Link copied!
Sign in / Sign up
10
Shares

ನಿಮ್ಮ ಪತಿಯ ಬಗ್ಗೆ ನಿಮಗೆ ಅರ್ಥವಾಗದ ೭ ವಿಷಯಗಳು

ಕೆಲವು ಬಾರಿ ನಿಮ್ಮ ಪತಿಯನ್ನು ಅರಿತುಕೊಳ್ಳುವುದು ನಿಮಗೆ ತುಂಬಾ ತ್ರಾಸದಾಯಕವಾಗಬಹುದು. ಏಕೆಂದರೆ, ಹೆಚ್ಚಾಗಿ, ನೀವು ಅವರ ಬಗ್ಗೆ ಅರ್ಥಮಾಡಿಕೊಳ್ಳಬೇಕು ಎಂದು ಬಯಸುವ ವಿಷಯದ ಬಗ್ಗೆ ಅವರು ಮಾತನಾಡುವುದಿಲ್ಲ ಮತ್ತು ಅವರ ಬಗೆಗಿನ ಕೆಲವು ವಿಷಯಗಳನ್ನು ಅವರು ನಿಮಗೆ ತಿಳಿಸುವುದಕ್ಕೆ ಇಚ್ಛಿಸುವುದಿಲ್ಲ. ಚಿಂತಿಸಬೇಡಿ, ನಾವು ನಿಮ್ಮ ಜೀವನದ ಪ್ರಮುಖ ವ್ಯಕ್ತಿಯ ಬಗ್ಗೆ ನೀವು ತಿಳಿದುಕೊಳ್ಳಲು ಸಹಾಯ ಮಾಡುತ್ತೇವೆ.

೧.ಅವರು ತೀಕ್ಷ್ಣ ವೀಕ್ಷಕ

ಬಹುಶಃ ನೀವು ಅಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಅವರು ನಿಮ್ಮನ್ನು ಮತ್ತು ಅವರ ಸುತ್ತಲಿನ ವಾತಾವರಣವನ್ನು(ಪ್ರಪಂಚ) ತುಂಬಾ ತೀಕ್ಷ್ಣವಾಗಿ ಗಮನಿಸುತ್ತಾರೆ. ಅವರು ಎಲ್ಲವನ್ನು ವೀಕ್ಷಿಸುತ್ತಾರೆ ಮತ್ತು ಪ್ರತಿಯೊಂದು ಚಿಕ್ಕ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರ ಕಣ್ಣುಗಳು ನಿರಂತರವಾಗಿ ಓಡಾಡುತ್ತಿರುತ್ತವೆ, ಅವು ನಿಮ್ಮ ಮತ್ತು ನಿಮ್ಮ ಸುತ್ತಲಿನ ವಿಷಯ, ಮತ್ತು ಜನರನ್ನು ನೋಡುತ್ತಿರುತ್ತವೆ. ಮತ್ತೆ ನಿಮ್ಮಿಬ್ಬರ ಅಕ್ಕಪಕ್ಕದಲ್ಲಿ ನೀವು ಯಾರೋ ಒಂದು ಸುಂದರ ಹುಡುಗಿ ನೋಡಿದರೇ, ನೀವು ಅವಳನ್ನು ಗಮನಿಸುವ ಮೊದಲೇ ನಿಮ್ಮ ಪತಿ ಅವಳನ್ನು ನೋಡಿರುತ್ತಾರೆ.

೨.ಅವರು ಅಹಂಕಾರವನ್ನು ಹೊಂದಿರುತ್ತಾರೆ

ಪುರುಷರ ಅಹಂ ಬಗ್ಗೆ ನಿಮಗೆಲ್ಲ ಸಾಮಾನ್ಯವಾಗಿ ತಿಳಿದೇಯಿರುತ್ತದೆ, ಆದರೆ ಅವರ ಅಹಂ ನೀವು ಅಂದುಕೊಂಡಿರುವುದಕ್ಕಿಂತ ತುಂಬಾ ದುರ್ಬಲವಾಗಿರುತ್ತದೆ. ಅವನ ಅಹಂ ಇಂದ ಆದ ಸಮಸ್ಯೆಗಳಿಗೆ ಜನರೊಡನೆ ಶಮಜಾಯಿಸಿ ದಣಿದಿರುತ್ತಾನೆ, ಮತ್ತು ಅದರ ಬಗ್ಗೆ ಮಡಿದ ಹಾಸ್ಯವನ್ನು ಕೇಳುತ್ತಾನೆ. ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಉತ್ತಮ. ಅವರನ್ನು ಹೋಗಳಿ ಅವರು ಪ್ರೀತಿಸುವ ಮತ್ತು ಮದುವೆಯಾಗಿರುವ ಮಹಿಳೆ ನಿಮ್ಮನ್ನು ಬಿಟ್ಟರೆ ಅವರನ್ನು ಹೊಗಳುವ ಇನ್ನೊಂದು ಜೀವ ಇರುವುದಿಲ್ಲ.

೩.ಅವರ ತಾಯಿಯಾಗಬೇಡಿ

ಇದನ್ನು ಯಾವಾಗಲು ನೆನಪಿನಲ್ಲಿ ಇಟ್ಟುಕೊಳ್ಳಿ, ನೀವು ಅವರ ಹೆಂಡತಿ, ಅವರ ತಾಯಿಯಲ್ಲ. ಪುರುಷರು ಹೆಚ್ಚಾಗಿ ದೊಡ್ಡ ಮಗುವಿನಂತೆ ವರ್ತಿಸಬಹುದು, ಆದರೆ ಅವರನ್ನು ತಾಯಿಯಂತೆ ನೋಡಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಅವರು ನೀವು ಒಬ್ಬ ಒಳ್ಳೆಯ ತಾಯಿಯಾಗಬೇಕು ಎಂದು ಬಯಸುವರು, ಅವರ ಮಗುವಿಗೆ, ಅವರಿಗಲ್ಲ. ಅವರಿಗೆ ಉತ್ತಮ ಸಂಗಾತಿಯಾಗಿರಿ ಅಥವಾ ಗೆಳತಿಯಾಗಿರಿ ಆದರೆ ತಾಯಿಯಾಗಬೇಡಿ.

೪.ಅವರು ನಿಮ್ಮನ್ನು ಅನನ್ಯವಾಗಿ ಪ್ರೀತಿಸುತ್ತಾರೆ

ಸಿನಿಮಾದಲ್ಲಿ ತೋರಿಸುವಂತೆ ಎಲ್ಲಾ ಕೆಲಸಗಳನ್ನು ಮತ್ತು ನೀವು ನಿರೀಕ್ಷಿಸುವಂತಹ ಸಣ್ಣ ಕೆಲಸಗಳನ್ನು ಮಾಡದೇ ಇರಬಹುದು, ಆದರೆ, ಇದರ ಅರ್ಥ ಅವರು ನಿಮ್ಮನ್ನು ಕಡಿಮೆ ಪ್ರೀತಿಸುತ್ತಾರೆ ಎಂದಲ್ಲ. ಅವರು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ನಿಮ್ಮನ್ನು ಪ್ರೀತಿಸುತ್ತಾರೆ. ತಮ್ಮ ಕಛೇರಿಗೆ ತೆರಳುವ ಮುನ್ನ ನಿಮಗೆ ಮುತ್ತು ನೀಡುವುದು ಅಥವಾ ಜೋಪಾನವಾಗಿರು ಎನ್ನುವುದು, ನಿಮ್ಮ ಬಗ್ಗೆ ಕಾಳಜಿ ತೋರಿಸುವುದು ಅವರಿಗೆ ನಿಮ್ಮ ಮೇಲೆ ಇರುವ ಪ್ರೀತಿಯ ಪುರಾವೆಗಳಾಗಿವೆ. ನೀವು ಅದನ್ನು ಗಮನಿಸಬೇಕು. ನಾನು ಪ್ರೀತಿಸುತ್ತೇನೆಂದು ಪದಗಳಿಂದ ಅವರು ನಿಮಗೆ ಹೇಳದೆ ಇರಬಹುದು, ಆದರೆ ಅವರು ನಿಮ್ಮನ್ನು ಅಕ್ಕರೆಯಿಂದ ಪ್ರೀತಿಸುತ್ತಾರೆ.

೫.ನೀವು ಅವರನ್ನು ಸರಿಪಡಿಸಿದಾಗ ಅದು ಅವರಿಗೆ ನೋವುಂಟುಮಾಡುತ್ತದೆ

ಮಹಿಳೆಯರಿಗಿಂತ ಪುರುಷರು ಮೂಲಭೂತವಾಗಿ ವಿವಿಧ ವಿನ್ಯಾಸವನ್ನು ಹೊಂದಿರುತ್ತಾರೆ. ಇದರಿಂದ, ಅವರು ವಿಷಯಗಳನ್ನು ಅವರು ವಿಭಿನ್ನವಾಗಿ ಮಾಡುತ್ತಾರೆ, ಮತ್ತು ಅದನ್ನು ಸರಿಯಾಗಿ ಮಾಡುತ್ತಾರೆ. ಮತ್ತೊಂದೆಡೆ, ಮಹಿಳೆಯರು ವಿಷಯಗಳನ್ನು ತಮ್ಮ ಇಚ್ಚೆಯಂತೆ ಮಾಡುವುದಕ್ಕೆ ಆಧ್ಯತೆ ನೀಡುತ್ತಾರೆ, ಆದ್ದರಿಂದ ನೀವು ಅವರನ್ನು ನಿಮ್ಮ ಇಚ್ಚೆಯಂತೆ ಮಾಡಲು ಹೇಳಿದರೆ, ಅವರಿಗೆ ನೋವಾಗುತ್ತದೆ. ಕೆಲವು ಬಾರಿ ಅವರನ್ನು ಸರಿಪಡಿಸುವುದು ತುಂಬಾ ಅಗತ್ಯವಿರುತ್ತದೆ, ಆದರೆ ನೀವು ಅವರನ್ನು ಹೇಗೆ ಸರಿಮಾಡುವಿರಿ ಎಂಬುದು ಪ್ರಮುಖವಾಗುತ್ತದೆ. ಅವರಲ್ಲಿ ಬದಲಾವಣೆ ಮಾಡಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿ, ಅವರಿಗೆ ಇದಕ್ಕಿಂತ ಉತ್ತಮವಾಗಿ ಹೇಗೆ ಕೆಲಸ ಮಾಡಬಹುದು ಎಂದು ಹೇಳಿ. ಅವರು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ ಎಂದು ತಿಳಿದಿದ್ದರೂ, ಅವರನ್ನು ಸರಿಪಡಿಸಲು ಹೋದರೆ, ನೀವು ತೊಂದರೆಗೆ ಒಳಗಾಗಬಹುದು.

೬.ಅವರು ಏನು ಮಾಡುತ್ತಾರೋ, ಅದು ಅವರು

ಹಲವು ಸಂದರ್ಭಗಳಲ್ಲಿ, ಅವರು ಯಾರು ಅಥವಾ ಅವರಿಗೆ ಏನು ಇಷ್ಟ ಎಂಬುದನ್ನು ನೀವು ಸರಿಯಾಗಿ ತಿಳಿದುಕೊಂಡಿಲ್ಲ ಎಂದು ಭಾವಿಸಲು ಶುರುಮಾಡುತ್ತೀರಿ. ಅವರು ಏನು ಮಾಡಲು ಇಷ್ಟ ಪಡುತ್ತಾರೆ, ಅಥವಾ ಅವರಿಗೆ ಯಾವ ವಿಷಯ ಹೆಚ್ಚು ನೋವು ತರಿಸುತ್ತದೆ ಎಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಇದು ಅವರ ಗುರುತು. ಇದು ಹಾಸ್ಯ ಪುಸ್ತಕ ಖರೀದಿಸುವುದು, ರುಚಿಕರ ಆಹಾರ ಸೇವನೆ ಮಾಡುವುದು, ಮೀನು ಹಿಡಿಯುವುದು, ಆಟವಾಡುವುದು ಆಗಿರಬಹುದು. ಅದನ್ನು ನೀವು ಗೌರವಿಸದಿದ್ದರೆ, ನನ್ನನ್ನು ಪ್ರೀತಿಸುವವರು ಯಾರು ಇಲ್ಲ ಎಂದು ಬೇಸರಮಾಡಿಕೊಳ್ಳಬಹುದು.

೭.ನೀವು ಒಂದು ಅದ್ಭುತ ಎಂದು ಬಾವಿಸುತ್ತಾರೆ

ನೀವು ಊಹಿಸಿರುವುದಕ್ಕಿಂತಲೂ ಅವರು ನಿಮ್ಮನ್ನು ಅತಿಯಾಗಿ ಅವರದೇ ಶೈಲಿಯಲ್ಲಿ ಪ್ರೀತಿಸುತ್ತಾರೆ. ಅವರು ನಿಮ್ಮನ್ನು ವಿಸ್ಮಯವಾಗಿ ಕಾಣುತ್ತಾರೆ. ನೀವು ಮಾಡುವ ಮತ್ತು ಸಾಧಿಸುವ ಶಕ್ತಿಯನ್ನು ಹೊಂದಿರುವಿರಿ ಎಂದು ಅವರಿಗೆ ತಿಳಿದಿದೆ. ನೀವು ಎಲ್ಲಾ ಮಾಡಿರುವ ಕೆಲಸಗಳನ್ನು ಹೇಗೆ ಅಷ್ಟು ಸರಿಯಾಗಿ ಮಾಡಿರುವಿರಿ ಎಂದು ಆಶ್ಚರ್ಯ ಪಡುತ್ತಾರೆ. ಮತ್ತು ಬಹಳ ಮುಖ್ಯವಾಗಿ, ಅವರು ನಿಮ್ಮನ್ನು ಗೌರವಿಸುತ್ತಾರೆ, ಆದರೆ ಅದನ್ನು ಹೇಗೆ ನಿಮ್ಮ ಬಳಿ ವ್ಯಕ್ತ ಪಡಿಸಬೇಕೆಂದು ಅವರಿಗೆ ತಿಳಿದಿರುವುದಿಲ್ಲ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon