Link copied!
Sign in / Sign up
10
Shares

ನಿಮ್ಮ ಪತಿಗೆ ಮದುವೆ ವಾರ್ಷಿಕೋತ್ಸವದಂದು ನೀಡಲು ೫ ಉಡುಗೊರೆ ಉಪಾಯಗಳು

ವಾರ್ಷಿಕೋತ್ಸವಗಳು ಎಲ್ಲರು ತುಂಬಾ ಪ್ರೀತಿಸುವ ಹಾಗು ಎಲ್ಲರಲ್ಲೂ ಕೊಂಚ ಮಟ್ಟಿನ ಭಯ ಉಂಟು ಮಾಡುವ ದಿನ. ಬಹಳಷ್ಟು ಜನರು ತಮ್ಮ ಮದುವೆ ವಾರ್ಷಿಕೋತ್ಸವದ ದಿನಾಂಕ ಮರೆತು, ನಂತರ ಅದನ್ನ ಸರಿ ಮಾಡಿಕೊಳ್ಳಲಿಕ್ಕೆ ತಮ್ಮ ಸಂಗಾತಿಗೆ ದೊಡ್ಡ ಬೆಲೆಯ ಉಡುಗೊರೆ ನೀಡಿ ಸಮಾಧಾನ ಮಾಡಿಸುತ್ತಾರೆ. ಹೆಚ್ಚು ಕಮ್ಮಿ ಎಲ್ಲಾ ಹೆಂಡತಿಯರು ತಮ್ಮ ಮದುವೆ ವಾರ್ಷಿಕೋತ್ಸವ ನೆನಪಿಟ್ಟುಕೊಂಡಿರುತ್ತಾರೆ ಆದರೆ ಅವರ ಭಾವನೆ ವ್ಯಕ್ತಪಡಿಸುವಂತ ಉಡುಗೊರೆ ಆಯ್ಕೆ ಮಾಡುವುದೇ ತಲೆನೋವು ಆಗುತ್ತದೆ.

ಹೀಗಾಗಿ ನೀವು ನೀಡುವ ಉಡುಗೊರೆಯು ನಿಮ್ಮಿಬ್ಬಿರ ನಡುವಿನ ಇಲ್ಲಿಯವರೆಗಿನ ಪ್ರೀತಿ ಹಾಗು ಭವಿಷ್ಯದಲ್ಲೂ ಅದೇ ರೀತಿ ಉಕ್ಕುವ ಪ್ರೀತಿಯ ಸಂಕೇತ ಆಗಿರಬೇಕು. ಇದೇ ಕಾರಣಕ್ಕಾಗಿ ಸೂಕ್ತವಾದ ಒಂದು ಉಡುಗೊರೆ ಹುಡುಕುವುದೇ ಕಷ್ಟ. ನಿಮ್ಮ ಈ ಸಾಹಸಕ್ಕೆ ನಮ್ಮದೂ ಒಂದು ಸಹಾಯಹಸ್ತ ಇರಲಿ ಎಂದು ಇಲ್ಲಿ ನಾವು ನಿಮ್ಮ ಪತಿಗೆ ಖುಷಿ ತರಿಸುವಂತ ಕೆಲವೊಂದು ಉಡುಗೊರೆಗಳ ಪಟ್ಟಿ ಮಾಡಿದ್ದೇವೆ, ಓದಿ :

೧. ಕೈಗಡಿಯಾರ

ಇದು ಸಾಮಾನ್ಯ ಆಗಿದ್ದರು ಉಪುಯುಕ್ತ ಹಾಗು ಯೋಗ್ಯ ಉಡುಗೊರೆ. ಇಷ್ಟೇ ಅಲ್ಲದೆ, ನೀವು ನಿಮಗೆಂದು ಆ ಗಡಿಯಾರಕ್ಕೆ ಹೊಂದುವಂತ ಇನ್ನೊಂದು ಗಡಿಯಾರ ತೆಗೆದುಕೊಳ್ಳಬಹುದು ಅಥವಾ ದಂಪತಿಗಳಿಗೆಂದೇ ಜೋಡಿಯಲ್ಲಿ ಬರುವ ಕೈಗಡಿಯಾರವನ್ನ ಆಯ್ಕೆ ಮಾಡಬಹುದು. ಈ ರೀತಿಯಲ್ಲಿ ಕೇವಲ ಅವರೊಬ್ಬರಿಗೆ ಗಡಿಯಾರ ತಂದುಕೊಟ್ಟರೆ, ಅದನ್ನ ನೋಡಿದಾಗಲೆಲ್ಲ ನಿಮ್ಮ ನೆನಪಾಗುತ್ತದೆ ಅಥವಾ ಜೋಡಿಯಲ್ಲಿ ಗಡಿಯಾರ ಖರೀದಿ ಮಾಡಿದರೆ, ಆ ಗಡಿಯಾರ ನಿಮ್ಮ ಪತಿ ನೋಡಿದಾಗಲೆಲ್ಲ ಅವರಿಗೆ ನೀವೇ ಜೊತೆಗಿರುವಂತೆ ಅನಿಸುತ್ತದೆ.

ಇದನ್ನು ಖರೀದಿ ಮಾಡಲು ಇಲ್ಲಿ ಒತ್ತಿ.

೨. ಪ್ಲಾಟಿನಂ ಉಂಗುರ

ನಿಮ್ಮ ಬೆರಳ ಮೇಲಿನ ಉಂಗುರ ಪ್ರೀತಿ ಹೇಳಿದಂತೆ ಮತ್ತೆ ಯಾವುದು ತಿಳಿಸುವುದಿಲ್ಲ. ಅದರಲ್ಲೂ ನಿಮ್ಮ ಉಂಗರವು ನಿಮ್ಮ ಪತಿಯ ಉಂಗುರಕ್ಕೆ ಸರಿಹೊಂದುವಂತೆ ಇದ್ದರೆ ಇನ್ನೂ ಹೆಚ್ಚು. ನೀವು ಎಷ್ಟೇ ತರುಣರಾಗಿರಲಿ ಅಥವ ವಯಸ್ಸಾದವರಾಗಿರಲಿ, ನೀವು ನಿಮ್ಮ ನಿಶ್ಚಿತಾರ್ಥದ ಕ್ಷಣಗಳಿಗೆ ಮತ್ತೆ ಜೀವ ತರಬಹುದು. ಕೇವಲ ಅಷ್ಟೇ ಅಲ್ಲ, ನಿಮ್ಮ ಪ್ರತಿಜ್ಞೆಗಳನ್ನ ಮತ್ತೆ ಸ್ವೀಕರಿಸಬಹುದು!

ಇದನ್ನು ನೀವು ಇಲ್ಲಿ ಖರೀದಿಸಬಹುದು.

೩. ಪೆನ್ ಗಳು

ಯಾವಾಗಲು ಕೆಲಸದಲ್ಲಿ ಶ್ರದ್ದೆಯಿಂದ ಮುಳುಗಿರುವ ನಿಮ್ಮ ಪತಿಯು ಒಮ್ಮೊಮ್ಮೆ ನಿಮಗೆ ಕರೆ ಮಾಡಿ ಪ್ರೀತಿ ತಿಳಿಸುವುದು ಮರೆಯಬಹುದು. ಹಾಗಾಗಿ ಯಾಕೆ ನೀವು ನಿಮ್ಮ ಪ್ರೀತಿಯನ್ನು ನಿಮ್ಮ ಪತಿಯ ಕೆಲಸದ ಮೇಲೆಯೇ ಅಚ್ಚಾಗುವಂತೆ ಮಾಡಬಾರದು?! ಮದುವೆ ವಾರ್ಷಿಕೋತ್ಸಕ್ಕೆ ನಿಮ್ಮ ಪತಿಗೆ ನೀವು ಉಡುಗೊರೆಯಾಗಿ ಪೆನ್ ಒಂದನ್ನು ನೀಡಿದರೆ ಅವರು ಏನಾದರು ಬರೆಯುವಾಗ ಅಥವಾ ಒಂದು ಸಹಿ ಹಾಕುವಾಗಳು ನಿಮ್ಮ ನೆನಪು ಮಾಡಿಕೊಳ್ಳುತ್ತಾರೆ.

ಇದನ್ನು ಖರೀದಿ ಮಾಡಲು ಇಲ್ಲಿ ಒತ್ತಿ.

೪. ಫೋಟೋ ಫ್ರೇಮ್

ಒಂದು ಚಿತ್ರವು ಸಾವಿರ ಪದಗಳಿಗಿಂತ ಹೆಚ್ಚಿನದನ್ನು ತಿಳಿಸುತ್ತದೆ. ನೀವು ನಿಮ್ಮ ಪತಿಗೆ ವಯಕ್ತಿಕವಾದ ಹಾಗು ಮನಸ್ಸಿಗೆ ಹತ್ತಿರವಾಗುವ ಉಡುಗೊರೆ ನೀಡಬೇಕೆಂದರೆ, ನೀವು ಹಾಗು ನಿಮ್ಮ ಪತಿಯು ಒಟ್ಟಿಗೆ ಕಳೆದ ಸಂತೋಷದ ಕ್ಷಣಗಳು, ಪ್ರಮುಖ ದಿನಗಳ ಫೋಟೊಗಳನ್ನ ಕೂಡಿಸಿ ಅವರಿಗೆ ನೀಡಿದರೆ, ನೀವಿಬ್ಬರು ನೆನಪುಗಳ ಕಡಲಿನಲ್ಲಿ ಇಬ್ಬರು ತೇಲಿ ಹೋಗುತ್ತೀರ. ನಿಮಗೆ ಇನ್ನೊಂದು ಉಪಾಯ ಎಂದರೆ ಅದು ನೀವೇ ಇಲ್ಲಿಯವರೆಗೆ ಆಚರಿಸಿದ ಪ್ರತಿ ವಾರ್ಷಿಕೋತ್ಸವದ ಫೋಟೋವನ್ನು ಕೂಡಿಸಿ ಒಂದು ಫ್ರೇಮ್ ಮಾಡಿಸಬಹುದು.

೫. ವಯಕ್ತಿಕ ದಿನಚರಿ

ಕೆಲವೊಂದು ಬಾರಿ ಮನುಷ್ಯನು ತನ್ನ ಮನಸ್ಸಿನ ಎಲ್ಲಾ ಯೋಚನೆಗಳನ್ನು ಹಾಗು ತಾನು ಅನುಭವಿಸುವ ಎಲ್ಲಾ ಭಾವನೆಗಳನ್ನು ಬಾಯ್ಬಿಟ್ಟು ಹೇಳಲು ಆಗುವುದಿಲ್ಲ. ಹಾಗಿದ್ದರು, ಅವನ ಪ್ರೀತಿಯು ತುಂಬಾನೇ ದೊಡ್ಡದಿರಬಹುದು. ಹಾಗಾಗಿ ಏಕೆ ನೀವು ಅವರ ಮನಸ್ಸಿಗೆ ಹತ್ತಿರವಾಗುವಂತ ಒಂದು ಉಡುಗೊರೆ ನೀಡಬಾರದು? ಅದು ಕೂಡ ಮುಂದೆ ನೀವು ಇಣುಕಿ ನೋಡಬಹುದಾದಂತದ್ದು. ದಿನಚರಿ ಬರೆಯುವುದು ಕೇವಲ ಮನಸ್ಸಿನ ಭಾರ ಕಮ್ಮಿ ಮಾಡುವುದಲ್ಲದೆ ನಿಮ್ಮ ಎಲ್ಲಾ ಭಾವನೆಗಳನ್ನು ಬಿಚ್ಚಿಡಲು ಒಂದು ದಾರಿ. ಇದನ್ನು ಉಡುಗೊರೆಯಾಗಿ ನೀಡುವ ಮೂಲಕ ನೀವು ಅವರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಬಹುದು.

ಈ ವಸ್ತುವನ್ನು ಇಲ್ಲಿ ಖರೀದಿ ಮಾಡಿ.

ನಿಮ್ಮ ವಿಶೇಷ ದಿನವನ್ನ ಮತ್ತಷ್ಟು ವಿಶೇಷ ಮಾಡಲಿಕ್ಕೆ ಸಹಾಯ ಮಾಡುವ ಕೆಲವೊಂದು ವಸ್ತುಗಳ ಪಟ್ಟಿ ಮಾತ್ರ ಇಲ್ಲಿದೆ. ಆದರೆ ನೀವು ಒಬ್ಬರಿಗೊಬ್ಬರು ಪರಸ್ಪರ ತೋರುವ ಪ್ರೀತಿಗೆ ಯಾವುದೇ ಪರ್ಯಾಯವಿಲ್ಲ. ಈ ಮೇಲಿನಲ್ಲಿ ಯಾವುದದಾರೊಂದು ಉಡುಗೊರೆಯೊಂದಿಗೆ ಐ ಲವ್ ಯು ಎನ್ನುವ ಮೂರು ಪದಗಳು ನಿಜವಾಗಿಯೂ ಜಾದೂವನ್ನೇ ಸೃಷ್ಟಿಸುತ್ತವೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon