹೆದರುವಂತಹ, ಅಧೀರರನ್ನಾಗಿಸುವಂತಹ  ಸನ್ನಿವೇಶಗಳಿರುತ್ತವೆ. ನಿಮ್ಮ ಗಂಡನ ಬಲಹೀನತೆಯನ್ನು ಅಥವಾ ಅವರನ್ನು ಮಾನಸಿಕವಾಗಿ ತೊಂದರೆಗೊಳಪಡಿಸುವಂತಹ ಸನ್ನಿವೇಶಗಳ ಬಗ್ಗೆ ಮೊದಲೇ ತಿಳಿದಿಟ್ಟುಕೊಳ್ಳುವುದರಿಂದ, ದಾಂಪತ್ಯದ ಯಾವುದೇ ವಿಷಮ ಘಟ್ಟವನ್ನು ನಿಭಾಯಿಸಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon